ಬಂಗಾರ ಇಡೋಕೆ, ಧರಿಸಲು ಇಲ್ಲಿವೆ ವಾಸ್ತು ಟಿಪ್ಸ್

By Suvarna NewsFirst Published Nov 21, 2022, 1:43 PM IST
Highlights

ಒಂದು ನೂರಾಗ್ಬೇಕು, ನೂರು ಲಕ್ಷವಾಗ್ಬೇಕು ಎಂದು ಎಲ್ಲರೂ ಬಯಸ್ತಾರೆ. ಅದು ಹಣವಿರಲಿ ಇಲ್ಲ ಬಂಗಾರವಿರಲಿ. ಬಂಗಾರದ ಒಡವೆ ಮೇಲೆ ಮಹಿಳೆಯರಿಗೆ ವಿಶೇಷ ಒಲವಿರುತ್ತದೆ. ನಿಮ್ಮ ಕತ್ತು, ಕೈಗಳಿಗೆ ಬಂಗಾರದ ಆಭರಣ ಮುತ್ತಿಡಬೇಕೆಂದ್ರೆ ವಾಸ್ತು ನಿಯಮ ಅನುಸರಿಸಿ. 
 

ಮನೆಯಲ್ಲಿ ಬಂಗಾರವಿದ್ರೆ ಭವಿಷ್ಯದ ಚಿಂತೆಯಿಲ್ಲ ಅಂತಾ ಹಿರಿಯರು ಹೇಳ್ತಾರೆ. ಬಂಗಾರ ಆಪದ್ಭಾಂದವ. ಕಷ್ಟದ ಕಾಲದಲ್ಲಿ ನೆರವಾಗುವಂತಹದ್ದು ಬಂಗಾರ. ಪ್ರತಿಯೊಬ್ಬರು ಅವರವರ ಅನುಕೂಲಕ್ಕೆ ತಕ್ಕಂತೆ ಬಂಗಾರ ಖರೀದಿ ಮಾಡ್ತಾರೆ. ಮಹಿಳೆಯರಿಗೆ ಬಂಗಾರದ ಮೇಲೆ ಮೋಹ ಜಾಸ್ತಿ. ಆಭರಣದ ರೂಪದಲ್ಲಿ ಬಂಗಾರ ಖರೀದಿ ಮಾಡಲು ಮಹಿಳೆಯರು ಆಸಕ್ತಿ ತೋರುತ್ತಾರೆ. 

ವಾಸ್ತು (Vastu) ಶಾಸ್ತ್ರದಲ್ಲೂ ಬಂಗಾರಕ್ಕೆ ಮಹತ್ವದ ಸ್ಥಾನವಿದೆ. ಬಂಗಾರ (Gold) ಒಂದು ಮಂಗಳಕರ ಧಾತುವಾಗಿದೆ. ಮನೆಯಲ್ಲಿ ಬಂಗಾರವಿರಬೇಕೆಂದು ಎಲ್ಲರೂ ಬಯಸ್ತಾರೆ. ಬಂಗಾರವನ್ನು ಲಕ್ಷ್ಮಿಗೆ ಹೋಲಿಸಲಾಗುತ್ತದೆ. ಮನೆಗೆ ಬಂಗಾರ ಬಂತೆಂದ್ರೆ ಲಕ್ಷ್ಮಿ (Lakshmi) ಬಂದಂತೆ ಅರ್ಥ. ನಿಮ್ಮ ಮನೆಗೂ ಹೆಚ್ಚೆಚ್ಚು ಬಂಗಾರ ಬರಬೇಕು ಎಂದಾದ್ರೆ , ನಿಮ್ಮ ಕಪಾಟು ಬಂಗಾರದ ಆಭರಣಗಳಿಂದ ತುಂಬಿರಬೇಕೆಂದು ನೀವು ಬಯಸಿದ್ರೆ ಕೆಲ ವಾಸ್ತು ನಿಯಮಗಳನ್ನು ಪಾಲನೆ ಮಾಡಬೇಕು. ಮನೆಯಲ್ಲಿ ಬಂಗಾರದ ಆಭರಣಗಳನ್ನು ಇಡುವವರು ವಾಸ್ತು ನಿಯಮಗಳನ್ನು ಅರಿತಿದ್ದರೆ ಒಳ್ಳೆಯದು.

