Wind Chime ಅದೃಷ್ಟ ತರೋದೇನೋ ನಿಜ, ಈ ತಪ್ಪು ಮಾಡಿದ್ರೆ ಮಾತ್ರ ದುರದೃಷ್ಟ ಹಿಂಬಾಲಿಸುತ್ತೆ!

By Suvarna News  |  First Published May 8, 2022, 4:58 PM IST

ವಿಂಡ್ ಚೈಮ್ ಹಾಕುವಾಗ ವಾಸ್ತುವಿನ ಈ ಸಲಹೆಗಳನ್ನು ಕಡೆಗಣಿಸಿದರೆ ಅದೃಷ್ಟ ತರಬೇಕಾದ ವಸ್ತುವು ದುರದೃಷ್ಟಕ್ಕೆ ಕಾರಣವಾಗಬಹುದು. 


ಫೆಂಗ್ ಶುಯ್ ಹಾಗೂ ವಾಸ್ತು ಶಾಸ್ತ್ರ ಎರಡರಲ್ಲೂ ವಿಂಡ್‌ಚೈಮನ್ನು ಬಹಳ ಮಂಗಳಕರ(auspicious) ಎಂದು ಪರಿಗಣಿಸಲಾಗುತ್ತದೆ. ಗಾಳಿ ಬೀಸಿದಂತೆಲ್ಲ ಕಿವಿಗಿಂಪಾದ, ಮನಸ್ಸಿಗೆ ತಂಪಾದ ಶಬ್ದತರಂಗಗಳನ್ನು ಹೊರಡಿಸುವ ವಿಂಡ್ ಚೈಮ್(wind chime) ಮನೆಗೆ ಅದೃಷ್ಟ, ಸಂಪತ್ತನ್ನು ತರುತ್ತದೆ, ಹೊರಗಿನಿಂದ ಮನೆಯೊಳಗೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಬರಲು ಬಿಡುವುದಿಲ್ಲ. ಮನೆಯಲ್ಲಿ ಸಕಾರಾತ್ಮಕತೆ ಇರುತ್ತದೆ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಕೆಲಸದಲ್ಲಿ ಪ್ರಗತಿ ಇರುತ್ತದೆ ಎನ್ನಲಾಗುತ್ತದೆ. ಆದರೆ, ಈ ಗಾಳಿ ಗಂಟೆಗಳನ್ನು ಮನೆಯಲ್ಲಿ ನೇತು ಹಾಕುವ ಮೊದಲು ವಾಸ್ತುವಿನ ನಿಯಮಗಳನ್ನು ತಿಳಿದಿರಬೇಕು. ಏಕೆಂದರೆ ತಪ್ಪಾದ ಜಾಗದಲ್ಲಿ ಹಾಕಿದ ವಿಂಡ್ ಚೈಮ್ ಮನೆಗೆ ನಕಾರಾತ್ಮಕತೆ ತರಬಹುದು. ಅದೃಷ್ಟ(good luck)ಕ್ಕಾಗಿ ಹಾಕಿದ ವಿಂಡ್ ಚೈಮ್ ದುರದೃಷ್ಟಕ್ಕೆ ಕಾರಣವಾಗಬಹುದು. 
ಹಾಗಾಗಿ ವಿಂಡ್ ಚೈಮ್ ನೇತು ಹಾಕುವಾಗ ವಾಸ್ತುವಿನ ಈ ನಿಯಮಗಳ ಬಗ್ಗೆ ಅರಿವಿರಬೇಕು. 

ವಿಂಡ್ ಚೈಮ್‌ನ ದಿಕ್ಕು
ವಿಂಡ್ ಚೈಮ್ ಅನ್ನು ಯಾವಾಗಲೂ ಸರಿಯಾದ ದಿಕ್ಕಿನಲ್ಲಿ ಇರಿಸಿ. ವಿಂಡ್ ಚೈಮ್ ಮರದ್ದಾಗಿದ್ದರೆ ಅದನ್ನು ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ನೇತು ಹಾಕಿ. ಅದೇ ಸಮಯದಲ್ಲಿ, ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಲೋಹದ ವಿಂಡ್ ಚೈಮ್ ಅನ್ನು ನೇತು ಹಾಕಿ. ಇಲ್ಲವಾದರೆ, ಅದರಲ್ಲಿನ ಗೊಂದಲಗಳು ಮನೆಯ ಸದಸ್ಯರ ನಡುವೆ ವೈರಾಗ್ಯ ಮತ್ತು ವೈಷಮ್ಯವನ್ನು ಉಂಟುಮಾಡುತ್ತದೆ.

