ಯಾರು ಈ Laughing Buddha? ಮನೆಯಲ್ಲಿಡುವ ಲಾಭಗಳೇನು?

By Suvarna NewsFirst Published May 9, 2022, 12:24 PM IST
Highlights

ಲಾಫಿಂಗ್ ಬುದ್ಧನನ್ನು ಎಲ್ಲರೂ ನೋಡಿಯೇ ಇರುತ್ತೀರಿ. ನಿಮ್ಮ ಮನೆಯಲ್ಲೂ ಆತನ ವಿಗ್ರಹ ತಂದಿರಿಸಿಕೊಂಡಿರಬಹುದು. ಈ ಲಾಫಿಂಗ್ ಬುದ್ಧ ಎಂದರೆ ಯಾರೆಂದು ಬಲ್ಲಿರಾ?

ಲಾಫಿಂಗ್ ಬುದ್ಧ(Laughing Buddha)ನನ್ನು ನೋಡದವರ್ಯಾರು? ಮನೆಗಳಲ್ಲಿ, ಕಚೇರಿ ಆವರಣಗಳಲ್ಲಿ, ಹೋಟೆಲ್, ಮಾಲ್‌ಗಳಲ್ಲಿ ನಗುತ್ತಾ ನಿಂತಿರುವ ಲಾಫಿಂಗ್ ಬುದ್ಧ ಎಲ್ಲರಿಗೂ ಚಿರಪರಿಚಿತ. ಅವನಿದ್ದಲ್ಲಿ ಅದೃಷ್ಟವಿರುತ್ತದೆ ಎಂಬ ನಂಬಿಕೆ ಎಲ್ಲರಿಗೂ ಗೊತ್ತು. ಆದರೆ ಯಾರು ಈ ಲಾಫಿಂಗ್ ಬುದ್ಧ? ವಾಸ್ತುವಿನಲ್ಲಿ, ಫೆಂಗ್ ಶುಯ್‌ನಲ್ಲಿ ಲಾಫಿಂಗ್ ಬುದ್ಧನಿಗೇಕೆ ಮಹತ್ವ? ಇದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಈ ಬಗ್ಗೆ ವಿವರಗಳನ್ನು ತಿಳಿಯೋಣ ಬನ್ನಿ. 

ಯಾರು ಈ ಲಾಫಿಂಗ್ ಬುದ್ಧ?
ಲಾಫಿಂಗ್ ಬುದ್ಧನನ್ನು ಚೀನಾದಲ್ಲಿ 'ಬುಡೈ'(Budai) ಎಂದು ಕರೆಯುತ್ತಾರೆ. ಆತ ಚೀನಾದ ಲಿಯಾಂಗ್ ರಾಜವಂಶದ (ಕ್ರಿ.ಶ. 907-923) ಅವಧಿಯಲ್ಲಿ ವಾಸಿಸುತ್ತಿದ್ದ ವಿಲಕ್ಷಣ ಚೀನೀ ಝೆನ್ ಸನ್ಯಾಸಿ(Zen monk). ಅವರು ಫೆಂಗ್ಹುವಾ ಮೂಲದವರಾಗಿದ್ದರು ಮತ್ತು ಅವರ ಬೌದ್ಧ ಹೆಸರು ಕ್ವಿಸಿ (ಚೀನೀ ಹಸರು: ಪಿನ್ಯಿನ್). ಅವರು ಒಳ್ಳೆಯ ಮತ್ತು ಎಲ್ಲರಿಗೂ ಪ್ರೀತಿ ಪಾತ್ರರಾಗಿದ್ದ ವ್ಯಕ್ತಿ. ಕೆಲವು ಬೌದ್ಧ ಸಂಪ್ರದಾಯಗಳು ಅವನನ್ನು ಬುದ್ಧ ಅಥವಾ 'ಬೋಧಿಸತ್ವ' ಎಂದು ಪರಿಗಣಿಸುತ್ತವೆ. ಸಾಮಾನ್ಯವಾಗಿ ಅವರನ್ನು 'ಮೈತ್ರೇಯ' ಅಂದರೆ ಭವಿಷ್ಯದ ಬುದ್ಧ ಎಂದು ನಂಬಲಾಗುತ್ತದೆ. ಅವನ ದೊಡ್ಡ ಚಾಚಿಕೊಂಡಿರುವ ಹೊಟ್ಟೆ ಮತ್ತು ಜಾಲಿ ಸ್ಮೈಲ್ ಅವನಿಗೆ 'ನಗುವ ಬುದ್ಧ' ಎಂಬ ಸಾಮಾನ್ಯ ಪದನಾಮವನ್ನು ನೀಡಿದೆ. 

ತಾವು ಹೇಳಿದ್ದೇ ಆಗಬೇಕೆನ್ನೋ ನಾಲ್ಕು ರಾಶಿಗಳಿವು..

