ಮನಸ್ಸು ಯಾವಾಗ್ಲೂ ಚೆನ್ನಾಗಿರ್ಬೇಕು ಅಂದ್ರೆ ಮನೆ ಹೇಗಿರ್ಬೇಕು ಅಂತ ತಿಳಿಸುತ್ತೆ ವಾಸ್ತುಶಾಸ್ತ್ರ

By Suvarna News  |  First Published Dec 19, 2023, 5:40 PM IST

ಮನಸ್ಸು ಅಶಾಂತಿಗೆ ಒಳಗಾಗಿದೆಯಾ? ಎಷ್ಟು ಪ್ರಯತ್ನಿಸಿದರೂ ಆರೋಗ್ಯಪೂರ್ಣ ಮನಸ್ಥಿತಿ ಹೊಂದುವುದು ಕಷ್ಟವಾಗುತ್ತಿದೆಯಾ? ಹಾಗಿದ್ದರೆ, ಭಾರತೀಯ ವಾಸ್ತು ಶಾಸ್ತ್ರ ತಿಳಿಸುವ ಕೆಲವು ಮಾರ್ಗೋಪಾಯಗಳನ್ನು ಅನುಸರಿಸಿ. ಇವುಗಳಿಂದ ನಿಮ್ಮ ಮನಸ್ಥಿತಿ ಮತ್ತು ಆತ್ಮ ಎರಡೂ ಚೈತನ್ಯಭರಿತವಾಗುತ್ತವೆ. 
 


ನಮ್ಮ ಸುತ್ತಲೂ ಹಲವು ರೀತಿಯ ಎನರ್ಜಿಗಳಿವೆ. ಅವು ನಮ್ಮ ಮೇಲೆ ತಮ್ಮದೇ ಆದ ಪ್ರಭಾವ ಹೊಂದಿವೆ. ಭಾರತದ ಪುರಾತನ ವಾಸ್ತು ಶಾಸ್ತ್ರವು ಇಂತಹ ಎನರ್ಜಿಗಳನ್ನು ಉತ್ತಮ ರೀತಿಯಲ್ಲಿ ಪ್ರಭಾವ ಬೀರುವಂತೆ ಮಾಡಲು ಹಲವು ಮಾರ್ಗಗಳನ್ನು ತಿಳಿಸುತ್ತದೆ. ನಾವು ವಾಸಿಸುವ ಸ್ಥಳದಲ್ಲಿ ಇರುವ  ಹೊಂದಾಣಿಕೆ, ವಿನ್ಯಾಸಗಳು ನಮ್ಮ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಆರೋಗ್ಯ, ಹಣಕಾಸು, ಮನೆಯಲ್ಲಿ ಶಾಂತಿ-ನೆಮ್ಮದಿ, ಸಮೃದ್ಧಿಗೆ ಇದರಿಂದ ಕೊಡುಗೆ ದೊರೆಯುತ್ತದೆ. ಹಾಗೆಯೇ, ಆರೋಗ್ಯಪೂರ್ಣ ಮನಸ್ಸು ಹಾಗೂ ಚೈತನ್ಯದಾಯಕ ಆತ್ಮಕ್ಕಾಗಿ ಹಲವು ರೀತಿಯ ಮಾರ್ಗೋಪಾಯಗಳನ್ನು ವಾಸ್ತು ಶಾಸ್ತ್ರ ಸೂಚಿಸಿದೆ. ನಾವು ವಾಸಿಸುವ ಮನೆಯಲ್ಲಿ ನೈಸರ್ಗಿಕ ಮತ್ತು ಕಾಸ್ಮಿಕ್ ಎನರ್ಜಿಗಳೊಂದಿಗೆ ಸೌಹಾರ್ದ ಹೊಂದಾಣಿಕೆ ಉಂಟಾಗುವಂತೆ ಮಾಡಲು ಹಲವು ವಿಧಾನಗಳನ್ನು ತಿಳಿಸಿದೆ. ಭಾರತೀಯ ವಾಸ್ತು ಶಾಸ್ತ್ರ ಮನೆಯಲ್ಲಿನ ವಾತಾವರಣಕ್ಕೆ ಅತ್ಯಂತ ಮಹತ್ವ ನೀಡಿದೆ. ಮನೆಯ ರೂಪುರೇಷೆ ಮತ್ತು ನಾವು ವಸ್ತುಗಳನ್ನು ಇಟ್ಟುಕೊಳ್ಳುವ ವಿಧಾನಗಳು ನಮ್ಮ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತವೆ.  ಉತ್ತಮ ಮನಸ್ಸು, ಮಾನಸಿಕ ಆರೋಗ್ಯ ನಿಮ್ಮದಾಗಬೇಕು ಎಂದಾದರೆ ಈ ಕಾರ್ಯಗಳನ್ನು ಇಂದೇ ಮಾಡಿ.

