Vastu tips: ಏಳು ಕುದುರೆಗಳ ಪೇಂಟಿಂಗ್ ಮನೆಯಲ್ಲಿದ್ರೆ ಗೆಲುವು ನಿಮ್ಮದೇ

By Suvarna News  |  First Published Jan 20, 2022, 3:28 PM IST

ಏಳು ಓಡು ಕುದುರೆಗಳ ಪೇಂಟಿಂಗ್ ಮನೆಯಲ್ಲಿದ್ದರೆ ಎಷ್ಟೆಲ್ಲ ಲಾಭಗಳಿವೆ, ಅದನ್ನು ಎಲ್ಲಿ ಹಾಕಬೇಕು, ಯಾವ ರೀತಿಯ ಚಿತ್ರವಿರಬೇಕು ತಿಳಿಯಿರಿ. 


ಸಾಮಾನ್ಯವಾಗಿ ವಾಸ್ತು ನಂಬುವವರ ಮನೆಯಲ್ಲಿ ಏಳು ಕುದುರೆಗಳ ಪೇಂಟಿಂಗ್ ಇರುವುದನ್ನು ನೀವು ನೋಡಿಯೇ ಇರುತ್ತೀರಿ. ಮನೆಯ ಗೋಡೆಯ ಅಂದ ಹೆಚ್ಚಿಸುವ ಈ ಪೇಂಟಿಂಗ್ ಕೇವಲ ಅಂದ ನೀಡುವುದಲ್ಲ. ವಾಸ್ತುವಿನಲ್ಲೂ ಪ್ರಾಮುಖ್ಯತೆ ಹೊಂದಿದ್ದು, ಮನೆಯ ಸದಸ್ಯರಿಗೆ ಹಲವು ಲಾಭಗಳನ್ನು ನೀಡಲಿದೆ. 

ವ್ಯಕ್ತಿಯು ಉತ್ಸಾಹಿಯಾಗಿದ್ದರೆ, ಆರೋಗ್ಯದಿಂದಿದ್ದರೆ, ಯಾವ ಕೆಲಸಕ್ಕೆ ಬೇಕಿದ್ದರೂ ಹೆಚ್ಚು ಶ್ರಮ ಹಾಕಬಲ್ಲ. ಆಗ ಯಶಸ್ಸು ಅವನಿಗೆ ಒಲಿದೇ ಒಲಿಯುತ್ತದೆ. ಆದರೆ, ಯಶಸ್ಸಿನ ಹಾದಿಗೆ ಆರೋಗ್ಯ ಸಮಸ್ಯೆಗಳು, ಹಣದ ಅಡಚಣೆಗಳು, ಉದಾಸೀನತೆ ಮುಂತಾದವು ಅಡ್ಡಿಯಾಗುತ್ತಲೇ ಇವೆ ಎಂದರೆ ಮನೆಯ ವಾಸ್ತುವಿನಲ್ಲಿ ಯಾವುದೋ ದೋಷ ಇರುವುದು, ನಕಾರಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಿರುವುದೇ ಕಾರಣವಾಗಿರಬಹುದು. ಅಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸಲು ಏಳು ಕುದುರೆಗಳ ಪೇಂಟಿಂಗ್‌ಗೆ ಸಾಧ್ಯವಾಗುತ್ತದೆ.

Tap to resize

Latest Videos

undefined

ಏಳು ಕುದುರೆಗಳು
ಹಿಂದೂ ಧರ್ಮದಲ್ಲಿ ಸಂಖ್ಯೆ 7ಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಇದೊಂದು ಅದೃಷ್ಟ ಸಂಖ್ಯೆಯಾಗಿದೆ. ಮಳೆಬಿಲ್ಲಿಗೆ 7 ಬಣ್ಣಗಳು, ವಧು ವರರು ಏಳು ಹೆಜ್ಜೆ ಇಟ್ಟು ಪ್ರತಿಜ್ಞೆ ಮಾಡುತ್ತಾರೆ, ನಮ್ಮಲ್ಲಿ ಸಪ್ತರ್ಶಿಗಳಿಗೆ ಅತಿ ಮುಖ್ಯವಾದವರು ಎನಿಸಿದ್ದರು.. ಒಟ್ಟಿನಲ್ಲಿ ಸಂಖ್ಯೆ 7ಕ್ಕೆ ಒಳಿತುಗಳ ಜೊತೆ ಸಂಬಂಧವಿದೆ. ಆದರೂ, 7 ಓಡು ಕುದುರೆಗಳ(running horses) ವಿಶೇಷವೇನು ಎಂದು ನೀವು ಯೋಚಿಸುತ್ತಿರಬಹುದು. 

