ಮನೆಯನ್ನು ಸುಂದರವಾಗಿ ಕಟ್ಟಿಸಿಕೊಂಡಿರುತ್ತೇವೆ, ಇಲ್ಲವೇ ಚೆನ್ನಾಗಿ ಕಟ್ಟಿರುವ ಮನೆಗೆ ಬಾಡಿಗೆಗೆ ಹೋಗಿರುತ್ತೇವೆ. ಮನೆ ಗೋಡೆಯಂದ ಮೇಲೆ ಖಾಲಿ ಬಿಟ್ಟರೆ ಚೆನ್ನಾಗಿ ಇರುವುದೇ..? ಅದಕ್ಕೊಂದು ಫೋಟೋವನ್ನು ತಗಲಿ ಹಾಕುತ್ತೇವೆ. ಹಲವಾರು ರೀತಿಯ ಫೋಟೋಗಳನ್ನು ಹಾಕುತ್ತೇವೆ. ಕೆಲವರು ಕುದುರೆಯ ಫೋಟೋವನ್ನು ಹಾಕಿಕೊಳ್ಳುತ್ತಾರೆ. ಕುದುರೆಗಳ ಫೋಟೋ ಹಾಕೋವಾಗ ಏನು ಮಾಡಬೇಕು..? ವಾಸ್ತು ನಿಯಮ ಈ ಬಗ್ಗೆ ಏನು ಹೇಳುತ್ತೆ ಅನ್ನೋದರ ಬಗ್ಗೆ ತಿಳಿಯೋಣ. ಇದು ಕಚೇರಿಗಳಿಗೂ ಅನ್ವಯವಾಗುತ್ತದೆ. ಹಾಗಾದರೆ, ಕುದುರೆಯ ಫೋಟೋವಿನ ವಾಸ್ತು ನಿಯಮ ತಿಳಿದುಕೊಳ್ಳೋಣವೇ...?
ವಾಸ್ತುಶಾಸ್ತ್ರವು (Vastu) ಜ್ಯೋತಿಷ್ಯ ಶಾಸ್ತ್ರದ (Astorlogy) ಒಂದು ಭಾಗವಾಗಿದೆ. ವಾಸ್ತುಪ್ರಕಾರವಾಗಿ ಎಲ್ಲವೂ ಇದ್ದರೆ ನೆಮ್ಮದಿ ಸುಖ - ಸಂಪತ್ತು (Happiness – Wealth) ನೆಲೆಸಿರುತ್ತದೆ. ಹಾಗಾಗಿ ವಾಸ್ತುಶಾಸ್ತ್ರಕ್ಕೆ ವಿಶೇಷವಾದ ಮಹತ್ವವಿದೆ. ಮನೆಯಲ್ಲಿರುವ ಫೋಟೋಗಳು, (Photo) ದೇವರ ಪ್ರತಿಮೆಗಳು, ಇನ್ನೂ ಅನೇಕ ಬಗೆಯ ವಿಶೇಷ ರೀತಿಯ ಚಿತ್ರಗಳು ಮನೆಯ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಚಿತ್ರಗಳಿಂದ ಸಕಾರಾತ್ಮಕ (Positive Vibes) ಪ್ರಭಾವ ಉಂಟಾದರೆ, ಮತ್ತೆ ಕೆಲವು ಫೋಟೋಗಳು, ಪೇಂಟಿಂಗ್‌ಗಳಿಂದ ನಕಾರಾತ್ಮಕ (Negative) ಶಕ್ತಿಯ ಹರಿವು ಮನೆಯೊಳಗೆ ಆಗುತ್ತದೆ.
ಇದನ್ನು ಓದಿ: ರಾಶಿ ಚಕ್ರಗಳಲ್ಲಿ ಅಡಗಿರೋ ರಹಸ್ಯ ಗೊತ್ತೇ..? ನಿಮ್ಮದ್ಯಾವ ರಾಶಿ?
