ಪಾಸಿಟಿವ್ ಎನರ್ಜಿಗಾಗಿ New Yearನಲ್ಲಿ ಮನೆ ವಾಸ್ತು ಹೀಗಿರಲಿ..

By Suvarna NewsFirst Published Dec 30, 2021, 3:01 PM IST
Highlights

ಹೊಸ ವರ್ಷದಲ್ಲಿ ಮನೆಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳುವ ಮೂಲಕ ವರ್ಷವಿಡೀ ಪಾಸಿಟಿವ್ ಎನರ್ಜಿ ಮನೆಯಲ್ಲಿರುವಂತೆ ಮಾಡಿಕೊಳ್ಳಬಹುದು. 
 

ಹಳೆಯ ವರ್ಷ (2021) ನಿಮಗೆ ಸಾಕಷ್ಟು ನೆಮ್ಮದಿ ಕೊಟ್ಟಿಲ್ಲದಿರಬಹುದು. ಏನೇ ಮಾಡಿದರೂ ನಿಮ್ಮ ಕೈನಲ್ಲಿ ಹಣ (Money) ನಿಲ್ಲುತ್ತಿಲ್ಲ, ಮನೆಯಲ್ಲಿ ಸಂತೋಷವಿಲ್ಲ ಅನಿಸುತ್ತಿರಬಹುದು. ಎಷ್ಟೇ ಪ್ರಯತ್ನ ಹಾಕಿದರೂ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎನಿಸಬಹುದು. ನಿಮ್ಮ ಮನೆಯಲ್ಲಿ ನಿರಂತರ ಆನಾರೋಗ್ಯದಿಂದ ಯಾರಾದರೂ ಬಳಲುತ್ತಿರಬಹುದು. ಇದೆಲ್ಲ ಕೆಟ್ಟ ವಾಸ್ತುವಿನ ಫಲ. ಹೊಸ ವರ್ಷದಂದು (2022) ಮನೆಯ ವಾಸ್ತುವಿನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡುವ ಮೂಲಕ ನೀವು ಪಾಸಿಟಿವ್ ಎನರ್ಜಿ (Positive energy) ಹರಿದಾಡುವುದನ್ನು ಕಾಣಬಹುದು. ಹಾಗಾದರೆ ಆ ಟಿಪ್ಸ್‌ ಯಾವುವು?

ಮುಖ್ಯ ಬಾಗಿಲಲ್ಲಿ ಸ್ವಸ್ತಿಕ (Main door) 
ಬೆಳಿಗ್ಗೆ ಸ್ನಾನ ಮಾಡಿದ ನಂತರ ಸೂರ್ಯದೇವನಿಗೆ ಅರ್ಘ್ಯವನ್ನು ಅರ್ಪಿಸಿ ನಂತರ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಪೂಜೆ ಮಾಡಿ. ಪೂಜೆಯ ನಂತರ, ಮನೆಯ ಮುಖ್ಯ ಬಾಗಿಲಲ್ಲಿ ಪ್ರತಿದಿನ ಸ್ವಸ್ತಿಕ್‌ (Swasthik) ಚಿಹ್ನೆಯನ್ನು ಬರೆಯಿರಿ. ಇದರ ನಂತರ, ಅಲ್ಲಿಯೂ ಹಾಗೆಯೇ ನೀರು ನೀಡಿ. ಇದನ್ನು ಪ್ರತಿ ದಿನ ಮಾಡಿ. ಹೀಗೆ ಮಾಡುವಾಗ ಪ್ರತಿ ದಿನ ನೀವು ಹಿಂದಿನ ದಿನ ಬರೆದ ಸ್ವಸ್ತಿಕ್‌ ಚಿಹ್ನೆಯನ್ನು ಅಳಿಸಿ ಮತ್ತೆ ಹೊಸದಾಗಿ ಬರೆಯಿರಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪೆ ನಿಮ್ಮ ಮೇಲೆ ಇರುತ್ತದೆ. ನಿಮ್ಮ ಮನೆಯಲ್ಲಿ ಹಣದ ಹರಿವು ಸಕಾರಾತ್ಮಕವಾಗಿರುತ್ತದೆ.

New Year 2022 : ಜನವರಿ ಒಂದರಿಂದ್ಲೇ ಏಕೆ ಶುರುವಾಗುತ್ತೆ ಹೊಸ ವರ್ಷ?

ತುಳಸಿ ಮತ್ತು ಬಾಳೆ ಗಿಡ 
ನಿಮ್ಮ ಮನೆಯಲ್ಲಿ ಯಾವುದೋ ಒಂದು ವಿಷಯ ನಿಮಗೆ ತೊಂದರೆಯನ್ನು ನೀಡುತ್ತಿದೆ ಎಂದು ನೀವು ಭಾವಿಸಿದರೆ ಅಥವಾ ನಿಮ್ಮ ಕೆಲಸ ನಿರಂತರವಾಗಿ ಹೆಚ್ಚುತ್ತಿದೆ ಎಂದರೆ ಆಗ ನೀವು ಈ ಪರಿಹಾರ ಹುಡುಕಬಹುದು. ನೀವು ಮನೆಯ ಮುಖ್ಯ ದ್ವಾರದ ಬಲಭಾಗದಲ್ಲಿ ತುಳಸಿ ಗಿಡವನ್ನು ಮತ್ತು ಮನೆಯ ಎಡಭಾಗದಲ್ಲಿ ಬಾಳೆ ಮರವನ್ನು ನೆಡಬೇಕು. ಬಾಳೆ ಮರ ಹೆಚ್ಚು ಎತ್ತರವಾಗಿರಬಾರದು ಎಂಬುದನ್ನು ನೆನಪಿನಲ್ಲಿಡಿ.

ಮುರಿದ ಪಾತ್ರೆಗಳು ಬೇಡ  (Broken utensils)
ಮುರಿದ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ತುಂಬಾ ಕೆಟ್ಟ ವಾಸ್ತು. ಮನೆಯಲ್ಲಿ ಮುರಿದ ಪಾತ್ರೆಗಳು, ಒಡೆದ ಗಾಜು, ಮುರಿದ ಪೀಠೋಪಕರಣಗಳು ಅಥವಾ ಹರಿದ ಕೋಟ್‌ಗಳು ಇರುವುದು ಬಹಳಷ್ಟು ಬಡತನವನ್ನು ತರುತ್ತದೆ. ಮುರಿದ ವಸ್ತುಗಳನ್ನು ತಪ್ಪಾಗಿಯೂ ಮನೆಯಲ್ಲಿ ಇಡಬೇಡಿ. ಹಾಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ. ನಿಮ್ಮ ಮನೆಯಲ್ಲಿ ಮುರಿದ ವಸ್ತು ಇದ್ದರೆ, ಅದನ್ನು ತಕ್ಷಣ ಹೊರಗೆ ಎಸೆದು ಎಸೆಯಿರಿ. 

ಮೇಲ್ಚಾವಣಿ ದೀಪ (Schandelier) 
ನೀವು ಯಾವುದೇ ರೀತಿಯ ವಾಸ್ತು ತೊಂದರೆ ಎದುರಿಸುತ್ತಿದ್ದರೆ ಮನೆಯ ಮೇಲ್ಚಾವಣಿಯಲ್ಲಿ ದೊಡ್ಡ ದುಂಡಗಿನ ಕನ್ನಡಿಯನ್ನು ನೇತುಹಾಕಿ. ಕನ್ನಡಿಯನ್ನು ವೇಗವರ್ಧಕ ಎಂದು ಕರೆಯಲಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಕುಟುಂಬದ ಸಂತೋಷವೂ ಹೆಚ್ಚಾಗುತ್ತದೆ.

