ದೀಪಾವಳಿ ನಂತ್ರ ಅದೃಷ್ಟ ಖುಲಾಯಿಸ್ಬೇಕಿದ್ರೆ, ವಾಸ್ತುಪ್ರಕಾರ ಹೀಗೆ ಮಾಡಿ....

By Suvarna News  |  First Published Nov 3, 2021, 5:46 PM IST

ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಅಂಶಗಳನ್ನು ನೀವು ಅನುಸರಿಸಿದರೆ ಬೇಗ ಸಮಸ್ಯೆಗಳಿಗೆ ಮುಕ್ತಿ ಪಡೆದುಕೊಳ್ಳಬಹುದಾಗಿದೆ. ಇದು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಅದೃಷ್ಟವನ್ನು ತಂದು ಕೊಡುತ್ತದೆ. ನಿಮ್ಮ ಜೀವನವೂ ಸಮೃದ್ಧವಾಗಲಿದೆ. ಹಾಗಾದರೆ ಈ ದೀಪಾವಳಿಗೆ ನೀವು ಏನು ಮಾಡಿದರೆ ಸೂಕ್ತ ಎಂಬ ಬಗ್ಗೆ ಇಲ್ಲಿದೆ ಮಾಹಿತಿ....


ಮನುಷ್ಯ ಎಂದ ಮೇಲೆ ತೊಂದರೆಗಳು ಸಹಜ. ಹಾಗಂತ ನಿರಂತರವಾಗಿ ತೊಂದರೆಗಳಾಗುತ್ತಿದೆ ಎಂದರೆ, ಎಷ್ಟೇ ಪರಿಶ್ರಮ ಹಾಕಿದರೂ ಸಮಸ್ಯೆ ಆಗುತ್ತಲೆ ಇದೆ ಎಂದಾದರೆ ಬೇರೆ ಬೇರೆ ರೀತಿಯಲ್ಲಿ ಸಮಸ್ಯೆಗಳು ಆಗುತ್ತಿವೆ ಎಂದರ್ಥ. ಇದಕ್ಕೆ ವಾಸ್ತು ದೋಷವೂ ಕಾರಣವಾಗಿರಬಹುದು. ಹೀಗಾಗಿ ವಾಸ್ತುವಿನಲ್ಲಿ ಕೆಲವು ಮಾರ್ಗಗಳನ್ನು ಅನುಸರಿಸಿದಲ್ಲಿ ನಿಮ್ಮ ಲಕ್ ಬದಲಾಗಬಹುದು. ಮನೆಗಳಲ್ಲಿ ಸಕಾರಾತ್ಮಕ ಶಕ್ತಿಗಳು ಹೇಗಿರುತ್ತದೋ, ನಕಾರಾತ್ಮಕ ಶಕ್ತಿಗಳ ಪ್ರವೇಶವೂ ಹಾಗೇ ಆಗುತ್ತವೆ. ಇದಕ್ಕೆ ನೀವು ಯಾವ ರೀತಿ ನಿಮ್ಮ ಮನೆಯನ್ನು ಇಟ್ಟುಕೊಳ್ಳುತ್ತೀರಿ ಎಂಬುದು ಮುಖ್ಯ. ಕೆಲವರು ನಿಮ್ಮ ಶ್ರೇಯಸ್ಸಿಗೆ ಶ್ರಮಿಸಿದರೆ ಮತ್ತೆ ಕೆಲವರು ನಿಮ್ಮ ಅವನತಿಯನ್ನು ಬಯಸುತ್ತಿರುತ್ತಾರೆ. ನಿಮ್ಮ ಪ್ರತಿ ಕೆಲಸಕ್ಕೂ ಅಡ್ಡಗಾಲನ್ನು ಹಾಕುತ್ತಾರೆ. 

ಹಾಗಾದರೆ, ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ಆಗುವುದೇ ಇಲ್ಲವೇ..? ಇದಕ್ಕೆ ಪರಿಹಾರವೇ ಇಲ್ಲವೇ ಎಂದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲವಾರು ಪರಿಹಾರಗಳಿವೆ. ಆದರೆ, ವಾಸ್ತುಶಾಸ್ತ್ರದ ಪ್ರಕಾರವೂ ನೀವು ಕೆಲವು ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. 