ಜಪಾನೀಸ್ ಭಾಷೆಯಲ್ಲಿ  'ಹೋಟೆ' ಎಂದು ಉಚ್ಚರಿಸಲಾಗುತ್ತದೆ. ಇದರ ಅರ್ಥ 'ಬಟ್ಟೆ' ಅಥವಾ 'ಹೊಟ್ಟೆಬಾಕ'. ಬುದ್ಧನ ಹೊಟ್ಟೆಯನ್ನು ಉಜ್ಜಿದರೆ ಅದು ಅದೃಷ್ಟ(Good luck) ಮತ್ತು ಸಂಪತ್ತ(wealth)ನ್ನು ತರುತ್ತದೆ ಎಂದು ನಂಬಲಾಗಿದೆ. ನಗುವ ಬುದ್ಧನನ್ನು ಏಳು ಜಪಾನೀಸ್ ಶಿಂಟೋ ದೇವರುಗಳಲ್ಲಿ ಒಂದಾಗಿ ನೋಡಲಾಗುತ್ತದೆ.

ಥೈಲ್ಯಾಂಡ್‌ನಲ್ಲಿ, 'ಬುಡೈ' ಅನ್ನು ಕೆಲವೊಮ್ಮೆ ವ್ಯಾಪಕವಾಗಿ ಗೌರವಾನ್ವಿತ ಸನ್ಯಾಸಿ ಎನಿಸಿಕೊಂಡ, 'ಸಂಗಕಚೈ'  ಎನ್ನಲಾಗುತ್ತದೆ. ಸಂಗಕಚೈ ಬೌದ್ಧ ಧರ್ಮದ ಉತ್ತಮ ಪ್ರಚಾರಕ ಎಂದು ಹೆಸರಾದವನು. ಆದರೆ, ಇತರರು ಇದನ್ನು ಒಪ್ಪುವುದಿಲ್ಲ. ಲಾಫಿಂಗ್ ಬುದ್ಧ ಹಾಗೂ ಸಂಗಕಚೈ ಕೊಂಚ ನೋಡಲು ಒಂದೇ ತರವಿದ್ದರೂ ಅವರು ಬೇರೆ ಬೇರೆ ಎನ್ನುತ್ತಾರೆ. ಸಂಕಚೈ ತಲೆಯ ಮೇಲೆ ಕೂದಲಿನ ಕುರುಹು ಹೊಂದಿದ್ದರೆ, 'ಬುಡೈ' ಸ್ಪಷ್ಟವಾಗಿ ಬೋಳು. 

ಚೀನೀ ದೇವಾಲಯಗಳು ದೇವಾಲಯದ ಪ್ರವೇಶದ್ವಾರದಲ್ಲಿ ಲಾಫಿಂಗ್ ಬುದ್ಧನ ಆಕೃತಿಗಳನ್ನು ಹೊಂದಿರುತ್ತವೆ. ಅದೃಷ್ಟ ಮತ್ತು ಸಮೃದ್ಧಿ(prosperity)ಯ ದೇವರು ಎಂದು ಅವನನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ.

ಮೈ ತುಂಬ ಸಾಲವಿದೆಯಾ? ಪರಿಹಾರಕ್ಕೆ ಈ Vaastu Tips ಅನುಸರಿಸಿ

ಇನ್ನು ಲಾಫಿಂಗ್ ಬುದ್ಧನನ್ನು ಭಾರತೀಯನಾಗಿ ನೋಡಲು ಬಯಸುವ ಸಂದರ್ಭದಲ್ಲಿ, ಆತನನ್ನು ಕುಬೇರ(Lord Kuber)ನಿಗೆ ಹೋಲಿಸಲಾಗುತ್ತದೆ. ಕುಬೇರನು ಅದೃಷ್ಟ ಮತ್ತು ಸಂಪತ್ತಿನ ಅಧಿಪತಿಯಾಗಿರುವುದರಿಂದ ಆತ ಲಾಫಿಂಗ್ ಬುದ್ಧನ ಹೋಲಿಕೆಗೆ ಹೊಂದುತ್ತಾನೆ. 

