ಮನೆ ಎಷ್ಟು ದೊಡ್ಡದಿದ್ರೂ ಸಾಲೋದಿಲ್ಲ. ಕಂಡಕಂಡಲ್ಲಿ ವಸ್ತುಗಳನ್ನು ಇಟ್ಟಿರ್ತೇವೆ. ಅದ್ರಲ್ಲಿ ಎಲ್ಲರ ಫೇವರೆಟ್ ಪ್ಲೇಸ್ ಮಂಚದ ಕೆಳಗೆ. ಈ ಜಾಗದಲ್ಲಿ ಏನೇನಿರಲ್ಲ ಹೇಳಿ? ಆದ್ರೆ ಅಲ್ಲಿ ವಸ್ತುಗಳನ್ನಿಡುವ ಮೊದಲು ವಾಸ್ತುಶಾಸ್ತ್ರ ಏನು ಹೇಳುತ್ತೆ ತಿಳಿದುಕೊಳ್ಳಿ.
ನಾವು ಮಾಡುವ ಪ್ರತಿಯೊಂದು ಕೆಲಸ (Work)ವೂ ವಾಸ್ತು (Vastu) ಶಾಸ್ತ್ರದ ಜೊತೆ ಸಂಬಂಧ ಹೊಂದಿದೆ. ಮನೆ (Home), ಕೆಲಸ, ವಸ್ತು(Material ) ಎಲ್ಲವೂ ವಾಸ್ತುವನ್ನು ಅವಲಂಬಿಸಿದೆ. ಮನೆ ಹಾಗೂ ವಸ್ತುಗಳನ್ನು ವಾಸ್ತುವಿಗೆ ವಿರುದ್ಧವಾಗಿಟ್ಟರೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ನಾವು ಮಲಗುವ ಕೋಣೆ ಕೂಡ ವಾಸ್ತು ಜೊತೆ ಸಂಬಂಧ ಹೊಂದಿದೆ. ವಾಸ್ತು ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಮಲಗುವ ಹಾಸಿಗೆ ಜೀವನದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಆರೋಗ್ಯ ಮತ್ತು ಮನಸ್ಸಿನ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಸದಾ ಆರೋಗ್ಯ ಹಾಗೂ ಸುಖ ಜೀವನ ಬಯಸುವವರು ಹಾಸಿಗೆಗೆ ಸಂಬಂಧಿಸಿದ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ.
ಸಾಮಾನ್ಯವಾಗಿ ಅನೇಕರು ಮಂಚದ ಕೆಳಗೆ ಸ್ಟೋರೇಜ್ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಅದ್ರಲ್ಲಿ ಅನೇಕ ವಸ್ತುಗಳನ್ನು ಇಡ್ತಾರೆ. ಮಂಚದ ಕೆಳಗೆ ಅಗತ್ಯವಿರುವ, ಅನಗತ್ಯ ಎಲ್ಲ ವಸ್ತುಗಳೂ ಸೇರಿಕೊಂಡಿರುತ್ತವೆ. ಆದ್ರೆ ಕೆಲವು ವಸ್ತುಗಳನ್ನು ಹಾಸಿಗೆಯ ಕೆಳಗೆ ಇಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಏಕೆಂದರೆ ಇದರಿಂದ ಉಂಟಾಗುವ ವಾಸ್ತು ದೋಷಗಳು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಸಿದುಕೊಳ್ಳುತ್ತವೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸುತ್ತವೆ.
ಹಾಸಿಗೆ ಕೆಳಗೆ ಇಡಬೇಡಿ ಈ ವಸ್ತು
ಎಲೆಕ್ಟ್ರಾನಿಕ್ ವಸ್ತುಗಳು : ವಾಸ್ತು ಶಾಸ್ತ್ರದ ಪ್ರಕಾರ, ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಸಿಗೆಯ ಕೆಳಗೆ ಇಡಬಾರದು. ಇದು ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ. ಇದರಿಂದ ಮಾನಸಿಕ ಆರೋಗ್ಯ ಹಾಳಾಗುತ್ತದೆ. ಅನೇಕರಿಗೆ ನಿದ್ರಾಹೀನತೆ ಇದ್ರಿಂದ ಕಾಡುತ್ತದೆ. ಹಾಗಾಗಿ ಮಂಚದ ಕೆಳಗೆ ಎಲೆಕ್ಟ್ರಾನಿಕ್ ವಸ್ತುಗಳನ್ನಿಟ್ಟಿದ್ದರೆ ಇಂದೇ ಅದನ್ನು ಬೇರೆಡೆ ಶಿಫ್ಟ್ ಮಾಡಿ.