•    ಕಸಮುಕ್ತ ಮನೆ (Declutter Home)
ಆರೋಗ್ಯಪೂರ್ಣ ಮನಸ್ಥಿತಿ (Healthy Mentality) ಹಾಗೂ ಉತ್ತಮ ಆತ್ಮಕ್ಕಾಗಿ (Good Soul) ಮೊದಲು ಮಾಡಬೇಕಾದ ಕೆಲಸವೆಂದರೆ, ನೀವು ವಾಸಿಸುವ ಸ್ಥಳವನ್ನು ಕಸಮುಕ್ತವನ್ನಾಗಿಸಬೇಕು. ಮನೆಯಲ್ಲಿ ವಸ್ತುಗಳನ್ನು (Things) ನೀಟಾಗಿ ಜೋಡಿಸಬೇಕು.

ಈ ರಾಶಿಯವರು ಹಣದ ವಿಷಯದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ

Tap to resize

Latest Videos

undefined

ಮನೆ ಕಸಮುಕ್ತವಾಗಿದ್ದು, ಚೆಲ್ಲಾಪಿಲ್ಲಿಯಾಗಿಲ್ಲದೇ ಇದ್ದರೆ ಧನಾತ್ಮಕ ಶಕ್ತಿ (Positive) ಹರಿವು ಹೆಚ್ಚುತ್ತದೆ. ಮನಸ್ಸು ಗೊಂದಲಮಯವಾಗುತ್ತದೆ. ಹೀಗಾಗಿ, ಎಲ್ಲಿಂದ ಸ್ವಚ್ಛತಾ ಕಾರ್ಯ ಶುರುಮಾಡಬೇಕು ಎನ್ನುವುದನ್ನು ಗುರುತಿಸಿಕೊಂಡು ಶುರು ಮಾಡಿ. ಅನಗತ್ಯ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಇದರಿಂದ ಮಾನಸಿಕ ಗೊಂದಲ ದೂರವಾಗಿ, ಮನಸ್ಸು ಹಗುರವೆನಿಸುತ್ತದೆ.

•    ಪಂಚಭೂತಗಳ (Five Elements) ಸಮತೋಲನ (Balance)
ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ತತ್ವಗಳನ್ನು ಮನೆಯಲ್ಲಿ ಸಮತೋಲನಗೊಳಿಸಬೇಕು. ಈ ಅಂಶಗಳನ್ನು ಬಿಂಬಿಸುವ ಚಿತ್ರ, ಬಣ್ಣಗಳನ್ನು ಮನೆಯಲ್ಲಿ ಬಳಕೆ ಮಾಡಬಹುದು. ಉದಾಹರಣೆಗೆ, ನೀರು ಹರಿಯುತ್ತಿರುವ ಜಲಪಾತದ (Water Fall) ಚಿತ್ರವನ್ನು ಮನೆಯಲ್ಲಿಡಬೇಕು. ಭೂಮಿಯ ಹಸಿರು ಬಣ್ಣವನ್ನು ಮನೆಯಲ್ಲಿ ಬಳಕೆ ಮಾಡಬೇಕು. ಸೌಹಾರ್ದ ಸಮತೋಲನದಿಂದ ಮನೆಯಲ್ಲಿ ಪವಿತ್ರ ವಾತಾವರಣ ನಿರ್ಮಾಣವಾಗುತ್ತದೆ. ಮನಸ್ಸು ಮತ್ತು ಆತ್ಮಕ್ಕೆ ಉತ್ತಮ ಬೆಂಬಲ ದೊರೆಯುತ್ತದೆ.

