
ಪೊಲೀಸರಿಲ್ಲ, ಕ್ಯಾಮೆರಾ ಇಲ್ಲಾ ಅಂತಾ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತೀರಾ? ಈಗ ನೀವು ಎಐ ಟೆಕ್ನಾಲಜಿ, ಎಐ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಂಗಳೂರು ಪೊಲೀಸರು ಇಡೀ ಬೆಂಗಳೂರಿನ ಟ್ರಾಫಿಕ್ ಹೇಗೆ ಮ್ಯಾನೇಜ್ ಮಾಡ್ತಾರೆ? ನಿಮ್ ಟ್ರಾಫಿಕ್ ರೂಲ್ಸ್ ಬ್ರೇಕ್ ಹೇಗೆ ಪತ್ತೆಯಾಗುತ್ತೆ?
ಬೆಂಗಳೂರು(ಮೇ.31) ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ ಇದೀಗ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸ ತಂತ್ರಜ್ಞಾನ ಬಳಸುತ್ತಿದ್ದಾರೆ. ಇದೀಗ ಪೊಲೀಸರು ಸ್ಥಳದಲ್ಲಿಲ್ಲ, ಕ್ಯಾಮೆರಾ ಕಾಣುತ್ತಿಲ್ಲ ಎಂದು ನಿಯಮ ಉಲ್ಲಂಘಿಸಿದರೆ ದಂಡ ಖಚಿತ. ಬೆಂಗಳೂರಿನ ಯಾವುದೇ ಗಲ್ಲಿಗೆ ಹೋದರೂ ಬೆಂಗಳೂರು ಟ್ರಾಫಿಕ್ ಪೊಲೀಸರ ಎಐ ಕಣ್ಗಾವಲಿನಲ್ಲಿರುತ್ತೀರಿ. ಸಂಪೂರ್ಣ ಬೆಂಗಳೂರಿನ ಟ್ರಾಫಿಕ್‌ನ್ನು ಪೊಲೀಸರು ಹೇಗೆ ಮ್ಯಾನೇಜ್ ಮಾಡುತ್ತಾರೆ? ಬೆಂಗಳೂರಿನಲ್ಲಿ ಪ್ರತಿ ದಿನ ಎಷ್ಟು ಮಂದಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಾರೆ?