ಈ ವಸ್ತು ಮನೆಯಲ್ಲಿದ್ದರೆ, ಕ್ಷುದ್ರ ಶಕ್ತಿ ಆಗಲೇ ಅಡಗಿತೆ ಎಂದೇ ಅರ್ಥ!

By Suvarna News  |  First Published Sep 29, 2022, 3:38 PM IST

ಕೆಲವು ನಂಬಿಕೆಗಳಿವೆ. ಇವುಗಳನ್ನು ಕಲಿತವರು ಮೂಢನಂಬಿಕೆಗಳೆಂದೂ ಜರೆಯಬಹುದು. ಆದರೆ ಪ್ರಪಂಚದಾದ್ಯಂತ ಬಹುಕಾಲದಿಂದ ಜನ ಈ ನಂಬಿಕೆಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಮನೆಯಲ್ಲಿ ಈ ಕೆಳಗಿನ ವಸ್ತುಗಳು ಕಂಡುಬಂದರೆ ಖಂಡಿತವಾಗಿಯೂ ಅಲ್ಲಿ ಕೆಡುಕಿನ, ಕ್ಷುದ್ರ ಶಕ್ತಿಗಳು ಈಗಾಗಲೇ ನೆಲೆಯೂರಿವೆ ಎಂದರ್ಥ ಮಾಡಿಕೊಳ್ಳಬೇಕು. ಅವು ಯಾವುವು? ಇಲ್ಲಿವೆ ನೋಡಿ.


ಪ್ರಪಂಚದಾದ್ಯಂತದ ಅನೇಕ ನಂಬಿಕೆಗಳು, ದಂತಕಥೆಗಳು ಶತಮಾನಗಳಿಂದ ದುರದೃಷ್ಟದ ಬಗ್ಗೆ ನಮಗೆ ಎಚ್ಚರಿಕೆ ನೀಡಿವೆ. ವಿಶೇಷವಾಗಿ, ನಿಮ್ಮ ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುವ ಕೆಲವು ಗೃಹೋಪಯೋಗಿ ವಸ್ತುಗಳು ಇವೆ. ಈ ಕೆಲವು ವಸ್ತುಗಳು ಮನೆಯಿಂದ ಹೊರಗಿರುವುದೇ ಒಳ್ಳೆಯದು. ಜನರು ಯಾಕೆ ಇವುಗಳ ಬಗ್ಗೆ ಹಾಗೆ ತಿಳಿಯುತ್ತಾರೆ ಎಂಬುದರ ಹಿಂದಿನ ವಿಜ್ಞಾನವನ್ನು ತಿಳಿಯಿರಿ.

1- ರಾಕಿಂಗ್‌ ಚೇರ್ (Rocking Chair)
ಹೌದು! ನೀವು ಇದರಲ್ಲಿ ಕುಳಿತುಕೊಂಡು ಹಿಂದಕ್ಕೂ ಮುಂದಕ್ಕೂ ಜೀಕಲು ಇಷ್ಟಪಡಬಹುದು. ಆದರೆ, ನಿರ್ಜನವಾದ ಕೋಣೆಯಲ್ಲಿರುವ ಈ ಕುರ್ಚಿ ಕತ್ತಲಿನಲ್ಲಿ ಯಾರೂ ತಳ್ಳದೆ ತನ್ನಷ್ಟಕ್ಕೇ ಹಿಂದೆ ಮುಂದೆ ಜೀಕುವುದನ್ನು ಒಮ್ಮೆ ಊಹಿಸಿಕೊಳ್ಳಿ! ಅದು ಕೇವಲ ಗಾಳಿಯಾಟವೇ? ಐರಿಶ್ ದಂತಕಥೆಯ ಪ್ರಕಾರ, ಖಾಲಿ ರಾಕಿಂಗ್ ಕುರ್ಚಿಯು ದುಷ್ಟಶಕ್ತಿಗಳಿಗೆ ಬಂದು ಕೂರಲು ಮುಕ್ತ ಆಹ್ವಾನವಾಗಿದೆ. ಒಂದು ಕುರ್ಚಿ ಗಾಳಿಯೂ ಇಲ್ಲದೆ ತನ್ನಷ್ಟಕ್ಕೇ ಚಲಿಸಿದರೆ, ಕ್ಷುದ್ರ ಶಕ್ತಿ ಈಗಾಗಲೇ ನಿಮ್ಮ ನಿವಾಸದಲ್ಲಿದೆ ಎಂದುಕೊಳ್ಳಬಹುದು.

