Vastu Shastra : ಈ ವಸ್ತುಗಳನ್ನು ನೆಲದ ಮೇಲಿಟ್ಟು ಆರ್ಥಿಕ ಸಂಕಷ್ಟ ತಂದ್ಕೊಳ್ಬೇಡಿ

By Suvarna News  |  First Published Feb 7, 2022, 5:26 PM IST

ಐಷಾರಾಮಿ ಬದುಕನ್ನು ಎಲ್ಲರೂ ಬಯಸ್ತಾರೆ. ಕೆಲವೊಮ್ಮೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ. ಅದಕ್ಕೆ ನಾವು ಮಾಡಿದ ಕೆಲ ಎಡವಟ್ಟುಗಳು ಕಾರಣವಾಗಿರುತ್ತದೆ. ಸದಾ ಆರ್ಥಿಕ ವೃದ್ಧಿಯಾಗ್ಬೇಕೆಂದ್ರೆ ತಪ್ಪಿನಿಂದ ದೂರವಿರಬೇಕು. 
 


ತಪ್ಪು (Wrong) ತಪ್ಪೇ. ತಿಳಿದು ಮಾಡಿದ್ರೂ,ತಿಳಿಯದೆ ಮಾಡಿದ್ರೂ ಅದರ ಫಲವನ್ನು ನಾವು ಅನುಭವಿಸಬೇಕಾಗುತ್ತದೆ. ಕೆಲವೊಂದು ತಪ್ಪುಗಳನ್ನು ಮಾಡುವುದರಿಂದ ಮನೆಯ ಶಾಂತಿ(Peace )ಕದಡುವುದು ಮಾತ್ರವಲ್ಲದೆ ಆರ್ಥಿಕ ನಷ್ಟ (Financial Loss) ಉಂಟಾಗುತ್ತದೆ. ವಾಸ್ತು ಪ್ರಕಾರ, ಜನರು ಅನೇಕ ಬಾರಿ ಬೆಲೆಬಾಳುವ ವಸ್ತುಗಳನ್ನು ಯೋಚಿಸದೆ ನೆಲ(Ground)ದ ಮೇಲೆ ಇಡುತ್ತಾರೆ. ಇದರಿಂದಾಗಿ ನಿರಂತರ ಆರ್ಥಿಕ ನಷ್ಟ ಮತ್ತು ಶಾಂತಿಯ ಕೊರತೆ ಎದುರಾಗುತ್ತದೆ. ಇಂದು ನಾವು ಆರ್ಥಿಕ ನಷ್ಟಕ್ಕೆ ಕಾರಣವಾಗುವ ಕೆಲವು ವಿಷ್ಯಗಳನ್ನು ಹೇಳ್ತೆವೆ. ಯಾವ ವಸ್ತುಗಳನ್ನು ನೆಲದ ಮೇಲಿಟ್ಟರೆ ಅನಾನುಕೂಲ ಎಂಬುದನ್ನು ಹೇಳ್ತೇವೆ. 

ಅಪ್ಪಿತಪ್ಪಿಯೂ ಈ ವಸ್ತುಗಳನ್ನು ನೆಲದ ಮೇಲಿಡಬೇಡಿ

Latest Videos

undefined

ಶಿವಲಿಂಗ : ಶಿವಲಿಂಗವನ್ನು ಶಿವನ ಸಂಕೇತವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ, ಶಿವನು ಇಡೀ ಬ್ರಹ್ಮಾಂಡದ ಶಕ್ತಿಯನ್ನು ಹೊಂದಿದ್ದಾನೆ. ಆದರೆ ಶಿವಲಿಂಗವನ್ನು ನೆಲದ ಮೇಲೆ ಇಡಬಾರದು. ಇದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಪೂಜಾ ಸ್ಥಳದಲ್ಲಿಯೂ ಯಾವಾಗಲೂ ಶಿವಲಿಂಗವನ್ನು ಶುದ್ಧ ಸ್ಥಳದಲ್ಲಿ  ಸ್ಥಾಪಿಸಬೇಕು.

