ವಾಸ್ತು ಪ್ರಕಾರ, ಮನೆಯಲ್ಲಿ ಯಾವ ಮಾದರಿ ಗಣೇಶ ಮೂರ್ತಿ ಇಟ್ಕೊಬೇಕು?

By Suvarna NewsFirst Published Sep 15, 2023, 11:11 AM IST
Highlights

ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಗಾಗಿ ಗಣೇಶ ಮೂರ್ತಿ, ವಿಗ್ರಹವನ್ನು ಇಟ್ಟು ಪೂಜಿಸಬೇಕು ಎಂದುಕೊಂಡಿದ್ದೀರಾ? ಹಾಗಾದರೆ, ಕೆಲವು ನಿಯಮಗಳನ್ನು ಅನುಸರಿಸುವುದು ಉತ್ತಮ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಮಾದರಿಯ ಗಣೇಶ ವಿಗ್ರಹಗಳನ್ನು ಮಾತ್ರವೇ ಮನೆಯಲ್ಲಿ ಇಟ್ಟುಕೊಳ್ಳಬೇಕು ಹಾಗೂ ಪೂಜಿಸಬೇಕು. 
 

ಮನೆಯಲ್ಲಿ ಗಣೇಶನ ಪ್ರತಿಮೆ ಇಟ್ಟು ಪೂಜಿಸುವುದು ಸಾಮಾನ್ಯ. ಗಣಪತಿ ಮೂರ್ತಿಯನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಶುಭದಾಯಕ. ಮಂಗಳದಾಯಕ ಗಣೇಶನ ಕೃಪೆಯಿಂದ ಸೌಭಾಗ್ಯ, ಸಂತಸ, ನೆಮ್ಮದಿ ಹೊಂದಬಹುದು. ಆದರೆ, ಮನೆಯಲ್ಲಿ ಯಾವ ರೀತಿಯ ಗಣೇಶನ ಪ್ರತಿಮೆ ಇಟ್ಟು ಪೂಜಿಸುವುದು ಅಥವಾ ಇರಿಸಿಕೊಳ್ಳುವುದು ಉಚಿತ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಎಲ್ಲ ಮಾದರಿಯ ಗಣೇಶನ ವಿಗ್ರಹಗಳನ್ನೂ ಮನೆಯಲ್ಲಿ ಇರಿಸಿಕೊಳ್ಳುವುದು ಸರಿಯಲ್ಲ. ಏಕೆಂದರೆ, ಒಂದೊಂದೂ ವಿಭಿನ್ನ ಪ್ರಭಾವ ಹೊಂದಿರುತ್ತವೆ. ಗಣೇಶ ಶಕ್ತಿ ಮತ್ತು ಸಮೃದ್ಧಿಯ ಸಂಕೇತ. ಹೀಗಾಗಿ, ಮನೆಯಲ್ಲಿ ಯಾವ ಮಾದರಿಯ ಗಣೇಶ ಪ್ರತಿಮೆ ಇಡುವುದು ಉತ್ತಮ ಎನ್ನುವುದನ್ನು ಅರಿತುಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಮಾದರಿಯ ಗಣೇಶನ ಪ್ರತಿಮೆಗಳನ್ನು ಮನೆಯಲ್ಲಿಡುವುದು ಶ್ರೇಯಸ್ಸನ್ನು ತರುತ್ತದೆ. ಇದಕ್ಕೂ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಸುಖ ಮತ್ತು ಸಮೃದ್ಧಿಯನ್ನು ಬಯಸಿ ಗಣಪತಿಯನ್ನು ಆರಾಧನೆ ಮಾಡುವವರು ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. 

•    ಮಾವು ಮತ್ತು ಬೇವಿನ (Mango and Neem) ಗಣೇಶ
ನೀವು ಮಾವು ಮತ್ತು ಬೇವಿನ ಎಲೆಗಳಿಂದ (Leaves) ರಚಿತವಾದ ಗಣೇಶನ ಮೂರ್ತಿಯನ್ನು ಕಂಡಿರಬಹುದು. ವಾಸ್ತು (Vaastu) ಶಾಸ್ತ್ರದ ಪ್ರಕಾರ, ಇದನ್ನು ಮನೆಯಲ್ಲಿ ಅಗತ್ಯವಾಗಿ ಇಟ್ಟುಕೊಳ್ಳಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿ (Prosperous) ನೆಲೆಯಾಗುತ್ತದೆ. ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಅಂಶವೆಂದರೆ, ಮನೆಯ ಮುಖ್ಯ ದ್ವಾರದಲ್ಲೇ (Main Door) ಗಣೇಶನ ಪ್ರತಿಮೆಯನ್ನು (Idol) ಇಟ್ಟುಕೊಳ್ಳುವುದು ಉತ್ತಮ.

