Oct 28, 2019, 2:29 PM IST
ಬೆಂಗಳೂರು (ಅ.28): ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರದ ಕುರಿತು ಸುವರ್ಣ ನ್ಯೂಸ್ ವರದಿ ಮಾಡಿದ ಬೆನ್ನಲ್ಲೇ ಬೆಂಗಳೂರು ನಗರದ ಕೆಲವು ಸಬ್- ರಿಜಿಸ್ಟ್ರಾರ್‌ಗಳಿಗೆ ನಡುಕ ಶುರುವಾಗಿದೆ.
ಜಮೀನಿನ ಮೂಲಬೆಲೆ ತಪ್ಪಾಗಿ ನಮೂದಿಸಿ, ಸಬ್ ರಿಜಿಸ್ಟ್ರಾರ್‌ಗಳು ದಂಧೆ ನಡೆಸುತ್ತಿರುವ ಬಗ್ಗೆ ಕಳೆದ ವಾರ ವಿಸ್ತೃತ ವರದಿ ಪ್ರಸಾರವಾಗಿತ್ತು. ಜಮೀನು/ನಿವೇಶನ ಮಾಲೀಕರ ಜೊತೆ ಸೇರಿ ಕೋಟಿ ಕೋಟಿ ತೆರಿಗೆ ವಂಚಿಸಲಾಗುತಿತ್ತು.
ಅದರ ಬೆನ್ನಲ್ಲೇ 9 ಸಬ್ ರಿಜಿಸ್ಟ್ರಾರ್‌ಗಳ ವಿರುದ್ಧ ದೂರು ದಾಖಲಾಗಿದ್ದು, ಬೆಂಗಳೂರು CCB ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಆ ಅಧಿಕಾರಿಗಳು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ಯಾರ್ಯಾರಿದ್ದಾರೆ ಆ ಪಟ್ಟಿಯಲ್ಲಿ? ಇಲ್ಲಿದೆ ಮತ್ತಷ್ಟು ಮಾಹಿತಿ...