Vastu Tips: ಈ ದಿಕ್ಕಲ್ಲಿ ಮಣ್ಣಿನ ಮಡಕೆ ಇಟ್ಟರೆ ಹಣದ ಸಮಸ್ಯೆ ಇರೋಲ್ಲ!

Published : Jun 04, 2022, 03:14 PM IST
Vastu Tips: ಈ ದಿಕ್ಕಲ್ಲಿ ಮಣ್ಣಿನ ಮಡಕೆ ಇಟ್ಟರೆ ಹಣದ ಸಮಸ್ಯೆ ಇರೋಲ್ಲ!

ಸಾರಾಂಶ

ಮನೆಯಲ್ಲಿ ಮಣ್ಣಿನ ಮಡಕೆ ಇಟ್ಟರೆ ಶುಭ ಎನ್ನುತ್ತದೆ ವಾಸ್ತು. ಮಣ್ಣಿನ ಮಡಕೆಯನ್ನು ಸರಿಯಾದ ದಿಕ್ಕಿನಲ್ಲಿಡೋದರಿಂದ ಹಣದ ಸಮಸ್ಯೆಗಳು ಇರೋದಿಲ್ಲ.

ಒಂದು ಕಾಲದಲ್ಲಿ ಬಹುತೇಕ ಎಲ್ಲರ ಮನೆಯಲ್ಲಿ ಮಣ್ಣಿನ ಪಾತ್ರೆ(clay pot)ಗಳಿರುತ್ತಿದ್ದವು. ಅನ್ನ, ಸಾರು ಸೇರಿದಂತೆ ಎಲ್ಲವೂ ಅದರಲ್ಲೇ ತಯಾರಾಗುತ್ತಿತ್ತು. ಮಣ್ಣಿನ ಮಡಕೆಗಳಂತೂ ಫ್ರಿಡ್ಜ್‌ನಂತೆ ನೀರನ್ನು ತಣ್ಣಗಿಟ್ಟು, ಬಿಸಿಲಲ್ಲಿ ದಣಿದು ಬಂದ ಮನೆಯ ಸದಸ್ಯರ ದಾಹ ನೀಗುತ್ತಿದ್ದವು. ಮಣ್ಣಿನ ಮಡಕೆಯಲ್ಲಿ ಮಾಡಿಟ್ಟ ಅಡುಗೆ ಹೆಚ್ಚು ಆರೋಗ್ಯ ಲಾಭಗಳನ್ನು ತಂದುಕೊಡುತ್ತಿತ್ತು. ಆದರೀಗಿನ ಥಳುಕು ಬಳುಕು, ತಂತ್ರಜ್ಞಾನಗಳ ನಡುವೆ ಮಣ್ಣಿನ ಮಡಕೆಗಳು ಕಣ್ಮರೆಯಾಗುತ್ತಿವೆ. ಅತಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತವೆ. ಆದರೆ ನಿಮಗೆ ಗೊತ್ತೇ? ವಾಸ್ತು ವಿಜ್ಞಾನ(Vastu Science)ದ ಪ್ರಕಾರ ಮಣ್ಣಿನಿಂದ ಮಾಡಿದ ಕೆಲ ವಸ್ತುಗಳನ್ನು ನಿಯಮಗಳ ಪ್ರಕಾರ ಮನೆಯಲ್ಲಿ ಬಳಸಿದರೆ, ಹಣವು ಸಮಸ್ಯೆ ಪರಿಹಾರ ಕಾಣುತ್ತದೆ. ಕೈಗೊಂಡ ಕಾರ್ಯಗಳಿಗೆ ಯಶಸ್ಸು ಸಿಗುತ್ತದೆ. 

ಹೌದು, ಮಣ್ಣಿನ ಮಡಕೆಗಳು ನೆಲದೊಂದಿಗೆ ಸಂಬಂಧ ಇಟ್ಟುಕೊಂಡವುಗಳು. ವಾಸ್ತು ಕೂಡಾ ಪಂಚಭೂತಗಳೊಂದಿಗೆ ಸಂಬಂಧ ಹೊಂದಿರುವುದು. ಹಾಗಾಗಿ, ಮಣ್ಣಿನ ಮಡಕೆಗಳ ಸರಿಯಾದ ಬಳಕೆಯು ವಾಸ್ತು ದೋಷಗಳನ್ನು ಹೋಗಲಾಡಿಸುವುದು ಅಚ್ಚರಿಯೇನಲ್ಲ. ಮಣ್ಣಿನ ಮಡಕೆಗಳನ್ನು ಹೇಗೆ ಬಳಸಿದರೆ ಏನು ಲಾಭ ನೋಡೋಣ. 

ಕುಟುಂಬ ಸದಸ್ಯರ ನಡುವೆ ಪ್ರೀತಿ: ವಾಸ್ತು ಪ್ರಕಾರ, ಮನೆಯಲ್ಲಿ ಇಟ್ಟಿರುವ ಮಣ್ಣಿನ ಪಾತ್ರೆಯ ನೀರನ್ನು ಕುಡಿಯುವುದರಿಂದ ಕುಟುಂಬ ಸದಸ್ಯರ ನಡುವೆ ಪ್ರೀತಿ ಉಂಟಾಗುತ್ತದೆ. ಅಲ್ಲದೆ, ಮಣ್ಣಿನ ಪಾತ್ರೆಯಲ್ಲಿನ ನೀರು ಉತ್ತಮ ಪರಿಮಳ ಮತ್ತು ರುಚಿಯನ್ನು ಹೊಂದಿರುತ್ತದೆ. ಮಣ್ಣಿನ ಮಡಕೆಯಲ್ಲಿಟ್ಟ ನೀರು ಬಳಸುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಅಲ್ಲದೆ, ಈ ನೀರು ಸುಲಭಕ್ಕೆ ಕೆಡುವುದಿಲ್ಲ. ಹಲವು ದಿನಗಳ ಕಾಲ ಬಳಕೆಗೆ ಯೋಗ್ಯವಾಗಿರುತ್ತದೆ. ಹೀಗಾಗಿ, ಮನೆಯಲ್ಲಿ ಕುಡಿವ ನೀರನ್ನು ಮಣ್ಣಿನ ಮಡಕೆಯಲ್ಲಿ ಹಾಕಿಡಿ. 

