Vastu Tips: ಉಪ್ಪುನೀರಿನಿಂದ ಮನೆ ಒರೆಸಿದ್ರೆ ಋಣಾತ್ಮಕ ಶಕ್ತಿಗಳೆಲ್ಲ ಗಾಯಬ್!

By Suvarna News  |  First Published Jan 20, 2022, 4:47 PM IST

ಉಪ್ಪು ಕೇವಲ ಅಡುಗೆಯ ರುಚಿ ಹೆಚ್ಚಿಸುವುದಿಲ್ಲ, ಋಣಾತ್ಮಕ ಶಕ್ತಿ ತೆಗೆದು ಬದುಕಿನ ರುಚಿಯನ್ನೂ ಹೆಚ್ಚಿಸುತ್ತದೆ.


ಉಪ್ಪು(Salt) ಎಲ್ಲರ ಮನೆಯ ಅಡುಗೆ ಮನೆಯಲ್ಲೂ ಪ್ರಮುಖ ಸ್ಥಾನ ವಹಿಸಿದೆ. ಅದಕ್ಕೆ ಅಲ್ಲಿ ಅದರದೇ ಆದ ಸ್ಥಳವಿರುತ್ತದೆ. ಏಕೆಂದರೆ ಉಪ್ಪಿಲ್ಲದ ಯಾವ ಅಡುಗೆಯೂ ತಿನ್ನಲು ಹೇಳಿಸಿದ್ದಲ್ಲ. ಕೇವಲ ರುಚಿಗಾಗಿ ಮಾತ್ರವಲ್ಲ, ಆರೋಗ್ಯಕ್ಕೆ ಕೂಡಾ ಉಪ್ಪಿನಲ್ಲಿರುವ ಐಯೋಡಿನ್ ಅಂಶ ಬೇಕೇ ಬೇಕು. ದೇಹದ ರಕ್ತದೊತ್ತಡ(blood pressure) ಪ್ರಮಾಣ ಕಾಯ್ದುಕೊಳ್ಳಲು ಉಪ್ಪು ಬೇಕು. ಉಪ್ಪನ್ನು ಆಹಾರದಿಂದ ತೆಗೆದರೆ, ಗ್ವಾಯ್ಟರ್ ಎಂಬ ಆರೋಗ್ಯ ಸಮಸ್ಯೆ ಶುರುವಾಗಬಹುದು. ವ್ಯಕ್ತಿಯ ಜೀವನದಲ್ಲಿ ಉಪ್ಪಿನ ಪಾತ್ರ ಕೇವಲ ಆರೋಗ್ಯ ಹಾಗೂ ರುಚಿಗೆ ಸೀಮಿತವಾಗಿಲ್ಲ. ಅದನ್ನು ಸರಿಯಾಗಿ ಜ್ಯೋತಿಷ್ಯ(astrology)ದಲ್ಲಿ ಹೇಳಿದಂತೆ ಬಳಸಿದರೆ ಅದೃಷ್ಟವನ್ನೂ ತಂದುಕೊಡುತ್ತದೆ. 

ಋಣಾತ್ಮಕ ಶಕ್ತಿಯ ವಿರುದ್ಧದ ಅಸ್ತ್ರ
ಕೆಲವು ದಿನಗಳೇ ಹಾಗೆ, ಮನೆಯಲ್ಲಿ ಯಾವೊಂದು ಕಾರ್ಯವೂ ಕೈಗೂಡುವುದಿಲ್ಲ. ಎಷ್ಟೇ ಪ್ರಯತ್ನ ಹಾಕಿದರೂ ಯಶಸ್ಸು ದಕ್ಕುವುದಿಲ್ಲ, ಮನೆ ಸದಸ್ಯರ ನಡುವೆ ಸಣ್ಣ ಸಣ್ಣ ವಿಷಯಕ್ಕೂ ಮನಸ್ತಾಪವಾಗುತ್ತದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಆರ್ಥಿಕ ನಷ್ಟ ಹೆಚ್ಚುತ್ತದೆ. ಇವೆಲ್ಲ ಏಕಾಗುತ್ತಿದೆ, ಒಟ್ಟಿಗೇ ಏಕೆ ಹೀಗಾಗುತ್ತಿದೆ ಎನಿಸಲಾರಂಭಿಸುತ್ತದೆ. ಇದಕ್ಕೆ ಮನೆಯಲ್ಲಿ ನಕಾರಾತ್ಮಕ ಶಕ್ತಿ(negativity) ಹೆಚ್ಚಿರುವುದೇ ಕಾರಣವಿರುತ್ತದೆ. ಈ ಋಣಾತ್ಮಕ ಶಕ್ತಿ ತೆಗೆಯಲು ಜ್ಯೋತಿಷ್ಯದಲ್ಲಿ ಹಲವು ವಿಧಾನಗಳಿವೆ. ಸಧ್ಯಕ್ಕೆ ಉಪ್ಪಿನಿಂದ ಹೇಗೆ ತೆಗೆಯಬಹುದು ನೋಡೋಣ. 

