ನಾವು ನೀಡುವ ಉಡುಗೊರೆ ಮನೆಯ ಯಶಸ್ಸಿಗೆ ಕಾರಣವಾಗಬೇಕು, ಮನೆಯವರ ಪ್ರಗತಿಗೆ ಪೂರಕವಾಗಿರಬೇಕು ಎಂದಾದರೆ ಕೆಲವು ರೀತಿಯ ವಾಸ್ತುಶಾಸ್ತ್ರೀಯ ವಸ್ತುಗಳನ್ನು ಗಿಫ್ಟ್ ಮಾಡುವುದು ಉಚಿತ.
ಯಾರಿಗಾದರೂ ಉಡುಗೊರೆ ನೀಡುವ ಸಮಯದಲ್ಲಿ ಏನು ನೀಡಬೇಕು ಎನ್ನುವ ಗೊಂದಲವಾಗುತ್ತದೆ. ಸ್ವಲ್ಪ ದೂರದ ಬಂಧುಗಳಾಗಿದ್ದರೆ ಹಣವನ್ನು ನೀಡುವುದು ಸುಲಭದ ವಿಚಾರ. ಆದರೆ, ಸಮೀಪದ ಬಂಧುಗಳಿಗೆ ಹಾಗೆ ಮಾಡುವುದು ಸರಿಯಲ್ಲ. ಬಟ್ಟೆಯನ್ನು ನೀಡಬೇಕು ಎನ್ನುವ ಸಂಪ್ರದಾಯ ಸಾಕಷ್ಟು ಕಡೆ ಇದೆಯಾದರೂ ಎಲ್ಲರೂ ಬಟ್ಟೆ ನೀಡುತ್ತಾರೆ, ಸೀರೆ ಇತ್ಯಾದಿ ಬಟ್ಟೆಯನ್ನು ಎಷ್ಟೆಂದು ಬಳಕೆ ಮಾಡಲು ಸಾಧ್ಯ ಎಂದೆನಿಸುತ್ತದೆ. ಮನೆಗೆ ಬೇಕಾದ ವಸ್ತುಗಳನ್ನು ಅವರನ್ನು ಕೇಳಿಕೊಂಡೇ ನೀಡುವುದು ಸಹ ಉತ್ತಮ. ಆದರೆ, ತೀರ ಸಮೀಪವರ್ತಿಗಳಿಗಾದರೆ ಹಾಗೆ ಮಾಡಬಹುದು. ಎಲ್ಲರನ್ನೂ ಪ್ರಶ್ನಿಸಲು ಸಾಧ್ಯವಿಲ್ಲ ಹೀಗಾಗಿ, ಯಾರಿಗಾದರೂ ಗಿಫ್ಟ್ ಮಾಡುವುದೆಂದರೆ ಬಹುದೊಡ್ಡ ಸಮಸ್ಯೆಯಾಗಿ ಬಿಡುತ್ತದೆ. ಸಾಮಾನ್ಯವಾಗಿ, ನಾವು ಸಮೀಪದ ಬಂಧುಗಳಲ್ಲಿ ಯಾರಿಗಾದರೂ ಉಡುಗೊರೆ ನೀಡುವ ಸಮಯದಲ್ಲಿ ಮನೆಗೆ ಪೂರಕವಾಗುವಂತಹ, ಬಳಕೆಗೆ ದೊರೆಯುವಂತಹ ವಸ್ತುಗಳನ್ನು ನೀಡಬೇಕೆಂದು ಬಯಸುತ್ತೇವೆ. ಜತೆಗೆ, ಮನೆಯ ಅಭಿವೃದ್ಧಿಗೆ ನೆರವಾಗಬೇಕು ಎನ್ನುವ ಭಾವನೆಯಲ್ಲಿ ದೇವರ ಮೂರ್ತಿಯನ್ನೋ, ದೀಪದ ಸ್ತಂಭಗಳನ್ನೋ ಗಿಫ್ಟ್ ಮಾಡುವುದು ಸಾಮಾನ್ಯ. ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ರೀತಿಯ ವಸ್ತುಗಳು ಉಡುಗೊರೆ ನೀಡಲು ಭಾರೀ ಯೋಗ್ಯವಾಗಿರುತ್ತದೆ. ಅವುಗಳನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿ, ಮನೆಯ ಏಳಿಗೆಗೆ ಪೂರಕವಾಗುತ್ತದೆ.
• ಹಿತ್ತಾಳೆಯ ಗಣೇಶಮೂರ್ತಿ (Brass Ganesha Idol)
ಹಿತ್ತಾಳೆಯ ಗಣೇಶಮೂರ್ತಿಯನ್ನು ಮನೆಯ ಪ್ರವೇಶ ದ್ವಾರದ (Entrance) ಬಳಿ ಇಡುವುದರಿಂದ ಮನೆಗೆ ಧನಾತ್ಮಕ ಶಕ್ತಿಯ (Positive Energy) ಪ್ರವೇಶವಾಗುತ್ತದೆ. ಎಲ್ಲ ರೀತಿಯ ಅಡೆತಡೆಗಳೂ ನಿವಾರಣೆಯಾಗುತ್ತವೆ.
undefined
ರಸ್ತೆಯಲ್ಲಿ ಇದ್ದಕ್ಕಿದ್ದಂತೆ ಹಣ ಸಿಕ್ಕರೆ ಏನರ್ಥ ಗೊತ್ತಾ?
