ಸುಖ, ನೆಮ್ಮದಿ ಜೊತೆಗೆ ಸುಂದರ ಮನೆ ಸರ್ವನಾಶ ಆಗೋಕೆ ಇವಿದ್ದರೆ ಸಾಕು!

By Bhavani Bhat  |  First Published Jun 18, 2024, 10:08 AM IST

ಮನೆಯೊಳಗಿನ ವಸ್ತುಗಳು ಧನಾತ್ಮಕತೆ ಬೀರುತ್ತಿದ್ದರೆ ಬದುಕು ನೆಮ್ಮದಿ. ಋಣಾತ್ಮಕತೆ ಬೀರುತ್ತಿದ್ದರೆ ಅಲ್ಲಿಗೆ ನೆಮ್ಮದಿ ಮಟಾಶ್.‌ ಹಾಗೆ ಕರಾಳತೆ ಸೃಷ್ಟಿಸುವ ವಸ್ತುಗಳು ಯಾವ್ಯಾವುದು ಅಂತ ಇಲ್ಲಿ ತಿಳಿದುಕೊಂಡು ಅವುಗಳಿಂದ ಪಾರಾಗಿ.


ಮನೆ ಹೊರಗಿನಿಂದ ನೋಡಲು ಸುಂದರವಾಗಿ ಕಂಡರೆ ಸಾಕಾಗುವುದಿಲ್ಲ. ಅದರ ಒಳಗಿರುವ ಆಯ ಆಕೃತಿಗಳೂ ಅಷ್ಟೇ ಚೆನ್ನಾಗಿರುವುದು ಅಗತ್ಯ. ಮನೆಯ ಕೊಠಡಿಗಳಿಗೆ ಹೇಗೆ ವಾಸ್ತು ಇದೆಯೋ ಹಾಗೆ ಮನೆಯೊಳಗೆ ಇರಬೇಕಾದ, ಇರಬೇಕಾಗಿಲ್ಲದ ವಸ್ತುಗಳಿಗೂ ವಾಸ್ತು ನಿಯಮಗಳಿವೆ. ಇಲ್ಲಿ ಏನಿರಬೇಕು, ಏನಿರಬಾರದು ಎಂಬುದೂ ಅಷ್ಟೇ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇರುವ ವಸ್ತುಗಳು ಕೂಡಾ ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತವೆ. ಆದುದರಿಂದ ಮನೆಯಲ್ಲಿ ಇಟ್ಟಿರುವ ವಸ್ತುಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಮನೆಯ ಸಂತೋಷ ಮತ್ತು ಶಾಂತಿ ಹಾಳಾಗುತ್ತದೆ. ಹಾಗೆ ಕುಟುಂಬದ ನಾಶಕ್ಕೆ ಕಾರಣ ಆಗುವ ಯಾವ ವಸ್ತುಗಳು ಗೊತ್ತೇ? ಇಲ್ಲಿ ನೋಡಿ:

ಮನೆಯಲ್ಲಿ ಎಂದಿಗೂ ಮುಳ್ಳಿನ ಗಿಡಗಳನ್ನು ಇಡಬೇಡಿ. ಕಳ್ಳಿಯಂತಹ ಮುಳ್ಳು ಗಿಡಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತವೆ. ಕುಟುಂಬ ಸದಸ್ಯರಲ್ಲಿ ವೈಮನಸ್ಸು ಮೂಡುತ್ತದೆ. ಅದೇ ಸಮಯದಲ್ಲಿ, ಬೋನ್ಸಾಯ್ ಸಸ್ಯ ಕೂಡಾ ಬೆಳವಣಿಗೆಯನ್ನು ತಡೆಯುತ್ತದೆ. ಮನೆಯಲ್ಲಿ ಈ ಸಸ್ಯಗಳ ಉಪಸ್ಥಿತಿಯು ಅನೇಕ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ. ಅಮೃತಬಳ್ಳಿ ಸೂಕ್ತ; ಸ್ನೇಕ್‌ ಪ್ಲಾಂಟ್‌ ಮನೆಯ ಹೊರಗಿರಲಿ. 

