ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಪಾಲಕರು ಹೆಚ್ಚು ತಲೆಕೆಡಿಸಿಕೊಳ್ತಾರೆ. ಓದಿದ್ದು ನಿಜ, ಪರೀಕ್ಷೆಯಲ್ಲಿ ಮಾತ್ರ ನಿರೀಕ್ಷಿತ ಅಂಕ ಬರ್ತಿಲ್ಲ ಎನ್ನುತ್ತಾರೆ. ಇದಕ್ಕೆ ಮಕ್ಕಳ ಬುದ್ಧಿ ಮಾತ್ರವಲ್ಲ ಅವರು ಬಳಸುವ ಬ್ಯಾಗ್ ಕೂಡ ಕಾರಣವಾಗುತ್ತದೆ. ಬ್ಯಾಗನ್ನು ವಾಸ್ತು ಪ್ರಕಾರ ಬಳಸಿದ್ರೆ ಸಮಸ್ಯೆಗೆ ಪರಿಹಾರ ಸಿಕ್ಕಂತೆ.
ವಿದ್ಯಾಭ್ಯಾಸದಲ್ಲಿ ಮಕ್ಕಳು ಮುಂದಿರಬೇಕು, ನೂರಕ್ಕೆ ನೂರು ಅಂಕ ತರಬೇಕು ಇದು ಪಾಲಕರ ಆಸೆ. ಹಾಗಾಗಿಯೇ ಮಕ್ಕಳನ್ನು ಒಳ್ಳೆ ಸ್ಕೂಲಿಗೆ ಸೇರಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ. ಇದ್ರ ಜೊತೆ ಮಕ್ಕಳಿಗೆ ಟ್ಯೂಷನ್ ಕೊಡಿಸಿ, ತಮ್ಮ ಪರೀಕ್ಷೆ ಎನ್ನುವಂತೆ ಮಕ್ಕಳ ಪರೀಕ್ಷೆಗೆ ಪಾಲಕರು ಸಿದ್ಧರಾಗ್ತಾರೆ. ಪಾಲಕರು ಮಾತ್ರವಲ್ಲ ಈಗಿನ ಮಕ್ಕಳು ಕೂಡ ವಿದ್ಯೆಯಲ್ಲಿ ಮುಂದಿದ್ದಾರೆ. ಉತ್ತಮ ಅಂಕ ಪಡೆಯಲು ಮಕ್ಕಳು ಹಗಲಿರುಳು ಶ್ರಮಿಸ್ತಾರೆ. ಕೆಲ ಮಕ್ಕಳು ರಾತ್ರಿ, ಹಗಲು ಓದಿದ್ರೂ ಅಂಕ ಮಾತ್ರ ಹೆಚ್ಚು ಸಿಗೋದಿಲ್ಲ. ಎಷ್ಟೇ ಓದಿದ್ರೂ ತಲೆಯಲ್ಲಿ ನಿಲ್ಲುತ್ತಿಲ್ಲ ಎನ್ನುವ ಮಕ್ಕಳ ಹಿಂದೆ ಅನೇಕ ಕಾರಣವಿದೆ. ಅದ್ರಲ್ಲಿ ಸ್ಕೂಲ್ ಬ್ಯಾಗ್ ಕೂಡ ಒಂದು.
ವಾಸ್ತು (Vastu) ಶಾಸ್ತ್ರದ ಪ್ರಕಾರ, ಮಕ್ಕಳ ಶಾಲೆ (School) ಬ್ಯಾಗ್ ಸರಿಯಾಗಿರಬೇಕು. ಸ್ಕೂಲ್ ಬ್ಯಾಗ್ (Bag) ಅವರ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮ ಬೀರುತ್ತದೆ. ನಾವಿಂದು ಮಕ್ಕಳು ವಿದ್ಯಾಭ್ಯಾಸ (education) ದಲ್ಲಿ ಚುರುಕಾಗ್ಬೇಕು ಅಂದ್ರೆ ಅವರ ಬ್ಯಾಗ್ ಹೇಗಿರಬೇಕು, ಅದನ್ನು ಹೇಗೆ ಬಳಸಬೇಕು ಎಂಬುದನ್ನು ಹೇಳ್ತೆವೆ.