ವಾಸ್ತುಶಾಸ್ತ್ರದಲ್ಲಿ ವಾಸ್ತುಶಕ್ತಿಗೆ ಮೂರು ಪ್ರಮುಖ ಕ್ಷೇತ್ರಗಳಿವೆ. ಮೊದಲನೆಯದು ಈಶಾನ್ಯ, ಎರಡನೆಯದು ಬ್ರಹ್ಮಸ್ಥಾನ (ಮಧ್ಯ) ಮತ್ತು ಮೂರನೆಯದು ನೈಋತ್ಯವಾಗಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದು. ಈ ಕ್ಷೇತ್ರಗಳಲ್ಲಿ ಯಾವುದೇ ವಾಸ್ತು  ದೋಷವಿದ್ದರೂ ನಿಮ್ಮ ಯಶಸ್ಸಿನ ಹಾದಿಯಲ್ಲಿ ಸಮಸ್ಯೆಗಳು ಎದುರಾಗಲಿವೆ. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ. ಈ ದೀಪಾವಳಿಗೆ ಐದು ವಾಸ್ತು ಟಿಪ್ಸ್ ಅನುಸರಿಸಿ, ಅದೃಷ್ಟವ ನಿಮ್ಮದಾಗಿಸಿಕೊಳ್ಳಿ. 

ಇದನ್ನು ಓದಿ: ಈ ರಾಶಿಯವರಲ್ಲೇ ವಿಚ್ಚೇದನ ಹೆಚ್ಚು: ಅವು ಯಾವ್ಯಾವ ರಾಶಿ ಗೊತ್ತಾ..?

ಮುಖ್ಯ ದ್ವಾರದ ದಿಕ್ಕು (main entrance) 
ಮನೆಯ ಮುಖ್ಯ ದ್ವಾರವು ಉತ್ತರ, ಈಶಾನ್ಯ ಅಥವಾ ಪಶ್ಚಿಮ (North, North-East or West) ದಿಕ್ಕಿನಲ್ಲಿರಬೇಕು. ಏಕೆಂದರೆ ಇವುಗಳನ್ನು ಶುಭ ದಿಕ್ಕುಗಳು (auspicious direction) ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಮನೆಯ ಮುಖ್ಯ ದ್ವಾರವು ಈ ದಿಕ್ಕಿನಲ್ಲಿ ಇಲ್ಲದಿದ್ದರೆ ಅದನ್ನು ಕೆಡಗಬೇಕಾಗಿಲ್ಲ. ಬದಲಾಗಿ ನೀವು ಮಾಡಬೇಕಾಗಿರುವುದು ನಿಮ್ಮ ಮನೆಯ ಮುಖ್ಯ ಪ್ರವೇಶ ದ್ವಾರಕ್ಕೆ ಕೆಂಪು (Red) ಬಣ್ಣವನ್ನು (colour) ಲೇಪಿಸಬೇಕು. ಜೊತೆಗೆ ಕೆಂಪು ಪರದೆಯನ್ನೂ (Red curtain) ಸಹ ಹಾಕಬಹುದಾಗಿದೆ. ಇದು ವಾಸ್ತುದೋಷವನ್ನು ನಿವಾರಣೆ ಮಾಡುತ್ತದೆ. ಜೊತೆಗೆ ನಿಮಗೆ ಸಮೃದ್ಧಿಯ ಹೆಬ್ಬಾಗಿಲು ತೆರೆಯುತ್ತದೆ.

ತುಳಸಿ (Tulsi) ನೆಡುವಾಗ ಹೀಗೆ ಮಾಡಿ
ಮನೆಯೆಂದ (Home) ಮೇಲೆ ತುಳಸಿ ಗಿಡ ಇರಲೇಬೇಕು. ಅದಿಲ್ಲದಿದ್ದರೆ ಮನೆ ಅಪೂರ್ಣ ಎಂದೇ ಹೇಳಬಹುದು. ಅಲ್ಲದೆ, ತುಳಸಿ ಗಿಡಕ್ಕೆ ನಕಾರಾತ್ಮಕ (Negative)  ಶಕ್ತಿಯನ್ನು ಹೊಡೆದೋಡಿಸುವ ಶಕ್ತಿ ಇದೆ. ಆದರೆ, ನಮ್ಮಲ್ಲಿ ಅನೇಕರಿಗೆ ತುಳಸಿ ಗಿಡವನ್ನು ನೆಡಬೇಕಾದ ದಿಕ್ಕಿನ ಬಗ್ಗೆ ತಿಳಿದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮಧ್ಯದಲ್ಲಿ ಅಂಗಳದಲ್ಲಿ ನೆಡಬೇಕು. ಆದರೆ, ನಗರಗಳಲ್ಲಿ ಈ ರೀತಿ ಮಾಡಲು ಸಾಧ್ಯವಾಗದು. ಇದಕ್ಕೆ ಇನ್ನೊಂದು ಪರಿಹಾರವೂ ಇದ್ದು, ನಿಮ್ಮ ಮನೆಯಲ್ಲಿ ಯಾವುದೇ ಅಂಗಳವಿಲ್ಲದಿದ್ದರೆ ನೀವು ಅದನ್ನು ಉತ್ತರ ದಿಕ್ಕಿನಲ್ಲಿ ನೆಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಯಶಸ್ಸಿನ ಹಾದಿಯಲ್ಲಿರುವ ಎಲ್ಲ ತೊಂದರೆಗಳೂ ದೂರವಾಗಲಿವೆ. 