ವಿಘ್ನ ನಿವಾರಕನಾಗಿರುವ ಗಣೇಶ, ಬುದ್ಧಿವಂತಿಕೆಯ ದೇವತೆಯೂ ಆಗಿದ್ದು, ಅದೃಷ್ಟವನ್ನು ತರುತ್ತಾನೆ. ಹಿತ್ತಾಳೆಯ ಗಣೇಶ ಮೂರ್ತಿ ಮನೆಗೆ ಸೊಗಸನ್ನು (Elegant) ನೀಡುವುದಷ್ಟೇ ಅಲ್ಲ, ಮನೆಗೆ ಶಕ್ತಿಯುತ ವಾಸ್ತು (Vaastu) ಪರಿಹಾರವನ್ನೂ ನೀಡುತ್ತದೆ. ಹೀಗಾಗಿ, ಗಣೇಶ ಮೂರ್ತಿಯನ್ನು ಮನೆಯ ಬಾಗಿಲಿಗೆ ಎದುರಾಗಿರುವಂತೆ ಇಟ್ಟುಕೊಳ್ಳಬೇಕು. ನೀವು ಸಮೀಪದ ಬಂಧುಗಳಿಗೆ ನೀಡಲು ಇದು ಅತ್ಯುತ್ತಮ ವಾಸ್ತುಶಾಸ್ತ್ರೀಯವಾದ ಉಡುಗೊರೆಯಾಗಿದೆ.
• ಸ್ಫಟಿಕದ (Crystal) ಕಮಲದ ಹೂವು
ಸ್ಫಟಿಕವು ಹೀಲಿಂಗ್ ಮತ್ತು ಧನಾತ್ಮಕ ವೈಬ್ರೇಷನ್ (Vibration) ನೊಂದಿಗೆ ನಿಕಟ ಸಂಬಂಧ ಹೊಂದಿರುವ ಹರಳಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಸ್ಫಟಿಕವು ಮನೆಯ ಆಧ್ಯಾತ್ಮಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಮನೆಯಲ್ಲಿ ಸಾಮರಸ್ಯದ (Harmony) ವಾತಾವರಣ ಮೂಡಿಸುತ್ತದೆ. ಮನೆಯ ಲಿವಿಂಗ್ ರೂಮಿನ ಈಶಾನ್ಯದ ಮೂಲೆ ಅಥವಾ ಧ್ಯಾನದ ಸ್ಥಳದಲ್ಲಿ ಸ್ಫಟಿಕದ ಕಮಲದ ಹೂವನ್ನು (Lotus Flower) ಇಟ್ಟುಕೊಳ್ಳುವುದರಿಂದ ಪಾಸಿಟಿವ್ (Positive) ಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಶಾಂತಿ ಹೆಚ್ಚುತ್ತದೆ.
ಮನೆಯ ಮುಖ್ಯ ದ್ವಾರದಲ್ಲಿ ನಿಮ್ಮ ಹೆಸರನ್ನು ಬರೆಸೋದ್ರಿಂದ ಕೆಟ್ಟದಾಗುತ್ತಂತೆ !
• ವಾಸ್ತು ಯಂತ್ರ (Vastu Yantra)
ವಾಸ್ತು ಯಂತ್ರವು ಜ್ಯಾಮಿತೀಯ ಡಯಾಗ್ರಾಮ್ ಆಗಿದ್ದು, ಕಾಸ್ಮಿಕ್ ಎನರ್ಜಿ (Cosmic Energy) ಮತ್ತು ನಮ್ಮ ವಾಸಸ್ಥಳದ ಎನರ್ಜಿಗಳೊಂದಿಗೆ ಸಾಮರಸ್ಯ ಏರ್ಪಡಿಸುತ್ತದೆ. ಇದು ಯಾವುದಾದರೂ ವಾಸ್ತು ದೋಷವನ್ನು ಪರಿಹರಿಸುವಲ್ಲಿ ಶಕ್ತಿಯುತ ಸಾಧನವಾಗಿದೆ. ಮನೆಯ ಪ್ರಗತಿಗೆ ಕಾರಣವಾಗುತ್ತದೆ. ವಾಸ್ತು ಯಂತ್ರವನ್ನು ಮನೆಯ ಉತ್ತರ, ಪೂರ್ವ ದಿಕ್ಕಿನ ಗೋಡೆಗೆ ನೇತು ಹಾಕುವುದರಿಂದ ಹಣಕಾಸು ಸ್ಥಿತಿ ಉತ್ತಮವಾಗುತ್ತದೆ. ಮನೆಜನರ ಒಟ್ಟಾರೆ ಯಶಸ್ಸು (Success) ಸಾಧ್ಯವಾಗುತ್ತದೆ. ಮನೆಯೊಳಗಿನ ಶಕ್ತಿ ಹಾಗೂ ಬ್ರಹ್ಮಾಂಡದ ಶಕ್ತಿಯ ಸಮತೋಲಿತ ಪ್ರಭಾವ ನಮ್ಮ ಮೇಲೆ ಉಂಟಾಗಿ ಗರಿಷ್ಠ ಧನಾತ್ಮಕ ಪ್ರಭಾವ ಹೆಚ್ಚುತ್ತದೆ. ಇದನ್ನು ಸಹ ಉಡುಗೊರೆಯಾಗಿ ನೀಡಬಹುದು.