ಶಾಸ್ತ್ರಗಳ ಪ್ರಕಾರ ತುಳಸಿ ಗಿಡವು ಮನೆಯಲ್ಲಿ ಬರುವ ಅನಾಹುತಗಳನ್ನು ತಡೆಯಲು ಹಾಗೂ ರೋಗಗಳ ನಾಶಕ್ಕೆ ಉತ್ತಮ ಪರಿಹಾರವಾಗಿದೆ. ಕುಟುಂಬದ ಆರ್ಥಿಕ ಸ್ಥಿತಿಗೂ ಇದು ಮಂಗಳಕರ. ಮನೆಯಲ್ಲಿ ತುಳಸಿ ಗಿಡವಿರುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ತುಳಸಿಗೆ ಸಂಬಂಧಿಸಿದ ವಾಸ್ತುವಿನ ಬಗ್ಗೆ ತಿಳಿಯೋಣ.
ತುಳಸಿ ಸಸ್ಯವು ತೊಂದರೆಗಳ ಬಗ್ಗೆ ಮುಂಚಿತವಾಗಿ ನಿಮ್ಮನ್ನು ಎಚ್ಚರಿಸುತ್ತದೆ. ಧಾರ್ಮಿಕ ಗ್ರಂಥಗಳಲ್ಲಿಯೂ ಇದನ್ನು ಉಲ್ಲೇಖಿಸಲಾಗಿದೆ. ಹೌದು, ತುಳಸಿಯನ್ನು ಲಕ್ಷ್ಮಿ ದೇವಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯನ್ನು ಸಮೃದ್ಧಿಯ ದೇವತೆ ಎಂದು ನೋಡಲಾಗುತ್ತದೆ. ಹಾಗಾಗಿ ಮನೆಯಲ್ಲಿ ತುಳಸಿ ಒಣಗುತ್ತಿದೆ ಎಂದರೆ ಲಕ್ಷ್ಮಿ ದೇವಿ ಮನೆಯಿಂದ ದೂರ ಹೋಗುತ್ತಿದ್ದಾಳೆ, ಹಣಕಾಸಿನ ಸಮಸ್ಯೆಗಳು ಶುರುವಾಗುತ್ತವೆ ಎಂಬ ಸೂಚನೆ ಇದಾಗಿದೆ ಎಂದು ಪರಿಗಣಿಸಲಾಗುತ್ತದೆ.
undefined
ಸೌಮ್ಯವಾಗಿ ಕಾಣುವ ಈ ತುಳಸಿ ಗಿಡ ನಮ್ಮ ಮನೆಯ ಎಲ್ಲಾ ದೋಷಗಳನ್ನು ದೂರ ಮಾಡುತ್ತದೆ. ತುಳಸಿಯು ಹಬ್ಬಿ ಹರಡುತ್ತಿದೆ ಎಂದರೆ ಮನೆಯು ಸಮೃದ್ಧಿ, ಆರೋಗ್ಯ, ಸಂತೋಷದಿಂದ ತುಂಬಿರುತ್ತದೆ ಎಂದರ್ಥ. ವಾಸ್ತುವಿನಲ್ಲಿ ತುಳಸಿಗಾಗಿ ಏನೆಲ್ಲ ನಿಯಮಗಳಿವೆ ನೋಡೋಣ.
- ಒಣ ತುಳಸಿ ಗಿಡವನ್ನು ಮನೆಯಲ್ಲಿ ಇಡಬಾರದು. ಇದು ಅಶುಭವೆಂದು ಪರಿಗಣಿಸಲಾಗಿದೆ. ತುಳಸಿ ಗಿಡವನ್ನು ಬಾವಿ ಅಥವಾ ಯಾವುದಾದರೂ ಪವಿತ್ರ ಸ್ಥಳದಲ್ಲಿ ವಿಸರ್ಜಿಸಿ, ನಂತರ ಹೊಸ ಗಿಡವನ್ನು ನೆಡಬೇಕು.
ಸಾಡೇಸಾತಿಯ ಕ್ರೂರ ಹಂತದಲ್ಲಿದೆ ಕುಂಭ ರಾಶಿ, ಯಾವಾಗಪ್ಪಾ ಇದರಿಂದ ಮುಕ್ತಿ?
