crystalಗಳಿಂದ ಮನೆಗೆ ತನ್ನಿ ನವಚೈತನ್ಯ, ಹೊಸ ಕಳೆ

By Suvarna News  |  First Published Mar 22, 2022, 1:13 PM IST

ಸ್ಪಟಿಕಕ್ಕೆ ವಾಸ್ತು ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಇದೆ. ಮನೆಯಲ್ಲಿ ಎದುರಾಗುವ ಸಾಕಷ್ಟು ಸಮಸ್ಯೆಗಳಿಗೆ ಕ್ರಿಸ್ಟಲ್‌ಗಳ ಮೂಲಕ ಪರಿಹಾರ ಕಾಣಬಹುದಾಗಿದೆ. 


ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಆದರೆ, ಸ್ಪಟಿಕ(Crystals)ದ ವಿಷಯಕ್ಕೆ ಬಂದಾಗ ಮನೆಯ ಯಾವುದೇ ದಿಕ್ಕಿನಲ್ಲೂ ಅವನ್ನು ನೇತು ಹಾಕಬಹುದು. ಅವು ಸೌರ ಶಕ್ತಿಯನ್ನು ವರ್ಧಿಸಿ ಮನೆಗೆ ತರುತ್ತವೆ. ಫೆಂಗ್ ಶೂಯಿ ಮತ್ತು ವಾಸ್ತು ಪ್ರಕಾರ ಕ್ರಿಸ್ಟಲ್‌ಗಳನ್ನು ಹೇಗೆ ಬಳಸಬೇಕು, ಯಾವುದಕ್ಕೆಲ್ಲ ಪರಿಹಾರ ಕಾಣಬಹುದು ನೋಡೋಣ. 

