ಬೆಕ್ಕು, ನಾಯಿ ಸೇರಿದಂತೆ ಕೆಲ ಪಕ್ಷಿಗಳನ್ನು ಜನರು ಸಾಕ್ತಾರೆ. ಅವುಗಳನ್ನು ಪ್ರೀತಿಯಿಂದ ಆರೈಕೆ ಕೂಡ ಮಾಡ್ತಾರೆ. ಆದ್ರೆ ಕೆಲ ವಾಸ್ತು ನಿಯಮಗಳ ಪಾಲನೆ ಮಾಡೋದಿಲ್ಲ. ಇದ್ರಿಂದ ವಾಸ್ತು ದೋಷಕ್ಕೆ ಒಳಗಾಗ್ತಾರೆ. ಮನೆಯಲ್ಲಿ ಪಕ್ಷಿ ಸಾಕಿದ್ದರೆ ವಾಸ್ತು ನಿಯಮ ಮೀರಬಾರದು.
ಪ್ರತಿ ದಿನ ನಾವು ವಾಸ್ತು ನಿಯಮಕ್ಕೆ ವಿರುದ್ಧವಾದ ಅನೇಕ ಕೆಲಸಗಳನ್ನು ಮಾಡ್ತೇವೆ. ಹಾಗಾಗಿ ನಮಗೆ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಅನವಶ್ಯಕವಾಗಿ ಮನೆಯ ನೆಮ್ಮದಿ ಹಾಳಾಗಿರುತ್ತದೆ. ಕುಟುಂಬಸ್ಥರು ಅನಾರೋಗ್ಯಕ್ಕೆ ಒಳಗಾಗಿರ್ತಾರೆ. ಪರಿಸ್ಥಿತಿ ಕೈ ಮೀರುತ್ತಿದೆ ಎಂದಾಗ ನಾವು ವಾಸ್ತು ಶಾಸ್ತ್ರದ ಬಗ್ಗೆ ಗಮನ ಹರಿಸ್ತೇವೆ. ಅದಕ್ಕಿಂತ ಮೊದಲೇ ನಮಗೆ ಕೆಲ ನಿಯಮಗಳು ತಿಳಿದಿದ್ದರೆ ಒಳ್ಳೆಯದು.
ಪ್ರಾಣಿ, ಪಕ್ಷಿ (Birds) ಗಳೆಂದ್ರೆ ಬಹುತೇಕರಿಗೆ ಪ್ರೀತಿ ಹೆಚ್ಚು. ಹಾಗಾಗಿಯೇ ಮನೆಯಲ್ಲಿ ಸಾಕು ಪ್ರಾಣಿಗಳ ಜೊತೆ ಪಕ್ಷಿಗಳನ್ನು ಸಾಕುತ್ತಾರೆ. ಅದ್ರಲ್ಲೂ ಗಿಳಿ (Parrot) ಯನ್ನು ಪಾಲನೆ ಮಾಡೋರ ಸಂಖ್ಯೆ ಹೆಚ್ಚು. ವಾಸ್ತು (Vastu) ಶಾಸ್ತ್ರದಲ್ಲಿ ಪಕ್ಷಿಗಳನ್ನು ಮನೆಯಲ್ಲಿ ಸಾಕುವುದು ನಿಷಿದ್ಧ. ಪಕ್ಷಿಗಳು ನಕಾರಾತ್ಮ (Negative) ಶಕ್ತಿಯನ್ನು ಸೆಳೆಯುತ್ತವೆ ಎಂದು ನಂಬಲಾಗಿದೆ. ಪಕ್ಷಿಗಳನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎನ್ನುವವರು ಮನೆಯಲ್ಲಿ ಪಕ್ಷಿ ಸಾಕುವ ವೇಳೆ ಕೆಲ ವಾಸ್ತು ನಿಯಮಗಳನ್ನು ಪಾಲನೆ ಮಾಡ್ಬೇಕು. ಇಲ್ಲವೆಂದ್ರೆ ದುರಾದೃಷ್ಟವನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ. ಪಕ್ಷಿಗೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದಲ್ಲಿ ಏನೇನು ವಿಷ್ಯ ಹೇಳಲಾಗಿದೆ ಎಂಬುದನ್ನು ನಾವು ಹೇಳ್ತೇವೆ.
