ನಿಮ್ಮ ಸೆಕ್ಸ್ ಲೈಫ್ ವಿಜೃಂಭಿಸಲು ಬೆಡ್‌ರೂಂ ವಾಸ್ತು ಹೀಗಿರಲಿ!

By Suvarna NewsFirst Published Feb 12, 2020, 2:54 PM IST
Highlights

ನಿಮ್ಮ ಬೆಡ್‌ರೂಂ ಒಮ್ಮೆ ಗಮನಿಸಿ ನೋಡಿ.  ನಿಮ್ಮ ರೊಮ್ಯಾಂಟಿಕ್ ಜೀವನವನ್ನು ಹಾಳು ಮಾಡೋ ಅಂಶಗಳು ಅಲ್ಲೇ ಇರುತ್ತವೆ. ಅದನ್ನು ಸರಿಪಡಿಸಿಕೊಂಡು, ಕೆಲವು ಹೊಸ ಅಂಶಗಳನ್ನು ಅಳವಡಿಸಿಕೊಂಡು ನೋಡಿ. ನೀವು ಬೇಡಾ ಬೇಡಾ ಅಂದ್ರೂ ಸುಖ ಗ್ಯಾರಂಟಿ!

ಇವತ್ಯಾಕೋ ಮೂಡ್ ಇಲ್ಲ. ಮೈ ಮನಸ್ಸ ಕೆಲಸ ಮಾಡಿ ದಣಿದಿದೆ. ಹಾಸಿಗೆಗೆ ಬಿದ್ಕೊಂಡ್ರೆ ಸಾಕು. ನಾಳೆ ಬೆಳಗ್ಗೆ ಬೇಗನೆ ಏಳ್ಬೇಕಪ್ಪ. ಎಷ್ಟೊಂದು ಪಾತ್ರೆ, ಬಟ್ಟೆ ತೊಳಡಯೋದಿದೆ. ಇಂಥ ಚಿಂತೆಗಳ ನಡುವೆ ನಿಮ್ಮ ಲೈಂಗಿಕ ಜೀವನ ಹಾಗೂ ಸುಖ ಮಟಾಷ್ ಆಗ್ತಿರುತ್ತೆ. ಇಂಥ ಸಂದರ್ಭದಲ್ಲಿ, ನಿಮ್ಮ ಬೆಡ್‌ರೂಂ ಒಮ್ಮೆ ಗಮನಿಸಿ ನೋಡಿ.  ನಿಮ್ಮ ರೊಮ್ಯಾಂಟಿಕ್ ಜೀವನವನ್ನು ಹಾಳು ಮಾಡೋ ಅಂಶಗಳು ಅಲ್ಲೇ ಇರುತ್ತವೆ. ಅದನ್ನು ಸರಿಪಡಿಸಿಕೊಂಡು, ಕೆಲವು ಹೊಸ ಅಂಶಗಳನ್ನು ಅಳವಡಿಸಿಕೊಂಡು ನೋಡಿ. ನೀವು ಬೇಡಾ ಬೇಡಾ ಅಂದ್ರೂ ಸುಖ ಗ್ಯಾರಂಟಿ!

- ಮನೆಯ ಎಲ್ಲ ಚಿಂತೆ, ಕೆಲಸ, ಗ್ಯಾಜೆಟ್‌ಗಳಿಂದ ಅಂತಃಪುರ ಮುಕ್ತವಾಗಿರಲಿ. ಮೊಬೈಲ್ ಕೂಡ ಅಲ್ಲಿಗೆ ಒಯ್ಯುವುದು ಬೇಡ. 

- ಮಲಗುವ ಅರ್ಧ ಗಂಟೆ ಮೊದಲು ರೂಂ ಫ್ರೆಶ್‌ನರ್ ಸಿಂಪಡಿಸಿ ಅಥವಾ ಸುಮಧುರ ಪರಿಮಳದ ಅಗರಬತ್ತಿ ಹೊತ್ತಿಸಿಡಿ.

- ಮಲಗುವ ಮನೆಯ ಒಂದು ಮೂಲೆಯಲ್ಲಿ ಹೂದಾನಿ ಇರಲಿ. ನಿತ್ಯ ಹೊಸತಾದ ಹೂಗಳು ಅಲ್ಲಿರಲಿ. ಬಾಡಿದ ಹೂಗಳು ಬೇಡ.

 

ಗಂಡನ ನಪುಂಸಕತೆಯೂ ಹೆಂಡ್ತಿ ಜಾತಕದಿಂದ ಕಂಡು ಹಿಡೀಬಹುದಾ?