​ದೀಪಗಳು ಇರಲಿ (Lights)
ಮನೆಯಲ್ಲಿ ದೀಪವನ್ನು ಬೆಳಗಿದಾಗ ಅದು ಎಲ್ಲಾ ನಕಾರಾತ್ಮಕ ಶಕ್ತಿಯನ್ನು ನಿವಾರಿಸುವುದು. ತೈಲದ ದೀಪವನ್ನು ಬೆಳಗಿಸಿ ಪೂರ್ವದಿಕ್ಕಿನಲ್ಲಿಡಬೇಕು. ದೀಪದಲ್ಲಿ ಕನಿಷ್ಠ ಎರಡು ಬತ್ತಿ ಇರಬೇಕು. ದೀಪವನ್ನು ಶುಭವೆಂದು ಪರಿಗಣಿಸುವ ಕಾರಣ ಅದನ್ನೆಂದಿಗೂ ದಕ್ಷಿಣ ದಿಕ್ಕಿನಲ್ಲಿ ಇರಿಸಬಾರದು ಹಾಗೂ ದೀಪವನ್ನು ಎಂದಿಗೂ ಒಂದೇ ಹತ್ತಿಯಿಂದ ಬೆಳಗಬಾರದು. ಆಧ್ಯಾತ್ಮಿಕ ಪ್ರಯೋಜನಗಳಿಗಾಗಿ ನೀವು ದೇವರ ಮುಂದೆ ಅಥವಾ ಅಂಗಳದಲ್ಲಿರುವ ತುಳಸಿ ಗಿಡದ ಮುಂದೆ ದೀಪವನ್ನು ಇಡಬೇಕು.

New Year Gift: ಯಾವ ರಾಶಿಯವರಿಗೆ ಯಾವ ಗಿಫ್ಟ್ ಬೆಸ್ಟ್?

​ಮಲಗುವ ಕೋಣೆ (Bed room)
ವಾಸ್ತುಶಾಸ್ತ್ರದ ಪ್ರಕಾರ ಮಲಗುವ ಕೋಣೆ ಮನೆಯ ನೈಋತ್ಯ ದಿಕ್ಕಿನಲ್ಲಿರಬೇಕು, ದಕ್ಷಿಣ ದಿಕ್ಕು ಕೂಡಾ ಉತ್ತಮ. ಇದು ಮಾಸ್ಟರ್‌ ಬೆಡ್‌ರೂಂಗೂ ಕೂಡಾ ಅನ್ವಯಿಸುತ್ತದೆ. ಮನೆಯ ಪ್ರವೇಶ ದ್ವಾರವು ಉತ್ತರ ಅಥವಾ ಪೂರ್ವದಲ್ಲಿರಬೇಕು, ಆದರೆ ನೈಋತ್ಯದಲ್ಲಿರಬೇಕು. ಶಬ್ದ ರಹಿತ ಮತ್ತು ಶಾಂತಿಯುತ ನಿದ್ದೆಗಾಗಿ ತಲೆ ದಕ್ಷಿಣ ದಿಕ್ಕಿನ ಕಡೆಗಿರುವಂತೆ ಮಲಗಬೇಕು. ಕಾಲುಗಳು ಉತ್ತರ ದಿಕ್ಕಿನ ಕಡೆಗೆ ಇರಬೇಕು. ಅನಾರೋಗ್ಯ, ಕೆಟ್ಟ ಕನಸು ಹಾಗೂ ನಿದ್ರಾಹೀನತೆಗೆ ಉತ್ತರ ದಿಕ್ಕು ಕಾರಣವಾಗಬಹುದು. ಹಾಗಾಗಿ ತಲೆಯನ್ನು ಮಲಗುವಾಗ ಉತ್ತರ ದಿಕ್ಕಿನಲ್ಲಿ ಇಡಬಾರದು. ಪೂರ್ವದಿಕ್ಕಿನ ಕಡೆಗೆ ತಲೆ ಇಟ್ಟು ಮಲಗುವುದೂ ಪರಿಣಾಮಕಾರಿಯಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಇದು ಸಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುವ ಸ್ಥಳ. ವಿದ್ಯಾರ್ಥಿಗಳು ಬೆಳಗ್ಗೆ ಎದ್ದಾಗ ಬಲಭಾಗಕ್ಕೆ ತಿರುಗಿ ಸೂರ್ಯನ ಬೆಳಕನ್ನು ನೋಡುವುದು ಉತ್ತಮ. ಈ ರೀತಿಯಾಗಿ ತಮ್ಮ ದಿನವನ್ನು ಸಕಾರಾತ್ಮಕ ಶಕ್ತಿಯಿಂದ ಪ್ರಾರಂಭಿಸಬಹುದು.