ತುಕ್ಕು ಹಿಡಿದ ಕಬ್ಬಿಣ ಮತ್ತು ಪ್ಲಾಸ್ಟಿಕ್ ವಸ್ತುಗಳು: ವಾಸ್ತು ಶಾಸ್ತ್ರದ ಪ್ರಕಾರ, ಯಾವುದೇ ತುಕ್ಕು ಹಿಡಿದ ಕಬ್ಬಿಣದ ವಸ್ತುವನ್ನು ಹಾಸಿಗೆಯ ಕೆಳಗೆ ಇಡಬಾರದು. ಏಕೆಂದರೆ ಅದರಿಂದ ಉಂಟಾಗುವ ವಾಸ್ತು ದೋಷಗಳು ಮನೆಯಲ್ಲಿ ಭಯಾನಕ ಆರ್ಥಿಕ ಬಿಕ್ಕಟ್ಟನ್ನು ತರುತ್ತವೆ. ಇದಲ್ಲದೆ, ಪ್ಲಾಸ್ಟಿಕ್ ವಸ್ತುಗಳನ್ನು ಹಾಸಿಗೆಯ ಕೆಳಗೆ ಇಡುವುದರಿಂದ ವಾಸ್ತು ದೋಷಗಳ ಅಪಾಯವಿದೆ. ಹಾಗಾಗಿ ತುಕ್ಕು ಹಿಡಿದ ವಸ್ತುಗಳನ್ನು ಹಾಸಿಗೆ ಕೆಳಗೆ ಮಾತ್ರವಲ್ಲ ಮನೆಯಲ್ಲಿಯೂ ಇಡಬೇಡಿ.
Parenting Challenge: ರಾಶಿಯ ಅನುಸಾರ, ತಾಯಿಯಾಗಿ ನೀವು ಹೇಗಿರಲಿದ್ದೀರಿ?
ಹರಿದ ಬಟ್ಟೆ : ಜನರು ಹರಿದ ಬಟ್ಟೆಗಳು, ಬೇಡದ ಬಟ್ಟೆಗಳನ್ನು ಕಸಕ್ಕೆ ಹಾಕುವುದು ಅಪರೂಪ. ಒಂದಾನೊಂದು ಸಮಯದಲ್ಲಿ ಅಗತ್ಯಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಹರಿದ, ಬೇಡದ ಬಟ್ಟೆಗಳನ್ನು ಹಾಸಿಗೆಯ ಕೆಳಗೆ ಇಡುತ್ತಾರೆ. ಇದು ವಾಸ್ತು ಪ್ರಕಾರ ಉತ್ತಮ ಕೆಲಸವಲ್ಲ. ಇವು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತವೆ. ಅಷ್ಟೇ ಅಲ್ಲ ಈ ವಾಸ್ತು ದೋಷಗಳು ಮನೆಯ ಸುಖ ಶಾಂತಿಯನ್ನು ಹಾಳು ಮಾಡುತ್ತವೆ. ಹಾಗಾಗಿ ಮಂಚದ ಕೆಳಗೆ ಹರಿದ ಬಟ್ಟೆಗಳನ್ನು ಇಡಬಾರದು.
ಪೊರಕೆ : ಬೆಡ್ ರೂಮಿನಲ್ಲಿ ಒಂದು ಪೊರಕೆ ಇಟ್ಟುಕೊಳ್ಳುವ ಅಭ್ಯಾಸ ಕೆಲವರಿಗಿರುತ್ತದೆ. ಬೆಡ್ ರೂಮ್ ಕ್ಲೀನ್ ಮಾಡಲು ಅದನ್ನು ಬಳಸ್ತಾರೆ. ಆದ್ರೆ ಹಾಸಿಗೆಯ ಕೆಳಗೆ ಪೊರಕೆ ಇಡುವುದು ಕೂಡ ಅಶುಭ. ಹಾಸಿಗೆಯ ಕೆಳಗೆ ಪೊರಕೆ ಇಡುವುದ್ರಿಂದ ಮನಸ್ಸು ಮತ್ತು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆಗೆ ಇದು ಕಾರಣವಾಗುತ್ತದೆ. ಕುಟುಂಬದ ಸದಸ್ಯರು ಸದಾ ಅನಾರೋಗ್ಯಕ್ಕೊಳಗಾಗುವ ಅಪಾಯವಿರುತ್ತದೆ.
ಆಭರಣ, ಗಾಜು, ಪಾದರಕ್ಷೆ ಮತ್ತು ಎಣ್ಣೆ : ಚಿನ್ನ, ಬೆಳ್ಳಿ ಅಥವಾ ಇತರ ಲೋಹಗಳ ಆಭರಣಗಳನ್ನು ಹಾಸಿಗೆಯ ಕೆಳಗೆ ಇಡಬಾರದು. ಹಾಸಿಗೆಯ ಕೆಳಗೆ ಶೂಗಳು ಮತ್ತು ಚಪ್ಪಲಿಗಳನ್ನು ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಹಾಸಿಗೆಯ ಕೆಳಗೆ ಯಾವುದೇ ರೀತಿಯ ಗಾಜು ಮತ್ತು ಎಣ್ಣೆಯನ್ನು ಇಡಬಾರದು. ಇವು ಕೂಡ ವಾಸ್ತುದೋಷಕ್ಕೆ ಕಾರಣವಾಗುತ್ತವೆ.
MENTAL ILLNESS AND ASTROLOGY: ಡಿಪ್ರೆಶನ್, ಆತ್ಮಹತ್ಯೆಗಳಿಗೆ ಈ ಗ್ರಹಗಳು ಕಾರಣ!
ಖಾಲಿ ಸೂಟ್ಕೇಸ್ : ಖಾಲಿಯಿರುವ ಸೂಟ್ಕೇಸನ್ನು ಮಂಚದ ಕೆಳಗೆ ಇಡುವ ಅಭ್ಯಾಸವನ್ನು ಬಹುತೇಕರು ಹೊಂದಿರುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ ಖಾಲಿ ಸೂಟ್ಕೇಸನ್ನು ಹಾಸಿಗೆ ಕೆಳಗೆ ಇಡಬಾರದು.