ಖಾಸ್‌ಬಾತ್ ನಡೆಯೋ ಬಾತ್‌ರೂಮ್‌ ಹೀಗಿದ್ರೇನೆ ಚೆಂದ!

By Suvarna News  |  First Published Mar 17, 2021, 3:27 PM IST

ಮನೆಯ ಮೂಲೆ ಮೂಲೆಗೂ ಅಲಂಕಾರ ಮಾಡೋ ಕಾಲ ಇದು. ಹೀಗಿರೋವಾಗ ಬಾತ್‌ರೂಮ್‌ ಬಗ್ಗೆ ತಲೆಕೆಡಿಸಿಕೊಳ್ಳದಿದ್ರೆ ಹೇಗೆ? ಸ್ವಲ್ಪ ಕ್ರಿಯೇಟಿವಾಗಿ ಯೋಚಿಸಿದ್ರೆ ಬಾತ್‌ರೂಮ್‌ಗೂ ಹೊಸ ಮೆರುಗು ನೀಡ್ಬಹುದು.


ಮನೆಯಲ್ಲಿಸಂಪೂರ್ಣ ಪ್ರೈವೆಸಿ ಸಿಗೋ ಜಾಗವೆಂದ್ರೆ ಅದು ಬಾತ್‌ರೂಮ್‌. ಇದು ದೇಹದ ಕೊಳೆ ತೆಗೆಯೋ ಜಾಗವಾದ್ರೂ ಮನಸ್ಸಿನ ಚಿಂತನ-ಮಂಥನಕ್ಕೆ ಇದಕ್ಕಿಂತ ಉತ್ತಮ ತಾಣ ಬೇರೊಂದಿಲ್ಲ.ಈ ಏಕಾಂತದಲ್ಲಿ ನಮ್ಮ ಮಿದುಳು ಸಕ್ರಿಯವಾಗಿ ಕೆಲ್ಸ ಮಾಡೋ ಕಾರಣ ಸ್ನಾನ ಮುಗಿಯೋದ್ರೊಳಗೆ ವಿನೂತನ ಐಡಿಯಾಗಳು,ಯೋಚನೆಗಳು ಹೊಳೆಯುತ್ತವೆ.ಎಷ್ಟೋ ಬಾರಿ ರಾತ್ರಿಯೆಲ್ಲ ತಲೆ ಕೊರೆದ ಸಮಸ್ಯೆಗೆ ಬೆಳಗ್ಗೆ ಸ್ನಾನದ ಮನೆಯಲ್ಲೇ ಪರಿಹಾರ ಸಿಕ್ಕಿರುತ್ತೆ. ಆದ್ರೆ ಮನೆಯ ಅಲಂಕಾರದ ವಿಷಯಕ್ಕೆ ಬಂದ್ರೆ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗೋ ಸ್ಥಳ ಇದೇ ಆಗಿರುತ್ತೆ.ಮನೆ ಕಟ್ಟೋವಾಗ ಅಥವಾ ಇಂಟೀರಿಯರ್‌ ಡಿಸೈನ್‌ ಮಾಡೋವಾಗ ಬಹುತೇಕರು ಬಾತ್‌ರೂಮ್‌ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳೋದಿಲ್ಲ.ಹೀಗಾಗಿ ಬಹುತೇಕ ಮನೆಯ ಬಾತ್‌ರೂಮ್‌ಗಳು ಮಾಮೂಲಿ ಸಿಂಕ್‌, ಗೀಸರ್‌, ಟ್ಯಾಪ್‌ಗಳಿಂದ ಕೂಡಿರುತ್ತವೆ ಬಿಟ್ರೆ ಅಲ್ಲಿ ಬೇರೇನೂ ಹೊಸತು ಕಾಣಿಸೋದಿಲ್ಲ.ಆದ್ರೆ ಸ್ವಲ್ಪ ಕ್ರಿಯೇಟಿವ್‌ ಆಗಿ ಯೋಚಿಸಿದ್ರೆ ಬಾತ್‌ರೂಮ್‌ ಅಂದವನ್ನು ಕೂಡ ಹೆಚ್ಚಿಸಬಹುದು.ಅರೇ, ಬಾತ್‌ರೂಮ್‌ಗೆ ಅಲಂಕಾರ ಮಾಡೋದು ಹೇಗಪ್ಪ ಎಂದು ಯೋಚಿಸುತ್ತಿದ್ದೀರಾ? ಇಲ್ಲಿವೆ ನೋಡಿ ಟಿಪ್ಸ್.

