ಮನೆಯಲ್ಲಿ ಉತ್ತಮ ವಾತಾವರಣ ಇರಬೇಕು, ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕು, ಸಿರಿಸಂಪತ್ತು ಹೆಚ್ಚಬೇಕು, ಎಲ್ಲರ ಪ್ರಗತಿಯಾಗಬೇಕು ಎನ್ನುವುದು ನಮ್ಮೆಲ್ಲರ ಆಶಯ. ಅದಕ್ಕೆ ವಾತಾವರಣದಲ್ಲಿರುವ ಎನರ್ಜಿ ಅಥವಾ ಧನಾತ್ಮಕ ಶಕ್ತಿಯ ಸಹಾಯವೂ ಬೇಕು. ಇದನ್ನು ಹೆಚ್ಚಿಸಲು ಫೆಂಗ್ ಶೂಯಿ ಉತ್ತಮ ವಿಧಾನ.
ಮನೆ, ನಮ್ಮೆಲ್ಲ ಪಾಲಿನ ದೇವಾಲಯ. ಮನೆಯವರೆಲ್ಲರೂ ಸೇರಿ ಪ್ರೀತಿಯಿಂದ, ಖುಷಿಯಿಂದ ಬದುಕಬೇಕಾದ ಜಾಗ. ಮನೆಗೆ ಬರುವುದೊಂದು ದೊಡ್ಡ ನಿರುಮ್ಮುಳ. ಎಂಥ ಸಮಯದಲ್ಲೂ ಮನೆಗೆ ಕಾಲಿಟ್ಟಾಕ್ಷಣ ಆರಾಮದಾಯಕ ಅನುಭವ ನಮ್ಮದಾಗುತ್ತದೆ. ಗಲಾಟೆ, ವೈಮನಸ್ಯ, ಗದ್ದಲಗಳಿಂದ ಕೂಡಿರುವ ಮನೆ ಹಿತವೆನಿಸುವುದಿಲ್ಲ. ಹೀಗಾಗಿ, ಮನೆಯಲ್ಲಿ ಉತ್ತಮ ವಾತಾವರಣ ಇರಬೇಕಾದುದು ಅತ್ಯಂತ ಅಗತ್ಯ. ಮನೆಯಲ್ಲಿ ಹೆಚ್ಚು ಧನಾತ್ಮಕ ಎನರ್ಜಿ ಪ್ರವೇಶಿಸಬೇಕು ಎಂದರೆ ವಾಸ್ತು ಶಾಸ್ತ್ರದ ಹಲವು ಅಂಶಗಳನ್ನು ಪಾಲಿಸುವುದು ಉತ್ತಮ. ಚೀನಾದ ವಾಸ್ತು ಕಲೆಯಾಗಿರುವ ಫೆಂಗ್ ಶೂಯಿ ಈ ನಿಟ್ಟಿನಲ್ಲಿ ಹಲವು ಮಾರ್ಗೋಪಾಯಗಳನ್ನು ತಿಳಿಸುತ್ತದೆ. ಫೆಂಗ್ ಶುಯಿ ತಿಳಿಸುವ ಅಂಶಗಳನ್ನು ಅನುಸರಿಸಿದರೆ ಮನೆಯಲ್ಲಿ ಹಾರ್ದಿಕ, ಸೌಹಾರ್ದದ ವಾತಾವರಣ ಮೂಡುತ್ತದೆ. ಮನೆಯೊಳಗೆ ಕಾಲಿಟ್ಟಾಕ್ಷಣ ಸುಂದರವಾದ, ಹಿತವಾದ ಅನುಭೂತಿ ಉಂಟಾಗುತ್ತದೆ. ಮನೆಯಲ್ಲಿ ಧನಾತ್ಮಕ ವೈಬ್ರೇಷನ್ ಹೆಚ್ಚಾಗಿ ಅದೃಷ್ಟ ನಿಮ್ಮದಾಗುತ್ತದೆ.