​ಅಡುಗೆ ಮನೆ (Kitchen)
ಮನೆಯ ಈಶಾನ್ಯ ಅಥವಾ ಆಗ್ನೇಯ ಭಾಗದಲ್ಲಿ ಅಡುಗೆ ಮನೆ ಇದ್ದರೆ ಉತ್ತಮ. ಅಡುಗೆ ಮನೆಯನ್ನು ಆಳುವ ಗ್ರಹ ಶುಕ್ರ, ಇದು ಬೆಂಕಿಯನ್ನು ಪ್ರತಿನಿಧಿಸುವ ಅಂಶವೆಂದು ಹೇಳಲಾಗುತ್ತದೆ. ಅಡುಗೆ ಮನೆ ಪೂಜಾ ಕೊಠಡಿ, ಮಲಗುವ ಕೋಣೆ ಅಥವಾ ಶೌಚಾಲಯದ ಮೇಲೆ ಇರಬಾರದು. ಅದು ಕಟ್ಟಡದ ಈಶಾನ್ಯ ಭಾಗದಲ್ಲಿರಬೇಕು.

ಸ್ನಾನ ಗೃಹ (Bath room)
ಮನೆಯಲ್ಲಿರುವ ಸ್ನಾನಗೃಹವು ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಹಾಗಾಗಿ ವಾಸ್ತುಶಾಸ್ತ್ರದ ಪ್ರಕಾರ ಸ್ನಾನಗೃಹವನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ನಿರ್ಮಿಸಬೇಕು. ಸ್ನಾನಗೃಹವನ್ನು ಮನೆಯ ಯಾವುದೇ ಮೂಲೆಯಲ್ಲಿ ನಿರ್ಮಿಸಬಾರದು. ಶೌಚಾಲಯವು ಕಟ್ಟಡದ ವಾಯುವ್ಯ ಅಥವಾ ಪಶ್ಚಿಮ ಭಾಗದಲ್ಲಿ ನಿರ್ಮಿಸಬೇಕು.

​ಮೆಟ್ಟಿಲುಗಳು (Steps)
ವಾಸ್ತುಪ್ರಕಾರ, ಪಶ್ಚಿಮ ಅಥವಾ ದಕ್ಷಿಣ ದಿಕ್ಕಿನಲ್ಲಿ ಮೆಟ್ಟಿಲನ್ನು ನಿರ್ಮಿಸಬೇಕು. ಮೆಟ್ಟಿಲು ಭಾರವಾದ ನಿರ್ಮಾಣವೆಂದು ಹೇಳಲಾಗುವುದರಿಂದ ಇದು ಎಲ್ಲಾಆ ನಕಾರಾತ್ಮಕ ಶಕ್ತಿಯನ್ನು ನಿರ್ಬಂಧಿಸುತ್ತದೆ ಮತ್ತು ಯಾವುದೇ ದುಷ್ಪರಿಣಾಮಗಳು ಉಂಟಾಗುವುದಿಲ್ಲ. ಮೆಟ್ಟಿಲನ್ನು ನಿರ್ಮಿಸುವಾಗ ಅದು ಯಾವಾಗಲೂ ಪೂರ್ವ ದಿಕ್ಕಿನಿಂದ ಪಶ್ಚಿಮಕ್ಕೆ ಇಳಿಯುವಂತಿರಬೇಕು. ಅಥವಾ ಉತ್ತರದಿಂದ ದಕ್ಷಿಣಕ್ಕೆ ಇಳಿಯಬೇಕು. ಈಶಾನ್ಯ ಅಥವಾ ಮನೆಯ ಮಧ್ಯಭಾಗದಲ್ಲಿ ಮೆಟ್ಟಿಲನ್ನು ನಿರ್ಮಿಸಬಾರದು.

