Vastu Tips : ಮೊಬೈಲ್, ಇಸ್ತ್ರಿ ಪೆಟ್ಟಿಗೆನಾ ಎಲ್ಲೆಲ್ಲೋ ಇಟ್ಟು ಕಷ್ಟ ತಂದ್ಕೊಳ್ಬೇಡಿ

By Suvarna News  |  First Published Mar 27, 2023, 3:59 PM IST

ಕೆಲವೊಬ್ಬರ ಮನೆ ನೀಟಾಗಿರುತ್ತದೆ. ಮತ್ತೆ ಕೆಲವ ಮನೆಯಲ್ಲಿ ಬಟ್ಟೆ, ಪಾತ್ರೆ, ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿರುತ್ತವೆ. ನಾವು ವಸ್ತುಗಳನ್ನು ಸುಂದರವಾಗಿ ಜೋಡಿಸಿದ್ರೆ ಮನೆ ಸುಂದರವಾಗಿ ಕಾಣೋದು ಮಾತ್ರವಲ್ಲ ವಾಸ್ತು ದೋಷವೂ ಕಡಿಮೆಯಾಗುತ್ತದೆ. 
 


ಮನೆ ಅಂದ್ಮೇಲೆ ಅಡುಗೆ ಪಾತ್ರೆಯಿಂದ ಹಿಡಿದು ಎಲೆಕ್ಟ್ರಿಕ್ ವಸ್ತುಗಳವರೆಗೆ ಎಲ್ಲವೂ ಇರುತ್ತದೆ. ಮನೆ ಹೊರಗೆ ಚಪ್ಪಲಿ ಇದ್ರೆ ಒಳಗೆ ಖುರ್ಚಿ ಇಟ್ಟಿರ್ತೇವೆ. ಆರ್ಥಿಕ ಸ್ಥಿತಿಗೆ ಅನುಗುಣವಾಗಿ ನಾವು ವಸ್ತುಗಳನ್ನು ಖರೀದಿ ಮಾಡಿರ್ತೇವೆ. ಮನೆಗೆ ತಂದ ವಸ್ತುವನ್ನು ನಮಗೆ ಎಲ್ಲಿ ಅನುಕೂಲವೆನ್ನಿಸುತ್ತೋ ಅಥವಾ ಎಲ್ಲಿ ಜಾಗವಿದ್ರೋ ಇಲ್ಲವೆ ಎಲ್ಲಿ ಇಟ್ಟರೆ ಮನೆ ಸೌಂದರ್ಯ ಹೆಚ್ಚಾಗುತ್ತೋ ಅಲ್ಲಿ ಅದನ್ನು ಇಡ್ತೇವೆ. ಮನೆಯಲ್ಲಿರುವ ಕೆಲ ವಸ್ತುಗಳಿಗೆ ಸೂಕ್ತ ಸ್ಥಾನವೇ ಇಲ್ಲ. ಮೊಬೈಲ್, ಪುಸ್ತಕ, ವಾಚ್ ಹೀಗೆ ಕೆಲ ವಸ್ತುಗಳನ್ನು ಸಿಕ್ಕ ಜಾಗದಲ್ಲಿ ಇಡೋರಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಸ್ತುಗಳನ್ನು ಎಲ್ಲೆಂದರಲ್ಲಿ ಇಡೋದು ತಪ್ಪು. ಇದು ನಮ್ಮ ಹಾಗೂ ಮನೆಯ ಸಂತೋಷವನ್ನು ಕಸಿದುಕೊಳ್ಳುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ವಾಸ್ತು ದೋಷವಾಗಬಾರದು ಅಂದ್ರೆ ನಿಮಗೆ ಮನೆಯಲ್ಲಿರುವ ವಸ್ತುಗಳನ್ನು ಯಾವ ಜಾಗ, ದಿಕ್ಕಿನಲ್ಲಿ ಇಡಬೇಕು ಎಂಬುದು ಗೊತ್ತಿರಬೇಕು. ನಾವಿಂದು ಮನೆಯಲ್ಲಿರುವ ಕೆಲ ವಸ್ತುಗಳನ್ನು ಇಡಲು ಯಾವುದು ಸೂಕ್ತ ಸ್ಥಳ ಎನ್ನುವ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.

ವಾಸ್ತು (Vastu) ಶಾಸ್ತ್ರದ ಪ್ರಕಾರ ವಸ್ತುಗಳನ್ನು ಇಲ್ಲಿಡಿ :

Tap to resize

Latest Videos

undefined

ಟೇಬಲ್ ಫ್ಯಾನ್ (Fan) : ಬೇಸಿಗೆ ಪ್ರಾರಂಭವಾಗಿದೆ. ಎಲ್ಲರ ಮನೆಯ ಮೂಲೆ ಸೇರಿದ್ದ ಫ್ಯಾನ್ ಹೊರಗೆ ಬಂದಿರುತ್ತದೆ. ನಿಮ್ಮ ಮನೆಯಲ್ಲೂ ಟೇಬಲ್ ಫ್ಯಾನ್ ಇದ್ರೆ ಅದನ್ನು ಅಲ್ಲಿ ಇಲ್ಲಿ ಇಡಬೇಡಿ. ಟೇಬಲ್ ಫ್ಯಾನನ್ನು ವಾಯುವ್ಯ ದಿಕ್ಕಿನಲ್ಲಿ ಇಡುವುದು ಸೂಕ್ತವಾಗಿದೆ. ಟೇಬಲ್ ಫ್ಯಾನ್ ಅನ್ನು ಈ ದಿಕ್ಕಿನಲ್ಲಿ ಇಟ್ಟರೆ, ಫ್ಯಾನ್ ಬೇಗ ಹಾಳಾಗುವುದಿಲ್ಲ. ಜೊತೆಗೆ ಮನೆಗೆ ಸಕಾರಾತ್ಮಕ ಗಾಳಿಯ ಪ್ರವೇಶವಾಗಿತ್ತದೆ.  

Astrology Tips : ಮೊಲ ಸಾಕೋರು ಈ ತಪ್ಪು ಮಾಡಿದ್ರೆ ಅಶುಭ ಫಲ ನಿಶ್ಚಿತ

ಇಸ್ತ್ರಿ (Iron) ಪೆಟ್ಟಿಗೆ :  ಪ್ರತಿಯೊಬ್ಬರ ಮನೆಯಲ್ಲೂ ಇಸ್ತ್ರಿಪೆಟ್ಟಿಗೆ ಇದ್ದೇ ಇರುತ್ತದೆ. ಈ ಐರನ್ ಬಾಕ್ಸನ್ನು ನೀವು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡುವುದು ಒಳ್ಳೆಯದು. ನೀವು ಐರನ್ ಬಾಕ್ಸ್ ಬಳಸಿದ ನಂತ್ರವೂ ಅದನ್ನು ಅದೇ ದಿಕ್ಕಿನಲ್ಲಿ ಇಡಬೇಕು. ನೀವು ಬಳಸಿದ ನಂತ್ರವೂ ಅದು ಕೆಲ ಸಮಯ ಬಿಸಿಯಾಗಿರುತ್ತದೆ. ಹಾಗಾಗಿ ಅದನ್ನು ಅಗ್ನಿ ದಿಕ್ಕಿನಲ್ಲಿ ಇಡುವುದು ಉತ್ತಮವೆಂದು ಪರಿಗಣಿಸಲಾಗಿದೆ.   

