ಜೀವನದಲ್ಲಿ ದುರದೃಷ್ಟ ಜೊತೆಯಾದರೆ ಬದುಕು ಕಠಿಣವಾಗುತ್ತದೆ. ಕಷ್ಟ ಪಟ್ಟಿದ್ದಕ್ಕೆ ತಕ್ಕ ಫಲ ಸಿಗುವುದಿಲ್ಲ. ಜೀವನದಿಂದ ದುರದೃಷ್ಟವನ್ನು ದೂರವಿಡಲು ನೀವೇನು ಮಾಡಬಹುದು ಎಂಬುದಕ್ಕೆ ವಾಸ್ತುವಿನಲ್ಲಿ ಸಲಹೆಗಳಿವೆ.
ಹಣೆಬರಹ ತಪ್ಪಿಸಲು ಆಗುವುದಿಲ್ಲ ನಿಜ. ಆದರೆ, ಎಲ್ಲವನ್ನೂ ಹಣೆಬರಹ ಎಂದು ಕರುಬಿಕೊಂಡು ಕೂರಲಾಗುವುದಿಲ್ಲ. ಕೆಲವೊಮ್ಮೆ ನಾವು ಮಾಡಿದ ತಪ್ಪುಗಳು, ನಮ್ಮ ಸುತ್ತಲಿನ ನಕಾರಾತ್ಮಕ ಶಕ್ತಿಗಳು ನಮಗೆ ದುರದೃಷ್ಟ ತರುತ್ತಿರುತ್ತವೆ. ಈ ವರ್ಷ ಹಣೆಬರಹ ಹಳಿದುಕೊಂಡು ಕೂರಬೇಡಿ. ನಕಾರಾತ್ಮಕ ಶಕ್ತಿಯನ್ನು ನಿಮ್ಮ ಜೀವನದಿಂದ ದೂರವಿಡಲು ಈ ಕೆಲಸಗಳನ್ನು ಮಾಡಿ..
ಉಪ್ಪಿನ ಬಳಕೆ
ಉಪ್ಪಿನ ಶಕ್ತಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಇದು ನಿಮ್ಮ ಆಹಾರಕ್ಕೆ ರುಚಿ ಸೇರಿಸುವುದು ಮಾತ್ರವಲ್ಲದೆ ಕೆಲವೊಮ್ಮೆ ಮನೆಯಲ್ಲಿ ಸರಿಯಾಗಿ ಇಡದಿದ್ದಲ್ಲಿ ಕದನಗಳನ್ನು ಸೃಷ್ಟಿಸುತ್ತದೆ. ಆದ್ದರಿಂದ, ದುರದೃಷ್ಟವನ್ನು ತೊಡೆದುಹಾಕಲು ಮೊದಲ ಸಲಹೆಯೆಂದರೆ ಉಪ್ಪನ್ನು ಬಳಸುವುದು. ವಾಸ್ತುವಿನಲ್ಲಿ ಉಪ್ಪಿನ ಬಳಕೆಯನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಲಾಗಿದೆ. ಇದು ಮನೆಯ ನಕಾರಾತ್ಮಕ ಸೆಳವು ತೆಗೆವ ಜೊತೆಗೆ, ದೃಷ್ಟಿ ದೋಷ ಪರಿಹರಿಸುತ್ತದೆ. ಇದಕ್ಕಾಗಿ ಮನೆ ಒರೆಸುವ ನೀರಿಗೆ ಕೊಂಚ ಸಮುದ್ರ ಉಪ್ಪನ್ನು ಸೇರಿಸಿ ಒರೆಸಿ. ಇನ್ನೊಂದು ವಿಧಾನವೆಂದರೆ ಉಪ್ಪಿನ ಬಟ್ಟಲನ್ನು ಮನೆಯ ಎಲ್ಲ ಮೂಲೆಗಳಲ್ಲಿಡಿ. ಆದರೆ, ಭಾನುವಾರದ ದಿನ ಉಪ್ಪಿನ ಬಳಕೆ ಬೇಡ.
undefined
ಒಡೆದ ಕನ್ನಡಿ ಎಸೆಯಿರಿ
ವಾಸ್ತು ದೃಷ್ಟಿಕೋನದಿಂದ, ಕನ್ನಡಿಯು ನಿಮ್ಮ ದೈಹಿಕ ನೋಟವನ್ನು ಮತ್ತು ನಿಮ್ಮ ಕಾರ್ಯಗಳು, ಆಲೋಚನೆಗಳು, ಕನಸುಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಅದನ್ನು ಮುರಿದರೆ, ಆ ಎಲ್ಲಾ ಆಲೋಚನೆಗಳು ಮತ್ತು ಕಾರ್ಯಗಳು ಸಹ ಮುರಿದು ಹೋಗುತ್ತವೆ ಎಂದು ನಂಬಲಾಗುತ್ತದೆ. ಆದ್ದರಿಂದ, ಕನ್ನಡಿ ಒಡೆದಾಗ ಅದು ಅತ್ಯಂತ ಅಶುಭ. ಹಾಗಾಗಿ, ದುರದೃಷ್ಟ ದೂರವಿಡಲು ಒಡೆದ ಗಾಜು ಅಥವಾ ಕನ್ನಡಿಗಳನ್ನು ತಕ್ಷಣವೇ ವಿಲೇವಾರಿ ಮಾಡಿ.