Tap to resize

Latest Videos

undefined

2 - ಹಸಿರು ಬಣ್ಣಮನೆಯೊಳಗೆ ಬಳಿದ ಹಸಿರು ಬಣ್ಣ ವಾಸ್ತವವಾಗಿ ಮಾರಕವಾಗಬಹುದು. ಹಸಿರು ಬಣ್ಣ ಪಿಶಾಚಿಗಳನ್ನು ಆಕರ್ಷಿಸುತ್ತದಂತೆ. ಹೆಚ್ಚಿನವರು ಇಂದಿಗೂ ಹಸಿರು ಗೋಡೆಗಳನ್ನು ಕೆಟ್ಟ ಶಕುನವಾಗಿ ನೋಡುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. 18ನೇ ಶತಮಾನದಲ್ಲಿ ಹೊಸದಾಗಿ ಕಂಡುಹಿಡಿದ ಕ್ಯೂಪ್ರಿಕ್ ಹೈಡ್ರೋಜನ್ ಆರ್ಸೆನಿಕ್ ಎಂಬ ಸಂಯುಕ್ತದೊಂದಿಗೆ ಸಂಶ್ಲೇಷಿತ ಹಸಿರು ಬಣ್ಣಗಳನ್ನು ತಯಾರಿಸಲಾಯಿತು. ಹೌದು, ಇದು ವಿಷಕಾರಿ ಆರ್ಸೆನಿಕ್. ಹಸಿರು ಬಣ್ಣದ ಗೋಡೆಗಳು ತೇವವಾದಾಗ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡಬಹುದು. ಆ ಸಮಯದಲ್ಲಿ ಕೆಲವು ಕಾರ್ಖಾನೆಯ ಕೆಲಸಗಾರರು ಅನಾರೋಗ್ಯಕ್ಕೆ ಒಳಗಾದರು. ಆರ್ಸೆನಿಕ್ ವಿಷದ ಅಪಾಯಗಳ ಬಗ್ಗೆ ನಿಮಗೆ ಗೊತ್ತಿರಲಿ.

3 - ಮುರಿದ ಗಡಿಯಾರ (Broken Clock)
ಫೆಂಗ್ ಶುಯಿ ಸಂಪ್ರದಾಯದ ಪ್ರಕಾರ ನಿಮ್ಮ ಮನೆಯಲ್ಲಿ ಮುರಿದ ವಸ್ತುಗಳನ್ನು ಇಟ್ಟುಕೊಳ್ಳುವುದು ದುರದೃಷ್ಟಕರ. ಇದು ನಿಮ್ಮ ಜೀವನದಲ್ಲಿ ಆಂತರಿಕ ಮತ್ತು ಬಾಹ್ಯ ಅಸ್ತವ್ಯಸ್ತತೆಯನ್ನು ಪ್ರತಿನಿಧಿಸುತ್ತದೆ. ವಿಶೇಷವಾಗಿ ಮುರಿದ ಗಡಿಯಾರ ಕೆಟ್ಟ ಶಕುನ. ಫೆಂಗ್ ಶುಯಿಯು ಸಮಯದ ಪರಿಕರಗಳು ಯಾವಾಗಲೂ ಕೆಲಸ ಮಾಡುತ್ತಿರಬೇಕು. ಭಗ್ನ ಗಡಿಯಾರಗಳು ನಿಮ್ಮ ಜೀವನದಲ್ಲಿ ನೀವು ಮುಂದುವರಿಯುವುದನ್ನು ನಿಲ್ಲಿಸಬಹುದು. ನಿಂತ ಗಡಿಯಾರ ಎಂದರೆ ಭೂತಕಾಲ- ಅದು ಅಕ್ಷರಶಃ ʼಭೂತʼಕಾಲವೇ ಹೌದು. ಇದರ ಗುಪ್ತ ಅಪಾಯಗಳನ್ನು ನೀವು ನಿರ್ಲಕ್ಷಿಸಬಾರದು.