ಇದನ್ನು ಓದಿ: ಈ ಐದು ರಾಶಿಯವರಿಗೆ ಎಲ್ಲದರಲ್ಲೂ ನಾಚಿಕೆ ಸ್ವಲ್ಪ ಜಾಸ್ತಿನೇ

ದೇವರ ಕೋಣೆ ಈ ದಿಕ್ಕಿನಲ್ಲಿರಲಿ
ವಾಸ್ತುಪ್ರಕಾರ ದೇವರ (God) ಕೋಣೆಗೆ ಈಶಾನ್ಯ ದಿಕ್ಕು (Ishaan angle ) ಸರಿಯಾಗುತ್ತದೆ. ಈ ದಿಕ್ಕಿನಲ್ಲಿ ದೇವರ ಕೋಣೆ / ದೇವರ ದಿಕ್ಕು ಇಲ್ಲದಿದ್ದರೆ ನೀವು ತಕ್ಷಣವೇ ಅದರ ದಿಕ್ಕನ್ನು ಬದಲಾಯಿಸುವುದು (change) ಸೂಕ್ತ. ಹೀಗೆ ಮಾಡುವುದರಿಂದ ಧನಾತ್ಮಕ (positive) ಶಕ್ತಿ ಹೆಚ್ಚುವುದಲ್ಲದೆ, ಶುಭ ಫಲಗಳು ಲಭ್ಯವಾಗುತ್ತದೆ. ಈಶಾನ್ ಕೋನದಲ್ಲಿ ದೇವಾಲಯವನ್ನು ಮೇಲಕ್ಕೆ ಇಡುವುದು ಯಾವಾಗಲೂ ಉತ್ತಮಎಂಬುದನ್ನು ನಾವು ನೋಡಬೇಕಾಗಿದೆ.

ಉಪ್ಪಿನಿಂದ ( Salt ) ಮನೆಯನ್ನು ಒರೆಸಿ
ಪ್ರತಿದಿನ ಮನೆಯನ್ನು ನೀರು ಅಥವಾ ಫಿನಾಯಿಲ್‌ನಿಂದ (water or phenyl) ಎಲ್ಲರೂ ಒರೆಸುತ್ತಾರೆ. ಆದರೆ, ವಾರಕ್ಕೊಮ್ಮೆಯಾದರೂ ಬಂಡೆ ಉಪ್ಪು ಅಥವಾ ಸಮುದ್ರದ (Sea ) ಉಪ್ಪಿನೊಂದಿಗೆ ಮನೆಯನ್ನು ಒರೆಸಬೇಕು. ಇದು ಧನಾತ್ಮಕ ಶಕ್ತಿಯ ಹರಿವಿಗೆ ಸಹಾಯ ಮಾಡುವ ಮುಖಾಂತರ ನಕಾರಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ. ಇದು ಅದೃಷ್ಟದ ಬಾಗಿಲು ಸಹ ತೆರೆಯುತ್ತದೆ.

ಇದನ್ನು ಓದಿ: ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುವ ಈ ಹುಡುಗಿಯರು ಪತಿಯನ್ನು ಗೊಂಬೆಯಂತೆ ಆಡಿಸ್ತಾರಂತೆ..!!!

ಗಡಿಯಾರ ಸರಿ ದಿಕ್ಕಲ್ಲಿರಲಿ (clock )
ಮನೆಯೇ ಇರಲಿ, ಕಚೇರಿಯೇ ಆಗಲಿ ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳು (East, West and North) ಗಡಿಯಾರಕ್ಕೆ ಉತ್ತಮ ದಿಕ್ಕು ಎಂದು ಪರಿಗಣಿಸಲಾಗಿದೆ. ಈ ದಿಕ್ಕುಗಳಲ್ಲಿ ಗಡಿಯಾರ ಇಟ್ಟರೆ ಧನಾತ್ಮಕ ಶಕ್ತಿ ಹೆಚ್ಚುವುದಲ್ಲದೆ, ನಿಮಗೆ ಉತ್ತಮ ಸಮಯವೂ (Good time ) ಪ್ರಾರಂಭವಾಗುತ್ತದೆ. ಜೊತೆಗೆ ನೀವು ಅಂದುಕೊಂಡ ಕೆಲಸಗಳು, ಅಂದುಕೊಂಡ ಸಮಯಕ್ಕೇ ಪೂರ್ಣಗೊಳ್ಳುತ್ತದೆ. 
 

Tap to resize

Latest Videos

 

click me!