Tap to resize

Latest Videos

undefined

ಇಲ್ಲಿ ಹಾಕಬೇಡಿ
ಅಡುಗೆ ಮನೆಯಲ್ಲಿ ಅಥವಾ ಪೂಜಾ ಕೋಣೆಯಲ್ಲಿ ವಿಂಡ್ ಚೈಮನ್ನು ಎಂದಿಗೂ ಹಾಕಬೇಡಿ. ಈ ಸ್ಥಳಗಳು ಶಕ್ತಿಯ ಮೂಲಗಳಾಗಿವೆ, ಈ ಸ್ಥಳಗಳಿಗೆ ವಿಂಡ್ ಚೈಮ್ ಅನ್ನು ತರುವುದು ಶಕ್ತಿಯಲ್ಲಿ ಅಸಮತೋಲನವನ್ನು ಉಂಟುಮಾಡಬಹುದು. ಇದು ವಿಶೇಷವಾಗಿ ಮನೆಯ ಮಹಿಳೆಯರ(women) ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮನೆಯ ಮುಖ್ಯ ದ್ವಾರ, ಬಾಲ್ಕನಿ ಅಥವಾ ಕಿಟಕಿಯ ಮೇಲೆ ವಿಂಡ್ ಚೈಮ್ ಅನ್ನು ಇಡುವುದು ಉತ್ತಮ.

ಈ ರೀತಿಯ ಅಂಗಸೌಷ್ಠವದ ಹುಡುಗಿ ಪತಿಯ ಪಾಲಿಗೆ ಅದೃಷ್ಟ ದೇವತೆಯಾಗುತ್ತಾಳೆ!

9 ರಾಡ್‌ಗಳ ವಿಂಡ್‌ಚೈಮ್
ಮಲಗುವ ಕೋಣೆಯಲ್ಲಿ ವಿಂಡ್ ಚೈಮ್‌ಗಳನ್ನು ಸ್ಥಾಪಿಸುವುದನ್ನು ತಪ್ಪಿಸಬೇಕು. ಆದರೆ ನೀವು ಬಾಲ್ಕನಿಯಲ್ಲಿ ಅಥವಾ ಮಲಗುವ ಕೋಣೆಗೆ ಜೋಡಿಸಲಾದ ಕಿಟಕಿಯಲ್ಲಿ ವಿಂಡ್ ಚೈಮ್‌ಗಳನ್ನು ನೇತು ಹಾಕುತ್ತಿದ್ದರೆ, ನಂತರ 9 ರಾಡ್‌ಗಳಿರುವ ವಿಂಡ್ ಚೈಮ್ ಅನ್ನು ಮಾತ್ರ ಬಳಸಿ. ಇಲ್ಲದಿದ್ದರೆ, ಪತಿ ಮತ್ತು ಪತ್ನಿಯ ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮುಖ್ಯದ್ವಾರದಲ್ಲಿ
ಮನೆಯ ಮುಖ್ಯ ದ್ವಾರದಲ್ಲಿ ಸಣ್ಣ ವಿಂಡ್ ಚೈಮನ್ನು ಇಡಬೇಡಿ, ಏಕೆಂದರೆ ಇದು ನಕಾರಾತ್ಮಕ ಶಕ್ತಿ ಹೊರಬರಲು ಅನುಮತಿಸುವುದಿಲ್ಲ. ವಿಂಡ್ ಚೈಮ್ ಅನ್ನು ಸ್ಥಾಪಿಸುವ ಸ್ಥಳಕ್ಕೆ ಅನುಗುಣವಾಗಿ ವಿಂಡ್ ಚೈಮ್ನ ಗಾತ್ರವನ್ನು ಆಯ್ಕೆ ಮಾಡಬೇಕು.

ಮೈ ತುಂಬ ಸಾಲವಿದೆಯಾ? ಪರಿಹಾರಕ್ಕೆ ಈ Vaastu Tips ಅನುಸರಿಸಿ

ಇಲ್ಲಿ ಬೇಡ
ಜನರು ಕುಳಿತುಕೊಳ್ಳುವಂಥ ಸ್ಥಳದಲ್ಲಿ ವಿಂಡ್ ಚೈಮನ್ನು ಎಂದಿಗೂ ಸ್ಥಾಪಿಸಬಾರದು. ಹಾಗೆ ಮಾಡುವುದರಿಂದ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಪ್ಲ್ಯಾಸ್ಟಿಕ್ ವಿಂಡ್ ಚೈಮ್ ಬೇಡ
ಗಾಜಿನ ಅಥವಾ ಪ್ಲಾಸ್ಟಿಕ್ ವಿಂಡ್ ಚೈಮ್(glass or plastic wind chime) ಅನ್ನು ಎಂದಿಗೂ ಬಳಸಬೇಡಿ. ವಿಂಡ್ ಚೈಮ್ಗಳನ್ನು ಮರ ಅಥವಾ ಲೋಹದಿಂದ ಮಾತ್ರ ಮಾಡಬೇಕು.
 

click me!