ಮನೆಯಲ್ಲೇ ಶಂಖ ಪೂಜೆ ಮಾಡುವುದು ಹೇಗೆ? ಶಂಖವನ್ನಿಟ್ಟುಕೊಳ್ಳುವಾಗ ಕೆಲ ವಾಸ್ತು ಸಲಹೆಗಳನ್ನು ಪಾಲಿಸಬೇಕು.
ಶಂಖ(Conch)ವು ಸಮುದ್ರದಲ್ಲಿ ವಾಸಿಸುವ ಮೃದ್ವಂಗಿ. ವೈದಿಕ ಗ್ರಂಥಗಳಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಹಿಂದೂ ಧರ್ಮದಲ್ಲಿ, ಶಂಖವನ್ನು ವಿಷ್ಣು(Lord Vishnu)ವಿನ ಲಾಂಛನ(emblem) ಎಂದು ಭಾವಿಸಲಾಗುತ್ತದೆ. ಮನೆಯಲ್ಲಿರುವ ಯಾವುದೇ ನಕಾರಾತ್ಮಕ ಶಕ್ತಿಯನ್ನು ತೊಲಗಿಸಲು ಶಂಖನಾದದಿಂದ ಉಂಟಾಗುವ ಕಂಪನಗಳು ಶಕ್ತವಾಗಿವೆ. ಜೊತೆಗೆ, ಇದನ್ನು ಊದುವುದರಿಂದ ಶ್ವಾಸಕೋಶಕ್ಕೆ ಉತ್ತಮ ವ್ಯಾಯಾಮವಾಗಿ ಹೃದಯ, ಶ್ವಾಸಕೋಶಗಳ ಆರೋಗ್ಯ ಚೆನ್ನಾಗಿರುತ್ತದೆ.
ವಿಷ್ಣುವಿನ ಆಯುಧ(weapon)
ಭಗವಾನ್ ವಿಷ್ಣುವು ತನ್ನ ವಿವಿಧ ಅವತಾರಗಳಲ್ಲಿ ಪ್ರಪಂಚದಾದ್ಯಂತ ಇರುವ ನಕಾರಾತ್ಮಕತೆ(negativity)ಯನ್ನು ನಾಶ ಮಾಡಲು ಶಂಖವನ್ನು ಊದುತ್ತಾನೆ ಎಂದು ಹಿಂದೂ ಪುರಾಣಗಳಲ್ಲಿ ವಿವರಿಸಲಾಗಿದೆ. ಶಂಖವು ಆತನ ಆಯುಧವಾಗಿದೆ. ಶಂಖಕ್ಕೆ ಕೇವಲ ಹಿಂದೂ ಧರ್ಮದಲ್ಲಲ್ಲ, ಬೌದ್ಧ ಧರ್ಮದಲ್ಲೂ ಹೆಚ್ಚಿನ ಪ್ರಾಮುಖ್ಯತೆ ಇದೆ.
ಶಂಖವು ಮನೆಯಲ್ಲಿದ್ದರೆ ಅದನ್ನು ಸರಿಯಾದ ರೀತಿಯಲ್ಲಿ ಪೂಜೆಯಲ್ಲಿ ಬಳಸಬೇಕು ಹಾಗೂ ದಿನಕ್ಕೆ ಎರಡು ಬಾರಿಯಾದರೂ (ಬೆಳಿಗ್ಗೆ ಮತ್ತು ಸಂಜೆ) ಊದಬೇಕು. ಯಾವುದೇ ಶುಭ ಕಾರ್ಯಗಳು ನಡೆಯುತ್ತಿದ್ದರೆ ಅದು ಆರಂಭಕ್ಕೆ ಮುನ್ನ ಶಂಖ ಊದುವುದರಿಂದ ನಕಾರಾತ್ಮಕ ಶಕ್ತಿಗಳು ದೂರ ಹೋಗಿ ಕಾರ್ಯ ಚೆನ್ನಾಗಿ ನಡೆಯುತ್ತದೆ. ನಂತರ ಕಾರ್ಯ ಮುಗಿದ ಬಳಿಕವೂ ಒಮ್ಮೆ ಶಂಖ ಊದಿದರೆ ಶುಭಕಾರ್ಯದ ಫಲ ಹೆಚ್ಚಾಗಿ ದೊರಕುವುದು. ಶಂಖವನ್ನು ಪ್ರತಿ ದಿನ ಮನೆಯಲ್ಲಿ ಎರಡು ಬಾರಿ ಊದುವುದರಿಂದ ಮನೆಯಲ್ಲಿ ಎಂದಿಗೂ ಆಹಾರ ಕೊರತೆ ಬರುವುದಿಲ್ಲ. ನಕಾರಾತ್ಮಕ ಶಕ್ತಿಗಳು ತಗ್ಗಿ ಸಂತೋಷ, ನೆಮ್ಮದಿ ನೆಲೆಸುತ್ತದೆ. ಇದರಿಂದ ಅದೃಷ್ಟ ಹಾಗೂ ಸಂಪತ್ತು ಕೂಡಾ ಮನೆಯನ್ನು ಅರಸಿ ಬರುತ್ತದೆ. ಅಭಿಷೇಕ ಮಾಡಲು ಬಳಸುವ ಶಂಖವನ್ನು ಪೂಜೆಗೆ ಬಳಸಬಾರದು ಎಂಬುದು ನಿಮಗೆ ನೆನಪಿರಲಿ.
Astro Remidies: ಗ್ರಹ ದೋಷ ನಿವಾರಣೆಗೆ ಸ್ನಾನದಲ್ಲಿ ಪರಿಹಾರ, ಹೇಗಂತೀರಾ?
ಶಂಖದ ಪೂಜಾ ವಿಧಿ
ಇಂದು ಶಂಖವನ್ನು ಮನೆಗೆ ತರುವಾಗ ಗಮನಿಸಬೇಕಾದ ಕೆಲವು ವಾಸ್ತು ಸಲಹೆ(Vastu tips)ಗಳನ್ನು ತಿಳಿಸುತ್ತಿದ್ದೇವೆ.