ನಿರ್ಮಾಣ ಕಾರ್ಯದಲ್ಲಿ ವಿಘ್ನ ಬರಬಾರದೆಂದರೆ ಪಾಲಿಸಬೇಕಾದ 10 Vastu tips

By Suvarna News  |  First Published Mar 16, 2022, 11:03 AM IST

ಮನೆಗೆ ವಾಸ್ತು ಚೆನ್ನಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ಮನೆ ನಿರ್ಮಾಣ ಶುರುವಾದ ದಿನದಿಂದಲೇ ವಾಸ್ತುವಿನ ಕಡೆ ಗಮನ ಹರಿಸಬೇಕು. 


ಮನೆ ಕಟ್ಟುವುದು ಬಹುತೇಕ ಎಲ್ಲರ ಕನಸು. ಆದರೆ, ಎಷ್ಟೆಲ್ಲ ಕಷ್ಟ ಪಟ್ಟು ನಿವೇಶನ ಖರೀದಿಸಿ ಮನೆ ಕಟ್ಟಲಾರಂಭಿಸಿದ ಮೇಲೆ ಒಂದಾದ ಮೇಲೊಂದರಂತೆ ವಿಘ್ನಗಳು, ಸರ್ಕಾರದ ಅನುಮತಿಗಾಗಿ ಕಾಯುವುದು, ಮತ್ತೇನೋ ಸಮಸ್ಯೆ ಹೀಗೆ ಎದುರಾಗುತ್ತಲೇ ಹೈರಾಣಾಗಿಸುತ್ತವೆ. ಅದಕ್ಕೇ ಅಲ್ಲವೇ ಹೇಳುವುದು ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂದು. 
ಆದರೆ, ನಿವೇಶನ ಖರೀದಿಸಿದಾಗಿಂದಲೇ ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸಿದರೆ ಈ ಮನೆ ಕಟ್ಟುವ ಸಂಪೂರ್ಣ ವಿದ್ಯಮಾನ ಸುಲಭವಾಗುವುದು. ಹಣಕಾಸು ಹಾಗೂ ಸರ್ಕಾರಿ ಅನುಮತಿಗಳು, ದಾಖಲೆಗಳ ವಿಷಯದಲ್ಲಿ ಅಡೆತಡೆಗಳು ಎದುರಾಗದಂತೆ ಮಾಡುತ್ತವೆ ಈ ಸರಳ ವಾಸ್ತು ಟಿಪ್ಸ್(Vastu Tips). 

1. ನಿಮ್ಮ ಹೊಸ ಮನೆಗಾಗಿ ನೀವು ಈಗಾಗಲೇ ನಿವೇಶನ(plot) ಖರೀದಿಸಿದ್ದರೆ ಮತ್ತು ಕಾರಣಾಂತರಗಳಿಂದ ನಿರ್ಮಾಣ ಪ್ರಾರಂಭಿಸಲು ಸಾಧ್ಯವಾಗದಿದ್ದರೆ, ನಿವೇಶನದ ಮಧ್ಯ ಭಾಗವನ್ನು ಸ್ವಚ್ಛಗೊಳಿಸಿ ಮತ್ತು ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಇಳಿಜಾರು ಮಾಡಿಸಿ.

Tap to resize

Latest Videos

2. ನಿವೇಶನದೊಳಕ್ಕೆ ಎಷ್ಟೇ ಬಾರಿ ಕಾಲಿಡಿ, ಆದರೆ, ನೀವು ಯಾವ ದಿಕ್ಕಿನಲ್ಲಿ ಮುಖ್ಯ ದ್ವಾರ(entrance) ನಿರ್ಮಿಸಿರುತ್ತೀರೋ ಆ ದಿಕ್ಕಿನಿಂದಲೇ ಒಳಗೆ ಕಾಲಿಡಬೇಕು. 

3.  ಪ್ರಗತಿ ಮತ್ತು ಸಮೃದ್ಧಿ(prosperity)ಯನ್ನು ಪಡೆಯಲು ನಿವೇಶನದ ಎಲ್ಲ ನಾಲ್ಕು ದಿಕ್ಕುಗಳು 90 ಡಿಗ್ರಿಗಳಲ್ಲಿರಬೇಕು. ಈಶಾನ್ಯವನ್ನು ಹೊರತುಪಡಿಸಿ ಯಾವುದೇ ಮೂಲೆಯು ಸಾಮಾನ್ಯ ಮೂಲೆಗಳಿಗಿಂತ ದೊಡ್ಡದಾಗಿದ್ದರೆ, ಅದು ಖಂಡಿತಾ ಉತ್ತಮವಲ್ಲ.

Holi 2022: ಅದೃಷ್ಟ ಬದಲಾಗ್ಬೇಕೆಂದ್ರೆ ರಾಶಿಗನುಗುಣವಾಗಿ ಬಳಸಿ ಬಣ್ಣ

4. ನಿರ್ಮಾಣವು ನಡೆಯುತ್ತಿರುವಾಗ, ಮರಳು, ಇಟ್ಟಿಗೆಗಳು ಮತ್ತು ಇತರ ನಿರ್ಮಾಣ ಸಾಮಗ್ರಿಗಳನ್ನು ಈಶಾನ್ಯ(North East) ದಿಕ್ಕಿನಲ್ಲಿ ಇಡಬೇಡಿ. ಇದರಿಂದ ನಿರ್ಮಾಣಕ್ಕೆ ಅಡ್ಡಿಯಾಗಬಹುದು ಮತ್ತು ಇತರ ಸಮಸ್ಯೆಗಳನ್ನು ಉಂಟು ಮಾಡಬಹುದು.