ಪೂಜೆ ದೀಪ : ಪೂಜೆಯ ಸಮಯದಲ್ಲಿ ಮನೆಯಲ್ಲಿ ದೀಪವನ್ನು ಹಚ್ಚುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ದೀಪದಿಂದ ಹೊರಹೊಮ್ಮುವ ಬೆಳಕು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವೇಶಿಸಲು ಕಾರಣವಾಗುತ್ತದೆ.  ಪೂಜೆಯ ದೀಪವನ್ನು ಎಂದಿಗೂ ನೆಲದ ಮೇಲೆ ಇಡಬಾರದು. ದೇವಸ್ಥಾನದಲ್ಲಿ ದೀಪವನ್ನು ಯಾವಾಗಲೂ ತಟ್ಟೆಯಲ್ಲಿ ಅಥವಾ ಲ್ಯಾಂಪ್ ಸ್ಟ್ಯಾಂಡ್‌ನಲ್ಲಿ ಇರಿಸಬೇಕು.

ಸಾಲಿಗ್ರಾಮ : ಸಾಲಿಗ್ರಾಮವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯವೆಂದು ಪರಿಗಣಿಸಲಾಗಿದೆ. ಸಾಲಿಗ್ರಾಮವನ್ನು ಮನೆಯಲ್ಲಿ ಸ್ಥಾಪನೆ ಮಾಡಿದ್ರೆ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸಿರುತ್ತದೆ. ಆದ್ರೆ ನೆಲದ ಮೇಲೆ ಇಡುವುದರಿಂದ ಧನಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ದೇವರ ಮನೆಯನ್ನು ಸ್ವಚ್ಛಗೊಳಿಸುವಾಗ್ಲೂ ಸಾಲಿಗ್ರಾಮವನ್ನು ನೆಲದ ಮೇಲೆ ಇಡಬಾರದು. 

ದೇವರ ವಿಗ್ರಹ : ಸಾಮಾನ್ಯವಾಗಿ ದೇವರ ವಿಗ್ರಹ ಅಥವಾ ದೇವರ ಪೀಠವನ್ನು ಶುಚಿಗೊಳಿಸುವಾಗ ದೇವರ ವಿಗ್ರಹವನ್ನು ನೆಲದ ಮೇಲೆ ಇಡುತ್ತಾರೆ. ಆದರೆ ಹಾಗೆ ಮಾಡುವುದು ತಪ್ಪು. ದೇವರ ವಿಗ್ರಹವನ್ನು ನೆಲದ ಮೇಲೆ ಇಡಬಾರದು. ದೇವರ ವಿಗ್ರಹವನ್ನು ನೆಲದ ಮೇಲೆ ಇಡುವುದರಿಂದ ದೇವರಿಗೆ ಅವಮಾನವಾಗುತ್ತದೆ ಮತ್ತು ಮನೆಯ ಶಾಂತಿ ಕದಡುತ್ತದೆ ಎಂದು ನಂಬಲಾಗಿದೆ. ದೇವರನ್ನು ಹಾಗೂ ದೇವರ ಪೀಠವನ್ನು ಶುಚಿಗೊಳಿಸುವಾಗ, ವಿಗ್ರಹವನ್ನು ಬಟ್ಟೆ ಅಥವಾ ತಟ್ಟೆಯಲ್ಲಿ ಇರಿಸಬೇಕು. 

