ನಿಮ್ಮಲ್ಲಿ ಒಂದು ತುಣುಕು ಚಿನ್ನ ಇದ್ದರೂ, ಸಾಕು. ಅದ್ನು ಸರಿಯಾದ ಸ್ಥಾನದಲ್ಲೇ ಇಡಿ. ಅದು ಮಾಡುವ ಮ್ಯಾಜಿಕ್ ಅನ್ನು ನೋಡಿ. ಹಣ ಮತ್ತು ಚಿನ್ನ ವೃದ್ಧಿಸುವುದೇ ಮನೆಯಲ್ಲಿ ಅದು ಇರುವ ಸ್ಥಾನ, ದಿಕ್ಕು ಹಾಗೂ ಕೋನದಿಂದ.
ತುಳಸಿಕಟ್ಟೆ ಮನೆಯ ಎದುರು, ಪೂರ್ವದಿಕ್ಕಿನಲ್ಲಿಯೇ ಇರಬೇಕು. ದೇವರ ಕೋಣೆ ಈಶಾನ್ಯ ದಿಕ್ಕಿನಲ್ಲಿಯೇ ಇರಬೇಕು- ಹೀಗೆ ಮನೆ ಕಟ್ಟಿಸುವಾಗ ಪ್ರತಿಯೊಂದು ಕೋಣೆಗೂ ವಾಸ್ತುರೀತ್ಯಾ ಏರ್ಪಾಡು ಮಾಡುತ್ತೀರಿ. ಆದರೆ ಹಣ ಮತ್ತು ಚಿನ್ನ ಎಲ್ಲಿಡಬೇಕು ಎಂದು ಪ್ಲಾನ್ ಮಾಡುತ್ತೀರಾ? ಮಾಡಲೇಬೇಕು. ಯಾಕೆಂದರೆ ಹಣ ಮತ್ತು ಚಿನ್ನ ವೃದ್ಧಿಸುವುದೇ ಮನೆಯಲ್ಲಿ ಅದು ಇರುವ ಸ್ಥಾನ, ದಿಕ್ಕು ಹಾಗೂ ಕೋನದಿಂದ. ಎಲ್ಲೆಲ್ಲೋ ಇಟ್ಟರೆ ಅದು ವೃದ್ಧಿಸುವುದಿಲ್ಲ, ಬದಲಾಗಿ ಕಡಿಮೆಯಾಗುತ್ತದೆ. ಹಾಗೆ ಇಡೋದಕ್ಕೆ ನಮ್ಮಲ್ಲಿ ಚಿನ್ನವೇ ಇಲ್ಲವಲ್ಲ ಅಂತ ನಗುತ್ತೀರಾ? ನಗಬೇಡಿ, ನಿಮ್ಮಲ್ಲಿ ಒಂದು ತುಣುಕು ಚಿನ್ನ ಇದ್ದರೂ, ಸಾಕು. ಅದ್ನು ಸರಿಯಾದ ಸ್ಥಾನದಲ್ಲೇ ಇಡಿ. ಅದು ಮಾಡುವ ಮ್ಯಾಜಿಕ್ ಅನ್ನು ನೋಡಿ.
ವಾಸ್ತು ಶಾಸ್ತ್ರದ ಪ್ರಕಾರ ಹಣ, ಚಿನ್ನ ಹಾಗೂ ಆಸ್ತಿಯ ಪತ್ರಗಳಂತಹ ಅಮೂಲ್ಯವಾದ ವಸ್ತುಗಳನ್ನು ಇಡಲು ಸರಿಯಾದ ದಿಕ್ಕು ಅಥವಾ ಜಾಗವೆಂದು ನೈರುತ್ಯ ದಿಕ್ಕನ್ನು ಸೂಚಿಸಲಾಗುತ್ತದೆ. ಅದಕ್ಕೂ ಹಲವು ಕಾರಣಗಳಿವೆ. ನೈರುತ್ಯ ದಿಕ್ಕು ಅತ್ಯಂತ ಅದೃಷ್ಟದ ದಿಕ್ಕು ಎಂಬುದಾಗಿ ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಅತ್ಯಂತ ಸ್ಥಿರವಾದ ಅಂತಹ ಪ್ರದೇಶವಾಗಿದ್ದು ಇಲ್ಲಿ ಮೌಲ್ಯಯುತ ವಸ್ತುಗಳನ್ನು ಇಡುವುದರಿಂದ ಅದರ ಮೌಲ್ಯ ಇನ್ನಷ್ಟು ಹೆಚ್ಚಾಗುತ್ತದೆ ಎಂಬುದಾಗಿ ಪರಿಗಣಿಸಲಾಗುತ್ತದೆ. ಆರ್ಥಿಕ ಸಮಸ್ಯೆಗಳು ಕೂಡ ಇದರಿಂದ ಬಗೆಹರಿಯುತ್ತವೆ ಎಂದು ಹೇಳಲಾಗಿದೆ. ಆರ್ಥಿಕ ಸಮಸ್ಯೆಗಳು ದೂರವಾಗುವುದಕ್ಕೆ ಹಾಗೂ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುವುದಕ್ಕೆ ಇದು ಅತ್ಯುತ್ತಮ ಉಪಾಯವಾಗಿದೆ.