Saturn Retrograde 2022: ಶನಿಯ ಹಿಮ್ಮುಖ ಚಲನೆ ನಿಮ್ಮ ರಾಶಿಗೆ ಲಾಭವೋ, ನಷ್ಟವೋ?
 
ಗ್ರಹಗಳ ಸ್ಥಳಗಳು: ಜ್ಯೋತಿಷ್ಯ(Astrology) ಪರಿಹಾರಕ್ಕಾಗಿ ಮಣ್ಣಿನಿಂದ ಮಾಡಿದ ವಸ್ತುಗಳನ್ನು ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಗ್ರಹಗಳನ್ನು(planets) ನಿಯಂತ್ರಿಸಲು ಮಣ್ಣಿನ ವಸ್ತುಗಳು ಉಪಯುಕ್ತವೆಂದು ಜನರು ನಂಬುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಣ್ಣಿನ ಮಡಕೆಯನ್ನು ಮನೆಯಲ್ಲಿಟ್ಟರೆ ಅದು ಬುಧ(Mercury) ಮತ್ತು ಚಂದ್ರ(Moon)ನ ಸ್ಥಾನವನ್ನು ಬಲಪಡಿಸುತ್ತದೆ. ಇದರಿಂದ ಮಾತುಗಾರಿಕೆ, ಬುದ್ಧಿವಂತಿಕೆ, ಮಾನಸಿಕ ಸ್ಥಿಮಿತ ಹೆಚ್ಚುತ್ತದೆ. ಆದರೆ, ಈ ಮಣ್ಣಿನ ಮಡಕೆಯನ್ನು ಖಾಲಿ ಬಿಡದಂತೆ ನೀವು ಎಚ್ಚರ ವಹಿಸಬೇಕು.
 
ಲೇಔಟ್ ನಿಯಮಗಳು:
ಕುಂಬಾರಿಕೆಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಕೆಲವು ನಿಯಮಗಳಿವೆ. ನೀವು ಮಣ್ಣಿನ ಮಡಕೆಯನ್ನು ಮನೆಗೆ ತರುವ ಮೊದಲು, ಮನೆಯಲ್ಲಿ ಯಾವುದೇ ಮಗುವಿಗೆ ನೀರು ಕುಡಿಸಿ. ಈ ವಿಧಾನವು ಮನೆಗೆ ಸಮೃದ್ಧಿಯನ್ನು ತರುತ್ತದೆ ಮತ್ತು ಪೂರ್ವಜರ ಆಶೀರ್ವಾದವನ್ನು ನೀಡುತ್ತದೆ ಎಂದು ನಂಬಲಾಗಿದೆ.

ಈ ವಿಷ್ಯಗಳು ನಿಮ್ಮನ್ನು ಬಡವರಾಗುವಂತೆ ಮಾಡುತ್ತೆ, ಹುಷಾರು!
 
ನೀರಿನ ಮಡಕೆಯ ದಿಕ್ಕು: ನೀವು ಮನೆಗೆ ಹೊಸ ಮಡಕೆಯನ್ನು ತಂದಿದ್ದರೆ .. ವಿನ್ಯಾಸದ ಪ್ರಕಾರ ಅದನ್ನು ಸರಿಯಾದ ದಿಕ್ಕಿ(direction)ನಲ್ಲಿ ಜೋಡಿಸಿ. ಉತ್ತರ ಭಾಗವು ಕುಬೇರನಿಗೆ ಬಹಳ ಪ್ರಿಯವಾಗಿದೆ. ಅದಕ್ಕಾಗಿಯೇ ಮಣ್ಣಿನ ಮಡಕೆಯನ್ನು ಉತ್ತರ ಭಾಗದಲ್ಲಿ ಇಡಲು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆಯಾಗುವುದಿಲ್ಲ. ಕುಬೇರನ ಅನುಗ್ರಹ ಸಂಪೂರ್ಣವಾಗಿ ದೊರೆಯುತ್ತದೆ. ಉತ್ತರ ದಿಕ್ಕು ನೀರನ್ನು ಇಡಲು ಯಾವಾಗಲೂ ಪ್ರಶಸ್ತ ಸ್ಥಳ. ಅಲ್ಲದೆ, ಕಿವುಡುತನ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರವಾಗಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ಟ್ಯಾರೋ ರೀಡಿಂಗ್, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

PREV
Read more Articles on
click me!

Recommended Stories

Vastu for Wealth: ಈ 5 ವಸ್ತು ನಿಮ್ಮ ಮನೆಯಲ್ಲಿದ್ದರೆ ಸದಾ ತಿಜೋರಿ ತುಂಬಿರುತ್ತೆ
Vastu Tips: ಇವನ್ನೆಲ್ಲಾ ಫ್ರಿಡ್ಜ್ ಮೇಲಿಟ್ಟರೆ ನಿಮ್ಮ ಪರ್ಸ್ ಖಾಲಿಯಾಗೋದು ಗ್ಯಾರಂಟಿ, ಹುಷಾರು