ಚಿನ್ನ ಅಥವಾ ಚಿನ್ನದ ಆಭರಣ : ಧಾರ್ಮಿಕ ನಂಬಿಕೆಯ ಪ್ರಕಾರ, ಚಿನ್ನವು ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ. ಏಕೆಂದರೆ ಇದನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಚಿನ್ನ ಅಥವಾ ಚಿನ್ನದ ಆಭರಣಗಳನ್ನು ನೆಲದ ಮೇಲೆ ಇಡಬೇಡಿ. ಇದು ವಿಷ್ಣು ಸೇರಿದಂತೆ ಎಲ್ಲ ದೇವತೆಗಳಿಗೂ ಅವಮಾನ ಮಾಡಿದಂತಾಗುತ್ತದೆ. ಚಿನ್ನದ ಆಭರಣಗಳನ್ನು ಸಹ ಕಾಲಿಗೆ ಧರಿಸಬಾರದು. ಚಿನ್ನದ ಆಭರಣಗಳನ್ನು ಯಾವಾಗಲೂ ಬಟ್ಟೆಯಲ್ಲಿ ಸುತ್ತಿ ಸುರಕ್ಷಿತ ಸ್ಥಳದಲ್ಲಿ ಇಡಬೇಕು. 

ಶಂಖ : ಸತ್ಯನಾರಾಯಣನ ಕಥೆಯಿಂದ ಜನ್ಮಾಷ್ಟಮಿಯ ಕೃಷ್ಣನ ಸ್ನಾನದವರೆಗೆ ಶಂಖಕ್ಕೆ ವಿಶೇಷ ಮಹತ್ವವಿದೆ. ಆದರೆ ಅದನ್ನು ಯಾವಾಗಲೂ ಪೂಜಾ ಸ್ಥಳದಲ್ಲಿ ಸ್ಥಾಪಿಸಬೇಕು. ಇದನ್ನು ನೆಲದ ಮೇಲೆ ಇಡುವುದರಿಂದ ಮನೆಯ ನೆಮ್ಮದಿ ಕದಡುತ್ತದೆ. ಆರ್ಥಿಕ ನಷ್ಟಕ್ಕೆ ಇದು ಕಾರಣವಾಗುತ್ತದೆ. ಹಾಗಾಗಿ ಶಂಖವನ್ನು ನೆಲದ ಮೇಲೆ ಇಡಬಾರದು. 

Guidelines For Men: ಧರ್ಮ ಶಾಸ್ತ್ರದ ಪ್ರಕಾರ, ಉತ್ತಮ ಪತಿಯಾದವನ ಆರು ಗುಣಗಳಿವು

ಪ್ರಸಾದ,ಕುಂಕುಮ : ದೇವರ ಪ್ರಸಾದ ಹಾಗೂ ಕುಂಕುಮವನ್ನು ಕೂಡ ನೆಲದ ಮೇಲೆ ಇಡಬಾರದು. ಕುಂಕುಮ ನೆಲದ ಮೇಲಿಟ್ಟಾಗ ಅದರ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ಇವುಗಳನ್ನು ಸದಾ ನೆಲದಿಂದ ಮೇಲೆ ಇಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.

Tulsi plant Vastu: ತುಳಸಿಯಿಂದ ಸಂತೋಷ ಮನೆಗೆ ತರಲು ಹೀಗ್ಮಾಡಿ

ರತ್ನ : ವಿವಿಧ ರೀತಿಯ ಅನೇಕ ರತ್ನಗಳು ನೋಡಲು ಸುಂದರವಾಗಿರುತ್ತವೆ. ಅದನ್ನು ಧರಿಸುವ ಮೊದಲು ಅವುಗಳನ್ನು ದೇವರ ಮನೆಯಲ್ಲಿಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ರೆ ರತ್ನಗಳನ್ನು ನೆಲದ ಮೇಲೆ ಇಡುವುದರಿಂದ ಅವುಗಳ ಪ್ರಭಾವ ಕಡಿಮೆಯಾಗುತ್ತದೆ. ಆದ್ದರಿಂದ ಯಾವಾಗಲೂ ರತ್ನವನ್ನು ಪಾತ್ರೆ ಅಥವಾ ಬಟ್ಟೆಯ ಮೇಲೆ ಇಡಬೇಕು. 

click me!