 

- ಬೆಡ್‌ರೂಂನಲ್ಲಿ ದೇವರ ಫೋಟೋ, ಪ್ರಾಣಿಗಳ ಫೋಟೋಗಳು ಬೇಡ. ಬದಲು ಹಿತವಾದ ಪ್ರಕೃತಿ ಫೋಟೋಗಳು ಇರಲಿ. ಹರಿಯುವ ನೀರು, ಮರ, ಹೂಗಳು ಈ ಬಗೆಯದು ಇದ್ದರೆ ಚಂದ.

- ಬೆಡ್‌ರೂಂನಲ್ಲಿ ಊಟ ಮಾಡುವುದು, ತರಕಾರಿ ಕತ್ತರಿಸುವುದು ಮುಂತಾದ ಅಭ್ಯಾಸ ಬೇಡ. ಟಿವಿ ಬೇಡ.

 

- ಕರ್ಕಶವೂ ಅಲ್ಲದ, ತೀರಾ ಸಣ್ಣದೂ ಅಲ್ಲದ ಮಧುರವಾದ ಧ್ವನಿಯಲ್ಲಿ ಮ್ಯೂಸಿಕ್ ಪ್ಲೇ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಚಿತ್ರಗೀತೆಗಳು ನಿಮ್ಮ ಮೂಡನ್ನು ಉತ್ತಮಪಡಿಸಬಲ್ಲವು.

- ಬೆಡ್‌ರೂಂ ಕಿಟಕಿಯ ಪರದೆಗಳು ಉತ್ತಮ ಕಾಟನ್‌ನದಾಗಿದ್ದು, ಆಗಾಗ ತೊಳೆದು ದೂಳು ಕೊಡವಿದರೆ ಉತ್ತಮ. ಹೂವು ಅಥವಾ ಬಳ್ಳಿಯ ಪ್ರಿಂಟ್ ಇರಲಿ.

 

ನೀವು ಹೇಗೆ ಸಾಯುತ್ತೀರಿ? ನಿಮ್ಮ ಜನ್ಮರಾಶಿ ಆ ಬಗ್ಗೆ ಏನು ಹೇಳುತ್ತೆ?

 

- ಗೋಡೆಯಲ್ಲಿ ಯಾವುದಾದರೂ ರೊಮ್ಯಾಂಟಿಕ್ ತೈಲವರ್ಣಚಿತ್ರ ಅಥವಾ ಜಲವರ್ಣಚಿತ್ರ ಇದ್ದರೆ ಚೆನ್ನ. ನಿಮ್ಮ ಟೇಸ್ಟ್ ಅಥವಾ ಸೇಫ್ಟಿ ನೋಡಿಕೊಂಡು, ನಿಮ್ಮ ಕಾಮನೆಗಳನ್ನು ಪ್ರಚೋದಿಸುವಂಥ ಮಿಲನ ಭಂಗಿಯ ಶಿಲ್ಪಗಳು, ಚಿತ್ರಗಳನ್ನು ಇಟ್ಟುಕೊಳ್ಳಬಹುದು.

- ಮಂಚಕ್ಕೆ ಎದುರಾಗಿ ಕನ್ನಡಿ ಇರಬಾರದು ಎನ್ನುತ್ತಾರೆ. ಹಾಗೇನೂ ಇಲ್ಲ. ಬೆಡ್‌ರೂಂನಲ್ಲಿ ಹಿತವಾದ ಬೆಳಕಿದ್ದರೆ, ಮಿಲನದ ಸಂದರ್ಭದಲ್ಲಿ ನಿಮ್ಮ ದೇಹಗಳ ಚಟುವಟಿಕೆಯನ್ನು ನೀವೇ ಕನ್ನಡಿಯಲ್ಲಿ ನೋಡಿಕೊಳ್ಳುವುದು ಮತ್ತಷ್ಟು ಉದ್ರೇಕಕಾರಿ ಆಗಿರುತ್ತದೆ. ಇದರ ಪೂರ್ಣ ಪ್ರಯೋಗ ಪಡೆದುಕೊಳ್ಳಿ.

 

- ಹಾಸಿಗೆ ಮೇಲಿನ ಬಟ್ಟೆ, ಹೊದಿಕೆ, ದಿಂಬಿನ ಕವರ್‌ಗಳು ಜಿಡ್ಡು ವಾಸನೆ ಹೊಂದಿರದೆ, ಹಿತವಾದ ಪರಿಮಳ ಹೊರಸೂಸುತ್ತಿದ್ದರೆ ಮನಸ್ಸು ಉತ್ತೇಜಕವಾಗಿ ಇರುತ್ತದೆ.

