Aug 15, 2021, 7:32 PM IST
ಬೆಂಗಳೂರು(ಆ.15): ಶಾಸಕ ಬಿಜೆಪಿ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ ತನಿಖೆ ಪ್ರಗತಿಯಲ್ಲಿದೆ. ಇದರ ನಡುವೆ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸತೀಶ್ ರೆಡ್ಡಿ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿದ್ದಾರೆ. ಈ ಘಟನೆ ಹಿಂದೆ ಯಾರಿದ್ದರೂ ಕಠಿಣ ಕ್ರಮ ಜರುಗಿಸುವುದಾಗಿ ಕಟೀಲ್ ಹೇಳಿದ್ದಾರೆ.
ಬೆಜೆಪಿ ಶಾಸಕನ ಮನೆ ಮುಂದೆ ನಿಲ್ಲಿಸಿದ್ದ ಟೋಯೋಟಾ ಫಾರ್ಚುನರ್ ಹಾಗೂ ಮಹೀಂದ್ರ ಥಾರ್ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಪ್ರಕರಣ ಭಾರಿ ಸದ್ದು ಮಾಡಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿದಂತೆ ಸಚಿವರು, ಬಿಜೆಪಿ ನಾಯಕರು ಸತೀಶ್ ರೆಡ್ಡಿ ಮನಗೆ ಭೇಟಿ ನೀಡಿದ್ದಾರೆ.