Jan 20, 2022, 2:02 PM IST
ಬೆಂಗಳೂರು(ಜ.20): ಕೊರೋನಾ ಸೋಂಕು (Coronavirus) ಪರಿಣಾಮಕಾರಿಯಿಲ್ಲದ ಹಿನ್ನಲ್ಲೆ ಇನ್ನು ಕೆಲವೇ ದಿನಗಳಲ್ಲಿ ಶಾಲೆಗಳು ಆರಂಭವಾಗುವ ಸಾಧ್ಯತೆ ದಟ್ಟವಾಗತೊಡಗಿದೆ. ಶಾಲೆಗಳ ಆರಂಭಕ್ಕೆ ಒತ್ತಡ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಜನವರಿ 24ರಿಂದಲೇ ಮೊದಲ ಹಂತದಲ್ಲಿ 5ನೇ ತರಗತಿಯಿಂದ 9ನೇ ತರಗತಿಯ ಶಾಲೆ ಆರಂಭಕ್ಕೆ ಸರ್ಕಾರದ ಮಟ್ಟದಲ್ಲಿ ಚಿಂತನೆ ಆರಂಭವಾಗಿದೆ.
ಶುಕ್ರವಾರ(ಜ.21) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಶಾಲೆ ಆರಂಭದ ಕುರಿತಂತೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಆರೋಗ್ಯ, ಶಿಕ್ಷಣ ಇಲಾಖೆ ಸೇರಿದಂತೆ TAC ಸದಸ್ಯರ ಸಭೆಯುಲ್ಲಿ ಜನವರಿ 24ರಿಂದ ಶಾಲಾ ಆರಂಭಕ್ಕೆ ಸಮ್ಮತಿ ಸೂಚಿಸುವ ಸಾಧ್ಯತೆಯಿದೆ. ಕೊರೋನಾ ಕೇಸ್‌ಗಳು ಹೆಚ್ಚಳವಾಗದಿದ್ದರೆ, ಶಾಲಾರಂಭ ಗ್ಯಾರಂಟಿ ಎನಿಸಿದೆ.
Coronavirus: ಕೋವಿಡ್‌ನಿಂದ ಚೇತರಿಸಿಕೊಂಡ ಸಿಎಂ ಬೊಮ್ಮಾಯಿ: ಕರ್ತವ್ಯಕ್ಕೆ ಹಾಜರ್
ಈಗಾಗಲೇ ಬೆಂಗಳೂರು (Bengaluru) ಸೇರಿದಂತೆ ಕೊರೋನಾ ಪ್ರಕರಣಗಳು ಹೆಚ್ಚಿರುವ ಆರು ಜಿಲ್ಲೆಗಳಲ್ಲಿ ಶಾಲೆಗಳು ಬಂದ್ ಆಗಿವೆ. ಇದೀಗ ಶಾಲೆ ಪುನರಾರಂಭಕ್ಕೆ ಒತ್ತಡ ಜೋರಾಗಿ ಕೇಳಿ ಬಂದಿದೆ. ಹೀಗಾಗಿ ಜನವರಿ 24ರಿಂದ ಭೌತಿಕ ಶಾಲೆ ಆರಂಭವಾಗುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.