ಫರ್ನಿಚರ್ ಖರೀದಿಸುವ ಮುನ್ನ ತಿಳಿದುಕೊಳ್ಳಬೇಕಾದ ವಾಸ್ತು ನಿಯಮಗಳು...

By Suvarna NewsFirst Published Mar 20, 2021, 4:25 PM IST
Highlights

ಮನೆಯಲ್ಲಿರುವ ಪ್ರತಿ ವಸ್ತುವು ಸಕಾರಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಇದು ವ್ಯಕ್ತಿಯ ಜೀವನದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಹಾಗಾಗಿ ಆಯಾ ವಸ್ತುಗಳನ್ನು ಸರಿಯಾದ ಸ್ಥಾನದಲ್ಲಿಡುವುದು ಅವಶ್ಯಕ. ಫರ್ನಿಚರ್ ಕೊಳ್ಳುವಾಗಲೂ ಕೆಲವು ವಾಸ್ತು ಶಾಸ್ತ್ರದ ಅಂಶಗಳನ್ನು ಗಮನಿಸಬೇಕಾಗುತ್ತದೆ. ಹಾಗಾಗಿ ಪೀಠೋಪಕರಣಗಳನ್ನು ಖರೀದಿಸುವಾಗ ಮತ್ತು ಅದನ್ನು ಮನೆಯಲ್ಲಿಡುವಾಗ ಅರಿಯಬೇಕಾದ ವಾಸ್ತು ನಿಯಮಗಳ ಬಗ್ಗೆ ತಿಳಿಯೋಣ..

ವಾಸ್ತು ಶಾಸ್ತ್ರದಲ್ಲಿ ಮನೆಗೆ ಅಡಿಪಾಯ ಹಾಕುವುದರಿಂದ ಆರಂಭವಾಗಿ ಮನೆಯ ಮಾಳಿಗೆಯನ್ನು ನಿರ್ಮಿಸುವವರೆಗೂ ಹಲವು ನಿಯಮಗಳನ್ನು ತಿಳಿಸಲಾಗಿದೆ. ಆಯಾ ವಿಷಯಕ್ಕೆ ಸಂಬಂಧಿಸಿದ ವಾಸ್ತು ವಿಚಾರಗಳನ್ನು ತಿಳಿದು ಪಾಲಿಸಿದಲ್ಲಿ ಮನೆಯಲ್ಲಿ ನೆಮ್ಮದಿ ಮತ್ತು  ಸಂತೋಷ ನೆಲೆಸಿರುತ್ತದೆ. ವಾಸ್ತು ಪ್ರಕಾರ ಮನೆಯ ಗೋಡೆಗೆ ಯಾವ ಬಣ್ಣ ಬಳಿದರೆ ಶುಭವೆಂದು ಹೇಳಲಾಗುತ್ತದೆಯೋ ಅದೇ ರೀತಿ ಅಂದವಾಗಿ ನಿರ್ಮಿಸಿರುವ ಮನೆಗೆ ಫರ್ನಿಚರ್ ಇಡುವಾಗ ಸಹ ಶುಭ –ಅಶುಭಗಳ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. 

ಮನೆಯ ಕೋಣೆ, ಗೋಡೆ, ಕಿಟಕಿ, ಅಡುಗೆ ಮನೆ, ತಾರಸಿ ಹೀಗೆ ಎಲ್ಲವನ್ನು ವಾಸ್ತು ಪ್ರಕಾರ ನಿರ್ಮಿಸುವಂತೆ, ಫರ್ನಿಚರ್ (ಪೀಠೋಪಕರಣ) ಗಳನ್ನು ಕೊಳ್ಳುವಾಗ ಮತ್ತು ಅದನ್ನು ಮನೆಯಲ್ಲಿ ಇಡುವಾಗ ಪಾಲಿಸಬೇಕಾದ ಕೆಲವು ವಾಸ್ತು ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಅವುಗಳ ಬಗ್ಗೆ ತಿಳಿಯೋಣ..   

