ಪದೇ ಪದೇ ಅನಾರೋಗ್ಯವಾ..? ಕಿಟಕಿಯ ದಿಕ್ಕು ಯಾವ ಕಡೆಗಿದೆ..?

By Suvarna News  |  First Published Dec 11, 2020, 5:57 PM IST

ವಾಸ್ತು ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಒಂದು ಭಾಗವಾಗಿದೆ. ಮನೆಯ ವಾಸ್ತು ಯಾವು ರೀತಿ ಇದ್ದರೆ ನೆಮ್ಮದಿ ಮತ್ತು ಸುಖ-ಸಂಪತ್ತು ನೆಲೆಸುತ್ತದೆ ಎಂಬ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಮನೆಯ ಪ್ರತಿ ಬಾಗಿಲು, ಕೋಣೆ, ಕಿಟಕಿಗಳು ಯಾವ ದಿಕ್ಕಿನಲ್ಲಿ ಇದ್ದರೆ  ಏಳಿಗೆ  ಹೊಂದಲು ಸಾಧ್ಯ ಎಂಬುದನ್ನು ತಿಳಿಯಬಹುದಾಗಿದೆ. ವಾಸ್ತು ಶಾಸ್ತ್ರವನ್ನು ಪಾಲಿಸಿ ಮನೆ ನಿರ್ಮಿಸಿದಲ್ಲಿ ಉತ್ತಮ ಪ್ರಗತಿಯನ್ನು ಕಾಣಬಹುದಾಗಿದೆ. ಹಾಗದರೆ ಮನೆಯ ಕಿಟಕಿ ನಿರ್ಮಿಸುವಾಗ ಯಾವೆಲ್ಲ ವಿಷಯಗಳನ್ನು ಗಮನಿಸಬೇಕು ಮತ್ತು ಮನೆಯಲ್ಲಿ ಕಿಟಕಿ ಯಾವ ದಿಕ್ಕಿನಲ್ಲಿ ಇದ್ದರೆ ಉತ್ತಮ? ಯಾವ ದಿಕ್ಕಿನಲ್ಲಿ ಕಿಟಕಿ ಇದ್ದರೆ ಅದು ಅಶುಭ? ಎಂಬುದನ್ನು ತಿಳಿಯೋಣ... 


ಮನೆಯ ಪ್ರತಿ ಜಾಗವು ವಾಸ್ತು ಪ್ರಕಾರ ನಿರ್ಮಿತವಾಗಿದ್ದರೆ ಎಲ್ಲ ರೀತಿಯಲ್ಲೂ ಅನುಕೂಲವಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿ ಕೋಣೆ, ಗೋಡೆ, ಕಿಟಕಿ ಎಲ್ಲವೂ ಅದರದ್ದೇ ಆದ ದಿಕ್ಕಿನಲ್ಲಿರಬೇಕೆಂದಿದೆ. ಮನೆಯ ಪ್ರತಿ ಇಂಚು ವಾಸ್ತು ಪ್ರಕಾರ ಇದ್ದಾಗ ಮನೆಗೆ ಸಕಾರಾತ್ಮಕ ಶಕ್ತಿಯ ಹರಿವು ಮತ್ತು ವೃದ್ಧಿ ಚೆನ್ನಾಗಿ ಆಗುತ್ತದೆ. ಕುಟುಂಬದ ಸದಸ್ಯರಲ್ಲಿ ಪರಸ್ಪರ ಬಾಂಧವ್ಯ ವೃದ್ಧಿಸುವುದಲ್ಲದೇ, ಮನೆಯಲ್ಲಿ ಉತ್ತಮ ವಾತಾವರಣ ಮತ್ತು ನೆಮ್ಮದಿ ನೆಲೆಸಿರುತ್ತದೆ.