Tap to resize

Latest Videos

ನೆಗೆಟಿವಿಟಿ ತೆಗೆಯಲು
ಅರ್ಧ ಬಕೆಟ್ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ. ಈ ನೀರಿನಿಂದ ಮನೆಯ ಎಲ್ಲ ಕೋಣೆಗಳ ನೆಲ ಒರೆಸಿ. ಹೀಗೆ ಪ್ರತಿ ದಿನ ಉಪ್ಪು ನೀರಿನಿಂದ ಮನೆಯ ನೆಲ ಒರೆಸುತ್ತಿದ್ದರೆ ನಿಧಾನವಾಗಿ ನಿಮ್ಮ ಪರಿಸ್ಥಿತಿ ಉತ್ತಮವಾಗುತ್ತದೆ. ಉಪ್ಪು ಮನೆಯ ಋಣಾತ್ಮಕತೆಯನ್ನು ತಗ್ಗಿಸುತ್ತದೆ. ಪ್ರತಿ ರಾತ್ರಿ ಮಲಗುವ ಮುನ್ನ ಅಡುಗೆ ಕೋಣೆಯ ನೆಲವನ್ನು ಉಪ್ಪಿನ ನೀರಿನಿಂದ(salty water) ಒರೆಸುವುದರಿಂದಲೂ ಲಾಭ ಪಡೆಯಬಹುದು. 

Vastu tips: ಏಳು ಕುದುರೆಗಳ ಪೇಂಟಿಂಗ್ ಮನೆಯಲ್ಲಿದ್ರೆ ಗೆಲುವು ನಿಮ್ಮದೇ

ಸಂಬಂಧ ಬಲ ಪಡಿಸಲು
ಮನೆಯ ಸದಸ್ಯರ ನಡುವೆ ಸಂಬಂಧ(relationship)ದಲ್ಲಿ ಬಿರುಕು ಮೂಡಿದ್ದರೆ, ಗೆಳೆಯರೊಂದಿಗೆ ಪದೇ ಪದೆ ಜಗಳವಾಗುತ್ತಿದ್ದರೆ, ಉಪ್ಪನ್ನು ಬಳಸಿ ಪರಿಸ್ಥಿತಿಯನ್ನು ಹತೋಟಿಗೆ ತರ ಬಹುದು. ಮನೆಯ ಮುಖ್ಯ ದ್ವಾರದ ಎಡ ಹಾಗೂ ಬಲ ಬದಿಗೆ ಪುಟ್ಟ ಬಟ್ಟಲುಗಳಲ್ಲಿ ಉಪ್ಪನ್ನು ತುಂಬಿಡಿ. ಇದನ್ನು ನೀವು ಬೇಕಿದ್ದರೆ ಬಣ್ಣ ಸೇರಿಸಿ ಡೆಕೋರೇಶನ್‌ಗಾಗಿ ಮಾಡಿದಂತೆ ಬಳಸಬಹುದು. ಇದರಿಂದ ಮ್ಯಾಜಿಕ್ ಆಗುತ್ತದೆ. ಮನೆಯ ಒಳಗೆ ಬರುವವರಿಗೆ ಮನೆಯ ಸದಸ್ಯರ ಮೇಲೆ ಪ್ರೀತಿ ಹೆಚ್ಚುತ್ತದೆ. ಬಾಂಧವ್ಯಗಳು ಗಟ್ಟಿಯಾಗುತ್ತವೆ. 