ವಾಸ್ತು ಶಾಸ್ತ್ರ ಹೇಳುವ ಪ್ರಕಾರ ಬೆಲೆ ಬಾಳುವಂತಹ ವಸ್ತುಗಳನ್ನು ನೈರುತ್ಯ ದಿಕ್ಕಿನಲ್ಲಿ ಇಡುವುದರಿಂದಾಗಿ ಮನೆಯಲ್ಲಿ ಆರ್ಥಿಕ ಸಂಚಲನ ಇನ್ನಷ್ಟು ಹೆಚ್ಚಾಗುತ್ತದೆ ಎಂಬುದಾಗಿ ನಂಬಲಾಗಿದೆ. ಇದರಿಂದಾಗಿ ಮನೆಯಲ್ಲಿ ಆರ್ಥಿಕ ಶಕ್ತಿ ಇನ್ನಷ್ಟು ಬಲಗೊಳ್ಳಲಿದೆ ಹಾಗೂ ಹೆಚ್ಚಾಗಲಿದೆ. ಯಾವುದೇ ರೀತಿಯ ಆರ್ಥಿಕ ಸಮಸ್ಯೆಗಳು ಮನೆಯಲ್ಲಿ ಕಂಡು ಬರುವುದಿಲ್ಲ. ಮನೆಯಲ್ಲಿ ಪಾಸಿಟಿವ್ ಎನರ್ಜಿ ಕೂಡ ಹೆಚ್ಚಾಗುತ್ತದೆ ಹಾಗೂ ಹಣವನ್ನು ಕೂಡ ನಿಮ್ಮ ಮನೆ ಆಕರ್ಷಿಸುತ್ತದೆ. ನಿಮ್ಮ ಜೀವನದಲ್ಲಿ ಸಮೃದ್ಧಿ ಹಾಗೂ ನೆಮ್ಮದಿ ಇನ್ನಷ್ಟು ಹೆಚ್ಚಾಗಲಿವೆ. ನಿಮ್ಮ ಜೀವನದಲ್ಲಿ ಸಕಾರಾತ್ಮಕತೆಯನ್ನು ನೀವು ಇದರ ಮೂಲಕ ಆಹ್ವಾನ ಮಾಡಿದಂತಾಗುತ್ತದೆ.
Vaastu Tips: ನಿಮ್ಮ ಮನೆ ನಲ್ಲಿ ಸೋರುತ್ತಿದೆಯೇ? ಈ ನಷ್ಟ ನೀವು ಊಹಿಸಲೂ ಸಾಧ್ಯವಿಲ್ಲ
ನೈರುತ್ಯ ದಿಕ್ಕನ್ನು ವಾಸ್ತು ಶಾಸ್ತ್ರದ ಪ್ರಕಾರ ಭೂಮಿತಾಯಿಯ ಅಂಶ ಎನ್ನುವುದಾಗಿ ಹಾಗೂ ಹಣವನ್ನು ಆಳುವಂತಹ ದಿಕ್ಕು ಎಂಬುದಾಗಿ ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ನೀವು ಹಣ ಹಾಗೂ ಚಿನ್ನ ಮತ್ತು ಆಸ್ತಿಯ ಪತ್ರಗಳನ್ನು ಇಡುವುದರಿಂದಾಗಿ ಅದರ ಪ್ರಾಮುಖ್ಯತೆ ನಿಮ್ಮ ಜೀವನದಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಅದನ್ನು ಕಾಪಾಡುವುದರಲ್ಲಿ ಕೂಡ ನೈರುತ್ಯ ದಿಕ್ಕು ಪ್ರಮುಖವಾಗಿರುತ್ತದೆ. ಒಟ್ಟಾರೆಯಾಗಿ ಈ ದಿಕ್ಕಿನಲ್ಲಿ ನಿಮ್ಮ ಬೆಲೆಬಾಳುವಂತಹ ವಸ್ತುಗಳನ್ನು ಇಡುವುದರಿಂದ ಅವುಗಳಿಗೆ ಸುರಕ್ಷತೆ ಸಿಗುತ್ತದೆ.