ಮೊಬೈಲ್ (Mobile ) ಫೋನ್ ಎಲ್ಲಿ ಇಡಬೇಕು? : ಮೊಬೈಲ್ ಇಲ್ಲದ ಮನೆಯಿಲ್ಲ. ಪ್ರತಿಯೊಬ್ಬರ ಬಳಿ ಎರಡು ಮೊಬೈಲ್  ಇರೋದು ಕಾಮನ್ ಆಗ್ಬಿಟ್ಟಿದೆ. ನೀವು ಮನೆಯ ಪಶ್ಚಿಮ ದಿಕ್ಕಿಗೆ ಮೊಬೈಲ್ ಫೋನ್ ಇಡ್ಬೇಕು ಎನ್ನುತ್ತದೆ ವಾಸ್ತು. ಇದನ್ನು ವಾಯುವ್ಯ ದಿಕ್ಕಿನಲ್ಲಿಯೂ ಇಡಬಹುದು.  ಮೊಬೈಲ್ ಇಡಲು ಪ್ರತ್ಯೇಕವಾಗಿ ಸ್ಟ್ಯಾಂಡ್‌ಗಳೂ ಲಭ್ಯವಿವೆ. ಮೊಬೈಲ್ ಅನ್ನು ಸ್ಟ್ಯಾಂಡ್‌ನಲ್ಲಿ ಇಡುವುದು ತುಂಬಾ ಒಳ್ಳೆಯದು.  

Lucky sign on palm: ಅಂಗೈಲಿದ್ದರೆ ಈ ಅಪರೂಪದ ಚಿಹ್ನೆ, ನೀವೇ ಅದೃಷ್ಟಶಾಲಿಗಳು

ಜ್ಯೂಸರ್ (Juicer) ಮಿಕ್ಸರ್ : ಅಡುಗೆ ಮನೆಯಲ್ಲಿ ಜ್ಯೂಸರ್ ಮಿಕ್ಸರ್ ಬಳಸ್ತೇವೆ. ಇದು ಬೇಗ ಹಾಳಾಗಬಾರದು ಎಂದಾದ್ರೆ ನೀವು ಜ್ಯೂಸರ್ ಮಿಕ್ಸರನ್ನು ಈಶಾನ್ಯ ಅಥವಾ ನೈಋತ್ಯದಲ್ಲಿ ಮರೆತೂ ಇಡಬೇಡಿ. ಇದನ್ನು ವಾಯುವ್ಯ ದಿಕ್ಕಿನಲ್ಲಿ ಇಡಿ.  

ಮೈಕ್ರೋವೇವ್ ಎಲ್ಲಿಡೋದು? :  ಮನೆಯಲ್ಲಿ ಮೈಕ್ರೋವೇವ್ ಇದ್ದರೆ ಅದನ್ನು ದಕ್ಷಿಣ ಅಥವಾ ಆಗ್ನೇಯ ದಿಕ್ಕಿನಲ್ಲಿ ಇಡಿ. ಈಶಾನ್ಯ ದಿಕ್ಕಿನಲ್ಲಿ ಇದನ್ನು ಇಡಬೇಡಿ. ಈ ದಿಕ್ಕಿನಲ್ಲಿ ಮೆಕ್ರೋವೇವ್ ಇಟ್ಟರೆ ಅದು ಬೇಗ ಹಾಳಾಗುತ್ತದೆ.  

ಹೇರ್ ಡ್ರೈಯರ್ : ಹಿಂದೆ ಪಾರ್ಲರ್‌ನಲ್ಲಿ ಮಾತ್ರ ಇರ್ತಿದ್ದ ಹೇರ್ ಡ್ರೈಯರ್ ಈಗ ಮನೆ ಮನೆಗೆ ಬಂದಿದೆ. ನೀವೂ ಹೇರ್ ಡ್ರೈಯರ್ ಬಳಸುವವರಾಗಿದ್ದು, ಮನೆಯಲ್ಲಿ ಹೇರ್ ಡ್ರೈಯರ್ ಇದೆ ಎಂದಾದ್ರೆ ಅದನ್ನು ಆಗ್ನೇಯ ದಿಕ್ಕಿನಲ್ಲಿ ಇಡಿ. ನೀವಿದನ್ನು ಪಶ್ಚಿಮ ದಿಕ್ಕಿನಲ್ಲಿರುವ ಕಪಾಟಿನಲ್ಲಿ ಕೂಡ ಇಡಬಹುದು. 
 

click me!