ಪ್ರಾಮುಖ್ಯತೆ(Significance)
ಹಿಂದೂ ಧರ್ಮದಲ್ಲಿ ಸೂರ್ಯದೇವ(Lord Surya)ನು ಏಳು ಕುದುರೆಗಳು ಎಳೆವ ರಥವನ್ನು ವಾಹನವಾಗಿ ಬಳಸುತ್ತಾನೆ ಎಂಬ ನಂಬಿಕೆ ಇದೆ. ಹಾಗಾಗಿ, ಏಳು ಕುದುರೆಗಳು ಬಹಳ ಶುಭವಾಗಿವೆ. ಕುದುರೆಗಳು ಶಕ್ತಿ ಹಾಗೂ ಯಶಸ್ಸಿನ(success) ಸೂಚಕವಾಗಿವೆ. ಹಾಗಾಗಿ, ಈ ಪೇಂಟಿಂಗ್ ವ್ಯಕ್ತಿಯ ಬದುಕಿನಲ್ಲಿ ಯಶಸ್ಸು ಹಾಗೂ ಚೈತನ್ಯವನ್ನು ತರಬಲ್ಲದು. ವಾಸ್ತು ಶಾಸ್ತ್ರದ ಪ್ರಕಾರ, ಈ ಪೇಂಟಿಂಗ್ ಮನೆಯಲ್ಲಿರುವ ಎನರ್ಜಿಯನ್ನು ಬ್ಯಾಲೆನ್ಸ್ ಮಾಡುವುದು. ಏಳು ಕುದುರೆಗಳು ಶಾಂತಿ, ಯಶಸ್ಸು ಹಾಗೂ ಅಭಿವೃದ್ಧಿಯನ್ನು ತರುವುವು. 

ಲಾಭಗಳು(Benefits)
ಓಡುವ ಕುದುರೆಗಳು ವೇಗ(speed)ದ ಪ್ರತೀಕ. ಈ ವೇಗದ ಬದುಕಿನಲ್ಲಿ ಯಶಸ್ಸು ಬೇಕೆಂದರೆ ವೇಗ ಬಹಳ ಮುಖ್ಯವಾಗುತ್ತದೆ. ಈ ಪೇಂಟಿಂಗ್ ಮನೆಯಲ್ಲಿ ಹಾಕುವುದರಿಂದ ಮಾಡುವ ಕೆಲಸಗಳ ವೇಗ ಹೆಚ್ಚಲಿದೆ. 
ಕುದುರೆಗಳು ಯಶಸ್ಸಿನ ಸೂಚಕ ಕೂಡಾ. ಹಾಗಾಗಿ, ಈ ಕುದುರೆಗಳ ಪೇಂಟಿಂಗ್ ಮನೆಯಲ್ಲಿದ್ದರೆ ಯಶಸ್ಸು ನಿಮ್ಮ ಹಾದಿಯಲ್ಲಿ ಬರುತ್ತದೆ. 
ಈ ಪೇಂಟಿಂಗ್ ವ್ಯಕ್ತಿಯ ಬದುಕಿನಲ್ಲಿ ಆರ್ಥಿಕ ಭದ್ರತೆ(financial stability) ತಂದುಕೊಡುತ್ತದೆ. 
ಕುದುರೆಗಳು ಧೈರ್ಯ, ಮುನ್ನುಗ್ಗುವಿಕೆ, ವೇಗ ಹಾಗೂ ತಡೆದು ಕೊಳ್ಳುವ ಶಕ್ತಿಯ ಪ್ರತೀಕ ಕೂಡಾ. ಇವೆಲ್ಲವೂ ನಮ್ಮ ಬದುಕಿನಲ್ಲಿದ್ದರೆ ಸಂಪತ್ತು ಹಾಗೂ ಯಶಸ್ಸು ದೊರಕಲೇಬೇಕಲ್ಲವೇ?
ಕೇವಲ ಏಳು ಕುದುರೆಗಳಲ್ಲ, ಸೂರ್ಯನ ರಥ ಎಳೆವ ಏಳು ಕುದುರೆಗಳ ಪೇಂಟಿಂಗ್ ಇನ್ನೂ ಹೆಚ್ಚಿನ ಶುಭ ತರಲಿದೆ. 