  • ಬೆಳ್ಳಿಯ ತುಂಡು, ಚಿನ್ನದ ದಾರ(gold thread) ಅಥವಾ ಕೆಂಪು ರಿಬ್ಬನ್ ಅನ್ನು ಬಳಸಿಕೊಂಡು, ಚೆನ್ನಾಗಿ ಕತ್ತರಿಸಿದ ಗೋಳಾಕಾರದ ಎರಡು ಸ್ಪಟಿಕಗಳನ್ನು ಕಿಟಕಿಗೆ ನೇತು ಹಾಕಿ. ಈ ಸ್ಪಟಿಕಗಳ ಮೂಲಕ ಸೂರ್ಯನ ಕಿರಣ(Sun rays) ಹಾದಾಗ, ಕಿರಣಗಳು ಏಳು ಕಾಮನಬಿಲ್ಲಿ(rainbow)ನ ಬಣ್ಣಗಳಾಗಿ ಕೋಣೆಯ ತುಂಬಾ ಹಬ್ಬುತ್ತವೆ. ಇದರ ಶಕ್ತಿ ಮಾಂತ್ರಿಕವಾದುದು. ಮನೆಯಲ್ಲಿ ತಾಜಾತನ ಹರಡುತ್ತದೆ. ನೀವೇನಾದರೂ ಮನೆಯ ಪೂರ್ವ ದಿಕ್ಕಿನ ಕೋಣೆಯಲ್ಲಿ ಮಲಗುತ್ತಿದ್ದರೆ ಬೆಳಗ್ಗೆ ಎದ್ದಾಗ ಈ ಕಾಮನಬಿಲ್ಲು ನಿಮ್ಮ ಕೋಣೆಯಲ್ಲಿ ಹಬ್ಬಿರುವುದನ್ನು ನೋಡಿ ಉತ್ತಮ ಮನಸ್ಸಿನಿಂದ ದಿನ ಆರಂಭಿಸಬಹುದು. 
  • ಚೀನೀಯರು ಸ್ಫಟಿಕಗಳನ್ನು ಕೆಂಪು ರಿಬ್ಬನ್‌(red ribbon)ನೊಂದಿಗೆ ನೇತು ಹಾಕಲು ಬಯಸುತ್ತಾರೆ. ಏಕೆಂದರೆ ಕೆಂಪು ಬಣ್ಣವು ಹರಳುಗಳಿಗೆ ಜೀವ ನೀಡುವ ರಕ್ತದ ಬಣ್ಣವಾಗಿದೆ ಎಂದು ಅವರು ನಂಬುತ್ತಾರೆ. ನೇತಾಡುವ ಹರಳುಗಳು ಅಂತಃಪ್ರಜ್ಞೆಯನ್ನು ಬಲಪಡಿಸುತ್ತವೆ ಮತ್ತು ಶಕ್ತಿಯ ಹರಿವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಕೊಠಡಿಯನ್ನು ಸೂರ್ಯನ ಬೆಚ್ಚಗಿನ ಶಕ್ತಿಯಿಂದ ತುಂಬಿಸುವ ಅಸಂಖ್ಯಾತ ಪ್ರಿಸಂಗಳನ್ನು ಸೃಷ್ಟಿಸುವ ಮೂಲಕ ಕೋಣೆಯಲ್ಲಿ ಶಕ್ತಿ ಚಲನಶೀಲತೆ ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತದೆ. 
  •  ಮನೆಯ ಯಾವುದಾದರೂ ಕೋಣೆಯಲ್ಲಿ ಬೆಳಕೇ ಇಲ್ಲದೆ, ಕೋಣೆ ಡಲ್ಲಾಗಿ ಕಾಣುತ್ತಿದ್ದರೆ ಆಗ ಈ ಸ್ಪಟಿಕದ ಹರಳುಗಳನ್ನು ವೃತ್ತಾಕಾರದ ಕನ್ನಡಿ(mirror)ಯ ಮೇಲೆ ಹಾಕಿ ಚೆಂದದ ದೀಪವನ್ನು ಇಡಿ. ದೀಪದ ಬೆಳಕು ಸ್ಪಟಿಕವನ್ನು ಪ್ರತಿಬಿಂಬಿಸುತ್ತದೆ. ಕನ್ನಡಿ ಅದನ್ನು ತೋರಿ ಸ್ಪಟಿಕಕ್ಕೆ ಬಲ ತುಂಬುತ್ತದೆ. 
  • ಮನೆಯ ಬ್ರಹ್ಮ ಸ್ಥಾನದಲ್ಲಿ ಸ್ಪಟಿಕದ ದೊಡ್ಡ ಬಲ್ಬ(chandelier)ನ್ನು ಹಾಕಿ. ಇದು ಆ ಸ್ಥಾನವನ್ನು ಆ್ಯಕ್ಟಿವೇಟ್ ಮಾಡಿ ಧನಾತ್ಮಕ ಶಕ್ತಿ(positive energy)ಯನ್ನು ಮನೆಯ ಪ್ರತಿ ಮೂಲೆಗೂ ತಲುಪಿಸುತ್ತದೆ. ನೀವು ಈ ಶಾಂಡೆಲಿಯರ್ ಕಡೆ ಆಗಾಗ ತಲೆ ಎತ್ತಿ ನೋಡುವುದರಿಂದ ನಿಮ್ಮ ಎನರ್ಜಿ ಹೆಚ್ಚುತ್ತದೆ. ಸಾಮಾನ್ಯವಾಗಿ ಖಿನ್ನತೆಯಲ್ಲಿರುವಾಗ ತಲೆ ಕೆಳಗಿ ಹಾಕಿ ಕೂರುತ್ತೇವೆ. ಅದೇ ಎನರ್ಜಿ ಹೆಚ್ಚಿರುವಾಗ ತಲೆ ಎತ್ತಿ ನಡೆಯುತ್ತೇವೆ. 
  • ಮಕ್ಕಳ ಮೇಜಿನ ಈಶಾನ್ಯ ಭಾಗದಲ್ಲಿ ಎಂಟು ಸ್ಫಟಿಕಗಳ ಸಮೂಹವನ್ನು ಇರಿಸಿದಾಗ ಮಕ್ಕಳು ಏಕಾಗ್ರತೆ(concentration) ಸಾಧಿಸಿ ಉತ್ತಮ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