• ಗಾಳಿ ಗಂಟೆ (Wind Chimes)
ಗಾಳಿಯಲ್ಲಿ ತೇಲಾಡುವ ಪುಟ್ಟ ಪುಟ್ಟ ಗಂಟೆಗಳು ಅಥವಾ ಗಂಟೆಯಂತೆ ನಾದ ಹೊರಡಿಸುವ ವಸ್ತುಗಳು ಕೇವಲ ಅಲಂಕಾರಕ್ಕಲ್ಲ. ಬಾಗಿಲ (Door) ಎದುರು ಅವುಗಳನ್ನು ತೂಗು ಹಾಕುವುದರಿಂದ ಮನೆಯೊಳಗೆ ಧನಾತ್ಮಕ ಹರಿವು (Positive Flow) ಹೆಚ್ಚುತ್ತದೆ. ಮನೆಯನ್ನು ಕಾಯುವ ಕಾವಲುಗಾರನಂತೆ ಇವು ವರ್ತಿಸುತ್ತವೆ ಎನ್ನುತ್ತದೆ ಫೆಂಗ್ ಶೂಯಿ. ನಕಾರಾತ್ಮಕ (Negative) ಎನರ್ಜಿಯನ್ನು (Energy) ತಡೆದು, ಉತ್ತಮ ಶಕ್ತಿಯನ್ನು ಮನೆಯೊಳಗೆ ಆಹ್ವಾನಿಸುತ್ತವೆ. ಮನೆಯ ಪ್ರವೇಶದ್ವಾರದ ಬಲ ಭಾಗದಲ್ಲಿ ಇದನ್ನು ತೂಗುಹಾಕಿದರೆ ಪ್ರಗತಿ (Prosperous) ಹಾಗೂ ಯಶಸ್ಸು ಉಂಟಾಗುತ್ತದೆ.
• ಡ್ರ್ಯಾಗನ್ ಆಮೆ (Dragon Turtle)
ವಾಸ್ತು ಪ್ರಕಾರ, ಮನೆಯ ಉತ್ತರ (North) ಭಾಗವನ್ನು ಸಂಪತ್ತು ಮತ್ತು ಹಣದೊಂದಿಗೆ ಗುರುತಿಸಲಾಗುತ್ತದೆ. ಇದನ್ನು ಇನ್ನಷ್ಟು ವಿಸ್ತರಿಸುವ ಸಲುವಾಗಿ ಮನೆಯ ಉತ್ತರ ದಿಕ್ಕಿನಲ್ಲಿ ಡ್ರ್ಯಾಗನ್ ಆಮೆಯನ್ನು ಇಡಿ. ಈ ಡ್ರ್ಯಾಗನ್ ಆಮೆ ದೀರ್ಘಾಯುಷ್ಯ, ಅದೃಷ್ಟ (Luck), ರಕ್ಷಣೆಯನ್ನು ಹೆಚ್ಚಿಸಿ ಸಿರಿಸಂಪತ್ತನ್ನು ಆಕರ್ಷಿಸುತ್ತದೆ.
• ಅದೃಷ್ಟದ ಬಾಂಬೂ (Bamboo)
ಪುಟ್ಟಪುಟ್ಟ ಬಿದಿರು ಗಿಡಗಳುಳ್ಳ ಗುಚ್ಛವನ್ನು ಅದೃಷ್ಟದ ಬಾಂಬೂ ಎನ್ನಲಾಗುತ್ತದೆ. ಇದನ್ನು ಮನೆಯ ಪೂರ್ವ ಅಥವಾ ಆಗ್ನೇಯ ಭಾಗದಲ್ಲಿ ಇಡುವುದರಿಂದ ಮನೆಯ ಜನರ ಆರೋಗ್ಯ (Health), ಸಂಪತ್ತು, ಸೌಹಾರ್ದತೆ ಹೆಚ್ಚುತ್ತದೆ.