ಬೆಡ್‌ ರೂಂನಲ್ಲಿ ಆ ಫೋಟೋಗಳಿದ್ದರೆ ದಾಂಪತ್ಯ ಜೀವನ ಸುಖಮಯ

Latest Videos

ವಿನೂತನ ವಿನ್ಯಾಸದ ಸಿಂಕ್ಸ್‌, ಟ್ಯಾಪ್ಸ್ 
ಬಾತ್‌ರೂಮ್‌ ಎಂದ ಮೇಲೆ ಅಲ್ಲೊಂದು ಸಿಂಕ್‌ ಇರಲೇಬೇಕು. ಸಿಂಕ್‌ ಕೈ, ಮುಖ ತೊಳೆಯೋಕ್ಕಾಗಿಯೇ ಇದ್ರೂ ಇತ್ತೀಚಿನ ದಿನಗಳಲ್ಲಿ ವಿನೂತನ ವಿನ್ಯಾಸದ ಸ್ಟೈಲಿಷ್‌ ಸಿಂಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಒಮ್ಮೆ ನೋಡಿದ್ರೆ ಇನ್ನೊಮ್ಮೆ ನೋಡ್ಬೇಕು ಅನ್ನುವಷ್ಟು ಸುಂದರ ವಿನ್ಯಾಸದ ಸಿರಾಮಿಕ್‌ ಸಿಂಕ್‌ಗಳು ಬಾತ್‌ರೂಮ್‌ನ ಮೆರುಗು ಹೆಚ್ಚಿಸಬಲ್ಲವು. ಬಾತ್‌ರೂಮ್‌ ಗೋಡೆಗಳ ಬಣ್ಣಕ್ಕೆ ಅನುಗುಣವಾಗಿ ಸಿಂಕ್‌ಗಳನ್ನು ಆಯ್ಕೆ ಮಾಡ್ಬಹುದು. ಈಗಂತೂ ನಾನಾ ಬಣ್ಣಗಳ ಸಿಂಕ್‌ಗಳು ಲಭ್ಯವಿವೆ. ರೌಂಡ್‌, ಸ್ಕ್ವೇರ್‌, ಸ್ಪೈರಲ್‌ ಸೇರಿದಂತೆ ವಿವಿಧ ಆಕೃತಿಗಳಲ್ಲಿ ಸಿರಾಮಿಕ್‌, ಗ್ಲಾಸ್‌ ಹಾಗೂ ಸ್ಟೋನ್‌ ಸಿಂಕ್‌ಗಳು ಲಭಿಸುತ್ತವೆ. ಇನ್ನು ಟ್ಯಾಪ್‌ಗಳು, ಶವರ್‌ ಫಿಟ್ಟಿಂಗ್ಸ್‌ ಕೂಡ ನಾನಾ ವಿನ್ಯಾಸಗಳಲ್ಲಿ ಲಭಿಸುತ್ತವೆ. ಬಾತ್‌ರೂಮ್‌ಗೆ ಹೊಂದಿಕೆಯಾಗೋ ಆಕೃತಿ, ಗೋಡೆ ಬಣ್ಣಕ್ಕೆ ಹೊಂದಿಕೆಯಾಗೋ ಕಲರ್‌ನ ಗೀಸರ್‌ಗಳನ್ನು ಅಳವಡಿಸೋದ್ರಿಂದ ಸ್ನಾನದಮನೆಯ ಅಂದ ಹೆಚ್ಚುತ್ತೆ. ಸೋಪ್‌ ಹೋಲ್ಡರ್‌, ಟವಲ್‌ ಹೋಲ್ಡರ್‌ಗಳಲ್ಲಿ ಕೂಡ ವಿಭಿನ್ನತೆಗೆ ಆದ್ಯತೆ ನೀಡಬಹುದು.

ವಾಸ್ತುಶಾಸ್ತ್ರ : ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಯಾವಾಗ್ಲೂ ಹ್ಯಾಪಿ

ಹೂಗಳ ವಿನ್ಯಾಸ
ಹೂ ನೋಡಿದ್ರೆ ಯಾರ ಮನಸ್ಸು ಅರಳೋದಿಲ್ಲಹೇಳಿ? ಬಾತ್‌ರೂಮ್‌ಗೆ ಕಾಲಿಟ್ಟ ತಕ್ಷಣ ಮನಸ್ಸು ಅರಳಬೇಕೆಂದ್ರೆ ಅಲ್ಲಿ ಹೂಗಳ ತೋರಣ ಇರ್ಬೇಕು. ಅಂದ್ರೆ ಸೀಲಿಂಗ್‌, ಗೋಡೆ, ನೆಲಕ್ಕೆ ಹೂವಿನ ಡಿಸೈನ್‌ ಟೈಲ್ಸ್‌ಗಳನ್ನು ಬಳಸೋದ್ರಿಂದ ಬಾತ್ರೂಮ್‌ ಅಂದ ಇಮ್ಮಡಿಗೊಳಿಸಬಹುದು. ಕರ್ಟನ್ಸ್‌ ಆಯ್ಕೆಯಲ್ಲೂ ಹೂವು, ಮೊಗ್ಗುಗಳಿರೋ ಡಿಸೈನ್‌ಗೆ ಆದ್ಯತೆ ನೀಡ್ಬಹುದು. ಈಗಂತೂ ಬಾತ್‌ರೂಮ್‌ನಲ್ಲಿ ವೆಟ್‌, ಡ್ರೈ ಎಂದು ಎರಡು ವಿಭಾಗಗಳನ್ನು ಮಾಡ್ತಾರೆ. ಹೀಗಾಗಿ ಡ್ರೈ ಏರಿಯಾದಲ್ಲಿ ಫ್ಲೋರಲ್‌ ವಾಲ್‌ಪೇಪರ್‌ ಬಳಸ್ಬಹುದು. 