undefined
ಪಕ್ಷಿ ಸಾಕುವ ಮುನ್ನ ವಾಸ್ತು ನಿಯಮ ತಿಳಿದಿರಿ :
ಪಂಜರದ ಬಾಗಿಲು ಮುಚ್ಚಬೇಡಿ : ಅರೇ, ಪಕ್ಷಿ ಸಾಕಿ, ಪಂಜರ ಮುಚ್ಚಬೇಡಿ ಅಂದ್ರೆ ಹೇಗೆ ಎಂದು ನೀವು ಪ್ರಶ್ನೆ ಮಾಡಬಹುದು. ನೀವು ಸಾಕಿರುವ ಪಕ್ಷಿಗೆ ಹೆಚ್ಚು ಪ್ರೀತಿ, ಕಾಳಜಿ ತೋರಿಸಿದ್ರೆ ಅದಕ್ಕೆ ಪಂಜರದ ಅವಶ್ಯಕತೆ ಇರುವುದಿಲ್ಲ. ಅದು ಎಲ್ಲೆ ಹೋದ್ರೂ ಮತ್ತೆ ನಿಮ್ಮ ಬಳಿ ವಾಪಸ್ ಬರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಪಂಜರದ ಬಾಗಿಲು ಹಾಕುವುದು ಶುಭ ಸಂಕೇತವಲ್ಲ. ಪಂಜರದಲ್ಲಿ ಪಕ್ಷಿ ಇಡುವುದು ಕುಟುಂಬದ ಸದಸ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಪಕ್ಷಿಗಳ ಸೇವೆ ಮುಖ್ಯ : ಪಕ್ಷಿಗಳು ಸಮೃದ್ಧಿ (Prosperity) ಮತ್ತು ಯಶಸ್ಸಿನ (Success) ಸಂಕೇತ. ಅವುಗಳ ಸೇವೆ ಮಾಡುವುದು ಪುಣ್ಯದ ಕೆಲಸ ಎನ್ನಲಾಗುತ್ತದೆ. ಪಕ್ಷಿಗಳಿಗೆ ಕಾಳುಕಡಿ ಹಾಕಿದ್ರೆ ಮಂಗಳಕರ ಫಲ ಸಿಗುತ್ತದೆ. ಅದೇ ಇಡೀ ದಿನ ಪಕ್ಷಿಯನ್ನು ಪಂಜರದಲ್ಲಿ ಕೂಡಿ ಹಾಕಿದ್ರೆ ಮನೆಯಲ್ಲಿ ಸ್ಥಿರತೆ ನೆಲೆಸುವುದಿಲ್ಲ. ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಪಕ್ಷಿಯನ್ನು ಮಲಗಿಸುವ ಸಂದರ್ಭದಲ್ಲಿ ಮಾತ್ರ ನೀವು ಪಂಜರ ಬಳಸಿದ್ರೆ ಒಳ್ಳೆಯದು.
ಮನೆಯಲ್ಲಿ ಈ ಗಿಡ ನೆಟ್ಟರೆ, ಹೋದ ಹಣವೂ ಮರಳಿ ಬರುತ್ತೆ!
ಇದು ಪಾಪದ ಕೆಲಸ : ಮನೆಗೆ ಪಕ್ಷಿ ತಂದು ಸಾಕುವುದು ಒಳ್ಳೆಯದಲ್ಲ. ಸ್ವಚ್ಛಂದವಾಗಿ ಹಾರಾಡುತ್ತಿದ್ದ ಪಕ್ಷಿಯನ್ನು ನೀವು ಗೂಡಿನಲ್ಲಿ ತಂದು ಸಾಕಿದ್ರೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಪುರಾಣಗಳಲ್ಲಿ ಕೂಡ ಪಂಜರದಲ್ಲಿ ಪಕ್ಷಿಗಳನ್ನು ಇಡಬಾರದು ಎನ್ನಲಾಗಿದೆ. ಪಕ್ಷಿಗಳನ್ನು ಬಂಧಿ ಮಾಡುವುದು ಪಾಪದ ಕೆಲಸ.
ಬುಧವಾರ ಗಿಳಿಯನ್ನು ಹಾರಿಬಿಡಿ : ಗಿಳಿಯನ್ನು ಬುಧ ಗ್ರಹಕ್ಕೆ ಹೋಲಿಕೆ ಮಾಡಲಾಗುತ್ತದೆ. ಅನೇಕ ಜನರ ಮನೆಯಲ್ಲಿ ನೀವು ಮುದ್ದಾದ ಗಿಳಿಗಳನ್ನು ನೋಡಬಹುದು. ಪಂಜರದಲ್ಲಿರುವ ಗಿಳಿಯನ್ನು ನೀವು ಮುಕ್ತಗೊಳಿಸಲು ಬಯಸಿದ್ರೆ ಬುಧವಾರದ ದಿನವನ್ನು ಆಯ್ಕೆ ಮಾಡಿಕೊಳ್ಳಿ. ನೀವು ಬುಧವಾರ ಗಿಳಿಯನ್ನು ಹಾರಿ ಬಿಡಬೇಕು. ಮತ್ತೆ ಅದನ್ನು ಹಿಡಿಯುವ ಪ್ರಯತ್ನ ನಡೆಸಬಾರದು. ಇದ್ರಿಂದ ಬುಧ ಗ್ರಹ ಬಲಪಡೆಯುತ್ತದೆ.
Astrology Tips : ಕೈ ಜೋಡಿಸಿ ನಮಸ್ಕರಿಸಿದ್ರೆ ಸಿಗುತ್ತೆ ಈ ಲಾಭ
ಮನೆಯಲ್ಲಿ ಇಡಿ ಈ ಫೋಟೋ : ವಾಸ್ತು ಪ್ರಕಾರ, ಪಕ್ಷಿಗಳನ್ನು ಸಾಕುವುದು ಒಳ್ಳೆಯ ಕೆಲಸವಲ್ಲ. ಜೀವನದಲ್ಲಿ ಸಂತೋಷ ಮತ್ತು ಯಶಸ್ಸು ಉಳಿಯಬೇಕೆಂದು ನೀವು ಬಯಸಿದರೆ ಮನೆಯಲ್ಲಿ ಪಕ್ಷಿಗಳ ಫೋಟೋವನ್ನು ಹಾಕಬಹುದು. ಪಕ್ಷಿಗಳ ಫೋಟೋಗಳು ಅದ್ರಲ್ಲೂ ಗಿಳಿಯ ಫೋಟೋಗಳು ಮನೆಯಲ್ಲಿ ಧನಾತ್ಮಕ ಫಲಿತಾಂಶಗಳನ್ನು ತರುತ್ತವೆ. ಇದ್ರಿಂದ ಯಶಸ್ಸು ನಿಮ್ಮ ಪಾಲಾಗುತ್ತದೆ.