• ನಗುವ ಬುದ್ಧ (Laughing Buddha)
ಲಾಫಿಂಗ್ ಬುದ್ಧನ ಆಕೃತಿ ಎಲ್ಲೆಲ್ಲೂ ಇಡುವುದು ಕಂಡುಬರುತ್ತದೆ. ಹೆಸರೇ ಸೂಚಿಸುವಂತೆ ಇದು ಮನೆಯಲ್ಲಿ ಖುಷಿಯನ್ನು ಹೆಚ್ಚಿಸುತ್ತದೆ. ಮನೆಯ ಜನರೆಲ್ಲರೂ ದಿನದ ಹೆಚ್ಚು ಹೊತ್ತು ಇರುವ ಹಾಲ್ ಅಥವಾ ಲಿವಿಂಗ್ ರೂಮಿನಲ್ಲಿ (Living Room) ಇದನ್ನು ಇಡಬೇಕು. ಇದರಿಂದ ಮನೆಯ ಸದಸ್ಯರ ನಡುವೆ ಸೌಹಾರ್ದತೆ (Harmony) ಹೆಚ್ಚುತ್ತದೆ.
• ಪಿರಾಮಿಡ್ (Pyramid)
ಧನಾತ್ಮಕ ಎನರ್ಜಿಗೂ ಪಿರಾಮಿಡ್ ಗಳಿಗೂ ಸಂಬಂಧವಿದೆ. ಮನೆಯ ಮಧ್ಯಭಾಗದಲ್ಲಿ ಪಿರಾಮಿಡ್ ಅನ್ನು ಇಡುವುದರಿಂದ ಎನರ್ಜಿ ಹರಿವಿನಲ್ಲಿ ಸಮತೋಲನ ಉಂಟಾಗುತ್ತದೆ. ಪಿರಾಮಿಡ್ ಆಕೃತಿ ಸ್ಥಿರತೆ ಮತ್ತು ಅಪಾರ ಶಕ್ತಿಯನ್ನು ಬಿಂಬಿಸುತ್ತದೆ.
• ಕಲ್ಲುಗಳು (Crystals)
ಕಲ್ಲುಗಳಲ್ಲಿ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಗುಣವಿದೆ ಎನ್ನಲಾಗುತ್ತದೆ. ಇವು ಧನಾತ್ಮಕ ಎನರ್ಜಿಯನ್ನು ಹರಡುತ್ತವೆ. ಮನೆಯ ಕೆಲವು ಭಾಗಗಳನ್ನು ಶುದ್ಧಗೊಳಿಸಬೇಕು ಎಂದಾದರೆ, ಕೆಲವು ಮೂಲೆ ಅಥವಾ ಸ್ಥಳದಲ್ಲಿ ಸ್ಫಟಿಕ ಶಿಲೆ, ಗುಲಾಬಿ ಸ್ಫಟಿಕ ಸೇರಿದಂತೆ ಕೆಲವು ರೀತಿಯ ಕಲ್ಲುಗಳನ್ನು ಇರಿಸಬೇಕು. ಆಗ ಅಲ್ಲಿ ಎನರ್ಜಿಯ ಹರಿವಿಗೆ ಅನುಕೂಲವಾಗುತ್ತದೆ.
• ಆಮೆ
ಸಾಮಾನ್ಯ ಆಮೆಯ ಆಕೃತಿಯನ್ನು ಮನೆಯ ಉತ್ತರ ದಿಕ್ಕಿನಲ್ಲಿ ಇಡುವ ಮೂಲಕ ಮನೆಯಲ್ಲಿ ದೃಢತೆ, ವೃತ್ತಿ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಿಕೊಂಡು ಮುಂದೆ ಸಾಗಬಹುದು. ಇದರಿಂದ ಸುರಕ್ಷಿತ ಭಾವನೆ ಹೆಚ್ಚುತ್ತದೆ.
• ಮೀನು ಅಕ್ವೇರಿಯಂ (Aquarium)
ಚೆನ್ನಾಗಿ ಮೆಂಟೇನ್ ಮಾಡಿರುವ ಮೀನು ಅಕ್ವೇರಿಯಂ, ಮನೆಯನ್ನು ಸುಂದರಗೊಳಿಸುವುದಷ್ಟೇ ಅಲ್ಲ, ಮನೆಯಲ್ಲಿ ಸಿರಿಸಂಪತ್ತು ಹೆಚ್ಚಲು ಕಾರಣವಾಗುತ್ತದೆ. ಹಣಕಾಸು ಭದ್ರತೆ (Security) ಹೆಚ್ಚಲು ಇದನ್ನು ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು.