Vastu shastra 2022: ಮಲಗುವ ಕೋಣೆಗೆ ಈ ಬಣ್ಣ ಬಳಸಿದರೆ ಪತಿ ಪತ್ನಿ ನಡುವೆ ಜಗಳ ತಪ್ಪಿದ್ದಲ್ಲ!

By Suvarna News  |  First Published Mar 8, 2022, 2:21 PM IST

ಮಲಗುವ ಕೋಣೆಯಲ್ಲಿ ಬಳಸುವ ಕೆಲ ಬಣ್ಣಗಳು ಕೋಪ ಹೆಚ್ಚಿಸಿದರೆ ಮತ್ತೆ ಕೆಲವು ಜಗಳ, ಆತಂಕ ಹೆಚ್ಚಿಸುತ್ತವೆ. ಯಾವ ಬಣ್ಣವನ್ನು ಮಲಗುವ ಕೋಣೆಗೆ ಬಳಸಿದ್ರೆ ಪತಿ ಪತ್ನಿ ಸಂಬಂಧ ಚೆನ್ನಾಗಿರುತ್ತದೆ ಗೊತ್ತಾ?


ಇಂದಿನ ಕಾಲದಲ್ಲಿ, ಎಲ್ಲರೂ ತಮ್ಮ ಮನೆಯನ್ನು ಇನ್ನಷ್ಟು ಮತ್ತಷ್ಟು ಸುಂದರವಾಗಿಸಲು ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಅವುಗಳಲ್ಲಿ ಪ್ರಮುಖವಾದುದು ಮನೆಯ ಗೋಡೆಗಳಿಗೆ ಬಳಸುವ ಬಣ್ಣ. ಬಣ್ಣಗಳಿಗೆ ವಿಶೇಷ ಶಕ್ತಿ ಇದ್ದು ಅವು ನಮ್ಮ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತವೆ. ನಮ್ಮ ಮೂಡನ್ನು ಕ್ಷಣ ಮಾತ್ರದಲ್ಲಿ ಬದಲಿಸುವ ಶಕ್ತಿ ಬಣ್ಣಗಳಿಗಿದೆ. 

ಮನೆಯ ಸದಸ್ಯರು ಬಹುಕಾಲ ಮನೆಯಲ್ಲಿ ಕಳೆಯುವುದರಿಂದ ಮೂಡನ್ನು ಚೆಂದಗೊಳಿಸುವ ಬಣ್ಣಗಳನ್ನು ಗೋಡೆಗೆ ಬಳಸುವುದು ಮುಖ್ಯವಾಗಿದೆ. ಅವು ಮನೆಯ ಸಮತೋಲನವನ್ನು ಕಾಪಾಡುತ್ತವೆ. ನಿಮ್ಮ ಮನೆಯಲ್ಲಿ ಜಗಳ, ಕಲಹ, ಉದ್ವಿಗ್ನತೆ ಹೆಚ್ಚಿದ್ದರೆ ಮನೆಯ ಗೋಡೆಯ ಬಣ್ಣಗಳ ಕಡೆ ಮೊದಲು ಗಮನ ಹರಿಸಿ ಎನ್ನುತ್ತದೆ ವಾಸ್ತುಶಾಸ್ತ್ರ. ಈ ಲೇಖನದಲ್ಲಿ ಮಲಗುವ ಕೋಣೆಗೆ ಬಳಸಬೇಕಾದ ಹಾಗೂ ಬಳಸಬಾರದ ಬಣ್ಣಗಳತ್ತ ಚಿತ್ತ ಹರಿಸೋಣ. 

Tap to resize

Latest Videos

ಮಲಗುವ ಕೋಣೆಯ ಬಣ್ಣ
ಕೆಂಪು ಬಣ್ಣವು ಪ್ರೀತಿಯ ಧ್ಯೋತಕ(symbol of love)ವಾಗಿದೆ. ಹಾಗಾಗಿಯೇ ಜನರು ಮಲಗುವ ಕೋಣೆಗೆ ಕೆಂಪು ಬಣ್ಣ ಬಳಸುತ್ತಾರೆ. ನೀವೂ ಹಾಗೇ ಅಂದುಕೊಂಡು ಬೆಡ್‌ರೂಂಗೆ ಕೆಂಪು ಬಣ್ಣ ಹಾಕಿಸಿದ್ದರೆ ಅಥವಾ ಕೆಂಪು ಬಣ್ಣದ ದೀಪಗಳನ್ನು ಬಳಸಿದ್ದರೆ ಈ ಕೂಡಲೇ ಅವನ್ನು ತೆಗೆಸಿ. ಇದು ಮಂಗಳ ಗ್ರಹ(planet Mars)ದ ಬಣ್ಣವಾಗಿದೆ. ಹೀಗಾಗಿ, ಬೆಡ್‌ರೂಂನಲ್ಲಿ ಕೆಂಪು ಬಣ್ಣ ಬಳಕೆಯಿಂದ ಕೋಪ, ಅಸಮಾಧಾನ ಹೆಚ್ಚುತ್ತದೆ. ಇದು ಪತಿ ಪತ್ನಿಯ ಸಂಬಂಧದ ನಡುವೆ ಜಗಳಗಳನ್ನು ತಂದಿಡುತ್ತದೆ. ಹಾಗಾಗಿ, ಬೆಡ್‌ರೂಂಗೆ ಕೆಂಪು ಬಣ್ಣ ಬಳಸಬೇಡಿ. ವಾಸ್ತು ಪ್ರಕಾರ, ತಿಳಿ ಬಣ್ಣಗಳ ಬಳಕೆ ಮಲಗುವ ಕೋಣೆಗೆ ಉತ್ತಮವಾಗಿರುತ್ತದೆ. ಅಂದರೆ ತಿಳಿ ಗುಲಾಬಿ, ತಿಳಿ ನೀಲಿ, ಬಿಳಿ ಬಣ್ಣಗಳನ್ನು ಬಳಸಬಹುದು. ಇದು ಮನಸ್ಸನ್ನು ಶಾಂತವಾಗಿಡುತ್ತದೆ. ಈ ಬಣ್ಣಗಳ ಬಳಕೆಯಿಂದ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ. ಸಂಗಾತಿಯ ನಡುವೆ ಪ್ರೀತಿಯೂ ಹೆಚ್ಚುತ್ತದೆ. 

ಕುಜದೋಷ ನಿವಾರಿಸುವ ತಾಮ್ರ, ಯಾರೆಲ್ಲ ಧರಿಸಬಹುದು?

ಇನ್ನು ಬೆಡ್‌ರೂಂಗೆ ಬಳಸುವ ಕರ್ಟನ್‌ಗಳ(curtains) ವಿಷಯಕ್ಕೆ ಬಂದರೆ, ಯಾವಾಗಲೂ ತಿಳಿ ಬಣ್ಣದ ಕರ್ಟನ್‌ಗಳು ಕಣ್ಣಿಗೆ ರಿಲ್ಯಾಕ್ಸ್ ಎನಿಸುತ್ತದೆ. ತಿಳಿಯಾದ ಹಳದಿ, ಹಸಿರು, ಗುಲಾಬಿ, ಬಿಳಿ ಬಣ್ಣದ ಕರ್ಟನ್ ಬಳಸಿ. ನಿಮ್ಮ ಕೋಣೆಯ ಕಿಟಕಿ ಉತ್ತರ ದಿಕ್ಕಿನಲ್ಲಿದ್ದರೆ ಆಗ, ಕರ್ಟನ್‌ಗಳಿಗೆ ಆಕಾಶ ನೀಲಿ ಬಳಸುವುದು ಉತ್ತಮ. 

ನಿಮ್ಮ ಮಲಗುವ ಕೋಣೆಯಲ್ಲಿ ಗಮನ ಹರಿಸಬೇಕಾದ ಮತ್ತೊಂದು ಪ್ರಮುಖ ವಿಷಯವೆಂದರೆ ಹಾಸಿಗೆಗೆ ಹಾಸುವ ಬೆಡ್‌ಶೀಟ್. ಪಿಂಕ್ ಬಣ್ಣದ ಬೆಡ್‌ಶೀಟ್ ಬಳಸುವುದು ಎಲ್ಲಕ್ಕಿಂತ ಉತ್ತಮ. ಇದು ಪತಿ ಪತ್ನಿಯ ನಡುವೆ ಪ್ರೀತಿ, ಗೌರವ ಹೆಚ್ಚಿಸುತ್ತದೆ. ಇದಲ್ಲದೆ, ಇತರೆ ತಿಳಿ ಬಣ್ಣಗಳ ಬೆಡ್‌ಶೀಟ್ ಕೂಡಾ ಬಳಸಬಹುದು. ಹಳದಿ ಬಣ್ಣದ ಬೆಡ್ಶೀಟ್ ಬಳಕೆಯಿಂದ ಸಂವಹನ ಉತ್ತಮವಾಗುತ್ತದೆ. ಭವಿಷ್ಯ ಚೆನ್ನಾಗಿರುತ್ತದೆ. ಹಸಿರು ಬಣ್ಣ ಬಳಕೆಯಿಂದ ದ್ವೇಷ ಹಾಗೂ ಟೆನ್ಷನ್ ಕಡಿಮೆಯಾಗುತ್ತದೆ. 

Samudrika Shastra: ಈ 'ಲಕ್ಷಣಗಳಲ್ಲಿ' ಅರ್ಧದಷ್ಟು ಗುಣವಿದ್ದರೂ ಆತನನ್ನು ಕಣ್ಣು ಮುಚ್ಚಿ ವಿವಾಹವಾಗಿ!

ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ಡಾರ್ಕ್ ನೇರಳೆ, ಕಪ್ಪು, ಕಂದು ಬಣ್ಣಗಳನ್ನು ಬಳಸಬೇಡಿ. ಅತಿಯಾದ ಬಿಳಿ ಬಣ್ಣ ಬಳಕೆಯೂ ಬೇಡ. ಇದರಿಂದ ನಿಮ್ಮಲ್ಲಿ ಅಹಂಕಾರ ಹೆಚ್ಚುತ್ತದೆ. 

ಇನ್ನು ಬೆಡ್‌ರೂಂಗೆ ಅಟ್ಯಾಚ್ಡ್ ವಾಶ್‌ರೂಂ ಇದ್ದರೆ ಅಲ್ಲಿನ ಗೋಡೆಗೆ ಬಿಳಿ ಬಣ್ಣದ ಟೈಲ್ಸ್‌ಗಳನ್ನು ಇಲ್ಲವೇ ಗೋಡೆಯನ್ನು ಹೊಂದಿರುವುದರಿಂದ ಸಕಾರಾತ್ಮಕತೆ ಹೆಚ್ಚುತ್ತದೆ. ಸ್ವಚ್ಛತೆಯ ಕಡೆಗೆ ಗಮನವೂ ಹೆಚ್ಚು ಹೋಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!