ವಾಸ್ತು ಪ್ರಕಾರ ನಡೆದಾಗ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಬರುತ್ತದೆ. ಬೆಳ್ಳಿಯನ್ನು ವಿವಿಧ ರೂಪದಲ್ಲಿ ಬಳಸಿ ಅದೃಷ್ಟವನ್ನು, ಧನಾತ್ಮಕ ಶಕ್ತಿಯನ್ನು ಆಕರ್ಷಿಸಲು ಸಾಧ್ಯವಿದೆ. ಬೆಳ್ಳಿಯ ಬಳಕೆ ಬಗ್ಗೆ ವಾಸ್ತು ಏನು ಹೇಳುತ್ತದೆ ನೋಡೋಣ.
ವಾಸ್ತು ಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ ಬೆಳ್ಳಿಯು ಚಂದ್ರ ಮತ್ತು ಗುರು ಗ್ರಹಕ್ಕೆ ಸಂಬಂಧಿಸಿದೆ. ಬೆಳ್ಳಿ ಆಭರಣಗಳನ್ನು ಧರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ವಾಸ್ತು ತಜ್ಞರು ಅನೇಕ ವಾಸ್ತು ಸಂಬಂಧಿತ ದೋಷಗಳನ್ನು ಸರಿಪಡಿಸಲು ಯಾವಾಗಲೂ ಬೆಳ್ಳಿಯನ್ನು ಬಳಸುತ್ತಾರೆ. ಬೆಳ್ಳಿ(Silver)ಯ ವಸ್ತುಗಳನ್ನು ಬಳಸಲು ಶಿಫಾರಸು ಮಾಡುತ್ತಾರೆ. ಬೆಳ್ಳಿಯ ಆಭರಣಗಳು ಅದೃಷ್ಟ, ಶಾಂತಿ ಮತ್ತು ಸಾಮರಸ್ಯವನ್ನು ಸಹ ಆಕರ್ಷಿಸುತ್ತವೆ. ಮನೆಯಲ್ಲಿ ಸಕಾರಾತ್ಮಕತೆಯ ಸಂವಹನವಾಗುತ್ತದೆ. ಇದರಿಂದ ಮನೆಯ ಸದಸ್ಯರ ಆದಾಯ ಹೆಚ್ಚುತ್ತದೆ ಮತ್ತು ಅದೇ ಸಮಯದಲ್ಲಿ ಮನೆಯಲ್ಲಿ ಹಣದ ಶೇಖರಣೆಯೂ ಹೆಚ್ಚುತ್ತದೆ. ಬೆಳ್ಳಿ ಆಮೆಯಿಂದ ಹಿಡಿದು ಬೆಳ್ಳಿಯ ಮೀನಿನವರೆಗೆ ಇಂತಹ ಅನೇಕ ವಸ್ತುಗಳನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬಹುದು. ಮನೆಯಲ್ಲಿ ಬೆಳ್ಳಿಯ ಕೆಲವು ವಸ್ತುಗಳನ್ನು ಇಡುವುದು ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ವಾಸ್ತು(Vastu) ಪ್ರಕಾರ ನೀವು ಮನೆಯಲ್ಲಿ ಯಾವ ಬೆಳ್ಳಿ ವಸ್ತುಗಳನ್ನು ಇಡಬಹುದು ಎಂಬುದನ್ನು ತಿಳಿಯಲು ಮುಂದೆ ಓದಿ