Tap to resize

Latest Videos

undefined

ಮನೆಯ ಗೋಡೆಗಳ ಮೇಲೆ ಯುದ್ಧದ ಚಿತ್ರಗಳು, ನಿರ್ಜನ ಭೂದೃಶ್ಯ, ಒಣ ಮರಗಳ ಚಿತ್ರಗಳನ್ನು ಹಾಕಬಾರದು. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳು, ಒತ್ತಡಗಳು ಎದುರಾಗುತ್ತವೆ. ಮನೆಯಲ್ಲಿ ಯಾವಾಗಲೂ ವರ್ಣರಂಜಿತ ಮತ್ತು ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ಇರಿಸಿ. ಹಸಿರು ಲ್ಯಾಂಡ್‌ಸ್ಕೇಪ್‌ ಚಿತ್ರಗಳು ಸೂಕ್ತ. ಕಾಡು ಪ್ರಾಣಿಗಳ ಚಿತ್ರಗಳು, ಅದರಲ್ಲೂ ಕಪ್ಪು ಬಣ್ಣದ ಕಾಡುಕಿರುಬದಂಥ ಪ್ರಾಣಿಗಳ ಚಿತ್ರಗಳು ಬೇಡ. 

ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು, ಯಾಕೆ; ಸೂಕ್ತ ವೈಜ್ಞಾನಿಕ ಮಾಹಿತಿ ಇಲ್ಲಿದೆ ನೋಡಿ!

ಮನೆಯಲ್ಲಿ ಜೇಡರ ಬಲೆ ಇರುವುದು ತುಂಬಾ ಅಶುಭ. ಇದರಿಂದ ಮನೆ ಮಂದಿಯಲ್ಲಿ ಸೋಮಾರಿತನ ಮನೆ ಮಾಡುತ್ತದೆ. ಮಾತ್ರವಲ್ಲ ಮನೆಯವರು ಸದಾ ಗೊಂದಲದಲ್ಲಿಯೇ ಇರುತ್ತಾರೆ. ಪ್ರಗತಿ ನಿಂತು ಹೋಗುತ್ತದೆ. ಯಾವುದೇ ವಿಚಾರದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವುತ್ತಾರೆ. ಒಟ್ಟಾರೆಯಾಗಿ, ಮನೆಯಲ್ಲಿ ಜೇಡರ ಬಲೆಯನ್ನು ಹೊಂದಿರುವುದು ಪರಸ್ಪರ ಸಂಬಂಧಗಳು ಮತ್ತು ಉದ್ಯೋಗ-ವ್ಯವಹಾರ ಎರಡೂ ವಿಚಾರದಲ್ಲಿ ಒಳ್ಳೆಯದಲ್ಲ.

ಮನೆಯಲ್ಲಿ ದೇವರ ಒಡೆದ ಮೂರ್ತಿಗಳು, ಒಡೆದ ಪಟಗಳು ಇರುವುದು ಕೂಡ ಒಳ್ಳೆಯದಲ್ಲ. ನಟರಾಜ, ಕಾಳಿ ವಿಗ್ರಹಗಳೂ ಅಷ್ಟು ಒಳ್ಳೆಯದಲ್ಲ. ಇದು ಶಿವನ ತಾಂಡವದ ಚಿತ್ರವಾಗಿದ್ದು, ಮನೆಯಲ್ಲಿ ಅದರ ಉಪಸ್ಥಿತಿಯು ಸಂಬಂಧಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಧ್ಯಾನಮಗ್ನ ಶಿವ (Meditating Shiva), ಗಣೇಶ, ರಾಧಾಕೃಷ್ಣರ ಮೂರ್ತಿಗಳು ಶುಭ.

ಒಡೆದ ಗಾಜು (Broken Glasses), ಒಡೆದ ಪಾತ್ರೆಗಳು, ಕೆಟ್ಟ ಎಲೆಕ್ಟ್ರಾನಿಕ್ ವಸ್ತುಗಳು (Unused Electronic Items), ಹರಿದ ಚಿತ್ರಗಳು, ಪೀಠೋಪಕರಣಗಳು (Unused Furnitures), ಒಡೆದ ಕನ್ನಡಿಗಳು, ಯಾರೋ ಕೊಟ್ಟರು ಎಂದು ತಂದಿಟ್ಟುಕೊಳ್ಳುವ ಅರ್ಥವಿಲ್ಲದ ಶೋಕೇಸ್‌ ಸಾಮಗ್ರಿಗಳು, ನಿಂತುಹೋದ ರಿಪೇರಿಯಾಗದ ಗಡಿಯಾರ ಮುಂತಾದವುಗಳನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಅವುಗಳು ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ. ಮಾತ್ರವಲ್ಲ ಹಣದ ನಷ್ಟವನ್ನು ಕೂಡಾ ಉಂಟುಮಾಡುತ್ತದೆ.

Vaastu Tips: ನಿಮ್ಮ ಮನೆ ನಲ್ಲಿ ಸೋರುತ್ತಿದೆಯೇ? ಈ ನಷ್ಟ ನೀವು ಊಹಿಸಲೂ ಸಾಧ್ಯವಿಲ್ಲ
 

click me!