ಈ ವಾಸ್ತು ಟಿಪ್ಸ್ ಪಾಲಿಸಿದ್ರೆ ನಿಮ್ಮ ಸಂಬಂಧ ಶಾಶ್ವತ

By Suvarna NewsFirst Published Feb 14, 2020, 6:18 PM IST
Highlights

ಈ ಭೂಮಿ ಮೇಲಿರುವ ಪ್ರತಿಯೊಬ್ಬರೂ ತಮ್ಮ ವೈವಾಹಿಕ ಜೀವನ ಸಂಪೂರ್ಣ ಪ್ರೀತಿ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು ಬಯಸುತ್ತಾರೆ. ಆದರೆ, ಪ್ರೀತಿಯಲ್ಲಿ ಜಗಳ, ಕಿರಿಕಿರಿಗಳು ಸಾಮಾನ್ಯ. ಇದು ಹೆಚ್ಚಾದಾಗ ಮನಸ್ಸು ಕೆಡುತ್ತದೆ. ಅದಕ್ಕಾಗೇ ರೊಮ್ಯಾಂಟಿಕ್ ರಿಲೇಶನ್‌ಶಿಪ್ ಚೆನ್ನಾಗಿಟ್ಟುಕೊಳ್ಳಲು ವಾಸ್ತುವಿನಲ್ಲಿ ಕೆಲ ಸಲಹೆಗಳಿವೆ. 

ಜಗವೆಲ್ಲ ಪ್ರೀತಿಯ ಕೆಂಪು ಹಾಗೂ ಗುಲಾಬಿ ಬಣ್ಣಗಳಿಂದ ಕಂಗೊಳಿಸುವ ಆ ಹೊತ್ತು. ಹವಾಮಾನ ಕೂಡಾ ಅದಕ್ಕೆ ಸಾಥ್ ನೀಡುತ್ತಿದೆ. ಆದರೆ ಡಿಜಿಟಲ್ ಯುಗದ ವೇಗದ ಬದುಕಿನಲ್ಲಿ ಸಂಬಂಧಗಳನ್ನು ಗಟ್ಟಿಯಾಗಿರಿಸಿಕೊಳ್ಳುವುದು ಮಾತ್ರ ದೊಡ್ಡ ಸವಾಲೇ ಆಗಿದೆ. ಈ ರೊಮ್ಯಾಂಟಿಕ್ ಸಂಬಂಧವನ್ನು ಬ್ಯಾಲೆನ್ಸ್ ಮಾಡಲು ವಾಸ್ತುಶಾಸ್ತ್ರದಲ್ಲಿ ಕೆಲ ಸಲಹೆಗಳಿವೆ. ನೀವು ನಂಬುವಿರೋ ಇಲ್ಲವೋ, ವಾಸ್ತುವಿಗೆ ಗಮನ ಹರಿಸಿದರೆ ಅದು ನಿಮ್ಮ ಸಂಬಂಧಗಳಿಗೆ ಬಹಳಷ್ಟು ಪಾಸಿಟಿವ್ ಬದಲಾವಣೆಗಳನ್ನು ತರುತ್ತದೆ. 

ಮಾಸ್ಟರ್ ಬೆಡ್‌ರೂಂ
ಕುಟುಂಬದ ಯಜಮಾನ ಯಜಮಾನಿಯ ಸ್ಥಾನದಲ್ಲಿರುವ ಜೋಡಿಯ ಮಾಸ್ಟರ್ ಬೆಡ್‌ ರೂಂ ಯಾವಾಗಲೂ ನೈಋತ್ಯ ದಿಕ್ಕಿನಲ್ಲಿರಬೇಕು. ಇದು ಅವರಿಬ್ಬರ ನಡುವಿನ ಬಾಂಡಿಂಗ್ ಹೆಚ್ಚಿಸುತ್ತದೆ. ಜೊತೆಗೆ, ಕೋಣೆಯು ಸದಾ ಧೂಳುಮುಕ್ತವಾಗಿ ಸ್ವಚ್ಛವಾಗಿರಬೇಕು. ಯಾವಾಗಲೂ ಹರಡಿಕೊಂಡಿರುವ ಮನೆ, ಕೋಣೆ ನೆಗೆಟಿವ್ ಎನರ್ಜಿಯನ್ನು ಆಕರ್ಷಿಸುತ್ತವೆ. 

