ಮನೆಯಲ್ಲಿ ಗ್ಲಾಸಿನ ವಸ್ತುಗಳಿದ್ರೆ ಒಡೆಯೋದು ಮಾಮೂಲಿ. ಗ್ಲಾಸಿನ ವಸ್ತುಗಳು ಪೀಸ್ ಆದಾಗ ಆತಂಕವಾಗುತ್ತದೆ. ಯಾವ ಸಮಸ್ಯೆ ಎದುರಾಗಲಿದೆ ಎಂಬ ಭಯ ಕಾಡುತ್ತದೆ. ಆದ್ರೆ ವಾಸ್ತು ಶಾಸ್ತ್ರ ಹೇಳೋದೇ ಬೇರೆ.
ಮನೆ ಅಂದ್ಮೇಲೆ ಒಂದಿಷ್ಟು ಗ್ಲಾಸಿನ ವಸ್ತುಗಳು ಇದ್ದೇ ಇರುತ್ತೆ. ಗ್ಲಾಸಿನ ವಸ್ತುಗಳು ನೋಡಲು ಸುಂದರವಾಗಿದ್ದು, ಎಲ್ಲರನ್ನು ಆಕರ್ಷಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿದ್ದು ಜನರು ಮತ್ತೆ ಗ್ಲಾಸಿನ ವಸ್ತುಗಳ ಖರೀದಿ ಶುರು ಮಾಡಿದ್ದಾರೆ. ಕನ್ನಡಯಿಂದ ಹಿಡಿದು ಕುಡಿಯುವ ನೀರಿನ ಗ್ಲಾಸ್ ಸೇರಿದಂತೆ ಕಾಳು - ಬೇಳೆಗಳನ್ನು ತುಂಬಿಡುವ ಡಬ್ಬದವರೆಗೆ ಗ್ಲಾಸಿನ ಐಟಂಗಳು ನಮಗೆ ಲಭ್ಯವಿದೆ. ಗ್ಲಾಸಿನ ಸುಂದರ ವಸ್ತುಗಳು ಮನೆಯಲ್ಲಿದ್ದರೆ ವಿಶೇಷ ಕಾಳಜಿವಹಿಸಲಾಗುತ್ತದೆ. ಸ್ವಲ್ಪ ಕೈತಪ್ಪಿ ಕೆಳಗೆ ಬಿದ್ರೂ ಮತ್ತೆ ಕೈಗೆ ಸಿಗೋದಿಲ್ಲ. ಪ್ರೀತಿಯಿಂದ ತಂದ ಸುಂದರ ಗ್ಲಾಸಿನ ವಸ್ತುಗಳು ಪೀಸ್ ಪೀಸ್ ಆದ್ರೆ ನೋವಾಗಿತ್ತೆ. ಮನೆಯಲ್ಲಿ ಗ್ಲಾಸಿನ ವಸ್ತು ಅಥವಾ ಕನ್ನಡಿ ಒಡೆದ್ರೆ ಕೆಲವರು ಅಪಶಕುನ ಎನ್ನುತ್ತಾರೆ. ಮನೆಯಲ್ಲಿ ಗ್ಲಾಸ್ ಅಥವಾ ಕನ್ನಡಿ ಒಡೆದ್ರೆ ಮುಂದಿನ ದಿನಗಳಲ್ಲಿ ಕೆಟ್ಟ ಸುದ್ದಿ ಕೇಳಬೇಕಾಗುತ್ತದೆ ಎಂದು ಕೆಲವರು ನಂಬಿದ್ದಾರೆ. ವಾಸ್ತು ಶಾಸ್ತ್ರದಲ್ಲಿ ಗ್ಲಾಸ್ ಒಡೆದ್ರೆ ಯಾವ ಪರಿಣಾಮ ನಮ್ಮ ಮೇಲಾಗುತ್ತದೆ ಎಂಬುದನ್ನು ಹೇಳಲಾಗಿದೆ.