- ಬೆಡ್‌ರೂಂನಲ್ಲಿ ಮೊಬೈಲ್ ಬದಲು ವಾತ್ಸಾಯನ ಕಾಮಸೂತ್ರದಂಥ ನಾಲ್ಕಾರು ಪುಸ್ತಕ ಇಟ್ಟುಕೊಳ್ಳಿ. ಮಲಗುವ ಮುನ್ನ ಇದರ ನಾಲ್ಕಾರು ಪುಟ ಓದಿ ಮಲಗಿದರೆ, ಊಹಾತೀತ ಸುಖ ಹಾಗೂ ನೆಮ್ಮದಿಯ ನಿದ್ರೆ ಗ್ಯಾರಂಟಿ.

- ಬಳಸಿದ, ಬೆವರುವಾಸನೆಯ ಬಟ್ಟೆಗಳಿಗೆ ರೂಮೊಳಗೆ ಜಾಗ ಬೇಡ. ಧರಿಸಿದ ಬಟ್ಟೆಗಳು ಒಗೆದು ಒಣಗಿಸಿ ಫ್ರೆಶ್ ಆಗಿರಲಿ.  ಕೆಲವೊಮ್ಮೆ ಮೈ ಕಾಣಿಸುವ, ಆಸೆ ಕೆರಳಿಸುವ ಬಟ್ಟೆಯನ್ನು ಧರಿಸಿ ಸಂಗಾತಿಗೆ ಸರ್‌ಪ್ರೈಸ್ ಕೊಡಿ.

 

- ಮಲಗುವ ಕೋಣೆಯ ಬಾಗಿಲಿಗೆ ಎದುರಾಗಿ ಬೆಡ್ ಬೇಡ. ಪಕ್ಕಕ್ಕೆ ಇರಲಿ. ಕಿಟಕಿಯ ಪಕ್ಕದಲ್ಲೂ ಬೆಡ್ ಬೇಡ. ಮಧ್ಯದಲ್ಲಿ ಅಥವಾ ಗೋಡೆಯ ಬಳಿ ಪರವಾಗಿಲ್ಲ.

- ಬೇರೆ ಕೋಣೆಗಳ ಲೈಟ್ ಅಥವಾ ಸೌಂಡ್ ಮಲಗುವ ಕೋಣೆಗೆ ಕಿರಿಕಿರಿ ಮಾಡುವಂತೆ ಇರಕೂಡದು. ಬೀದಿಯ, ರಸ್ತೆಯ ಪಕ್ಕದಲ್ಲಿ ಬೆಡ್‌ರೂಂ ಸಲ್ಲದು.

 

ಬಯಸೋ ಫಲ ಸಿಗೋಕೆ ನೀವು ಯಾವ ದೇವರನ್ನು ಪೂಜಿಸಬೇಕು?

 

- ಬೆಡ್‌ರೂಂನಲ್ಲಿ ಅನಗತ್ಯ ವಸ್ತುಗಳನ್ನು ತುಂಬಿಕೊಂಡು ಜಂಕ್‌ಯಾರ್ಡ್ ಮಾಡಿದರೆ, ಎಂಥವನಿಗೂ ಮೂಡ್ ಬರಲಾರದು. ಫ್ರೀ ಸ್ಪೇಸ್ ಇರಲಿ.

- ಮಲಗುವ ಕೋಣೆ ವಿಚಿತ್ರ ಶೇಪ್‌ಗಳಲ್ಲಿ ಇರಬಾರದು. ಅಂಥ ಕೋಣೆಗಳಲ್ಲಿ ನೆಗೆಟಿವ್ ಎನರ್ಜಿ ನೆಲೆಸಿರುತ್ತದೆ. ಚೌಕ ಅಥವಾ ಆಯತ ಕೋಣೆಗಳಿರಲಿ.

- ಮಲಗುವ ಕೋಣೆಯಲ್ಲಿ ಕಣ್ಣುಗಳು ಉಜ್ವಲವಾಗಿರುವ ಯಾವುದೇ ಗೊಂಬೆ ಅಥವಾ ಚಿತ್ರ ಇರಬಾರದು. ಅವು ಇದ್ದರೆ, ನಿಮ್ಮ ಖಾಸಗಿ ಕ್ಷಣಗಳನ್ನು ಬೇರ್ಯಾರೋ ನೋಡುತ್ತಿರುವಂತೆ ಫೀಲ್ ಆಗುತ್ತದೆ.

click me!