ಆರ್ಥಿಕ ನೀತಿ ನಿರೂಪಕರ ಜೊತೆ ಪ್ರಧಾನಿ ಸಭೆ| ಬಜೆಟ್ ಪೂರ್ವ ಸಿದ್ಧತೆ ಸಭೆಯ ನೇತೃತ್ವ ವಹಿಸಿದ ಪ್ರಧಾನಿ ಮೋದಿ| ವಿವಿಧ ವಲಯಗಳ ಪರಿಣತರೊಂದಿಗೆ ಮೋದಿ ಸಮಾಲೋಚನೆ| 'ಆರ್ಥಿಕತೆಯ ಮೂಲ ಅಡಿಪಾಯದಿಂದ ಪುಟಿದೇಳುವ ಸಾಮರ್ಥ್ಯ ಭಾರತಕ್ಕಿದೆ'|5 ಟ್ರಿಲಿಯನ್ ಡಾಲರ್ ಆರ್ಥಿಕತೆ ಹೊಂದುವ ವಿಶ್ವಾಸ ಇಮ್ಮಡಿಯಾಗಿದೆ ಎಂದ ಪ್ರಧಾನಿ|
ಕೇಂದ್ರ ಸರ್ಕಾರ ವಾರ್ಷಿಕ ಬಜೆಟ್‌ಗೆ ಸಿದ್ಧತೆ ನಡೆಸಿದ್ದು, ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ನಿರತವಾಗಿದೆ. ಅದರಂತೆ ಬಜೆಟ್ ಪೂರ್ವ ಸಿದ್ಧತೆಗಳ ಭಾಗವಾಗಿ ಆರ್ಥಿಕ ತಜ್ಞರು ಹಾಗೂ ವಿವಿಧ ವಲಯಗಳ ಪರಿಣತರೊಂದಿಗೆ ಸಮಾಲೋಚನೆ ಸಭೆ ನಡೆಸಿದರು.
ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯನ್ನು ಸಾಧಿಸುವಂತಾಗಲು ವಿಶೇಷ ಪ್ರಯತ್ನಗಳನ್ನು ಮಾಡುವಂತೆ ಈ ವೇಳೆ ಪ್ರಧಾನಿ ಮೋದಿ ಕರೆ ನೀಡಿದರು. ಇಂದಿನ ಸಭೆಯಲ್ಲಿ ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್, ನೀತಿ ಆಯೋಗ ಸಿಇಒ ಅಮಿತಾಭ್ ಕಾಂತ್, ಹಿರಿಯ ಆರ್ಥಿಕ ತಜ್ಞರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..