Zodiac Signs: ನಿಮ್ಮ ಹುಡುಗನಿಗೆ ಸ್ವಲ್ಪವೂ ಸಹಿಸಲಾಗದ ವಿಷಯವಿದು..

ಎಲ್ಲಿ ಹಾಕಬೇಕು?
ಈ ಅದೃಷ್ಟ ತರುವ ಪೇಂಟಿಂಗ್‍‌ನ್ನು ಯಾವಾಗಲೂ ಮನೆಯ ಪೂರ್ವ(East) ಇಲ್ಲವೇ ಉತ್ತರ ದಿಕ್ಕಿನ ಗೋಡೆಯಲ್ಲಿ ಹಾಕಬೇಕು. ಇದರಿಂದ ವೃತ್ತಿಯಲ್ಲಿ ಭಡ್ತಿ ಜೊತೆಗೆ ಸಂಪತ್ತು ಸಿಗಲಿದೆ. ಇದೇ ಪೇಂಟಿಂಗನ್ನು ದಕ್ಷಿಣ ಗೋಡೆಯಲ್ಲಿ ಹಾಕಿದರೆ ಹೆಸರು, ಕೀರ್ತಿ(name and fame) ದೊರೆಯಲಿದೆ. ಯಾವುದಾದರೂ ಕಿಟಕಿಗೆ ಅಭಿಮುಖವಾಗಿ ಅಂದರೆ, ಕುದುರೆಗಳು ಕಿಟಕಿಯ ಹೊರಗೆ ನೋಡುತ್ತಿರುವಂತೆ ಪೇಂಟಿಂಗ್ ನೇತು ಹಾಕಲು ವಾಸ್ತುವಿನಲ್ಲಿ ಸಲಹೆ ಮಾಡಲಾಗುತ್ತದೆ. 

Vastu Tips: ಕನ್ನಡಿಯಿಂದ ಮನೆಯ ಆಸ್ತಿ ಆರೋಗ್ಯ ಹೆಚ್ಚಿಸುವುದು ಹೀಗೆ..

ಗಮನಿಸಬೇಕಾದ ಅಂಶಗಳು
ಎಂದಿಗೂ ಒಂದೇ ಓಡು ಕುದುರೆಯ ಫೋಟೋ ಹಾಕಬೇಡಿ. ಇದು ದುರದೃಷ್ಟ ತರುತ್ತದೆ. 
ಈ ಏಳು ಕುದುರೆಗಳನ್ನು ಹಗ್ಗದಿಂದ ಬಂಧಿಸಿರುವಂತೆ ಇರಕೂಡದು. ಅದು ಅಭಿವೃದ್ಧಿಯನ್ನು ತಡೆಯುತ್ತದೆ. 
ಪೇಂಟಿಂಗ್‌ನಲ್ಲಿ ಏಳೂ ಕುದುರೆಗಳು ನೆಲದಲ್ಲಿ ಓಡುತ್ತಿರಬೇಕು ಹಾಗೂ ಕುದುರೆಯ ಪೂರ್ತಿ ಚಿತ್ರ ಕಾಣುವ ಹಾಗಿರಬೇಕು. 
ಕುದುರೆಗಳ ಮುಖದಲ್ಲಿ ಸಂತೋಷ ಹಾಗೂ ಧೈರ್ಯ ಕಾಣಿಸುತ್ತಿರಬೇಕು. 
ಈ ಚಿತ್ರವನ್ನು ಸ್ಟಡಿ ರೂಂ, ದೇವರ ಕೋಣೆ, ಮಲಗುವ ಕೋಣೆ ಅಥವಾ ಮುಖ್ಯ ದ್ವಾರದ ಮೇಲೆ ಹಾಕಬಾರದು. 
 

click me!