ಈ Vaastu tips ಪಾಲಿಸಿದ್ರೆ ಆರೋಗ್ಯ ಸಮಸ್ಯೆ ಇರೋದಿಲ್ಲ..

By Suvarna News  |  First Published Dec 27, 2021, 1:07 PM IST

ಮನೆಯು ಆರೋಗ್ಯ ಕಾಪಾಡಬೇಕೆಂದರೆ, ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಿರಬೇಕು. ಆ ಶಕ್ತಿ ಹೆಚ್ಚಿರಲು ಏನು ಮಾಡಬೇಕೆಂದು ವಾಸ್ತು ಹೇಳುತ್ತದೆ. 


ಮನುಷ್ಯನಿಗೆ ಆಸೆ ಎಂಬುದಕ್ಕೆ ಮಿತಿಗಳಿಲ್ಲ. ಆದರೆ, ಯಾವುದೇ ಆಸೆ ಪೂರೈಸುವ ಮೊದಲು ಆರೋಗ್ಯ ಚೆನ್ನಾಗಿರಬೇಕು. ಮನೆಯಲ್ಲಿ ಯಾರೊಬ್ಬರ ಆರೋಗ್ಯ ಚೆನ್ನಾಗಿಲ್ಲವೆಂದರೂ ನೆಮ್ಮದಿ ಇರಲು ಸಾಧ್ಯವಿಲ್ಲ. ಮನೆಯ ಎಲ್ಲ ಸದಸ್ಯರ ಆರೋಗ್ಯದ ಭಾಗ್ಯ ಚೆನ್ನಾಗಿರಲು ಮನೆಯ ವಾಸ್ತು ಸರಿಯಿರಬೇಕು. ಆರೋಗ್ಯಕ್ಕಾಗಿ ವಾಸ್ತುವಿನ ಈ ಸಲಹೆಗಳನ್ನು ಪರಿಗಣಿಸಿ.

ದೀಪ
ಮನೆಯ ಈಶಾನ್ಯ(Northeast) ಭಾಗದಲ್ಲಿ ಯಾವಾಗಲೂ ದೀಪ ಹಚ್ಚಿಡಿ. ಮನೆಯ ಎದಿರು ಬಾಗಿಲು ಇಲ್ಲವೇ ಗೇಟ್ ಹತ್ತಿರ ದೀಪ ಹಚ್ಚಿಟ್ಟರೆ ಅದು ಯಾವಾಗಲೂ ಹೊರ ಬದಿಗೆ ಮುಖ ಮಾಡಿರುವಂತೆ ನೋಡಿಕೊಳ್ಳಿ. 

Latest Videos

undefined

ನಿದ್ರೆಯ ಪೊಸಿಶನ್(sleeping position)
ವ್ಯಕ್ತಿಯು ಮಲಗುವ ರೀತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯಕ್ಕಾಗಿ ಯಾವಾಗಲೂ ನಿಮ್ಮ ತಲೆಯನ್ನು ದಕ್ಷಿಣ(south)ಕ್ಕೆ ಇಟ್ಟು ಮಲಗಬೇಕು. ಪಿತ್ತ ಇರುವವರು ಬಲ ಭಾಗದಲ್ಲಿ ಮಲಗಬೇಕು. ವಾತ ಹಾಗೂ ಕಫ ಇರುವವರು ಮಂಚದ ಎಡಭಾಗದಲ್ಲಿ ಮಲಗಬೇಕು.

Vastu Tips : ಹಣದ ಸುರಿಮಳೆಯಾಗ್ಬೇಕಂದ್ರೆ ಹೊಸ ವರ್ಷ ಮಾಡಿ ಈ ಕೆಲಸ

ಓದುವ ದಿಕ್ಕು
ವಿದ್ಯಾರ್ಥಿಗಳು ಓದುವ ದಿಕ್ಕು, ಉದ್ಯೋಗಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದರೆ ಕೆಲಸಕ್ಕೆ ಕೂರುವಾಗ ಪೂರ್ವ ಇಲ್ಲವೇ ಉತ್ತರ ದಿಕ್ಕಿಗೆ ಮುಖ ಹಾಕಿ ಕುಳಿತುಕೊಳ್ಳಬೇಕು. ಇದರಿಂದ ಒತ್ತಡ(stress) ಹಾಗೂ ಆತಂಕ(anxiety)ದಿಂದ ದೂರ ಉಳಿಯಬಹುದು. 