ಪದೇ ಪದೇ ಕನಸಿನಲ್ಲಿ ಒಂದೇ ವ್ಯಕ್ತಿ ಕಂಡ್ರೆ ಏನರ್ಥ..?
ವಾಸ್ತು (Vastu) ಪ್ರಕಾರ ಹೀಗಿರಲಿ ಮಕ್ಕಳ ಸ್ಕೂಲ್ ಬ್ಯಾಗ್ :
ಸ್ಕೂಲ್ ಬ್ಯಾಗನ್ನು ಸದಾ ನೇರವಾಗಿಡಿ : ಶಾಲೆಯಿಂದ ಮನೆಗೆ ಬರ್ತಿದ್ದಂತೆ ಸ್ಕೂಲ್ ಬ್ಯಾಗ್ ಮೂಲೆ ಸೇರಿರುತ್ತದೆ. ಅದನ್ನು ಮಕ್ಕಳು ವಕ್ರವಾಗಿ ಇಲ್ಲವೆ ಮಲಗಿಸಿ ಇಡ್ತಾರೆ. ಹೀಗೆ ಮಾಡುವುದು ತಪ್ಪು. ಶಾಸ್ತ್ರದ ಪ್ರಕಾರ, ಮಕ್ಕಳ ಶಾಲೆ ಬ್ಯಾಗ್ ಯಾವಾಗ್ಲೂ ನೇರವಾಗಿರಬೇಕು. ಮನೆಯಲ್ಲಿರಲಿ, ಶಾಲೆಯಲ್ಲಿರಲಿ ಇಲ್ಲ ಸ್ಕೂಲ್ ವ್ಯಾನ್ (Van) ನಲ್ಲಿರಲಿ, ನೀವು ಎಲ್ಲಿ ಸ್ಕೂಲ್ ಬ್ಯಾಗ್ ಇಟ್ಟರೂ ಅದನ್ನು ನೇರವಾಗಿ ಇಡಿ.
ಈ ಬಣ್ಣ (Color) ದ ಬ್ಯಾಗ್ ಬೇಡ : ಸ್ವಚ್ಛಗೊಳಿಸೋದು ಸುಲಭ ಎನ್ನುವ ಕಾರಣಕ್ಕೆ ಕೆಲ ಪಾಲಕರು ಕಪ್ಪು (Black) ಬಣ್ಣದ ಸ್ಕೂಲ್ ಬ್ಯಾಗ್ ಖರೀದಿ ಮಾಡ್ತಾರೆ. ಆದ್ರೆ ವಾಸ್ತು ಪ್ರಕಾರ, ಕಪ್ಪು ಬಣ್ಣ ಒಳ್ಳೆಯದಲ್ಲ. ಮಕ್ಕಳ ಶಾಲೆ ಬ್ಯಾಗ್ ಕಪ್ಪು ಬಣ್ಣದ್ದಾಗಿದ್ದರೆ ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆಯಾಗುತ್ತದೆ. ಹಾಗಾಗಿ ಎಂದೂ ಈ ಬಣ್ಣದ ಬ್ಯಾಗ್ ಬಳಸಬೇಡಿ. ಈಗಾಗಲೇ ಕಪ್ಪು ಬಣ್ಣದ ಬ್ಯಾಗ್ ಬಳಕೆ ಮಾಡ್ತಿದ್ದಾರೆ ಎಂದಾದ್ರೆ ಅದ್ರ ಮೇಲೆ ಬೇರೆ ಬಣ್ಣದ ಸ್ಟಿಕ್ಕರ್ ಅಂಟಿಸಿ.