ಮನೆ ಹೀಗಿದ್ರೆ ಜೇಬು ಖಾಲಿ ಆಗೋದು ಫಿಕ್ಸ್,ಇಲ್ಲಿವೆ ಕೆಲವು ಸಲಹೆ

•    ಶ್ವೇತಾರ್ಕ ಗಣೇಶ
ಶ್ವೇತಾರ್ಕ ಸಸ್ಯ ಎಂದರೆ ಎಕ್ಕದ (Aak Plant) ಗಿಡ. ಎಕ್ಕದ ಬೇರಿನಿಂದ (Root) ಮಾಡಿದ ಗಣೇಶನ ಪ್ರತಿಮೆಯನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಶ್ರೇಯಸ್ಕರ. ಇದನ್ನು ದಿನವೂ ಪೂಜೆ (Worship) ಮಾಡಬೇಕು. ಇದರಿಂದ ಮನೆಯಲ್ಲಿ ಎಂದಿಗೂ ಸಂಪತ್ತಿನ (Wealth) ಕೊರತೆ ಉಂಟಾಗುವುದಿಲ್ಲ. 

•    ಸ್ಫಟಿಕದ (Crystal) ಗಣೇಶ ಮೂರ್ತಿ
ವಾಸ್ತು ಶಾಸ್ತ್ರದ ಪ್ರಕಾರ, ಸ್ಫಟಿಕದ ಗಣೇಶ ಪ್ರತಿಮೆಯನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ಸ್ಫಟಿಕವನ್ನು ಉತ್ತಮ ಧಾತು ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಸ್ಫಟಿಕದ ಗಣೇಶ ಮೂರ್ತಿ ಇಟ್ಟುಕೊಳ್ಳುವುದು ಶುಭದಾಯಕ (Auspicious) ಎನ್ನಲಾಗಿದೆ. ಸ್ಫಟಿಕದ ಲಕ್ಷ್ಮೀ ಮೂರ್ತಿಯನ್ನು ಇಟ್ಟು ಪೂಜಿಸುವುದರಿಂದಲೂ ಧನ ಸೌಭಾಗ್ಯ ಪ್ರಾಪ್ತಿಯಾಗುತ್ತದೆ.

•    ಕುಳಿತಿರುವ (Sitting) ಗಣೇಶ ಪ್ರತಿಮೆ
ಮನೆಯಲ್ಲಿ ಇಟ್ಟುಕೊಳ್ಳುವ ಗಣೇಶ ಪ್ರತಿಮೆ ಯಾವಾಗಲೂ ಕುಳಿತುಕೊಂಡಿರುವಂತೆ ಇರಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಕುಳಿತುಕೊಂಡಿರುವ ಮುದ್ರೆ (Mudra) ಉತ್ತಮ. ಹಾಗೂ ಮನೆಯ ಬಾಗಿಲಿನಿಂದ ಹೊರಗೆ ಗಣೇಶ ಮೂರ್ತಿಯನ್ನು ಇಡಬಾರದು. ಒಂದೊಮ್ಮೆ ನಿಮ್ಮ ಬಳಿ ನಿಂತುಕೊಂಡಿರುವ ಗಣೇಶ ಮೂರ್ತಿ ಇದ್ದರೆ ಅದನ್ನು ಕಚೇರಿಯಲ್ಲಿ (Office) ಅಥವಾ ನಿಮ್ಮ ನಿಮ್ಮ ಕೆಲಸದ ಸ್ಥಳದಲ್ಲಿ ಡೆಸ್ಕ್ ಮೇಲೆ ಇಟ್ಟುಕೊಳ್ಳಬಹುದು ಎನ್ನುತ್ತದೆ ವಾಸ್ತು ಶಾಸ್ತ್ರ. 

ಅಲೋ ವೆರಾದೊಂದಿಗೆ ಈ 3 ಗಿಡ ನೆಟ್ಟರೆ ಲಕ್ಷ್ಮಿ ಒಲಿಯುವಳು..!

•    ಕೆಂಪು (Red) ಬಣ್ಣದ ಮೂರ್ತಿ
ಗಣೇಶನ ಪ್ರತಿಮೆಗಳು ಬೇರೆ ಬೇರೆ ಬಣ್ಣದಲ್ಲಿ ದೊರೆಯುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕೆಂಪು ಬಣ್ಣದ, ಸಿಂಧೂರ ವರ್ಣದ ಗಣೇಶನ ಮೂರ್ತಿ ಇಡುವುದು ಉತ್ತಮ. ಇದರಿಂದ ಸಕಲ ಐಶ್ವರ್ಯ ದೊರೆಯುತ್ತದೆ. ಶ್ವೇತ (White) ವರ್ಣದ ಮೂರ್ತಿ ಇಟ್ಟುಕೊಳ್ಳುವುದು ಸಹ ಒಳ್ಳೆಯದು. ಇದರಿಂದ ಶಾಂತಿ (Peace) ಮತ್ತು ಸಮೃದ್ಧಿಗೆ ಕಾರಣವಾಗುತ್ತದೆ. ಆದರೆ, ಒಂದು ವಿಚಾರ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಗಣೇಶ ಮೂರ್ತಿಯನ್ನು ಮನೆಯ ಬಾಗಿಲಿನ ಮೇಲೆ ಯಾವುದೇ ಕಾರಣಕ್ಕೂ ಸ್ಥಾಪಿಸಬಾರದು. ವಾಸ್ತು ಪ್ರಕಾರ, ಗಣೇಶ ವಿಗ್ರಹವನ್ನು ಪಶ್ಚಿಮ ದಿಕ್ಕು, ಉತ್ತರ ಮತ್ತು ಈಶಾನ್ಯ ದಿಕ್ಕುಗಳಲ್ಲಿ ಇಡಬೇಕು. 
 

click me!