ಲವ್ ಬರ್ಡ್ಸ್
ಮಾಸ್ಟರ್ ಬೆಡ್ ರೂಂನಲ್ಲಿ ಜೋಡಿಹಕ್ಕಿಯ, ಪಾರಿವಾಳಗಳ ಅಥವಾ ಜೋಡಿ ಮೊಲಗಳ ಅಲಂಕಾರಿಕ ವಸ್ತುಗಳಿರಬೇಕು. ಪ್ರೀತಿಯ ಪ್ರತೀಕವಾದ ರಾಧಾ ಕೃಷ್ಣ ಮೂರ್ತಿಯೊಂದು ಅಲ್ಲಿದ್ದರೆ ಒಳ್ಳೆಯದು. ಅವನ್ನು ದೇವರೆಂಬಂತೆ ಇಟ್ಟು ಪೂಜಿಸಬೇಡಿ. ಬದಲಿಗೆ ಕೃಷ್ಣರಾಧೆಯರ ಮಾಡರ್ನ್ ಆರ್ಟ್ ಅಥವಾ ಪೇಂಟಿಂಗ್ ಇರಲಿ. ಹಿಂಸೆಯನ್ನು ಸೂಚಿಸುವ ಚಿತ್ರಗಳಾಗಲೀ, ಸತ್ತವರ ಫೋಟೋಗಳಾಗಲೀ, ಮಾಸ್ಟರ್‌ ಬೆಡ್ ರೂಂನಲ್ಲಿ ಬೇಡ. 



ಕನ್ನಡಿಗೆ ಮುಸುಕು
ರೊಮ್ಯಾನ್ಸ್ ಮಾಡುವಾಗ ಅಥವಾ ಪ್ರೀತಿಯನ್ನು ವ್ಯಕ್ತಪಡಿಸುವಾಗ ಕನ್ನಡಿಯಲ್ಲಿ ಅದರ ಪ್ರತಿಬಿಂಬ ಕಾಣಕೂಡದು. ಕನ್ನಡಿ ದೊಡ್ಡದಾದಷ್ಟೂ ವೈವಾಹಿಕ ಜೀವನದಲ್ಲಿ ಬಿರುಕುಗಳು ಹೆಚ್ಚು. ಹಾಗಾಗಿ ಕೋಣೆಯಲ್ಲಿ ಪುಟ್ಟದೊಂದು ಕನ್ನಡಿ ಇಟ್ಟುಕೊಳ್ಳಿ. ಬಳಸಾದ ಬಳಿಕ ವಾರ್ಡ್ರೋಬ್‌ನೊಳಗಿಡಿ. ಇಲ್ಲವೇ ಫಿಕ್ಸ್ ಆಗಿದ್ದರೆ ಅದಕ್ಕೆ ಬಟ್ಟೆಯೊಂದು ಮುಚ್ಚಿಡಿ. 

ಪ್ರೀತಿಯ ಬಣ್ಣ
ನೈಋತ್ಯ ದಿಕ್ಕಿನಲ್ಲಿರುವ ಮಾಸ್ಟರ್ ‌ಬೆಡ್‌ ರೂಂನ ಗೋಡೆಗಳ ಬಣ್ಣ ಗುಲಾಬಿ ಹಾಗೂ ಬೂದು ಬಣ್ಣದಲ್ಲಿದ್ದರೆ ಉತ್ತಮ. ಇವು ಪ್ರೀತಿಯಲ್ಲಿ ಶಾಂತಿ, ನೆಮ್ಮದಿ ತರುತ್ತವೆ. ಜೊತೆಗೆ, ಸಂಬಂಧದಲ್ಲಿ ಯಾವುದಾದರೂ ನೆಗೆಟಿವಿಟಿ ಇದ್ದರೆ ಅದನ್ನು ತೆಗೆಯುತ್ತದೆ. ಜೊತೆಗೆ ಕೋಣೆಯನ್ನು ಸಾಧ್ಯವಾದಷ್ಟು ಆಕರ್ಷಕವಾಗಿರಿಸಿಕೊಳ್ಳಬೇಕು. ಇದು ಕೂಡಾ ಕೋಣೆಗೆ ಪಾಸಿಟಿವ್ ಎನರ್ಜಿ ತರುತ್ತದೆ. ಪರಿಮಳಯುಕ್ತ ಕ್ಯಾಂಡಲ್‌ಗಳು, ಪಿಂಕ್ ಬಣ್ಣದ ರೋಸ್ ಕ್ರಿಸ್ಟಲ್‌ಗಳು, ಹೂವಿನ ಚಿತ್ರಗಳ ಅಲಂಕಾರಗಳು ಕೋಣೆಯಲ್ಲಿರುವುದರಿಂದ ಪ್ರೀತಿ ಹೆಚ್ಚಿಸುತ್ತದೆ. 