ಇದನ್ನು ಓದಿ: ಈ ವರ್ಷ ರಾಹು ಗ್ರಹದ ನಕ್ಷತ್ರ ಪರಿವರ್ತನೆ - 5 ರಾಶಿಯವರಿಗೆ ಸಂಕಷ್ಟ, ಮತ್ತೆ ಕೆಲವರಿಗೆ ಅದೃಷ್ಟ! 

ಅಗತ್ಯಕ್ಕನುಸಾರವಾಗಿ ಫರ್ನಿಚರ್ ಕೊಳ್ಳಿ
ವಾಸ್ತು ಶಾಸ್ತ್ರದಲ್ಲಿ ಹೇಳುವಂತೆ ಮನೆಯಲ್ಲಿರುವ ಜಾಗಕ್ಕೆ ಸರಿಹೊಂದುವಂತೆ ಫರ್ನಿಚರ್ ಆಯ್ಕೆ ಮಾಡಿದರೆ ಒಳ್ಳೆಯದು. ಮನೆಯ ಜಾಗಕ್ಕಿಂತ ಫರ್ನಿಚರ್‌ಗಳೇ ಜಾಸ್ತಿ ಆದರೆ ಅದರಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಜಾಗ ಚಿಕ್ಕದಾಗಿರಲಿ ಅಥವಾ ದೊಡ್ಡದಿರಲಿ ಅದರಲ್ಲಿ ಪೂರ್ತಿ ಸೋಫಾ, ಕುರ್ಚಿ, ಮೇಜು ಹೀಗೆ ಹಲವು ಫರ್ನಿಚರ್ ಇಟ್ಟುಕೊಳ್ಳವುದು ಒಳ್ಳೆಯದಲ್ಲ. ಹೀಗಿದ್ದಾಗ ಮನೆಯಲ್ಲಿ ಅಶಾಂತಿ ಹೆಚ್ಚುತ್ತದೆ. ಹಾಗಾಗಿ ಮನೆಗೆ ಫರ್ನಿಚರ್ ಖರೀದಿಸುವಾಗ ಅಗತ್ಯವಿರುವಷ್ಟೇ ಕೊಂಡರೆ ಒಳಿತು.



ಯಾವ ದಿನ ಫರ್ನಿಚರ್ ಖರೀದಿಗೆ ಉತ್ತಮವಲ್ಲ
ಮನೆಗೆ ಫರ್ನಿಚರ್ ಖರೀದಿಸುವ ಮುನ್ನ, ದಿನ ಒಳ್ಳೆಯದಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ವಾಸ್ತು ಶಾಸ್ತ್ರದ ಪ್ರಕಾರ ಮಂಗಳವಾರ, ಶನಿವಾರ, ಅಮಾವಾಸ್ಯೆ, ಅಷ್ಟಮಿ ತಿಥಿಯಂದು ಮತ್ತು ಕೃಷ್ಣ ಪಕ್ಷದಲ್ಲಿ ಫರ್ನಿಚರ್ ಖರೀದಿಗೆ ಶುಭವಲ್ಲ. ಈ ದಿನಗಳಂದು ಫರ್ನಿಚರ್ ಖರೀದಿಸಿದರೆ ಮನೆಗೆ ಒಳಿತಾಗುವುದಿಲ್ಲ. ಹಾಗಾಗಿ ಒಳ್ಳೆಯ ದಿನವನ್ನು ಗಮನದಲ್ಲಿಟ್ಟುಕೊಂಡು ಮನೆಗೆ ಬೇಕಾದ ಫರ್ನಿಚರ್ ಖರೀದಿಸಿದರೆ ಶುಭವಾಗುತ್ತದೆ.

ಇದನ್ನು ಓದಿ: ಮಾರ್ಚ್‌ನಲ್ಲಿ ಜನಿಸಿದವರು ಹೀಗೆ ಇರ್ತಾರಂತೆ ....! 