ಲಾಫಿಂಗ್ ಬುದ್ಧನನ್ನು ಏಕೆ ಇಟ್ಟುಕೊಳ್ಳುತ್ತಾರೆ?
ಚೀನಾದಲ್ಲಿ ಲಾಫಿಂಗ್ ಬುದ್ಧ ಅದೃಷ್ಟ, ಆಶಾವಾದ ಮತ್ತು ಸಮೃದ್ಧಿಯ ಸಂಕೇತ. ಹಾಗಾಗಿ ಚೀನೀಯರು ಮ್ಮ ಜೀವನದಲ್ಲಿ ಸಂತೋಷ ಮತ್ತು ನಗುವನ್ನು ತರಲು ತಮ್ಮ ಮನೆಗಳು, ವಾಹನಗಳು ಮತ್ತು ಕಚೇರಿಗಳಲ್ಲಿ ಲಾಫಿಂಗ್ ಬುದ್ಧನನ್ನು ಇಟ್ಟುಕೊಳ್ಳುತ್ತಾರೆ. ಇದೇ ನಂಬಿಕೆ ಭಾರತ್ಕೂ ಹಬ್ಬಿ ಭಾರತದಲ್ಲಿ ಜನರು ಲಾಫಿಂಗ್ ಬುದ್ಧನನ್ನು ಖರೀದಿಸುವುದು ತುಂಬಾ ಸಾಮಾನ್ಯವಾಗಿದೆ. ಆದರೆ, ಇದನ್ನು ಖರೀದಿಸಿ ಇಟ್ಟುಕೊಳ್ಳುವಾಗ ಕೆಲ ವಾಸ್ತು ಮತ್ತು ಫೆಂಗ್ ಶುಯ್ ನಿಯಮಗಳನ್ನು ಪಾಲಿಸಬೇಕು. ಸಂಪತ್ತಿನ ಉದ್ದೇಶಕ್ಕಾಗಿ ಸ್ವಾರ್ಥದಿಂದ ಪ್ರತಿಮೆಯನ್ನು ಖರೀದಿಸಬಾರದು. ಕೇವಲ ಸಂಪತ್ತಿನ ದುರಾಸೆಯಿಂದ ಪ್ರತಿಮೆಯನ್ನು ಇಟ್ಟರೆ ಅದು ಋಣಾತ್ಮಕ ಪರಿಣಾಮ ಬೀರುತ್ತದೆ.

Wind Chime ಅದೃಷ್ಟ ತರೋದೇನೋ ನಿಜ, ಈ ತಪ್ಪು ಮಾಡಿದ್ರೆ ಮಾತ್ರ ದುರದೃಷ್ಟ ಹಿಂಬಾಲಿಸುತ್ತೆ!

ಲಾಫಿಂಗ್ ಬುದ್ಧ ಇಟ್ಟುಕೊಳ್ಳುವಾಗ ಅನುಸರಿಸಬೇಕಾದ ನಿಯಮಗಳು
ಬುದ್ಧನನ್ನು ಮನೆಯ ಹೊರಗೆ ಇರಿಸಬಾರದು. ಇದರಿಂದ ದುರದೃಷ್ಟ ತಟ್ಟುತ್ತದೆ. ವಾಸ್ತು ಪ್ರಕಾರ, ಬುದ್ಧನನ್ನು ಇರಿಸಲು ಸೂಕ್ತ ಸ್ಥಳವೆಂದರೆ ಲಿವಿಂಗ್ ರೂಂ. 
ಎಲ್ಲಾ ಸಮಯದಲ್ಲೂ ನಿಮ್ಮ ಮುಖ್ಯ ಬಾಗಿಲಿನ ಮುಂದೆ ಲಾಫಿಂಗ್ ಬುದ್ಧ ಇರಿಸಿ. ಇದು ಅದೃಷ್ಟವನ್ನು ಆಕರ್ಷಿಸುತ್ತದೆ.
ಬುದ್ಧನ ಪ್ರತಿಮೆಯನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಅಥವಾ ಎಲ್ಲಾ ಕುಟುಂಬ ಸದಸ್ಯರು ನೋಡಬಹುದಾದ ಸ್ಥಳದಲ್ಲಿ ಇರಿಸಿ.
ಪ್ರತಿದಿನ ಬೆಳಿಗ್ಗೆ, ಪ್ರತಿಮೆಯ ದೊಡ್ಡ ಹೊಟ್ಟೆಯನ್ನು ಉಜ್ಜಿ. ನಿಮ್ಮ ವಿನಮ್ರ ಸ್ಪರ್ಶವು ಅವನನ್ನು ಸಂತೋಷಪಡಿಸುತ್ತದೆ ಮತ್ತು ಅವನು ನಿಮಗೆ ಸಂತೋಷದ ಜೀವನವನ್ನು ನೀಡುತ್ತಾನೆ.
ಬುದ್ಧನನ್ನು ಮಕ್ಕಳ ಕೋಣೆಯಲ್ಲಿಯೂ ಇರಿಸಬಹುದು. ಇದು ಅವರಿಗೆ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ ಮತ್ತು ಅವರು ತಮ್ಮ ಹೆತ್ತವರಿಗೆ ಗೌರವವನ್ನು ತೋರಿಸುತ್ತಾರೆ.
ಬುದ್ಧನನ್ನು ನಿಮ್ಮ ಕಚೇರಿಯ ಮೇಜಿನ ಮೇಲೆ ಇರಿಸುವುದರಿಂದ ನಿಮ್ಮ ಸಂಬಳವನ್ನು ಹೆಚ್ಚಿಸುತ್ತದೆ ಮತ್ತು ಶತ್ರುಗಳನ್ನು ದೂರ ಮಾಡುತ್ತದೆ.
ಬುದ್ಧನನ್ನು ನಿಮ್ಮ ಕಣ್ಣಿನ ಮಟ್ಟಕ್ಕೆ ಸಮಾನವಾದ ಅಥವಾ ಹೆಚ್ಚಿನ ಎತ್ತರದಲ್ಲಿ ಇರಿಸಿ.
 

click me!