•    ಮಲಗುವ ಕೋಣೆಯಲ್ಲಿ 
ಭಾವನಾತ್ಮಕ ಸ್ಥಿರತೆ (Stability) ಮತ್ತು ಉತ್ತಮ ನಿದ್ರೆಗಾಗಿ ಮಲಗುವ ಕೋಣೆಯ ಈಶಾನ್ಯ ದಿಕ್ಕಿಗೆ ತಲೆಹಾಕಿ ಮಲಗುವುದು ಉತ್ತಮ. ಮಲಗುವ ಕೋಣೆ ವಿರಾಮದ ತಾಣವಾಗಿರುವುದರಿಂದ ಇಲ್ಲಿನ ವಾತಾವರಣ ಚೆನ್ನಾಗಿರಬೇಕು. ತೊಲೆಯ ಕೆಳಗೆ, ಮೇಲ್ಭಾಗದಲ್ಲಿ ಇಳಿಜಾರು ಇರುವ ಕಡೆ ಮಲಗಬಾರದು. ಇವುಗಳಿಂದ ನೆಗೆಟಿವ್ ಎನರ್ಜಿ (Negative Energy) ನಿರ್ಮಾಣವಾಗಿರುತ್ತದೆ. 

ಈ ರಾಶಿಯವರಿಗೆ True Love ಸುಲಭವಾಗಿ ಸಿಗುತ್ತಂತೆ...

•    ನೈಸರ್ಗಿಕ ಗಾಳಿ, ಬೆಳಕು
ಮನೆಯಲ್ಲಿ ನೈಸರ್ಗಿಕ ಗಾಳಿ, ಬೆಳಕಿಗೆ ಅವಕಾಶ ಇರಬೇಕು. ಸೂರ್ಯರಶ್ಮಿ ಹಾಗೂ ತಾಜಾ ಗಾಳಿ ಆರೋಗ್ಯಕ್ಕೆ (Health) ಅತಿ ಮುಖ್ಯವಾದ ಅಂಶ. ಕಿಟಕಿಗಳನ್ನು ಸ್ವಚ್ಛವಾಗಿಡಿ. ಧನಾತ್ಮಕ ಎನರ್ಜಿಯ ಹರಿವಿಗೆ ಗಾಳಿ, ಬೆಳಕಿನ ಅಗತ್ಯವಿದೆ. ಇದು ಮನಸ್ಥಿತಿಯನ್ನು ಚೆನ್ನಾಗಿಡುವುದಷ್ಟೇ ಅಲ್ಲ, ದೈಹಿಕ ಆರೋಗ್ಯಕ್ಕೂ ಪೂರಕವಾಗಿದೆ.

•    ಹೀಲಿಂಗ್ ಶಿಲೆಗಳ (Healing Crystals) ಬಳಕೆ
ಮನೆಯಲ್ಲಿ ಪದ್ಮರಾಗ (Amethyst) ಅಥವಾ ಗುಲಾಬಿ ಸ್ಫಟಿಕ ಶಿಲೆಗಳನ್ನು (Rose Quartz) ಇರಿಸುವುದರಿಂದ ಹೆಚ್ಚಿನ ಲಾಭವಿದೆ. ಹೀಲಿಂಗ್ ಗುಣ ಹೊಂದಿರುವ ಕೆಲವು ಜಾತಿಯ ಶಿಲೆಗಳನ್ನು ಬಹಳ ಹಿಂದಿನಿಂದಲೂ ಬಳಕೆ ಮಾಡಲಾಗುತ್ತಿದೆ. ಪದ್ಮರಾಗವನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳುವುದರಿಂದ ಮನಸ್ಸು ಸಮಾಧಾನ ಹೊಂದುತ್ತದೆ. ಗುಲಾಬಿ ಸ್ಫಟಿಕ ಶಿಲೆಯು ಮನೆಯ ಜನರ ನಡುವೆ ಪ್ರೀತಿ ಮತ್ತು ಸೌಹಾರ್ದವನ್ನು ಹೆಚ್ಚಿಸುತ್ತದೆ. 
 

click me!