    Food remedies: ಜಾತಕದ ದುರ್ಬಲ ಗ್ರಹಕ್ಕೆ ಬಲ ತುಂಬಲು ಈ ಆಹಾರ ಸೇವಿಸಿ
     
  • ಮಾಸ್ಟರ್ ಬೆಡ್‌ರೂಮ್‌ನ ನೈಋತ್ಯ(SouthWest) ವಲಯದಲ್ಲಿ ಕೆಂಪು ರಿಬ್ಬನ್‌ನಿಂದ ಕಟ್ಟಿದ ಎರಡು ಹೃದಯ ಆಕಾರದ ಸ್ಪಟಿಕಗಳನ್ನು ಇರಿಸಿ. ಇದರಿಂದ ವೈವಾಹಿಕ ಜೀವನದಲ್ಲಿ ಆನಂದ ತುಂಬುವುದು.
  • ಒಂಬತ್ತು ಹರಳುಗಳ ಸಮೂಹ ಅಥವಾ ಒಂದು ಜೋಡಿ ಗುಲಾಬಿ ಸ್ಫಟಿಕ ಶಿಲೆಯು ಸಂಬಂಧವನ್ನು ಮತ್ತಷ್ಟು ಉತ್ತಮಗೊಳಿಸುತ್ತದೆ. 
  • ನಿಮ್ಮ ಮನೆ ಅಥವಾ ಕಛೇರಿಯ ವಾಯುವ್ಯ ವಲಯದಲ್ಲಿ ಲೋಲಕ ಅಥವಾ ಸುತ್ತುತ್ತಿರುವ ಗಡಿಯಾರದೊಂದಿಗೆ ಆರು ಸ್ಪಟಿಕಗಳ ಸಮೂಹವನ್ನು ಇರಿಸುವ ಮೂಲಕ ಅದೃಷ್ಟವನ್ನು ಆಹ್ವಾನಿಸಿ. ಇದರಿಂದ ನಿಮ್ಮ ಮಾರ್ಗದರ್ಶಕರು ಮತ್ತು ಮೇಲಧಿಕಾರಿಗಳಿಂದ ಸಹಾಯ ಕೂಡಾ ದೊರೆಯುತ್ತದೆ. 
  • ನಿಮಗೆ ಗರ್ಭ ಧರಿಸುವಲ್ಲಿ(conceive) ಸಮಸ್ಯೆ ಇದ್ದರೆ, ಬೆಳ್ಳಿಯ ಸ್ವಿಂಗ್, ರ್ಯಾಟಲರ್ಸ್ ಮತ್ತು ನವಜಾತ ಶಿಶುವಿನ ಚಿತ್ರದೊಂದಿಗೆ ಬಟ್ಟಲಿನಲ್ಲಿ ಏಳು ಹೊಳೆಯುವ ಹರಳುಗಳ ಸಮೂಹವನ್ನು ಇರಿಸಿ.

    ಈ ವಸ್ತುಗಳು ಮನೆಯಲ್ಲಿದ್ದರೆ ವಿನಾಶ ಖಂಡಿತಾ! ಕೂಡಲೇ ಹೊರ ಹಾಕಿ..
     
  • ಮಕ್ಕಳ ಕೋಣೆಯ ಪಶ್ಚಿಮ ದಿಕ್ಕಿನಲ್ಲಿರುವ ಕನ್ನಡಿಯ ಮೇಲೆ ಕ್ರಿಸ್ಟಲ್ ಇಡುವುದರಿಂದ ಮಕ್ಕಳಲ್ಲಿ ಹೊಸ ಚೈತನ್ಯ ತುಂಬಬಹುದು. 
  • ಜಗತ್ತಿನ ಎಲ್ಲ ದೇಶಗಳನ್ನು ಒಳಗೊಂಡ ಸ್ಪಟಿಕದ ಗ್ಲೋಬ್‌ನ್ನು ಕೋಣೆಯ ದಕ್ಷಿಣ ದಿಕ್ಕಿನಲ್ಲಿಟ್ಟಾಗ ಅದು ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಆಕರ್ಷಿಸುತ್ತದೆ. 
click me!