ವಾಸ್ತು ಶಾಸ್ತ್ರದಲ್ಲಿ ಕಿಟಕಿಯ ದಿಕ್ಕಿನ ಬಗ್ಗೆಯು ಉಲ್ಲೇಖಿಸಲಾಗಿದೆ. ಸರಿಯಾದ ದಿಕ್ಕಿನಲ್ಲಿರುವ ಕಿಟಕಿಯು ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಸರಿಯಲ್ಲದ ದಿಕ್ಕಿನಲ್ಲಿ ಕಿಟಕಿಯು ತೆರೆದಿದ್ದರೆ ಅದು ದೌರ್ಭಾಗವನ್ನು ಬರಮಾಡಿಕೊಂಡಂತೆ ಮತ್ತು ಅನೇಕ ಸಮಸ್ಯೆಗಳಿಗೆ ಮೂಲ ಕಾರಣವಾಗಿ ಪರಿಣಮಿಸುತ್ತದೆ.
ಹಾಗಾಗಿ ಮನೆಯ ಕಿಟಕಿ ನಿರ್ಮಾಣಕ್ಕೂ ಮುನ್ನ ವಾಸ್ತು ಬಗ್ಗೆ ಸ್ವಲ್ಪ ಗಮನಹರಿಸುವುದು ಉತ್ತಮ. ಹಾಗಾದರೆ ಕಿಟಕಿಗೆ ಸಂಬಂಧಿಸಿದ ವಾಸ್ತು ಶಾಸ್ತ್ರದ ನಿಯಮಗಳ ಬಗ್ಗೆ ತಿಳಿಯೋಣ.

ಇದನ್ನು ಓದಿ:  ಮಹಿಳೆಯರು ತೆಂಗಿನ ಕಾಯಿಯನ್ನು ಒಡೆಯಬಾರದು… ಏಕೆ ಗೊತ್ತಾ..? 

ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಕಿಟಕಿ ನಿರ್ಮಿಸಬಹುದಾಗಿದೆ. ಈ ದಿಕ್ಕಿನಲ್ಲಿ ಕಿಟಕಿ ಇದ್ದರೆ ಅದನ್ನು ಶುಭವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಉತ್ತರ ದಿಕ್ಕನ್ನು ಧನದಿಕ್ಕು ಅಂದರೆ ಆರ್ಥಿಕವಾಗಿ ಉತ್ತಮವಾಗುವ ದಿಕ್ಕು. ಈ ದಿಕ್ಕಿನ ಕಿಟಕಿಯನ್ನು ತೆರೆದಿಡುವುದು ಉತ್ತಮ. ಹಾಗಾಗಿ ಉತ್ತರ ದಿಕ್ಕಿನಲ್ಲಿ ಕಿಟಕಿ ಇದ್ದರೆ ಅಥವಾ ಕಿಟಕಿ ನಿರ್ಮಾಣ ಮಾಡುವುದರಿಂದ ಶುಭವಾಗುತ್ತದೆ. ಉತ್ತರ ದಿಕ್ಕಿನ ಕಿಟಕಿಯನ್ನು ತೆರೆದಿಡುವುದರಿಂದ  ಮನೆಯಲ್ಲಿ ಧನ ಮತ್ತು ಸಮೃದ್ಧಿಯ ಬಾಗಿಲು ತೆರೆದುಕೊಳ್ಳುತ್ತದೆ.

Tap to resize

Latest Videos



ವಾಸ್ತು ಪ್ರಕಾರ ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಹೇಳಲಾಗುತ್ತದೆ. ಹಾಗಾಗಿ  ದಕ್ಷಿಣ ದಿಕ್ಕಿನಲ್ಲಿ ಕಿಟಕಿ ಇಡಬಾರದೆಂದು ಹೇಳಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿರುವ ಕಿಟಕಿಯನ್ನು ತೆರೆದಿಡುವುದರಿಂದ ರೋಗ ಮತ್ತು ಶೋಕ ಬಾಧಿಸುವ ಸಾಧ್ಯತೆ ಇರುತ್ತದೆ.

ಇದನ್ನು ಓದಿ: ನೀವು ಹುಟ್ಟಿದ ವಾರ ಯಾವುದು? ವಾರದ ಪ್ರಕಾರ ನಿಮ್ಮ ಸ್ವಭಾವ ಹೇಗಿದೆ? 

ದಕ್ಷಿಣ ದಿಕ್ಕಿನಲ್ಲಿ ಕಿಟಕಿ ಇದ್ದದ್ದೇ ಆದರೆ ಅದನ್ನು ಮುಚ್ಚಿರುವುದು ಉತ್ತಮ. ಅಷ್ಟೇ ಅಲ್ಲದೇ ಅದರ ಮೇಲೆ ಯಾವುದಾದರೂ ದಪ್ಪ ಪರದೆಯನ್ನು ಹಾಕಿಡುವುದರಿಂದ ಸಮಸ್ಯೆಯು ಕಡಿಮೆಯಾಗುತ್ತದೆ.