​ಮರಗಳು (Trees)
ಮರವಾಗುವ ಗಿಡಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡಬಹುದು. ಮನೆಯ ಹತ್ತಿರವೇ ಮರಗಳನ್ನು ನೆಡಬಾರದು. ಆಸ್ತಿಯ ದಕ್ಷಿಣ ಭಾಗವು ಗಿಡಗಳಿಗೆ ಸೂಕ್ತವಾಗಿದೆ. ಏಕೆಂದರೆ ಇದು ನೈಋತ್ಯ ದಿಕ್ಕಿನಿಂದ ನಕಾರಾತ್ಮಕ ಶಕ್ತಿಯನ್ನು ನಿರ್ಬಂಧಿಸುತ್ತದೆ. ಅಲ್ಲದೇ ಮರದ ಕೊಂಬೆಗಳು ಮನೆಯ ಮೇಲೆ ಬಾಗಿದಂತಿರಬಾರದು. ತೆಂಗು, ಬೇವು, ಹಲಸು, ಮಾವು, ನೆಲ್ಲಿ ಇತ್ಯಾದಿ ಗಿಡಗಳನ್ನು ನೆಡಬಹುದು.

ನೀರು ಪೋಲಾಗಬಾರದು (Water leakage)
ಮನೆಯ ನಲ್ಲಿ, ಪೈಪ್‌ಗಳಲ್ಲಿ ನೀರು ಸೋರಿಕೆಯಾಗಿ ಪೋಲಾಗದಂತೆ ನೋಡಿಕೊಳ್ಳಿಕೊಳ್ಳಿ. ನಲ್ಲಿಯಲ್ಲಿ ಲೀಕೇಜ್ ಇದ್ದರೆ ಕೈಯಲ್ಲಿ ಹಣ ನಿಲ್ಲುವುದಿಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಈಶಾನ್ಯ, ಆಗ್ನೇಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಇರಲೇಬಾರದು ನೀರಿನ ಟ್ಯಾಂಕ್ ಅನ್ನು ಈಶಾನ್ಯ, ಆಗ್ನೇಯ ದಿಕ್ಕಿನಲ್ಲಿ ಇರಬಾರದು, ಇದ್ದರೆ ಇದರಿಂದ ಮನೆಯ ಸದಸ್ಯರಲ್ಲಿ ಅನೇಕ ರೀತಿಯ ಒತ್ತಡಗಳು, ಆರೋಗ್ಯ ಸಮಸ್ಯೆಗಳು ಇದ್ದು ಹಣ ಖರ್ಚಾಗುವುದು. ನೀರು ಬೀಳುವಂತೆ ಮನೆಯ ಈಶಾನ್ಯ ಭಾಗದಲ್ಲಿ ಇರುವುದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವುದು. ಇಂಥ ಸ್ಥಳದ ಸ್ವಚ್ಛತೆ ಕಡೆ ಗಮನ ಹರಿಸಬೇಕು. ಇದು ಗಲೀಜಾಗಿ ಇರಬಾರದು. ಇದರಿಂದ ಮನೆಯಲ್ಲಿ ಹಣವು ಉತ್ತಮ ಸ್ಥಿತಿಯಲ್ಲಿರುವುದು.

 

click me!