Dec 29, 2022, 12:45 PM IST
ಬೆಂಗಳೂರು(ಡಿ.29): ಹಲವು ದೇಶಗಳಲ್ಲಿ ಕೊರೋನಾ BF.7 ತಳಿ ಆರ್ಭಟ ಜೋರಾಗಿದೆ. ಭಾರತದಲ್ಲೂ ಕೂಡ ಈ ತಳಿ ಭಾರೀ ವೇಗವಾಗಿ ಹರಡಲಿದೆ. ಡಿಸೆಂಬರ್‌ನಿಂದ ಫೆಬ್ರುವರಿ ತಿಂಗಳಿನಲ್ಲಿ ಕೊರೋನಾ ಹೆಚ್ಚಾಗಲಿದೆ ಅಂತ ಹಿರಿಯ ವೈದ್ಯ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ಮಾತನಾಡಿದ ಅವರು, ಅತೀ ವೇಗವಾಗಿ ಹರಡುವುದರಿಂದ ಪಾಟಿಸಿಟಿವಿಟಿ ರೇಟ್ ಕೂಡ ಹೆಚ್ಚಾಗಲಿದೆ. ಪ್ರತಿಯೊಬ್ಬರು ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು. ಜ್ವರ, ಶೀತ, ಕೆಮ್ಮು ಬಂದರೆ ವೈದ್ಯರ ಸಲಹೆ ಪಡೆಯಬೇಕು, ಹೊಸ ವರ್ಷಾಚರಣೆ ವೇಳೆ ಮೈಮರೆಯಬಾರದು ಅಂತ ಎಚ್ಚರಿಕೆ ಕೊಟ್ಟಿದ್ದಾರೆ.