Vastu Tips: ಕನ್ನಡಿಯಿಂದ ಮನೆಯ ಆಸ್ತಿ ಆರೋಗ್ಯ ಹೆಚ್ಚಿಸುವುದು ಹೀಗೆ..

By Suvarna News  |  First Published Jan 19, 2022, 2:44 PM IST

ಕನ್ನಡಿಯು ಕೇವಲ ನಮ್ಮ ಅಂದ ತೋರುವುದಲ್ಲ.. ಅದಕ್ಕೆ ವಾಸ್ತುವಿನಲ್ಲಿ ಪ್ರಾಮುಖ್ಯತೆ ಇದೆ. ಕನ್ನಡಿಯು ವಾಸ್ತು ಪ್ರಕಾರವಾಗಿದ್ದರೆ ಅದರಿಂದ ಹಲವು ಲಾಭಗಳಿವೆ. 


ಕನ್ನಡಿ(mirror)ಯು ಪ್ರತಿ ಮನೆಗೆ ಅತ್ಯಗತ್ಯ. ಅದು ನಮ್ಮನ್ನು ಹೆಚ್ಚು ಅಂದಗೊಳಿಸಲು ನೆರವಾಗುತ್ತದೆ. ಇದಕ್ಕೆ ವಾಸ್ತುವಿನಲ್ಲೂ ಪ್ರಾಮುಖ್ಯತೆ ಇದೆ. ವಾಸ್ತು ಶಾಸ್ತ್ರದ ಪ್ರಕಾರ ಕನ್ನಡಿಯು ಹೇಗಿರಬೇಕು, ಎಲ್ಲಿಡಬೇಕು ಎಂಬುದನ್ನು ಗಮನಿಸಿ ಅಂತೆಯೇ ನಡೆದುಕೊಂಡರೆ ಅದರಿಂದ ಆರೋಗ್ಯ ಹಾಗೂ ಸಂಪತ್ತನ್ನು ಹೆಚ್ಚಿಸಲು ಸಾಧ್ಯವಿದೆ. ಹಾಗಿದ್ದರೆ ಕನ್ನಡಿಯ ವಾಸ್ತು ಹೇಗಿರಬೇಕು ಎಂದು ನೋಡೋಣ. 

ಎಲ್ಲಿಡಬೇಕು?

  • ಕನ್ನಡಿಯು ಮನೆಯಲ್ಲಿ ತಪ್ಪಾದ ಜಾಗದಲ್ಲಿದ್ದರೆ ಅದರಿಂದ ಸಾಕಷ್ಟು ಹಾನಿಯಾಗುತ್ತದೆ. ಕನ್ನಡಿ ಇಡುವಾಗ ಎಲ್ಲಿಯೂ ಎರಡು ಕನ್ನಡಿಗಳನ್ನು ಎದುರಾ ಬದುರಾಗಿ ಇಟ್ಟಿಲ್ಲ ಎಂಬುದನ್ನು ಗಮನಿಸಬೇಕು. ಇದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. 
  • ಅಷ್ಟೇ ಅಲ್ಲದೆ, ಕನ್ನಡಿಯನ್ನು ಯಾವಾಗಲೂ ನೆಲ ಮಟ್ಟದಿಂದ ಕನಿಷ್ಠ 5 ಅಡಿ ಎತ್ತರದಲ್ಲಿ ಇರಿಸಬೇಕು. 
  • ಹಾಸಿಗೆಯ ಪಕ್ಕದಲ್ಲಿ ದೊಡ್ಡ ಡ್ರೆಸ್ಸಿಂಗ್ ಟೇಬಲ್ ಇಡುವುದರಿಂದ ಅದೃಷ್ಟ ಹೆಚ್ಚುತ್ತದೆ. ಆದರೆ, ಮಲಗಿದಾಗ ತಮ್ಮ ದೇಹದ ಯಾವುದೇ ಭಾಗಗಳು ಕಾಣದಂತ ರೀತಿಯಲ್ಲಿ ಕನ್ನಡಿ ಇರಿಸಬೇಕು. 