ಮಲಗುವ ದಿಕ್ಕು
ಹಾಸಿಗೆಯಲ್ಲಿ ಮಲಗುವಾಗ ಪತ್ನಿಯು ಸದಾ ಮಂಚದ ಎಡಭಾಗದಲ್ಲಿ ಮಲಗಬೇಕು. ಇದು ಇಬ್ಬರ ನಡುವಿನ ಸುಸಂಬಂಧಕ್ಕೆ ಅಗತ್ಯ. ಕೋಣೆಯ ನೈಋತ್ಯ ಭಾಗದಲ್ಲಿ ಬೆಳಕಿರಬೇಕು. ಬೆಡ್ ಲ್ಯಾಂಪ್ ಇಟ್ಟುಕೊಂಡರೂ ಆದೀತು. 

ಸಲಿಂಗಿ ಆಗಿರೋ ಕರಣ್ ಮಕ್ಕಳಿಗೆ ಅಪ್ಪ ಅಮ್ಮ ಇಬ್ರೂ ಇದ್ದಾರಾ?...
 

ಮಂಚ
ಕೋಣೆಯಲ್ಲಿ ಏಕೈಕ ಸಿಂಗಲ್ ಅಥವಾ ಕ್ವೀನ್/ಕಿಂಗ್ ಸೈಜ್ ಬೆಡ್ ಇರಬೇಕು. ಎರಡು ಹಾಸಿಗೆಗಳನ್ನು ಸೇರಿಸಿ ಮಲಗುವುದು, ಎರಡು ಕಾಟ್ ಕೂಡಿಸುವುದು ಸರಿಯಲ್ಲ. ಇದರಿಂದ ಪತಿಪತ್ನಿಯ ನಡುವೆ ಜಗಳಗಳುಂಟಾಗಬಹುದು. ಕೋಣೆಯ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಮಂಚವಿರುವುದರಿಂದ ಹಣಕಾಸಿನ ಸಮಸ್ಯೆ ಉಂಟಾಗಿ ಅದು ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮಂಚ ಮೆಟಲ್‌ದಾಗಿರಕೂಡದು. ಸದಾ ಮರದ ಮಂಚವನ್ನೇ ಬಳಸಿ. 

ಫೋಟೋ
ಸುಖ ಸಂಸಾರಕ್ಕಾಗಿ ಜೋಡಿಯ ಫೋಟೋಗಳು ಮಾಸ್ಟರ್ ಬೆಡ್‌ ರೂಂನ ಪೂರ್ವ ದಿಕ್ಕಿನಲ್ಲಿರಬೇಕು. 

ಹಸಿರು
ಮನೆಯ ಈಶಾನ್ಯ ಭಾಗವು ಸದಾ ಅತ್ಯಂತ ಸ್ವಚ್ಛವಾಗಿದ್ದು, ಅಲ್ಲಿ ತಿಳಿವರ್ಣ ಬಳಕೆಯಾಗಬೇಕು. ಚಿಕ್ಕ ಚಿಕ್ಕ ಮರಗಳು, ಹಸಿರು ಬಣ್ಣವನ್ನು ಪ್ರತಿನಿಧಿಸುವ ವಸ್ತುಗಳು ಅಲ್ಲಿರಬೇಕು. ಬಿಳಿ ಹೂಗಳು, ಕೆಂಪು ಗುಲಾಬಿಗಳು ಸಂಬಂಧ ಸುದಾರಿಸುವಲ್ಲಿ ಪಾತ್ರ ವಹಿಸುತ್ತವೆ. 

ಗ್ಯಾಜೆಟ್ಸ್
ಬೆಡ್‌ರೂಂನಲ್ಲಿ ಗ್ಯಾಜೆಟ್‌ಗಳ ಬಳಕೆ ಸಾಧ್ಯವಾದಷ್ಟು ಮಿತಿಯಲ್ಲಿರಬೇಕು. ಅತಿಯಾದ ಬಳಕೆಯು ಒತ್ತಡ ಹಾಗೂ ಟೆನ್ಷನ್‌ಗೆ ಕಾರಣವಾಗುತ್ತದೆ. 

click me!