ಥೀಮ್ಡ್‌ ಟೈಲ್ಸ್
ಇತ್ತೀಚಿನ ದಿನಗಳಲ್ಲಿ ಇಂಟೀರಿಯರ್‌ ಡಿಸೈನ್‌ನಲ್ಲಿ ಥೀಮ್‌ಗೆ ಹೆಚ್ಚಿನ ಮಹತ್ವ. ಬಾತ್‌ರೂಮ್‌ ಅಲಂಕಾರಕ್ಕೂ ಒಂದು ಥೀಮ್‌ ಇಟ್ಟುಕೊಳ್ಳಬಹುದು. ಫ್ಲೋರ್‌, ವಾಲ್‌ ಟೈಲ್ಸ್ ಒಂದಕ್ಕೊಂದು ಹೊಂದಿಕೆಯಾಗೋವಂತೆ ಇರಲಿ. ಇನ್ನು ಸಿಂಕ್‌ ಸೇರಿದಂತೆ ಬಾತ್‌ರೂಮ್‌ನಲ್ಲಿರೋ ಇತರ ವಸ್ತುಗಳು ಕೂಡ ಒಂದಕ್ಕೊಂದು ಮ್ಯಾಚ್‌ ಆಗುವಂತೆ ಇದ್ರೆ ನಿಮ್ಮ ಮನಸ್ಸಿಗೂ ಖುಷಿ, ಜೊತೆಗೆ ನಿಮ್ಮನೆಗೆ ಭೇಟಿ ನೀಡಿದವರು ಕೂಡ ಬಾತ್‌ರೂಮ್‌ ನೋಡಿ ಬೆರಗಾಗೋದು ಗ್ಯಾರಂಟಿ.

ಲೈಟಿಂಗ್
ಲೈಟ್‌ಗಳ ಮೂಲಕ ಬಾತ್‌ರೂಮ್‌ಗೆ ಹೊಸ ಮೆರುಗು ನೀಡಬಹುದು. ನಿಮ್ಮ ಅಭಿರುಚಿಗೆ ತಕ್ಕಂತಹ ಲೈಟಿಂಗ್‌ ಆಯ್ಕೆ ಮಾಡ್ಬಹುದು. ಸಿಂಕ್‌ ಸೇರಿದಂತೆ ಬಾತ್‌ರೂಮ್‌ನ ವಿವಿಧ ಭಾಗಗಳಲ್ಲಿ ಅಲ್ಲಿಗೆ ಹೊಂದಿಕೆಯಾಗೋ ಲೈಟಿಂಗ್‌ ಬಳಸೋದ್ರಿಂದ ಮನಸ್ಸಿಗೆ ಹಿತಾನುಭವ ಸಿಗುತ್ತೆ. 

ಕನಸಿನ ಮನೆ ಖರೀದಿಸುವ ಮುನ್ನ ಈ ವಾಸ್ತು ಸಲಹೆ ಪಾಲಿಸಿ

ಎಸೆನ್ಸಿಯಲ್‌ ಆಯಿಲ್ಸ್‌, ಸೆಂಟೆಡ್‌ ಕ್ಯಾಂಡಲ್ಸ್
ಲೈಟಿಂಗ್‌ನಂತೆ ಸುವಾಸನೆ ಕೂಡ ಮನಸ್ಸಿನ ಮೇಲೆ ಪ್ರಭಾವ ಬೀರಬಲ್ಲದು. ಬಾತ್‌ರೂಮ್‌ನಲ್ಲಿಎಸೆನ್ಸಿಯಲ್‌ ಆಯಿಲ್ಸ್‌, ಸೆಂಟೆಡ್‌ ಕ್ಯಾಂಡಲ್ಸ್‌ಗಳನ್ನಿರಿಸೋದ್ರಿಂದ ಒಳಹೊಕ್ಕ ತಕ್ಷಣ ಆಹ್ಲಾದಕರ ಅನುಭವವಾಗುತ್ತೆ.

ಕನ್ನಡಿ
ಕನ್ನಡಿ ಬಾತ್‌ರೂಮ್‌ನಲ್ಲಿ ಬೆಳಕನ್ನು ಹೆಚ್ಚಿಸುತ್ತೆ. ಉದ್ದನೆಯ ಕನ್ನಡಿ ಬಳಕೆಯಿಂದ ಬಾತ್‌ರೂಮ್‌ನಲ್ಲಿಸ್ಥಳಾವಕಾಶ ಹೆಚ್ಚಿರುವಂತೆ ಕಾಣಿಸುತ್ತೆ. ಕನ್ನಡಿಯ ಫ್ರೇಮ್‌ ಆಯ್ಕೆ ಮಾಡೋವಾಗ ಬಾತ್‌ರೂಮ್‌ನ ಇತರ ಅಲಂಕಾರಕ್ಕೆ ಹೊಂದುವಂತದ್ದನ್ನೇ ಆರಿಸಿ. 

click me!