Latest Videos

undefined

ಕನ್ನಡಿಯ ಆಕಾರ(shape of the mirror)

  • ಯಾವಾಗಲೂ ನಾಲ್ಕು ಚೌಕಟ್ಟನ್ನು ಹೊಂದಿದ ಅಂದರೆ ಚೌಕಾಕಾರ(square) ಇಲ್ಲವೇ ಆಯತಾಕಾರ(rectangle)ದಲ್ಲಿರುವ ಕನ್ನಡಿಯನ್ನೇ ಬಳಸಬೇಕು. ಇವೆರಡೂ ಬಹಳ ಶುಭ ತರಲಿವೆ. ಇವುಗಳಲ್ಲಿಯೇ ವಿವಿಧ ವಿನ್ಯಾಸಗಳಿರುವ ಚೌಕಟ್ಟು ಬಳಸಬಹುದು. 
  • ವೃತ್ತಾಕಾರ ಇಲ್ಲವೇ ಬೇರೆ ವಿಶೇಷ ಆಕಾರ ಹೊಂದಿದ ಕನ್ನಡಿ ನೋಡಲು ಚೆನ್ನಾಗಿದೆ ಎಂದುಕೊಂಡು ಕೊಳ್ಳಬಾರದು. ಅದು ಅಶುಭವಾಗಿದೆ. 
  • ವಾಸ್ತುವು ಕನ್ನಡಿಯ ಗಾತ್ರದ ಬಗ್ಗೆ ಎಲ್ಲಿಯೂ ಹೇಳುವುದಿಲ್ಲ. ಗಾತ್ರ(size)ವನ್ನು ನಿಮ್ಮ ಅಗತ್ಯಕ್ಕೆ ಸರಿಯಾಗಿ ಆಯ್ಕೆ ಮಾಡಿಕೊಳ್ಳಬಹುದು. 

    Children And Zodiacs: ರಾಶಿ ಪ್ರಕಾರ ನಿಮ್ಮ ಮಗುವಿನ ಅಗತ್ಯಗಳೇನು ತಿಳಿಯಿರಿ

ಪ್ರತಿಬಿಂಬ(reflection)