Sadesath: 2022ರಲ್ಲಿ ಶನಿರಾಶಿಯ ಪ್ರಭಾವ ಯಾರ ಮೇಲೆ? ಯಾರಿಗೆ ಕಷ್ಟ, ಯಾರಿಗೆ ಶುಭ ಫಲ?

ಮೆಟ್ಟಿಲಿನ ಸ್ಥಳ(stairs)
ಮನೆಯ ಮೆಟ್ಟಿಲು ಎಲ್ಲಿರಬೇಕು ಎಂಬುದನ್ನು ಕಟ್ಟಿಸುವ ಮೊದಲೇ ವಾಸ್ತುತಜ್ಞರನ್ನು ಕೇಳಿ ಮುಂದುವರಿಯುವುದು ಉತ್ತಮ. ಏಕೆಂದರೆ, ಮೆಟ್ಟಿಲು ಕೂಡಾ ಮನೆಯ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮೆಟ್ಟಿಲು ಮನೆಯ ಮಧ್ಯ ಭಾಗದಲ್ಲಿರಬಾರದು. ಇದು ದೊಡ್ಡ ರೀತಿಯ ಅನಾರೋಗ್ಯಗಳಿಗೆ ಕಾರಣವಾಗುತ್ತದೆ. ಯಾವಾಗಲೂ ಗೋಡೆ(wall)ಯ ಮೂಲೆಯಲ್ಲಿಯೇ ಮೆಟ್ಟಿಲಿರಬೇಕು. ಮೆಟ್ಟಿಲಿನ ಕೆಳಗಿನ ಜಾಗವನ್ನು ಟಾಯ್ಲೆಟ್, ಸ್ಟೋರೇಜ್ ಅಥವಾ ಅಡುಗೆ ಕೋಣೆಯಾಗಿ ಬಳಸುವುದರಿಂದ ಹೃದಯದ ಸಮಸ್ಯೆಗಳು ಹಾಗೂ ಭಯ ಹೆಚ್ಚುತ್ತದೆ.

ಫರ್ನಿಚರ್(furniture)
ಮನೆಯೊಳಗೆ ಗಾಳಿ ಬೆಳಕು, ಧನಾತ್ಮಕ ಶಕ್ತಿ ಎಲ್ಲೆಡೆ ಓಡಾಡಬೇಕು. ಹಾಗಾಗಿ, ಮನೆಯ ಮಧ್ಯ ಭಾಗದಲ್ಲಿ ಎನರ್ಜಿಗೆ ತಡೆ ಒಡ್ಡುವಂತೆ ಯಾವುದೇ ಪೀಠೋಪಕರಣ ಇಡಬಾರದು. ಬ್ರಹ್ಮಸ್ಥಾನ ಎಂದು ಕರೆಸಿಕೊಳ್ಳುವ ಮನೆಯ ಮಧ್ಯಭಾಗದಲ್ಲಿ ಎನರ್ಜಿ ಹರಿವಿಗೆ ತೊಂದರೆಯಾದರೆ ನಿವಾಸಿಯ ಆರೋಗ್ಯದಲ್ಲಿ ಏರುಪೇರಾಗುತ್ತದೆ.

