Vastu Tips: ದಕ್ಷಿಣ ದಿಕ್ಕಿನ ಗುಡ್ ಲಕ್, ನೀವೂ ಟ್ರೈ ಮಾಡಿ

By Suvarna News  |  First Published Jan 8, 2022, 9:22 PM IST

ಒಟ್ಟು ದಿಕ್ಕುಗಳು ಎಷ್ಟು ಎಂದು ಕೇಳಿದರೆ ಅಷ್ಟ ದಿಕ್ಕುಗಳು ಎಂದು ಹೇಳುತ್ತೇವೆ. ಅವುಗಳನ್ನು ವಿವರಿಸಿ ಎಂದರೂ ಹೇಳಿಬಿಡುತ್ತೇವೆ. ಆದರೆ, ಯಶಸ್ಸಿಗೆ ಯಾವ ದಿಕ್ಕು ಬಹಳ ಒಳ್ಳೆಯದು, ಆ ದಿಕ್ಕನ್ನು ಆಯ್ಕೆ ಮಾಡಿಕೊಂಡು ಮನೆಯಲ್ಲಿ ಜೀವನ ನಡೆಸುವುದರಿಂದ ಪ್ರಯೋಜನವೇನು ಎಂದು ಕೇಳಿದರೆ ಹೇಳಲು ತಡಕಾಡುತ್ತೇವೆ. ಆದರೆ, ಈ ನಿಟ್ಟಿನಲ್ಲಿ ದಕ್ಷಿಣ ದಿಕ್ಕು ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈ ದಿಕ್ಕಿನ ಬಗ್ಗೆ ನೋಡೋಣ ಬನ್ನಿ...


ಕೆಲವರಿಗೆ ಜೀವನದಲ್ಲಿ (Life) ಏನೇ ಮಾಡಿದರೂ ಯಶಸ್ಸು (Success)  ಸಿಗುತ್ತಿರುವುದಿಲ್ಲ. ಇದಕ್ಕೆ ಹಲವು ಕಾರಣಗಳು (Reason) ಇರಬಹುದು. ಅದರಲ್ಲಿ ದಿಕ್ಕುಗಳೂ (Direction) ಸಹ ಒಂದು ಕಾರಣ. ಕೆಲವು ದಿಕ್ಕುಗಳು ಏಳ್ಗೆಯನ್ನು (Improvement) ತಡೆಯುತ್ತವೆ. ಆದರೆ, ದಕ್ಷಿಣ ದಿಕ್ಕಿಗೆ (South) ಸಂಬಂಧಿಸಿದ ಕೆಲವು ನಿಯಮಗಳನ್ನು ಪಾಲಿಸಿದರೆ ಸಫಲತೆ ಸಾಧ್ಯವಿದೆ ಎಂದು ವಾಸ್ತುಶಾಸ್ತ್ರ (Vastu) ಹೇಳುತ್ತದೆ. ದಕ್ಷಿಣ ದಿಕ್ಕನ್ನು ಶಕ್ತಿಕೇಂದ್ರ, ಶಯನ ಕೇಂದ್ರ ಮತ್ತು ಶಾಂತಿ ಸ್ಥಾನ ಎಂದು ಕರೆಯಲಾಗುತ್ತದೆ. ದಕ್ಷಿಣ ದಿಕ್ಕು ಯೋಗ (Yoga) ಮತ್ತು ಧ್ಯಾನಗಳಿಗೆ (Meditation) ಉತ್ತಮ ದಿಕ್ಕಾಗಿದೆ. ಹಾಗಾಗಿ ಸಫಲತೆಯನ್ನು ಕಾಣಲು ಈ ದಿಕ್ಕಿನ ಬಗ್ಗೆ ಇರುವ ಕೆಲವು ನಿಯಮ ಮತ್ತು ಪ್ರಾಮುಖ್ಯತೆಗಳ ಬಗ್ಗೆ ತಿಳಿಯೋಣ...