ವಾಸ್ತು ಪ್ರಕಾರ ಮನೆಯಲ್ಲಿಡಿ ಬಂಗಾರ :
ಬಂಗಾರದ ಆಭರಣಗಳನ್ನು ಈ ದಿಕ್ಕಿನಲ್ಲಿಡಿ :
ಇತ್ತೀಚಿನ ದಿನಗಳಲ್ಲಿ ಜನರು ಬಂಗಾರದ ಆಭರಣಗಳನ್ನು ಬ್ಯಾಂಕ್ ನಲ್ಲಿ ಭದ್ರವಾಗಿಡ್ತಾರೆ. ನೀವು ಮನೆಯಲ್ಲಿಯೇ ಆಭರಣಗಳನ್ನು ಇಡ್ತೀದ್ದೀರಿ ಎಂದಾದ್ರೆ ಮನೆಯ ನೈಋತ್ಯ ದಿಕ್ಕಿನಲ್ಲಿ ಇಡಬೇಕು. ಮನೆಯ ವಾಯುವ್ಯ ದಿಕ್ಕಿನಲ್ಲಿ ಎಂದಿಗೂ ಚಿನ್ನದ ಆಭರಣಗಳನ್ನು ಅಥವಾ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣಗಳನ್ನು ಇಡಬೇಡಿ. ಇದ್ರಿಂದ ಕುಟುಂಬಸ್ಥರು ಹಾನಿಗೊಳಗಾಗಬೇಕಾಗುತ್ತದೆ.  ನಿಮ್ಮ ಮನೆಯ ನೈಋತ್ಯ ದಿಕ್ಕಿನಲ್ಲಿ ಆಭರಣಗಳನ್ನು ಇಟ್ಟರೆ ಅದು ಧನ ಲಕ್ಷ್ಮಿಯನ್ನು ಆಕರ್ಷಿಸುತ್ತದೆ. ಮನೆಯ ನೈಋತ್ಯ ಮೂಲೆ ಸ್ಥಿರತೆಯನ್ನು ಕಾಪಾಡುತ್ತದೆ. ಈ ಮೂಲೆಯಲ್ಲಿ ನೀವು ಕಪಾಟು ಅಥವಾ ನಿಮ್ಮ ಹಣ ಅಥವಾ ಆಭರಣವನ್ನು ಇರಿಸಿದರೆ ಅದು ಸ್ಥಿರವಾಗಿರುತ್ತದೆ. ಎಂದಿಗೂ ನಿಮ್ಮ ಕೈ ಬಿಡುವುದಿಲ್ಲ. 

Vaastu Tips: ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ಅಪ್ಪಿ ತಪ್ಪಿಯೂ ನೋಡಬೇಡಿ

ಬಣ್ಣದ ಬಗ್ಗೆ ಇರಲಿ ಗಮನ : ಚಿನ್ನದ ಆಭರಣಗಳನ್ನು ಇಡುವ ಗೋಡೆ ಮತ್ತು ನೆಲದ ಬಣ್ಣ ಕೂಡ ಮಹತ್ವ ಪಡೆಯುತ್ತದೆ. ಮನೆಯಲ್ಲಿ ಲಾಕರ್ ಇಡುವ ಕೋಣೆಯ ಗೋಡೆಗೆ  ಯಾವಾಗಲೂ ಹಳದಿ ಬಣ್ಣ ಹಚ್ಚಿ.  ದೊಡ್ಡ ಜ್ಯುವೆಲ್ಲರಿ ಶಾಪ್‌ಗಳಲ್ಲಿಯೂ ಸಹ ಗೋಡೆಗಳು ಹಳದಿ ಬಣ್ಣದಲ್ಲಿ ಇರುವುದನ್ನು ನೀವು ಗಮನಿಸಿರಬೇಕು. ಹಳದಿ  ಬಣ್ಣವು ಭಗವಂತ ಕುಬೇರನನ್ನು ಪ್ರತಿನಿಧಿಸುತ್ತದೆ. ವಾಸ್ತು ನಿಯಮವನ್ನು ಪಾಲಿಸುವವರಾಗಿದ್ದರೆ, ಮನೆಯಲ್ಲಿ ಯಾವಾಗಲೂ ಸಂಪತ್ತು ಮತ್ತು ಸಮೃದ್ಧಿ ಇರಬೇಕೆಂದ್ರೆ ಕಪಾಟಿಡುವ, ಆಭರಣ ಇಡುವ ರೂಮಿನ ಗೋಡೆ ಹಾಗೂ ನೆಲಕ್ಕೆ ಹಳದಿ ಬಣ್ಣ ಬಳಿಯಿರಿ. ಹಳದಿ ಬಣ್ಣ ಸೂರ್ಯ, ಮಂಗಳ ಮತ್ತು ಗುರು ಗ್ರಹಗಳನ್ನು ಪ್ರತಿನಿಧಿಸುತ್ತದೆ. ಈ ಎಲ್ಲಾ ಗ್ರಹಗಳು ತುಂಬಾ ಪ್ರಭಾವಶಾಲಿಯಾಗಿದ್ದು, ಅವು ಪ್ರಬಲವಾಗಿದ್ದರೆ ಆರ್ಥಿಕ ನಷ್ಟ ಎಂದಿಗೂ ನಿಮ್ಮನ್ನು ಕಾಡುವುದಿಲ್ಲ ಎಂಬುದು ನೆನಪಿರಲಿ.

ಈ ಸಂದರ್ಭದಲ್ಲಿ ಮನೆಗೆ ತನ್ನಿ ಚಿನ್ನಾಭರಣ : ಚಿನ್ನವು ಗುರುವನ್ನು ಪ್ರತಿನಿಧಿಸುತ್ತದೆ. ಈ ಗ್ರಹಕ್ಕೆ ಅನುಕೂಲಕರವಾದ ದಿನದಂದು ಮಾತ್ರ ನಾವು ಚಿನ್ನವನ್ನು ಖರೀದಿಸಬೇಕು. ಪುಷ್ಯ ನಕ್ಷತ್ರವು ಚಿನ್ನವನ್ನು ಖರೀದಿಸಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಾಗೆಯೇ ಭಾನುವಾರ, ಸೋಮವಾರ, ಮಂಗಳವಾರ ಮತ್ತು ಗುರುವಾರ ನೀವು ಚಿನ್ನವನ್ನು ಖರೀದಿಸಿದ್ರೆ ಒಳ್ಳೆಯದು. ಈ ದಿನ ಮನೆಗೆ ತಂದ ಚಿನ್ನ ನಿಮ್ಮ ಏಳ್ಗೆಗೆ ಕಾರಣವಾಗುತ್ತದೆ. 

ಈ ರಾಶಿಗಳಿಗೆ 3ಕ್ಕಿಂತ ಹೆಚ್ಚಿನ ಮದುವೆಯ ಯೋಗವಿದೆ!

ಲಾಕರ್ ಇಡುವ ಕೋಣೆ ಹೀಗಿರಲಿ : ಚಿನ್ನಾಭರಣಗಳನ್ನು ತುಂಬಿಡುವ  ಕೋಣೆಯ ಸ್ವಚ್ಛತೆ ಬಗ್ಗೆ ನೀವು ಗಮನ ನೀಡಬೇಕು. ಪ್ರತಿ ದಿನ ಕೋಣೆಯನ್ನು ಸ್ವಚ್ಛಗೊಳಿಸಬೇಕು. ಲಾಕರ್ ಮುಂದೆ ಪ್ರತಿ ದಿನ ತುಪ್ಪದ ದೀಪವನ್ನು ಹಚ್ಚಬೇಕು. ಹೀಗೆ ಮಾಡಿದ್ರೆ ತಾಯಿ ಲಕ್ಷ್ಮಿ ಆಶೀರ್ವಾದ ನಿಮಗೆ ಸದಾ ಇರುತ್ತದೆ.  

click me!