ನೈಋತ್ಯ ಮೂಲೆಯು ಕಿಟಕಿಯನ್ನು ನಿರ್ಮಿಸಲು ಉತ್ತಮವಾದ ದಿಕ್ಕಲ್ಲ. ಮನೆಯ ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನ ಜಾಗವನ್ನು ನೈಋತ್ಯ ಮೂಲೆ ಎಂದು ಕರೆಯಲಾಗುತ್ತದೆ. ನೈಋತ್ಯ ದಿಕ್ಕಿನ ಅಧಿಪತಿ ರಾಹು-ಕೇತು ಆಗಿರುವ ಕಾರಣ ಈ ದಿಕ್ಕಿನಲ್ಲಿ ಕಿಟಕಿ ನಿರ್ಮಿಸುವುದು ಉತ್ತಮವಲ್ಲ.

ಮನೆಯಲ್ಲಿ ಕಿಟಕಿಯ ಸಂಖ್ಯೆ ಸಮಸಂಖ್ಯೆಯಾಗಿದ್ದರೆ ಉತ್ತಮವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅಂದರೆ 2,4,6 ಸಂಖ್ಯೆಯ ಕಿಟಕಿಗಳಿದ್ದರೆ ಉತ್ತಮ. ಕಿಟಕಿಯ ಸಂಖ್ಯೆ ವಿಷಮವಾಗಿದ್ದರೆ ಉತ್ತಮವಲ್ಲ.

ಇದನ್ನು ಓದಿ: ಸಂಪತ್ತು-ಸುಖ-ಸಮೃದ್ಧಿಗಾಗಿ ಅವಶ್ಯವಾಗಿ ಮನೆಯಲ್ಲಿರಬೇಕಾದ ವಸ್ತುಗಳಿವು....! 

ಮನೆಯ ಕಿಟಕಿಯನ್ನು ಬಳ್ಳಿಯಿಂದ, ಚಿಕ್ಕ ಗಿಡಗಳಿಂದ ಸಿಂಗರಿಸಿಡಬೇಕು. ಇಲ್ಲವೇ ರಂಗೋಲಿ ಮತ್ತು ಇನ್ನಿತರ ಚಿತ್ರಗಳು ಕಿಟಕಿಯ ಮೇಲಿದ್ದರೆ ಶುಭವೆಂದು ಹೇಳಲಾಗುತ್ತದೆ. ಕಿಟಕಿಗಳಿಗೆ ಉತ್ತಮವಾದ ಪರದೆಯನ್ನು ಹಾಕಿಡುವುದು ಒಳ್ಳೆಯದೆಂದು ಹೇಳಲಾಗುತ್ತದೆ.|

ಎರಡು ಬಾಗಿಲಿನ ಕಿಟಕಿಯು ಉತ್ತಮವಾದದ್ದೆಂದು ಹೇಳಲಾಗುತ್ತದೆ. ಬಾಗಿಲು ಒಳಮುಖವಾಗಿ ತೆರೆದುಕೊಳ್ಳುವಂಥ ಕಿಟಕಿಯಾಗಿದ್ದರೆ ಒಳ್ಳೆಯದು. ಮನೆಯ ಬಾಗಿಲು ಮತ್ತು ಕಿಟಕಿ ತೆರೆದುಕೊಳ್ಳುವಾಗ ಶಬ್ಧವಾಗಬಾರದು.

ಕಿಟಕಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಒಡೆದ ಅಥವಾ ಮುರಿದ ಕಿಟಕಿಯನ್ನು ತಕ್ಷಣ ಸರಿಪಡಿಸಿಕೊಳ್ಳುವುದು ಉತ್ತಮ.

ಉತ್ತರ ದಿಕ್ಕಿನಲ್ಲಿರುವ ಕಿಟಕಿ ಮತ್ತು ಬಾಗಿಲು ಯಾವಾಗಲೂ ಲಾಭದಾಯಕವಾಗಿರುತ್ತವೆ. ಹಾಗಾಗಿ ಮನೆಯ ಉತ್ತರ ದಿಕ್ಕಿನಲ್ಲಿ ಹೆಚ್ಚು ಬಾಗಿಲು ಮತ್ತು ಕಿಟಕಿ ಇದ್ದರೆ ಒಳ್ಳೆಯದು.

-  ಉತ್ತರ ದಿಕ್ಕಿನಲ್ಲಿರುವ ಕಿಟಕಿ ಮತ್ತು ಬಾಗಿಲು ಮನೆಗೆ ಸುಖ-ಸಮೃದ್ಧಿ, ಸಂಪತ್ತು ಮತ್ತುನೆಮ್ಮದಿಯನ್ನು ತಂದುಕೊಡುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ.

click me!