- ಜ್ಯೋತಿಷಿಗಳ ಪ್ರಕಾರ, ತುಳಸಿ ಸಸ್ಯವು ಬುಧದ ಕಾರಣದಿಂದಾಗಿ ಒಣಗುತ್ತದೆ ಏಕೆಂದರೆ ಬುಧ ಗ್ರಹವು ಹಸಿರು ಮತ್ತು ಮರಗಳು ಮತ್ತು ಸಸ್ಯಗಳ ಹಸಿರನ್ನು ಸಂಕೇತಿಸುತ್ತದೆ. ಇದು ಇತರ ಗ್ರಹಗಳ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳಿಗೆ ಸ್ಥಳೀಯರನ್ನು ತಲುಪುವ ಗ್ರಹವಾಗಿದೆ. ಬುಧಗ್ರಹದ ಪ್ರಭಾವದಿಂದ ತುಳಸಿ ಗಿಡ ಹಬ್ಬುತ್ತದೆ. ತುಳಸಿಯನ್ನು ವಾಸ್ತುವಿಗೆ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇದು ಯಾವಾಗಲೂ ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ.
- ವಾಸ್ತು ಶಾಸ್ತ್ರದ ಪ್ರಕಾರ, ನೀವು ಮನೆಯಲ್ಲಿ ತುಳಸಿಯನ್ನು ನೆಡಲು ಬಯಸಿದರೆ, ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕನ್ನು ಆರಿಸಿಕೊಳ್ಳಬೇಕು. ಈ ದಿಕ್ಕುಗಳಲ್ಲಿ ತುಳಸಿ ನೆಟ್ಟರೆ ಮನೆಯಲ್ಲಿ ಧನಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ.
- ವಾಸ್ತು ಶಾಸ್ತ್ರದ ಪ್ರಕಾರ, ತುಳಸಿ ಗಿಡವನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಒಂದು ವೇಳೆ ನೆಟ್ಟರೆ ಅದು ನಿಮಗೆ ಪ್ರಯೋಜನವನ್ನು ನೀಡುವ ಬದಲು ಹಾನಿ ಮಾಡುತ್ತದೆ.
-
- ತುಳಸಿಗೆ ನೀರನ್ನು ಅರ್ಪಿಸದ ಕೆಲವು ವಿಶೇಷ ದಿನಗಳೂ ಇವೆ. ಶಾಸ್ತ್ರಗಳ ಪ್ರಕಾರ, ಪ್ರತಿ ಭಾನುವಾರ, ಏಕಾದಶಿ ಮತ್ತು ಸೂರ್ಯ ಮತ್ತು ಚಂದ್ರಗ್ರಹಣದಂದು ತುಳಸಿಗೆ ನೀರನ್ನು ಅರ್ಪಿಸಬಾರದು. ಅಲ್ಲದೆ, ಈ ದಿನಗಳಲ್ಲಿ ಮತ್ತು ಸಂಜೆ ಸೂರ್ಯಾಸ್ತದ ನಂತರ, ತುಳಸಿ ಎಲೆಗಳನ್ನು ಕೀಳಬಾರದು. ಹೀಗೆ ಮಾಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ.
- ತುಳಸಿ ಗಿಡಕ್ಕೆ ಹಸಿ ಹಾಲನ್ನು ಹಾಕಿ, ನೀರನ್ನು ಅರ್ಪಿಸಿ. ಮತ್ತು ಭಾನುವಾರ ಹೊರತುಪಡಿಸಿ ಪ್ರತಿದಿನ ಸಂಜೆ ತುಪ್ಪದ ದೀಪವನ್ನು ಉರಿಸಿ. ಇದರಿಂದ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ನೆಲೆಸಿರುತ್ತಾಳೆ.
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
- ತುಳಸಿಯನ್ನು ಅಡುಗೆ ಮನೆಯ ಬಳಿಯೂ ಇಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಕೌಟುಂಬಿಕ ಕಲಹ ಕೊನೆಗೊಳ್ಳುತ್ತದೆ.
- ನಿಮ್ಮ ಮನೆಯಲ್ಲಿ ವಾಸ್ತು ದೋಷವಿದ್ದರೆ ಅದನ್ನು ಹೋಗಲಾಡಿಸಲು ಅಗ್ನಿಕೋನದ ಆಗ್ನೇಯದಿಂದ ವಾಯುವ್ಯದವರೆಗೆ ಯಾವುದೇ ಖಾಲಿ ಜಾಗದಲ್ಲಿ ತುಳಸಿ ಗಿಡವನ್ನು ನೆಡಬಹುದು. ಈ ಸ್ಥಳಗಳಲ್ಲಿ ಖಾಲಿ ಜಾಗವಿಲ್ಲದಿದ್ದರೆ, ಅದನ್ನು ಮಡಕೆಯಲ್ಲಿ ಇಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.