#FactCheck ಕೊರೋನಾ ಭೀತಿ: ಲಾಕ್‌ಡೌನ್‌ ಗದ್ದಲದಲ್ಲಿ ನಂದಿತಾ ಧರ್ಮಸ್ಥಳದ ದೀಪ..?

#FactCheck ಕೊರೋನಾ ಭೀತಿ: ಲಾಕ್‌ಡೌನ್‌ ಗದ್ದಲದಲ್ಲಿ ನಂದಿತಾ ಧರ್ಮಸ್ಥಳದ ದೀಪ..?

Suvarna News   | Asianet News
Published : Mar 27, 2020, 01:51 PM ISTUpdated : Mar 27, 2020, 03:00 PM IST

ಧರ್ಮಸ್ಥಳದ ದೀಪ ಆರಿದೆ ಎಂಬ ವದಂತಿ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ. ರಾತ್ರೋ ರಾತ್ರಿ ಎದ್ದು ಜನರು ಮನೆಮುಂದೆ ದೀಪ ಹಚ್ಚಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭ ಹೊಸ ಹೊಸ ವದಂತಿಗಳು ಹುಟ್ಟಿಕೊಳ್ಳುತ್ತಿದ್ದು ಜನ ಗಾಬರಿಗೊಂಡಿದ್ದಾರೆ.

ಮಂಗಳೂರು(ಮಾ.27): ಧರ್ಮಸ್ಥಳದ ದೀಪ ಆರಿದೆ ಎಂಬ ವದಂತಿ ಕೇಳಿ ಜನ ಬೆಚ್ಚಿ ಬಿದ್ದಿದ್ದಾರೆ. ರಾತ್ರೋ ರಾತ್ರಿ ಎದ್ದು ಜನರು ಮನೆಮುಂದೆ ದೀಪ ಹಚ್ಚಿದ್ದಾರೆ. ಕೊರೋನಾ ಲಾಕ್‌ಡೌನ್ ಸಂದರ್ಭ ಹೊಸ ಹೊಸ ವದಂತಿಗಳು ಹುಟ್ಟಿಕೊಳ್ಳುತ್ತಿದ್ದು ಜನ ಗಾಬರಿಗೊಂಡಿದ್ದಾರೆ.

ಸುಳ್ಳು ವದಂತಿಗಳನ್ನೇ ನಿಜವೆಂದು ನಂಬಿ ಜನರು ಗಾಬರಿ ಬಿದ್ದಿದ್ದಾರೆ. ಧರ್ಮಸ್ಥಳ ದೀಪ ಆರಿದರೆ ಅದು ನಾಡಿಗೆ ಕಂಟಕ ಎಂದು ನಂಬಿದ ಜನರು ನಡುರಾತ್ರಿ ಎದ್ದು ಮನೆ ಮುಂದೆ ದೀಪ ಹಚ್ಚಿದ್ದಾರೆ. ಈಗಾಗಲೇ ಹಲವು ಬಾರಿ ಎಚ್ಚರಿಕೆ ನೀಡಲಾಗಿದ್ದು, ವದಂತಿಗಳಿಗೆ ಜನರು ಕಿವಿ ಕೊಡಬಾರದು ಎಂದರೂ ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ.

'ಚಹಾಕ್ಕೆ ಬೆಲ್ಲ, ಅರಿಶಿಣ ಹಾಕಿ ಕುಡಿದ್ರೆ ಕೊರೋನಾ ಬರಲ್ಲ'..!

ಇತ್ತೀಚೆಗಷ್ಟೇ ಸಂಜೆಯೊಳಗೆ ಬೆಲ್ಲ, ಅರಶಿನ ಬೆರೆಸಿದ ಟೀ ಕುಡಿದರೆ ಕೊರೋನಾ ಬರುವುದಿಲ್ಲ ಎಂಬ ಸುಳ್ಳು ಸುದ್ದಿ ಕೇಳಿ ಬಂದಿತ್ತು. ನಂತರದಲ್ಲಿ ಸುಳ್ಳು ಸುದ್ದಿ ಹರಡಿದ ಯುವಕನಿಗೆ ಗ್ರಾಮಸ್ಥರು ಬುದ್ಧಿ ಹೇಳಿದ್ದರು.

'ಭಾನುವಾರ ಇಡೀ ದೇಶಕ್ಕೇ ಮದ್ದು ಸಿಂಪಡಿಸ್ತಾರಂತೆ ಮೋದಿ'..!

03:05ಕೊರೋನಾ ಹೆಚ್ಚಾದ್ರೂ ಜನ ಡೋಂಟ್ ಕೇರ್ !
04:40ಅತಿಸಾರ ಕೋವಿಡ್ 19 ರ ಹೊಸ ಲಕ್ಷಣ, ನಿರ್ಲಕ್ಷಿಸಬೇಡಿ: ತಜ್ಞರು
03:06ಯುಗಾದಿಗೆ ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬಿಟ್ಹಾಕಿ, ನಿಮ್ಮಿಂದ ಹಳ್ಳಿಗಳಿಗೂ ಹರಡಬಹುದು ವೈರಸ್!
02:44ಗುಂಪು ಇರುವ ಕಡೆ, ಮುಚ್ಚಿದ ಪ್ರದೇಶಗಳಿಗೆ ಹೋಗುವುದನ್ನ ಕಡಿಮೆ ಮಾಡಿ: ತಜ್ಞರ ಸಲಹೆ
07:40ಥಿಯೇಟರ್ ರೂಲ್ಸ್ ಬದಲಾವಣೆ ಇಲ್ಲ, ಗೈಡ್‌ಲೈನ್ಸ್‌ನಲ್ಲಿ ರಾಜಿ ಪ್ರಶ್ನೆಯೇ ಇಲ್ಲ : ಡಾ. ಸುಧಾಕರ್
19:0510 ಜನಕ್ಕೆ ಕೊರೊನಾ ಬಂದ್ರೆ 17 ಮಂದಿಗೆ ಹರಡುತ್ತೆ ಸೋಂಕು.!
01:54ರಾಜ್ಯದಲ್ಲಿ ಕೊರೋನಾ ಸೋಂಕು ಹಬ್ಬುವಿಕೆಗೆ ಇದೇ ಕಾರಣ..!
05:218 ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ; ಯಾವ್ಯಾವ ಜಿಲ್ಲೆಗಳಲ್ಲಿ ಹೇಗಿದೆ ಚಿತ್ರಣ..?
11:30ಇಂದಿನಿಂದ ರಾಜ್ಯದಲ್ಲಿ 1-9 ಕ್ಲಾಸ್ ಸ್ಥಗಿತ, 8 ಜಿಲ್ಲೆಗಳಲ್ಲಿ ಟಫ್‌ರೂಲ್ಸ್ ಜಾರಿ
10:03ಕೊರೊನಾ ಸೋಂಕು ಹೆಚ್ಚಳ: ಮತ್ತೆ ಟಫ್ ರೂಲ್ಸ್ ಜಾರಿಯಾಗುವುದು ಪಕ್ಕಾ..?