5. ನೀರು(Water) ಹಣ ಮತ್ತು ಸಮೃದ್ಧಿಯ ಸಂಕೇತವಾಗಿದೆ. ವಾಸ್ತು ಪ್ರಕಾರ, ನೀರಿರುವ ಸ್ಥಳದಲ್ಲಿ ಹಣಕ್ಕೆ ಕೊರತೆಯಿರುವುದಿಲ್ಲ. ಆದ್ದರಿಂದ ನೀವು ಸ್ಥಳವನ್ನು ನಿರ್ಧರಿಸಿ, ಭೂಮಿ-ಪೂಜೆಯನ್ನು ಮಾಡಿದ ನಂತರ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್(Water tank) ಸ್ಥಾಪಿಸಿ. 

6. ಮನೆಯ ಅಡಿಪಾಯವನ್ನು ನಿರ್ಮಿಸುವಾಗ, ಈಶಾನ್ಯದಿಂದ ಪ್ರಾರಂಭಿಸಿ ಮತ್ತು ಕ್ರಮೇಣ ನೈಋತ್ಯ(South West)ಕ್ಕೆ ಮುಂದುವರಿಯಿರಿ. ಕಂಬಗಳು ಮತ್ತು ಗೋಡೆಗಳನ್ನು ಮೊದಲು ಪಶ್ಚಿಮ ಅಥವಾ ದಕ್ಷಿಣದಲ್ಲಿ ನಿರ್ಮಿಸಬೇಕು. ಇದರಿಂದ ಈ ದಿಕ್ಕುಗಳಲ್ಲಿನ ನಿರ್ಮಾಣ ಉಳಿದ ದಿಕ್ಕಿನ ನಿರ್ಮಾಣಕ್ಕಿಂತ ಎತ್ತರದಲ್ಲಿರುವಂತೆ ನೋಡಿಕೊಳ್ಳಿ. 

Holi 2022: ಕಾಮದಹನಕ್ಕೆ ಯಾವೆಲ್ಲ ವಸ್ತು ಹಾಕ್ತಾರೆ ಗೊತ್ತಾ? ಪೂಜೆಯ ವಿಧಿವಿಧಾನಗಳಿವು..

7. ನಿರ್ಮಾಣ ಸಾಧನಗಳನ್ನು ವಾಯುವ್ಯ(North West)ದಲ್ಲಿ ಇಡಕೂಡದೆಂದು ನಿಮ್ಮ ಗುತ್ತಿಗೆದಾರರನ್ನು ಕೇಳಿ. ಇದು ತಪ್ಪುಗ್ರಹಿಕೆಗೆ ಕಾರಣವಾಗಬಹುದು ಮತ್ತು ಕೆಲಸದಲ್ಲಿ ವಿಳಂಬವಾಗಬಹುದು.

8. RCC ಅಥವಾ ಸೀಲಿಂಗ್ ನಿರ್ಮಿಸುವಾಗ, ಅದನ್ನು ಮೊದಲು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮತ್ತು ಕೊನೆಯದಾಗಿ ವಾಯುವ್ಯದಲ್ಲಿ ನಿರ್ಮಿಸುವಂತೆ ನೋಡಿಕೊಳ್ಳಿ. ಆಗ ನಿಗದಿಪಡಿಸಿದ ಬಜೆಟ್‌ನಲ್ಲಿಯೇ ಕೆಲಸವು ಸುಗಮವಾಗಿ ನಡೆಯುತ್ತದೆ.

9. ನಿರ್ಮಾಣವು ಪೂರ್ಣಗೊಂಡ ನಂತರ ಮತ್ತು ನೀವು ನೈರ್ಮಲ್ಯ ಮತ್ತು ಇತರ ಅಳವಡಿಕೆಗಳೊಂದಿಗೆ ಮುಂದುವರಿಯುತ್ತಿದ್ದರೆ, ಇವಕ್ಕೆ ಸಂಬಂಧಿಸಿದ ವಸ್ತುಗಳನ್ನು ನೈಋತ್ಯ ದಿಕ್ಕಿನಲ್ಲಿರುವ ಕೋಣೆಯಲ್ಲಿ ಇರಿಸಬಹುದು ಮತ್ತು ಆ ಕೊಠಡಿಯನ್ನು ತಾತ್ಕಾಲಿಕ ಬಾಗಿಲಿನಿಂದ ಮುಚ್ಚಬಹುದು. ಅದನ್ನು ಸ್ಟೋರ್ ರೂಮ್ ಆಗಿ ಬಳಸಬಹುದು. ಇದು ಹಣವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತದೆ.

10. ಪಿಒಪಿ, ಫ್ಲೋರಿಂಗ್ ಮತ್ತು ಫಾಲ್ಸ್ ಸೀಲಿಂಗ್ ಕೆಲಸಕ್ಕೆ ಸಂಬಂಧಿಸಿದ ಕೆಲಸಗಳನ್ನು ಯಾವಾಗಲೂ ನೈಋತ್ಯ ದಿಕ್ಕಿನಿಂದ ಪ್ರಾರಂಭವಾಗಬೇಕು. 
 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!