4- ಮುದುರಿದ ಹಾಸಿಗೆ 
ಮುದುರಿದ, ಮಡಚದ, ಸ್ವಚ್ಛಗೊಳಿಸದ ಹಾಸಿಗೆ ಎಂದರೆ ಕ್ಷುದ್ರ ಶಕ್ತಿಗಳಿಗೆ ಬಹಳ ಆನಂದ. ಅವು ಬಂದು ಈ ಹಾಸಿಗೆಯ ಮಡಿಕೆಗಳೊಳಗೆ ಸೇರಿಕೊಂಡುಬಿಡುತ್ತವೆ. ಕೆಲವೊಮ್ಮೆ ಈ ಶಕ್ತಿಗಳೇ ನಿಮ್ಮ ಮನಸ್ಸನ್ನು ಕೆಡಿಸಿ ಹಾಸಿಗೆಯನ್ನು ಹಾಗೆಯೇ ಬಿಡುವಂತೆ ಪ್ರೇರೇಪಿಸಬಹುದು. ಮುದುರಿದ ಹಾಸಿಗೆಯು ಕಾಯಿಲೆ ಪೀಡಿತತೆಯ ಸಂಕೇತ. ಇದು ನಿಮಗೆ ನಿದ್ದೆಯಿಲ್ಲದ ರಾತ್ರಿಯನ್ನು ಉಂಟುಮಾಡಬಹುದು.

ಫೆಂಗ್ ಶುಯಿಯ ಈ ವಸ್ತುಗಳನ್ನು ಮನೆಗೆ ತಂದ್ರೆ ಸಂಪತ್ತು ಹೆಚ್ಚುತ್ತೆ !

5 - ತೆರೆದಿಟ್ಟ ಛತ್ರಿ (Open Umbrella)
ಛತ್ರಿ ತೆರೆದಿರಬೇಕಾದುದು ಹೊರಾಂಗಣದಲ್ಲಿ. ಒಳಾಂಗಣದಲ್ಲಿ ಅಲ್ಲ. ಅದರಲ್ಲಿ ತೆರೆದು ಮೇಲ್ಮುಖವಾಗಿಯಂತೂ ಇಡಲೇಬಾರದು. ಈ ನಂಬಿಕೆ ಪ್ರಾಚೀನ ಈಜಿಪ್ಟಿನಷ್ಟು ಹಿಂದಿನದು. ಪ್ರಾಚೀನ ಕಾಲದಲ್ಲಿ, ಹವಾಮಾನದಿಂದ ನಿಮ್ಮನ್ನು ರಕ್ಷಿಸಲು ಉದ್ದೇಶಿಸಿರುವ ಯಾವುದೇ ವಸ್ತುವನ್ನು ನಿಮ್ಮ ಮನೆಯೊಳಗೆ ತರುವುದೆಂದರೆ ನಿಮ್ಮ ವಾಸಸ್ಥಳವನ್ನು ರಕ್ಷಿಸುವ ರಕ್ಷಕ ಶಕ್ತಿಗಳಿಗೆ ಅಗೌರವ ತೋರಿದಂತಾಗುತ್ತಿತ್ತು. ರಕ್ಷಕರ ರಕ್ಷಣೆ ಸಾಕಷ್ಟು ಉತ್ತಮವಾಗಿಲ್ಲ ಎಂದು ನೀವು ಸೂಚಿಸುತ್ತಿದ್ದೀರಿ. ಅಂದರೆ ರಕ್ಷಕ ಶಕ್ತಿಗಳ ಅಸಮಾಧಾನ ನಿಮ್ಮನ್ನು ಅವುಗಳ ಕೋಪಕ್ಕೆ ಈಡು ಮಾಡಬಹುದು.