  • ಮನೆಯ ಕಿಟಕಿ ಹೊರಗೆ ಒಳ್ಳೆಯ ಪರಿಸರ ಇದ್ದರೆ, ಇಲ್ಲವೇ ಗೋಡೆಯ ಮೇಲೆ ಚೆಂದದ ಪಟ ಹಾಕಿದ್ದರೆ ಅದರ ಪ್ರತಿಬಿಂಬ ಕನ್ನಡಿಯಲ್ಲಿ ಕಾಣುವಂಥ ಸ್ಥಳದಲ್ಲಿ ಕನ್ನಡಿ ಹಾಕಿದರೆ ಒಳಿತು. ಇದರಿಂದ ನೋಡಿದವರಲ್ಲಿ ಧನಾತ್ಮಕ ಶಕ್ತಿ ಸಂಚಯವಾಗುವುದು. 
  • ಹಾಗೆಯೇ, ಮನೆಯ ಸುತ್ತ ಕೊಳಕು ಪರಿಸರವಿದ್ದರೆ, ಚರಂಡಿಯೋ ಮತ್ತೇನೋ ಬೋಳು ಮರವೋ ಇದ್ದರೆ ಅದು ಪ್ರತಿಬಿಂಬದಲ್ಲಿ ಕಾಣದಂತೆ ಕನ್ನಡಿ ಹಾಕಬೇಕು. ಏಕೆಂದರೆ, ಕನ್ನಡಿಯು ಆ ಪ್ರತಿಬಿಂಬದ ನೆಗೆಟಿವ್ ವೈಬ್ಸ್ ಎಳೆದುಕೊಂಡು ಬಿಡಬಹುದು. 
  • ಮನೆಯ ಮುಖ್ಯ ದ್ವಾರಕ್ಕೆ ಕಾಣಿಸುವ ಹಾಗೆ ಯಾವುದೇ ಕನ್ನಡಿ ಅಥವಾ ಗಾಜನ್ನು ಹಾಕಬಾರದು. 
  • ಕನ್ನಡಿಯು ಕೇವಲ ಪ್ರತಿಬಿಂಬ ತೋರಿಸುವುದಿಲ್ಲ. ಆದರಲ್ಲಿರುವ ವಸ್ತುವಿನ ವೈಬ್ಸ್ ಎಳೆದುಕೊಳ್ಳುತ್ತದೆ. ಹಾಗಾಗಿ, ಕ್ಯಾಶ್ ಲಾಕರ್ ಅಥವಾ ನಿಮ್ಮ ಸಮೃದ್ಧಿಯ ಪ್ರತೀಕವಾದ ಯಾವುದೇ ವಸ್ತುವಿನ ಪ್ರತಿಬಿಂಬ ಬೀಳುವಂತೆ ಅದರ ವಿರುದ್ಧ ದಿಕ್ಕಿನಲ್ಲಿ ಕನ್ನಡಿ ಇರಿಸಿ. ಇದರಿಂದ ಸಂಪತ್ತು ದುಪ್ಪಟ್ಟಾಗಲಿದೆ. 
  • ಕನ್ನಡಿಯನ್ನು ಡೈನಿಂಗ್ ರೂಮಿ(dining room)ನಲ್ಲಿ ಇರಿಸುವುದರಿಂದ ಶುಭವಾಗುತ್ತದೆ. ಅದರಲ್ಲೂ ಡೈನಿಂಗ್ ಟೇಬಲ್ ಕಾಣಿಸುವಂತೆ ಇಡುವುದರಿಂದ ಆಹಾರ ಸಮೃದ್ಧಿ, ಆರೋಗ್ಯ ದುಪ್ಪಟ್ಟಾಗಲಿದೆ. ಇಲ್ಲಿ ಕನ್ನಡಿಯಲ್ಲದೆ ಗಾಜಿನ ಗೋಡೆಯನ್ನೂ ಅಲಂಕಾರಿಕವಾಗಿ ಹಾಕಬಹುದು. 
  • ಬಾತ್‌ರೂಮಿನಲ್ಲಿ ಕನ್ನಡಿ ಇರಲೇಬೇಕು. ಸ್ನಾನದ ಕೋಣೆಯ ಉತ್ತರ ಇಲ್ಲವೇ ಪೂರ್ವ ದಿಕ್ಕಿನಲ್ಲಿ ಕನ್ನಡಿ ಇರಬೇಕು. 

    Empathetic Zodiacs: ಈ ನಾಲ್ಕು ರಾಶಿಯ ಸ್ನೇಹಿತರಿದ್ದರೆ ನೀವೇ ಅದೃಷ್ಟವಂತರು!

ಗಮನಿಸಬೇಕಾದ ಮತ್ತಷ್ಟು ವಿಷಯಗಳು

  • ಕನ್ನಡಿಯನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ಪ್ರತಿಬಿಂಬವು ಸಂಪೂರ್ಣ ಶುದ್ಧವಾಗಿರಬೇಕು. ಕೇವಲ ಕನ್ನಡಿಯಲ್ಲ, ಪ್ರತಿಬಿಂಬ ತೋರುವಂಥ ಯಾವುದೇ ಮೇಲ್ಮೈ ಇದ್ದರೂ ಅದು ಸ್ವಚ್ಛವಾಗಿರಬೇಕು. 
  • ಪಾರದರ್ಶಕ ಬಾಗಿಲುಗಳು(transparent glass doors) ಹಾಗೂ ಕಿಟಕಿಗಳನ್ನು ಬಳಸದಿರುವುದು ಉತ್ತಮ. 
  • ಸ್ಟಡಿ ಟೇಬಲ್ ಬಳಿ ಕನ್ನಡಿ ಇರಿಸಕೂಡದು. ಇದರಿಂದ ಮಕ್ಕಳ ಏಕಾಗ್ರತೆ ತಪ್ಪುತ್ತದೆ. 
  • ಮನೆಯಲ್ಲಿ ಕನ್ನಡಿಯನ್ನು ಯಾವಾಗಲೂ ಉತ್ತರ ಇಲ್ಲವೇ ಈಶಾನ್ಯ ದಿಕ್ಕಿನಲ್ಲಿ ಕನ್ನಡಿ ಇರಿಸಬೇಕು. 
click me!