ದಕ್ಷಿಣ ದಿಕ್ಕಿನ ಅಧಿಪತಿ ಯಮರಾಜ ಮತ್ತು ಇದರ ಸ್ವಾಮಿ ಗ್ರಹವು ಮಂಗಳ (Mars) ಗ್ರಹವಾಗಿದೆ. ಈ ದಿಕ್ಕಿನಲ್ಲಿ ಭಾರವಾದ ವಸ್ತುಗಳನ್ನು, ಕಟ್ಟಡಗಳನ್ನು ನಿರ್ಮಾಣ ಮಾಡಬಹುದಾಗಿದೆ. ಈ ದಿಕ್ಕಿನಲ್ಲಿ ಖಾಲಿ ಜಾಗವನ್ನು ಬಿಡುವುದು ಒಳ್ಳೆಯದಲ್ಲ. ವಸ್ತುಗಳಿಂದ ತುಂಬಿಡುವುದು ಉತ್ತಮ. ಮುಖ್ಯ ದ್ವಾರವು ದಕ್ಷಿಣ ದಿಕ್ಕಿಗೆ ಇರುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ. ಆದರೂ ಕೆಲವು ರಾಶಿಯವರಿಗೆ ದಕ್ಷಿಣ ದಿಕ್ಕು ಆಗಿ ಬರುತ್ತದೆ ಎಂದು ಸಹ ಹೇಳಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಸೂರ್ಯನು (Sun) ದಕ್ಷಿಣ ದಿಕ್ಕಿನ ಕಡೆಗೆ ಬರುವಾಗ ಹೆಚ್ಚು ಪ್ರಖರತೆಯನ್ನು ಹೊಂದಿರುತ್ತಾನೆ. ಹಾಗಾಗಿ ದಕ್ಷಿಣ ದಿಕ್ಕನ್ನು ಶಿಖರ ಸ್ಥಾನವೆಂದು ಕರೆಯಲಾಗುತ್ತದೆ. ವ್ಯಕ್ತಿತ್ವದ ಪ್ರಕಾಶ ಜಗತ್ತಿನೆಲ್ಲೆಡೆ ಹರಡಲು ಈ ದಿಕ್ಕು ಹೆಚ್ಚು ಪ್ರಮುಖವಾಗುತ್ತದೆ. 

ಇದನ್ನು ಓದಿ: Friendship Astro: ಯಾವ ರಾಶಿಯವರನ್ನು ಫ್ರೆಂಡ್‌ಶಿಪ್ ಮಾಡಿಕೊಂಡರೆ ಒಳ್ಳೆಯದು?

ದಕ್ಷಿಣ ದಿಕ್ಕಿಗೆ ತಲೆ ಹಾಕಿದರೂ ಅನುಕೂಲ (Sleeping Direction)
ದಕ್ಷಿಣ ದಿಕ್ಕೂ ಸಹ ಅನುಕೂಲಕರವೇ ಆಗಿದ್ದು, ಈ ದಿಕ್ಕಿನಲ್ಲಿ ಆರಾಮವಾಗಿ ತಲೆ ಇಟ್ಟು ಮಲಗಬಹುದು. ಹೀಗೆ ಮಾಡುವುದರಿಂದ ನಕಾರಾತ್ಮಕ (Negativity) ವಿಚಾರಗಳು ತಲೆದೋರುವುದಿಲ್ಲ. ಜೊತೆಗೆ ಅಶಾಂತಿಯ ವಾತಾವರಣವೂ ದೂರವಾಗಲಿದೆ. ಸುಖ-ಶಾಂತಿ ಲಭ್ಯವಾಗುವುದಲ್ಲದೆ, ಸಮೃದ್ಧಿಯಾಗಲಿದೆ. ಅಲ್ಲದೆ, ಹಣದ ಕೊರತೆಯೂ ಕಾಡುವುದಿಲ್ಲ.

ಶಾಸ್ತ್ರದ ಪ್ರಕಾರ ಶಯನಗೃಹ ದಕ್ಷಿಣ ದಿಕ್ಕಿನಲ್ಲಿದ್ದರೆ ಪ್ರಶಸ್ತವೆಂದು ಸಹ ಹೇಳುತ್ತಾರೆ. ಅಷ್ಟೇ ಅಲ್ಲದೆ ಯೋಗಾಸನ ಧ್ಯಾನ ಇತ್ಯಾದಿ ಚಟುವಟಿಕೆಗೆ ದಕ್ಷಿಣ ದಿಕ್ಕು ಹೆಚ್ಚು ಉತ್ತಮವಾಗಿದೆ. ನಿದ್ದೆ ಬಾರದಿರುವುದು, ಮನಸ್ಸಿಗೆ ಶಾಂತಿ ಇಲ್ಲದಿರುವುದು ಮತ್ತು ಮಾನಸಿಕ ಅಸ್ವಸ್ಥತೆ (Mental Stress) ಉಂಟಾದರೆ ಅದಕ್ಕೆ ದಕ್ಷಿಣ ದಿಕ್ಕು ಸಹ ಕಾರಣವಾಗಿರುತ್ತದೆ. ದಕ್ಷಿಣ ದಿಕ್ಕಿನಲ್ಲಿ ಅಸಮತೋಲನವಾಗಿದೆ ಎಂಬ ಅರ್ಥವನ್ನು ಸೂಚಿಸುತ್ತದೆ. ದಕ್ಷಿಣ ದಿಕ್ಕಿನಲ್ಲಿ ನೀಲಿ ಬಣ್ಣದ ಕರ್ಟನ್ (Blue curtain) ಅಥವಾ ಪರದೆಯನ್ನು ಹಾಕಿದಾಗ ಅದು ವಿರೋಧಿ ತತ್ವವಾಗುವ ಕಾರಣ ಆ ದಿಕ್ಕು ಸಮತೋಲನವನ್ನು ಕಳೆದುಕೊಳ್ಳುತ್ತದೆ. ಈ ಕಾರಣದಿಂದ ಸಫಲತೆಯನ್ನು ವಿಳಂಬವಾಗುತ್ತದೆ.  