ವಾಸ್ತು ದೋಷ ಸರಿಪಡಿಸಲು
ಉಪ್ಪು ಮನೆಯ ನೆಗೆಟಿವಿಟಿ ಕಡಿಮೆ ಮಾಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ಅಥವಾ ಈಶಾನ್ಯ(northeast) ಭಾಗದಲ್ಲಿ ನಿಮ್ಮ ಬಾತ್‌ರೂಂ ಅಥವಾ ಬೆಡ್‌ರೂಂ ಇದ್ದರೆ ಜೀವನದಲ್ಲಿ ಏಳ್ಗೆ ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಬಟ್ಟಲಲ್ಲಿ ಉಪ್ಪನ್ನು ತುಂಬಿ ಆ ದಿಕ್ಕುಗಳಲ್ಲಿ ಇಡಬೇಕು. ಇದರಿಂದ ನೆಗೆಟಿವ್ ವೈಬ್ಸ್ ಬ್ಯಾಲೆನ್ಸ್ ಆಗಿ ಧನಾತ್ಮಕ ಫಲಿತಾಂಶಗಳನ್ನು ಕಾಣಲು ಸಾಧ್ಯವಾಗುತ್ತದೆ. ಈ ಉಪ್ಪು ಎಲ್ಲ ಋಣಾತ್ಮಕ ಶಕ್ತಿ ಎಳೆದುಕೊಳ್ಳುವ ಅಬ್ಸಾರ್ಬರ್‌ನಂತೆ ಕೆಲಸ ಮಾಡುತ್ತದೆ. ಬಟ್ಟಲ ಉಪ್ಪನ್ನು ಪ್ರತಿ ವಾರ ಬದಲಾಯಿಸಬೇಕು.

Astrology tips: ಮಕ್ಕಳಾಗ್ತಿಲ್ವಾ? ಸಂತಾನ ಯೋಗ ಹೆಚ್ಚಿಸಲು ಹೀಗ್ಮಾಡಿ..

ನಕಾರಾತ್ಮಕ ಯೋಚನೆಗಳಿಂದ ದೂರವಿರಲು
ಪದೇ ಪದೆ ತಲೆಯಲ್ಲಿ ನಕಾರಾತ್ಮಕ ಯೋಚನೆಗಳೇ ಬರುತ್ತಿದ್ದರೆ, ಅದರಿಂದ ಮನಸ್ಸು ಹಾಳಾಗುತ್ತಿದ್ದರೆ ಉಪ್ಪಿನಿಂದ ಈ ಸಮಸ್ಯೆ ಸರಿ ಪಡಿಸಬಹುದು. ನೀವು ಸ್ನಾನ ಮಾಡುವ ನೀರಿಗೆ ಒಂದು ಚಿಟಿಕೆ ಉಪ್ಪು ಹಾಕಿಕೊಂಡು ಸ್ನಾನ ಮಾಡಿ. ಈ ಉಪ್ಪು ನೀರನ್ನು ಮುಖಕ್ಕೆ ಅಥವಾ ತಲೆಗೆ ಹಾಕಿಕೊಳ್ಳಬೇಡಿ. ಇದರಿಂದ ನಿಮ್ಮ ಯೋಚನೆ(thoughts)ಗಳಲ್ಲಿ ಬದಲಾವಣೆ ಬರುವುದನ್ನು ನೀವೇ ಕಾಣಬಹುದು. 

ಆರೋಗ್ಯ ಲಾಭಕ್ಕಾಗಿ
ಮನೆಯಲ್ಲಿ ಯಾರಾದರೂ ಆರೋಗ್ಯ ಸಮಸ್ಯೆ(health issues)ಯಿಂದ ಬಳಲುತ್ತಿದ್ದರೆ, ಸ್ವಲ್ಪ ಉಪ್ಪನ್ನು ಬಟ್ಟಲಲ್ಲಿ ಹಾಕಿ ಅವರ ಹತ್ತಿರದಲ್ಲಿ ಇಡಿ. ಇದರಿಂದ ಅವರ ಬಳಿ ನೆಗೆಟಿವ್ ಎನರ್ಜಿ ಬರದೆ ಆರೋಗ್ಯದಲ್ಲಿ ಸುಧಾರಣೆಯಾಗುವುದು. 

ದೃಷ್ಟಿ ದೋಷ ತೆಗೆಯಲು
ಕೈಲಿ ಉಪ್ಪನ್ನು ಮುಷ್ಠಿ ಕಟ್ಟಿ ಹಿಡಿದು ವ್ಯಕ್ತಿಯ ಮುಂದೆ ನಿವಾಳಿಸಿದರೆ, ಆ ವ್ಯಕ್ತಿಯ ದೃಷ್ಟಿ ದೋಷ ನಿವಾರಣೆಯಾಗಲಿದೆ.

click me!