ಸಸ್ಯಗಳು(Plants)
ಒಳಾಂಗಣ ಸಸ್ಯಗಳು(Indoor plants) ಮನೆಯ ಶಾಂತಿ ಹಾಗೂ ಸ್ವಚ್ಛ ವೈಬ್ರೇಶನ್ ಕಾಪಾಡುತ್ತವೆ. ತುಳಸಿ(basil) ಮನೆಯ ಎದುರಿನಲ್ಲಿದ್ದರೆ ಆರೋಗ್ಯ ಹೆಚ್ಚಿಸುವ ಜೊತೆಗೆ, ಆತಂಕರಹಿತ ಜೀವನಕ್ಕೆ ಸಹಾಯ ಮಾಡುತ್ತದೆ. ಮಲಗುವ ಕೋಣೆಯಲ್ಲಿ ಲ್ಯಾವೆಂಡರ್ ಸಸ್ಯ ಇದ್ದರೆ ನಿದ್ದೆ ಚೆನ್ನಾಗಿ ಬರುವ ಜೊತೆಗೆ ಒತ್ತಡ ನಿವಾರಣೆ(stress reliever)ಯಾಗುತ್ತದೆ. ನಿದ್ದೆ ಚೆನ್ನಾಗಿದ್ದು, ಒತ್ತಡರಹಿತ ಬದುಕಾದರೆ ಆರೋಗ್ಯ ಚೆನ್ನಾಗಿರಲೇಬೇಕಲ್ಲ.. ಇನ್ನು ನಿಮಗೆ ರಕ್ತದೊತ್ತಡ ಇದ್ದರೆ ರೋಸ್‌ಮೆರಿ ಹಾಗೂ ಸ್ಪೈಡರ್ ಪ್ಲ್ಯಾಂಟ್ ಮನೆಯೊಳಗಿಟ್ಟುಕೊಳ್ಳಿ. 

ಓವರ್‌ಹೆಡ್ ಬೀಮ್(overhead beam)
ಈಗಂತೂ ಮನೆಯಲ್ಲಿ ಓವರ್‌ಹೆಡ್ ಬೀಮ್ ಹಾಕಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಈ ರೀತಿ ಚಾವಣಿಯಿಂದ ನೇತಾಡುವ ಬೆಳಕು ಎಂದಿಗೂ ಕೋಣೆಯ ಮಧ್ಯ ಭಾಗದಲ್ಲಿರದಂತೆ ಎಚ್ಚರ ವಹಿಸಿ. ಏಕೆಂದರೆ, ಅವು ಮನಸ್ಸನ್ನು ಹಾಳು ಮಾಡುತ್ತವೆ. ಅವು ನಾವು ನಮ್ಮ ಮನಸ್ಸಿನೊಂದಿಗೆ ಮಾತನಾಡಿಕೊಳ್ಳಲು ಅಡ್ಡಿ ಪಡಿಸುತ್ತವೆ. ಆ ಮೂಲಕ ಮಾನಸಿಕ ಆರೋಗ್ಯ ಹದಗೆಡಿಸುತ್ತದೆ.

ಪೂರ್ವದಲ್ಲಿ ಅಗ್ನಿ(fire)
ವಾಯುವ್ಯ ಮೂಲೆಯಲ್ಲಿ ಸ್ಟೌ ಹಚ್ಚುವುದರಿಂದ ಅದು ಮನೆಮಂದಿಯಲ್ಲಿ ಉತ್ತಮ ಆರೋಗ್ಯವನ್ನು ಹೊತ್ತು ತರುತ್ತದೆ. ಸರಿಯಾದ ದಿಕ್ಕಿನಲ್ಲಿ ಪ್ರವಹಿಸುವ ಬೆಂಕಿ ಯಾವತ್ತೂ ಪಾಸಿಟಿವ್ ಎನರ್ಜಿ ತರುತ್ತದೆ. ಪೂರ್ವದಲ್ಲಿ ಹಚ್ಚುವ ದೀಪ ಅಥವಾ ಸ್ಟೌ ಕೂಡಾ ಆರೋಗ್ಯ ಸೇರಿದಂತೆ ಎಲ್ಲ ರೀತಿಯಲ್ಲಿ ಮನೆ ಮಂದಿಗೆ ಒಳಿತು ಮಾಡುತ್ತದೆ.

 

click me!