ದಕ್ಷಿಣ ದಿಕ್ಕಿನ ಗೋಡೆಗೆ ಈ ಬಣ್ಣ (Wall colour)
ಈ ದಿಕ್ಕಿನಲ್ಲಿ ಇರುವ ಗೋಡೆಗೆ ಕೆಂಪು ಬಣ್ಣವನ್ನು ಲೇಪಿಸಬೇಕು. ದಕ್ಷಿಣ ದಿಕ್ಕಿನ ಪ್ರತಿನಿಧಿ ಗ್ರಹ ಮಂಗಳವಾಗಿರುವ ಕಾರಣ ಕೆಂಪು ಬಣ್ಣ ಬಳಿದರೆ ಉತ್ತಮ. ದಕ್ಷಿಣ ದಿಕ್ಕಿನಲ್ಲಿ ಕಿಟಕಿ (Window) ಇದ್ದಿದ್ದೇ ಆದರೆ ಅದನ್ನು ಮುಚ್ಚಿರುವುದು ಉತ್ತಮ. ಅಷ್ಟೇ ಅಲ್ಲದೆ ಅದರ ಮೇಲೆ ಯಾವುದಾದರೂ ದಪ್ಪ ಪರದೆಯನ್ನು ಹಾಕಿಡುವುದರಿಂದ ಸಮಸ್ಯೆಯು ಕಡಿಮೆಯಾಗುತ್ತದೆ. 

ದಕ್ಷಿಣ ದಿಕ್ಕಿನ ಭೂಮಿಯಲ್ಲಿ ಕಟ್ಟಡವನ್ನು ನಿರ್ಮಿಸುವಾಗ (Construction)  ಅಥವಾ ಸೈಟ್ ಕೊಳ್ಳುವಾಗ,  ದಕ್ಷಿಣ ಭಾಗದ ಜಾಗವು ಹೆಚ್ಚು ಎತ್ತರವಾಗಿರುವಂತೆ ನೋಡಿಕೊಳ್ಳಬೇಕು. ದಕ್ಷಿಣ ದಿಕ್ಕಿನಲ್ಲಿ ಎತ್ತರದ ಕೋಣೆಗಳನ್ನು ನಿರ್ಮಿಸುವುದರಿಂದ ಒಳಿತಾಗುತ್ತದೆ. ಇದರಿಂದ ಮನೆಯ ಜನರ ಮೇಲೆ ಯಾವುದೇ ಕೆಟ್ಟ ಪರಿಣಾಮ (Bad Impact) ಬೀರುವುದಿಲ್ಲ. ಎಲ್ಲ ಸದಸ್ಯರ ಆರೋಗ್ಯವು ಉತ್ತಮವಾಗಿರುತ್ತದೆ. ಅಲ್ಲದೆ, ಪದೇ ಪದೇ ರೋಗ ರುಜಿನಗಳ ಬಾದೆ ತಟ್ಟುವುದಿಲ್ಲ. ಅಷ್ಟೇ ಅಲ್ಲದೇ ಮನೆಯು ಸದಾ ಸುಖ ಮತ್ತು ಸಮೃದ್ಧಿಯು ನೆಲೆಸಿರುತ್ತದೆ.

ಇದನ್ನು ಓದಿ: ಈ 4 ರಾಶಿ ಹುಡುಗಿಯರು ರಿಲೇಶನ್ ಶಿಪ್ ನಲ್ಲಿ ಬೆಸ್ಟ್!

ದಕ್ಷಿಣ ದಿಕ್ಕಿನಲ್ಲಿ ಶೌಚಾಲಯವನ್ನು (Toilet) ನಿರ್ಮಾಣ ಮಾಡುವುದು ನಿಷಿದ್ಧವಾಗಿದೆ. ಇದರಿಂದ ಮನೆಯ ಸದಸ್ಯರು ಸಫಲತೆ ಕಾಣುವುದು ಕಷ್ಟಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಸದಾ ಒತ್ತಡಗಳು ಇವರನ್ನು ಕಾಡುತ್ತಿರುತ್ತದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಪ್ರಸಿದ್ಧಿಯನ್ನು ಪಡೆಯಬೇಕೆಂದು ಹಂಬಲಿಸುವವರು ದಕ್ಷಿಣ ದಿಕ್ಕಿಗೆ ಸಂಬಂಧಿಸಿದ ಈ ವಿಷಯಗಳನ್ನು ಗಮನದಲ್ಲಿಟ್ಟಕೊಳ್ಳುವುದು ಉತ್ತಮ.

click me!