ಫರ್ನಿಚರ್ ಯಾವ ಮರದಿಂದ ತಯಾರಾಗಿದೆ ಎಂಬುದು ಮುಖ್ಯ
ಮನೆಗೆ ಫರ್ನಿಚರ್ ಕೊಳ್ಳುವಾಗ ಕೆಲವು ಮುಖ್ಯ ಅಂಶಗಳನ್ನು ಗಮನಿಸಬೇಕಾಗುತ್ತದೆ.  ಫರ್ನಿಚರ್ ಯಾವ ಮರದಿಂದ ತಯಾರಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. ಅಶೋಕ, ಮತ್ತಿ, ತೇಗ ಮತ್ತು ಬೇವಿನ ಮರದಿಂದ ತಯಾರಾಗಿರುವ ಪೀಠೋಪಕರಣಗಳು ಶುಭವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಅಶ್ವತ್ಥ, ಆಲ, ಶ್ರೀಗಂಧದ ಮರಗಳಿಂದ ತಯಾರಾಗಿರುವ ಫರ್ನಿಚರ್ ಉತ್ತಮವಲ್ಲವೆಂದು ಹೇಳಲಾಗುತ್ತದೆ. ಮನೆಯಲ್ಲಿ ದೇವರ ಕೋಣೆಗೆ ಶ್ರೀಗಂಧದ ಮರದ ಉಪಯೋಗ ಮಾಡಬಹುದಾಗಿದೆ.

ಯಾವ ದಿಕ್ಕಿಗೆ ಇಟ್ಟರೆ ಉತ್ತಮ
ಮನೆಯ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ಆದಷ್ಟು ಜಾಗ ಬಿಟ್ಟರೆ ಉತ್ತಮ. ಇಲ್ಲವೆ ಕಡಿಮೆ ಫರ್ನಿಚರ್ ಅನ್ನು ಈ ದಿಕ್ಕಿನಲ್ಲಿ ಇಡಬಹುದಾಗಿದೆ. ಫರ್ನಿಚರ್ ಹೆಚ್ಚು ಇದ್ದರೆ ಅದನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿಡಬೇಕು. 

ಇದನ್ನು ಓದಿ: ಮಾನಸಿಕ ಒತ್ತಡ, ಕೋರ್ಟ್ ಕಲಹ ಮುಕ್ತಿಗೆ ಈ ಮಂತ್ರ ಜಪಿಸಿ! 

ಫರ್ನಿಚರ್‌ಗೆ ಸಂಬಂಧಿಸಿದಂತೆ ಗಮನಿಸಬೇಕಾದ ವಿಚಾರಗಳು
ಸಾಮಾನ್ಯವಾಗಿ ಫರ್ನಿಚರ್‌ನ ತುದಿ ಚೂಪಾಗಿರುತ್ತದೆ, ಆದರೆ ವಾಸ್ತು ಪ್ರಕಾರ ಫರ್ನಿಚರ್‌ನ ತುದಿ ಗುಂಡಾಗಿದ್ದರೆ ಉತ್ತಮವೆಂದು ಹೇಳಲಾಗುತ್ತದೆ. ಚೂಪಾದ ತುದಿಯುಳ್ಳ ಫರ್ನಿಚರ್‌ಗಳಿಂದ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲದೆ ಫರ್ನಿಚರ್‌ನ ಬಣ್ಣವು ತೀರಾ ಡಲ್ ಇರುವುದು ಒಳ್ಳೆಯದಲ್ಲ. ಡೈನಿಂಗ್ ಟೇಬಲ್ ಕೊಳ್ಳುವಾಗಲು ಚೌಕ ಆಕಾರದ ಟೇಬಲ್ ಖರೀದಿಸುವುದು ಉತ್ತಮ. ಮೊಟ್ಟೆಯ ಆಕಾರದಲ್ಲಿ ಬರುವ ಟೇಬಲ್‌ಗಳು ಒಳ್ಳೆಯದಲ್ಲವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಹದಗೆಡುವುದಲ್ಲದೆ, ಆ ಟೇಬಲ್‌ನಲ್ಲಿ ಕುಳಿತು ಆಹಾರ ಸೇವಿಸಿದವರ ನಡುವೆ ಪರಸ್ಪರ ಭಿನ್ನಾಭಿಪ್ರಾಯ ಏರ್ಪಡುವ ಸಾಧ್ಯತೆ ಇರುತ್ತದೆ.

click me!