ವಾಸ್ತು (Vastu) ಶಾಸ್ತ್ರದ ಪ್ರಕಾರ, ಮನೆಯ ಕಿಟಕಿ ಗ್ಲಾಸ್ (Glass), ಕನ್ನಡಿ ಅಥವಾ ಯಾವುದೇ ಗ್ಲಾಸಿನ ವಸ್ತುಗಳು ಒಡೆದ್ರೆ ಅದು ಅಶುಭವಲ್ಲ. ಇದು ಮಂಗಳಕರ ಎನ್ನುತ್ತದೆ ವಾಸ್ತುಶಾಸ್ತ್ರ. ಮನೆಯಲ್ಲಿ ಕೈತಪ್ಪಿ ಗ್ಲಾಸ್ ವಸ್ತುಗಳು ಒಡೆದ್ರೆ ಶೀಘ್ರದಲ್ಲೇ ನೀವು ಕೆಲವು ಉತ್ತಮ ವಿಷ್ಯವನ್ನು ಕೇಳಲಿದ್ದೀರಿ ಎಂದರ್ಥ. ನಿಮ್ಮ ಮೇಲೆ ಬರಲಿರುವ ಸಂಕಟವನ್ನು ಗ್ಲಾಸ್ ತನ್ನ ಮೈಮೇಲೆ ಎಳೆದುಕೊಂಡಿದ್ದರಿಂದ ಅದು ಒಡೆಯುತ್ತದೆ ಎಂದು ನಂಬಲಾಗಿದೆ.
undefined
ಒಡೆದ ಗ್ಲಾಸುಗಳು ಯಾವ ಸಂಕೇತ ನೀಡುತ್ತವೆ ? :
ದೊಡ್ಡ ಬಿಕ್ಕಟ್ಟು ತಪ್ಪಿದಂತೆ : ಮನೆಯಲ್ಲಿರುವ ಗ್ಲಾಸ್ ಹಠಾತನೆ ಒಡೆದ್ರೆ ಮನೆ (House) ಗೆ ಬರಬೇಕಿದ್ದ ದೊಡ್ಡ ಬಿಕ್ಕಟ್ಟು ತಪ್ಪಿದಂತೆ. ಯಾವುದೋ ಅಪಘಾತ (Accident) ದಿಂದ ನೀವು ತಪ್ಪಿಸಿಕೊಂಡಿದ್ದೀರಿ ಎಂಬ ಸೂಚನೆಯಾಗಿದೆ. ಹಾಗಾಗಿ ಗ್ಲಾಸ್ ಒಡೆದ ತಕ್ಷಣ ಅದನ್ನು ಮನೆಯಿಂದ ಹೊರಗೆ ಹಾಕಬೇಕು.
ಹಳೆಯ ವಿವಾದಕ್ಕೆ ಮುಕ್ತಿ : ಮನೆಯಲ್ಲಿರುವ ಕನ್ನಡಿ, ಕಿಟಕಿ ಗ್ಲಾಸ್ ಅಥವಾ ಗ್ಲಾಸಿನ ವಸ್ತುಗಳು ಒಡೆದ್ರೆ ಹಳೆ ವಿವಾದವೊಂದು ಬಗೆಹರಿಯುವ ಸೂಚನೆಯಾಗಿದೆ. ಇಷ್ಟು ದಿನ ನಿಮ್ಮನ್ನು ಕಾಡಿದ್ದ ವಿವಾದಕ್ಕೆ ಶೀಘ್ರವೇ ಪರಿಹಾರ ಸಿಗಲಿದೆ ಎಂಬ ಸೂಚನೆಯಾಗಿದೆ.