Malavya yog: ಶುಕ್ರನ ವೃಷಭ ಗೋಚಾರದಿಂದ 3 ರಾಶಿಗಳಿಗೆ ರಾಜಯೋಗ
ಧೂಪದ್ರವ್ಯಗಳು
ನಿವಾಸದಲ್ಲಿ ಧೂಪದ್ರವ್ಯವನ್ನು ಬೆಳಗಿಸುವುದು ಜನಪ್ರಿಯ ಪದ್ಧತಿಯಾಗಿದೆ. ಹಿಂದೂಗಳು ಮಾತ್ರವಲ್ಲದೆ ಇತರ ಧರ್ಮದವರೂ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಮನೆಯಲ್ಲಿ ಧೂಪದ್ರವ್ಯ ಅಥವಾ ಪರಿಮಳಯುಕ್ತ ಮೇಣದಬತ್ತಿಯ ಬಳಕೆಯ ಅನುಕೂಲಗಳು ಹಲವಾರು. ಇದು ನೀವು ಕೆಲಸ ಮಾಡುವ ಅಥವಾ ವಾಸಿಸುವ ಸ್ಥಳದಿಂದ ನಕಾರಾತ್ಮಕ ವೈಬ್‌ಗಳನ್ನು ತೆಗೆದು ಹಾಕುತ್ತದೆ.
ಕರ್ಪೂರ
ಕರ್ಪೂರವನ್ನು ಸಾಮಾನ್ಯವಾಗಿ ದೇವಾಲಯಗಳಲ್ಲಿ ಮತ್ತು ಮನೆಯಲ್ಲಿ ಪೂಜೆಗೆ ಬಳಸಲಾಗುತ್ತದೆ. ದುರಾದೃಷ್ಟವನ್ನು ಆಕರ್ಷಿಸಲು ಕಾರಣವಾಗಿರುವ ಗ್ರಹಗಳನ್ನು ಸಮಾಧಾನಪಡಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮನೆ ಅಥವಾ ಕೋಣೆಯಲ್ಲಿ ಕರ್ಪೂರವನ್ನು ಇಡುವುದು ಆ ಸ್ಥಳದ ವಾಸ್ತು ದೋಷವನ್ನು ತೆಗೆಯುತ್ತದೆ. ನೀವು ಅಪಘಾತಗಳಿಗೆ ಗುರಿಯಾಗಿದ್ದರೆ, ಹನುಮಾನ್ ಚಾಲೀಸಾವನ್ನು ಪಠಿಸುವುದು ಮತ್ತು ಅದರ ನಂತರ ಕರ್ಪೂರವನ್ನು ಸುಡುವುದು ದುರದೃಷ್ಟವನ್ನು ತಪ್ಪಿಸಲು ಉತ್ತಮ ಮಾರ್ಗವಾಗಿದೆ. ಗುಲಾಬಿಯಲ್ಲಿ ಕರ್ಪೂರವನ್ನು ಸುಡುವುದು ಮತ್ತು ಅದನ್ನು ದುರ್ಗಾ ದೇವಿಗೆ ಅರ್ಪಿಸುವುದು ನಿಮಗೆ ಹಣ ಮತ್ತು ಅಪಾರ ಸಮೃದ್ಧಿಯೊಂದಿಗೆ ಸಹಾಯ ಮಾಡುತ್ತದೆ. ಆದರೆ ತಪ್ಪದೇ 43 ದಿನಗಳ ಕಾಲ ಇದನ್ನು ಮಾಡಬೇಕು.
Lucky sign on palm: ಅಂಗೈಲಿದ್ದರೆ ಈ ಅಪರೂಪದ ಚಿಹ್ನೆ, ನೀವೇ ಅದೃಷ್ಟಶಾಲಿಗಳು
ಅತ್ಯುತ್ತಮ ಕರ್ಮ
ಅದೃಷ್ಟವನ್ನು ಆಕರ್ಷಿಸುವಲ್ಲಿ ಅತ್ಯುತ್ತಮ ಕರ್ಮಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ. ಏಕೆಂದರೆ ನಮ್ಮ ಕರ್ಮಗಳ ಆಧಾರದ ಮೇಲೆ ಶನಿ ನಮಗೆ ಫಲ ನೀಡುತ್ತಾನೆ. ಶನಿಯಿಂದಾಗಿ ಬರುವ ದುರದೃಷ್ಟದ ನಾಶಕ್ಕಾಗಿ ಉತ್ತಮ ಕರ್ಮಗಳನ್ನು ಮಾಡಿ. ಬಡಬಗ್ಗರಿಗೆ ದಾನ ಮಾಡಿ, ಅಸಹಾಯಕರಿಗೆ ಸಹಾಯ ಮಾಡಿ. ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.