ಬ್ಯಾಗನ್ನು ಈ ದಿಕ್ಕಿನಲ್ಲಿ ಇಡಿ : ಮಕ್ಕಳು ಶಾಲೆಯಿಂದ ಹಿಂತಿರುಗಿದಾಗ ಅವರ ಬ್ಯಾಗನ್ನು ಸರಿಯಾದ ದಿಕ್ಕಿನಲ್ಲಿ ಇಡಲು ಪ್ರಯತ್ನಿಸಿ. ಮಗುವಿನ ಸ್ಕೂಲ್ ಬ್ಯಾಗ್ ಇಡಲು ಪೂರ್ವ, ವಾಯುವ್ಯ, ಈಶಾನ್ಯ ದಿಕ್ಕುಗಳು ಒಳ್ಳೆಯದು. ಆದಷ್ಟು ಈಶಾನ್ಯ ದಿಕ್ಕಿನಲ್ಲಿ ಬ್ಯಾಗ್ ಇಡಲು ಪ್ರಯತ್ನಿಸಿ.
ಬ್ಯಾಗ್ ನಲ್ಲಿ ಈ ವಸ್ತುಗಳನ್ನಿಡಬೇಡಿ : ಮಕ್ಕಳ ಶಾಲೆ ಬ್ಯಾಗ್ ಕಸ (Garbage)ದ ತೊಟ್ಟಿಯಾಗಿರುತ್ತದೆ. ಮಕ್ಕಳು ಇಷ್ಟವಾದ ವಸ್ತುವನ್ನೆಲ್ಲ ಬ್ಯಾಗಿಗೆ ಹಾಕ್ತಾರೆ. ಆದ್ರೆ ಕೆಲ ವಸ್ತು ಮಕ್ಕಳ ಅಧ್ಯಯನದ ಮೇಲೆ ಪ್ರಭಾವ ಬೀರುತ್ತದೆ. ಮಕ್ಕಳ ಬ್ಯಾಗ್ ನಲ್ಲಿ ಪೆನ್ಸಿಲ್ ಸಿಪ್ಪೆ, ಕಸ, ಹರಿದ ಕಾಗದ, ಮುರಿದ ಪೆನ್ ಇತ್ಯಾದಿ ಇರದಂತೆ ನೋಡಿಕೊಳ್ಳಿ. ಮಕ್ಕಳ ಬ್ಯಾಗ್ ನಲ್ಲಿ ಕಾಗದದಿಂದ ಸಿದ್ಧವಾದ ಕೆಲ ಆಟಿಕೆಗಳಿರುತ್ತವೆ. ಅವುಗಳು ಕೂಡ ಒಳ್ಳೆಯದಲ್ಲ.
ಹಣ, ಲೈಂಗಿಕ ಶಕ್ತಿ ನಿಯಂತ್ರಿಸಲು ಗೊತ್ತಿದ್ದರೆ ಜೀವನ ಸುಖ ಗ್ಯಾರಂಟಿ ಅಂತಾನೆ ಚಾಣಕ್ಯ!
ಬ್ಯಾಗ್ ನಲ್ಲಿಡುವ ಪುಸ್ತಕ ಸರಿಯಾಗಿರಲಿ : ಶಾಲೆ ಬ್ಯಾಗ್ ನಲ್ಲಿ ಪುಸ್ತಕವನ್ನು ಸರಿಯಾಗಿ ಇಟ್ಟುಕೊಳ್ಳುವಂತೆ ಮಗುವಿಗೆ ಹೇಳಿ. ಒಂದು ಪುಸ್ತಕ ಮೇಲ್ಮುಖವಾಗಿ ಇನ್ನೊಂದು ಕಳೆಮುಖವಾಗಿ ಇಡಬಾರದು. ಪುಸ್ತಕವನ್ನು ತಲೆಕೆಳಗಾಗಿ ಇಡಬಾರದು. ದೊಡ್ಡ ಪುಸ್ತಕದ ಮುಂದೆ ಸಣ್ಣ ಪುಸ್ತಕ ಇರುವಂತೆ ನೋಡಿಕೊಳ್ಳಬೇಕು.