ನೈರುತ್ಯ ದಿಕ್ಕಿನಲ್ಲಿ ಬೆಲೆ ಬಾಳುವ ವಸ್ತುಗಳನ್ನು ಇಡುವುದರಿಂದಾಗಿ ನಿಮ್ಮ ಮನೆಯಲ್ಲಿ ಅದರ ಶುಭ ಪರಿಣಾಮ ಕಂಡುಬರುತ್ತದೆ. ಇದು ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರ ಮೇಲೆ ಕೂಡ ಪರಿಣಾಮ ಬೀರುತ್ತದೆ. ಈ ದಿಕ್ಕಿನಲ್ಲಿ ಇಡುವುದರಿಂದಾಗಿ ನಿಮಗೆ ಬೇಕೆಂದಾಗ ಆ ವಸ್ತುಗಳು ಕೂಡಲೇ ಸಿಗುತ್ತವೆ ಕೂಡ. ಇಲ್ಲಿ ನೀವು ಸರಿಯಾದ ರೀತಿಯಲ್ಲಿ ವಸ್ತುಗಳನ್ನು ಜೋಡಿಸಿ ಇಡಬಹುದಾಗಿದೆ. ಯಾಕೆಂದರೆ ನೈರುತ್ಯ ದಿಕ್ಕನ್ನು ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಗೊಂದಲ ಇಲ್ಲದೆ ಇರುವಂತಹ ಶಾಂತಿಯುತ ಸ್ಥಳ ಎಂಬುದಾಗಿ ಪರಿಗಣಿಸಲಾಗುತ್ತದೆ.
ಈ ಸ್ಥಳ ಅತ್ಯಂತ ಸುರಕ್ಷಿತ ಹಾಗೂ ಭರವಸೆಯ ಸ್ಥಳ ಆಗಿದ್ದು ಇಲ್ಲಿ ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಲಾಕ್ ಮಾಡಿ ಇಡುವುದರಿಂದಾಗಿ ಯಾವುದೇ ಅಪಾಯಗಳು ಸಂಭವಿಸುವುದಿಲ್ಲ. ಇದರ ನೆನಪು ಕೂಡ ನಿಮ್ಮ ಮನಸ್ಸಿನಲ್ಲಿ ಇರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ವಸ್ತುಗಳನ್ನು ಈ ಸ್ಥಳದಲ್ಲಿ ಇಡುವುದರಿಂದಾಗಿ ಮನಸ್ಸಿನಲ್ಲಿ ಭರವಸೆ ಕೂಡ ಇರುತ್ತದೆ. ನೈರುತ್ಯ ದಿಕ್ಕು ಉತ್ತಮವಾದ ಪಾಸಿಟಿವ್ ವೈಬ್ ಅನ್ನು ಹೊಂದಿರುವ ಕಾರಣದಿಂದ ಬೇರೆ ಸ್ಥಳಗಳಿಗೆ ಹೋಲಿಸಿದರೆ ನೈರುತ್ಯ ಅತ್ಯಂತ ಸುರಕ್ಷಿತ ಹಾಗೂ ಸಮೃದ್ಧಿ ಹೊಂದಿರುವಂತಹ ಸ್ಥಳವಾಗಿದೆ.
ಮನೇಲಿ ಹನುಮಂತನ ಫೋಟೋ ಇಡೋದಾದ್ರೆ ಈ ವಿಷಯ ಮರೆಯಲೇ ಬಾರ್ದು!