ಈ Zodiac Signs ಜನ ಭರವಸೆ ಈಡೇರಿಸ್ತಾರೆ ಅನ್ನೋ ನಿರೀಕ್ಷೆ ಬಿಟ್ಬಿಡಿ
ಆರೋಗ್ಯದಲ್ಲಿ ವೃದ್ಧಿ : ಗ್ಲಾಸ್ ಒಡೆಯೋದ್ರಿಂದ ಯಾವುದೇ ಅಶುಭ ಫಲ ನಿಮಗೆ ಸಿಗುವುದಿಲ್ಲ. ದೀರ್ಘ ಕಾಲದಿಂದ ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ನಿಮ್ಮ ಆರೋಗ್ಯ ಇನ್ಮುಂದೆ ಸುಧಾರಿಸಲಿದೆ ಎಂಬ ಸೂಚನೆಯಾಗಿದೆ. ನಿಧಾನವಾಗಿ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ ಎಂದು ನೀವು ನಂಬಬಹುದಾಗಿದೆ.
ಗ್ಲಾಸ್ ಒಡೆದಾಗ ಏನು ಮಾಡಬೇಕು ? : ಗ್ಲಾಸ್ (Glass) ಕೈತಪ್ಪಿ ಕೆಳಗೆ ಬಿದ್ದು ಒಡೆದು ಹೋದ್ರೆ ಅದ್ರಲ್ಲೂ ಕನ್ನಡಿ ಒಡೆದು ಹೋದ್ರೆ ಒಡೆದ ಒಂದು ಭಾಗದಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಬೇಕು. ನೀವು ಹೀಗೆ ಮಾಡಿದ್ರೆ, ಗಾಜು ಒಡೆಯುವುದರಿಂದ ಉಂಟಾಗುವ ಕೆಟ್ಟ ಶಕುನದ ಪರಿಣಾಮ ಕೊನೆಗೊಳ್ಳುತ್ತದೆ. ವ್ಯಕ್ತಿ ಎದುರಿಸಬೇಕಾಗಿದ್ದ ಬಿಕ್ಕಟ್ಟು ದೂರವಾಗುತ್ತದೆ. ಸಾಮಾನ್ಯವಾಗಿ ಜನರು ಗಾಜು ಒಡೆದ ನಂತರವೂ ಅದನ್ನು ಬಳಸುತ್ತಾರೆ. ಕಸಕ್ಕೆ ಎಸೆಯುವ ಬದಲು ಅದನ್ನು ಮನೆಯಲ್ಲಿಯೇ ಇಡುತ್ತಾರೆ. ಒಡೆದ ಗಾಜನ್ನು ಮನೆಯಲ್ಲಿ ಇಡುವುದು ಅಶುಭ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡಲು ಇದು ಕಾರಣವಾಗುತ್ತದೆ. ಒಡೆದ ಗಾಜು ಮನೆಯಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ.
Astro Tips: ನಿಮ್ಮ ಅದೃಷ್ಟ ಬದಲಿಸಬಲ್ಲದು ಒಂದೇ ಒಂದು ಕಮಲ
ಈ ವಿಷ್ಯ ನೆನಪಿಡಿ : ಮನೆಯಲ್ಲಿ ದುಂಡಗಿನ ಅಥವಾ ಅಂಡಾಕಾರದ ಕನ್ನಡಿಗಳನ್ನು ಇಡಬಾರದು. ಮನೆಯ ಧನಾತ್ಮಕ ಶಕ್ತಿಯನ್ನು ನಕಾರಾತ್ಮಕವಾಗಿ ಪರಿವರ್ತಿಸುತ್ತವೆ. ಮನೆಯಲ್ಲಿ ಯಾವಾಗಲೂ ಚೌಕಾಕಾರದ ಕನ್ನಡಿ ಬಳಸಬೇಕು. ಕನ್ನಡಿಯ ಚೌಕಟ್ಟು ತಿಳಿ ನೀಲಿ, ಬಿಳಿ,ತಿಳಿ ಕಂದು ಬಣ್ಣದಲ್ಲಿದ್ದರೆ ಒಳ್ಳೆಯದು.