6- ಸತ್ತ ಗಿಡಗಳು (Dead Plants)
ಧನಾತ್ಮಕ ಶಕ್ತಿ(Positive energy) ಯಿಂದ ತುಂಬಿದ ಉತ್ಸಾಹಭರಿತ ಮನೆಯನ್ನು ನೀವು ಬಯಸಿದರೆ, ಒಣಗಿದ, ನಿರ್ಜೀವ ಸಸ್ಯ(Plants)ಗಳನ್ನು ಅಲ್ಲಿ ಉಳಿಯಲು ಬಿಡಬೇಡಿ. ಮನೆಯಲ್ಲಿ ಸತ್ತ ವಸ್ತುಗಳನ್ನು ಹೊಂದಿರುವುದು ಸತ್ತ ಶಕ್ತಿಯನ್ನು ತರುತ್ತದೆ. ವಾಸಸ್ಥಳದ ಪಾವಿತ್ರ್ಯವನ್ನು ಅದು ಕಳಂಕಗೊಳಿಸುತ್ತದೆ. ಸುಕ್ಕುಗಟ್ಟಿದ ಎಲೆಗಳು, ಇಳಿಬಿದ್ದ ಒಣಗಿದ ಕಾಂಡಗಳು ನಿಮ್ಮ ಮನೆಯನ್ನು ಜೀವಂತವಾಗಿ ಕಾಣುವಂತೆ ಮಾಡುವುದಿಲ್ಲ. ಹೀಗಾಗಿ ಸತ್ತ ದುರದೃಷ್ಟವನ್ನು ಆಹ್ವಾನಿಸುತ್ತವೆ.

ಮದುವೆಯೇ ಆಗ್ತಾ ಇಲ್ವಾ? ಈ ಗಿಡ ನೆಟ್ಟು ನೋಡಿ

7- ಟ್ಯಾಕ್ಸಿಡರ್ಮಿ (ಸತ್ತ ಪ್ರಾಣಿಯ ಗೊಂಬೆ) 
ಕೆಲವರ ಮನೆಯಲ್ಲಿ ನಿರ್ಜೀವ ಜಿಂಕೆ ತಲೆಯನ್ನು ಗೋಡೆಗೆ ತೂಗು ಹಾಕಿರುವುದನ್ನು ನೋಡಬಹುದು. ಇದು ಭಯಂಕರ. ಸತ್ತ ಪ್ರಾಣಿ(Dead Animal)ಯ ದೇಹದೊಳಗೆ ಹತ್ತಿ ತುಂಬಿ ಟ್ಯಾಕ್ಸಿಡರ್ಮಿ ಮಾಡಿಡುವುದು ಸಂದರ್ಯ ಎಂದುಕೊಂಡಿದ್ದರೆ, ಅದು ತಪ್ಪು. ಅವುಗಳ ಹೊಳೆಯುವ ನಿರ್ಜೀವ ಗೋಲಿ ಕಣ್ಣುಗಳು ನಿಜವಾಗಿಯೂ ಕ್ಷುದ್ರ ಶಕ್ತಿಗಳನ್ನು ಆಕರ್ಷಿಸಿ ತಮ್ಮಲ್ಲಿ ವಾಸಿಸುವಂತೆ ಮಾಡಬಹುದು. ಹಾಗೆಯೇ, ಹಡಗು ಮುಳುಗುವ ದೃಶ್ಯ, ಯುದ್ಧದ ವಿನಾಶದ ದೃಶ್ಯ, ಹೆಣ್ಣು ಮಕ್ಕಳು ಅಳುವ ದೃಶ್ಯ- ಇಂಥ ಕಲಾಕೃತಿ(Art piece) ಗಳನ್ನು ಗೋಡೆಗಳಲ್ಲಿ ತೂಗುಹಾಕಿದರೆ ಕೆಟ್ಟದು ಮನೆಗೆ ಬಂತೆಂದೇ ಅರ್ಥ.

 

 

click me!