ಹಾಗೆಯೇ ಓಡುತ್ತಿರುವ ಏಳು ಕುದುರೆಗಳ ಪೇಂಟಿಂಗ್ (Painting) ಅನ್ನು ಹಲವು ಕಡೆ ನೋಡಿರುತ್ತೇವೆ. ಇಂತಹ ಫೋಟೋಗಳನ್ನು ಕೆಲವು ಜ್ಯೋತಿಷಿಗಳಲ್ಲಿ (Astrologer) ಕೇಳಿ ಹಾಕಿದ್ದರೆ, ಮತ್ತೆ ಕೆಲವರು ಕೇಳದೆಯೇ ಕೇವಲ ಇಷ್ಟವಾಗಿದೆ ಎಂಬ ಕಾರಣಕ್ಕೆ ಹಾಕಿಕೊಂಡಿರುತ್ತಾರೆ. ಮತ್ತೆ ಕೆಲವರು ಶೋಗಾಗಿ ಹಾಕಿರುತ್ತಾರೆ. ಹಾಗಾದರೆ, ಇಂಥ ಫೋಟೋ ಹಾಕಿದರೆ ಕೆಡುಕೇ..? ಅನ್ನೋ ಪ್ರಶ್ನೆ ಏಳೋದು ಸಹಜ, ಖಂಡಿತಾ ಕೆಡುಕಲ್ಲ ಅನ್ನುತ್ತೆ ವಾಸ್ತು ಶಾಸ್ತ್ರ. ಇದು ಅನೇಕ ರೀತಿಯಲ್ಲಿ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಇದರಿಂದ ಹಲವಾರು ರೀತಿಯಲ್ಲಿ ಲಾಭಗಳು (Beniffits) ಇವೆ ಎಂದೂ ಹೇಳಲಾಗುತ್ತದೆ. ಇನ್ನು ಕೇವಲ ಒಂದೇ ಕುದುರೆ ಫೋಟೋ ಇದ್ದರೆ ಹೇಗೆ..? ಕೆಡಕಾಗುತ್ತದಾ ಎಂಬಿತ್ಯಾದಿ ವಿವರಗಳನ್ನು ನಾವಿಲ್ಲಿ ಕಾಣಬಹುದು. ಹಾಗಾದರೆ ಈ ಬಗ್ಗೆ ತಿಳಿಯೋಣ ಬನ್ನಿ...
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಏಳು ಕುದುರೆಗಳು ಓಡುತ್ತಿರುವ ಭಾವಚಿತ್ರವನ್ನು ಹಾಕಲಾಗುತ್ತದೆ. ಇದರಿಂದ ಕೆಲಸ ಕಾರ್ಯಗಳು ಬೇಗ ಆಗುತ್ತವೆ. ಓಡುತ್ತಿರುವ ಕುದುರೆಯು (Horse) ಸಫಲತೆಯ ಸಂಕೇತವಾಗಿದೆ. ಹಾಗಂತ ಇದನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಹಾಕುವುದಲ್ಲ. ಹಾಗೆ ಹಾಕಿದಲ್ಲಿ ಪ್ರಯೋಜನವು ಸಿಗದೆಯೂ ಇರಬಹುದು. ಬದಲಾಗಿ ಸರಿಯಾದ ದಿಕ್ಕಿನ ಬಗ್ಗೆ ಗಮನ ಹರಿಸಬೇಕು. ಈ ರೀತಿಯ ಭಾವಚಿತ್ರವನ್ನು ಮನೆ ಮತ್ತು ಕಚೇರಿಗಳಲ್ಲಿ ಹಾಕಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಸಂಖ್ಯೆ ಏಳು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಸಪ್ತಪದಿ, ಸಪ್ತ ಋುಷಿ, ಕಾಮನಬಿಲ್ಲು ಹೀಗೆ ಏಳಕ್ಕೆ ವಿಶೇಷ ಮಾನ್ಯತೆಯಿದೆ.
ಇದನ್ನು ಓದಿ: ಶ್ರವಣ, ಧನಿಷ್ಠಾ, ಶತಭಿಷಾ ನಕ್ಷತ್ರದವರ ವಿಶೇಷ ಗುಣ ಅರಿಯಿರಿ..!
ಓಡುತ್ತಿರುವ ಕುದುರೆ ಫೋಟೋ ಹಿಂದಿನ ವಾಸ್ತು ನಿಯಮ...
- ಒಂದೇ ಕುದುರೆ ಇರುವ ಪೇಂಟಿಂಗ್ ಅಥವಾ ಭಾವಚಿತ್ರವನ್ನು ಮನೆಯಲ್ಲಿ ಹಾಕಬಾರದು. ಇದರಿಂದ ನಷ್ಟ (loss) ಸಂಭವಿಸುತ್ತದೆ.
- ಓಡುತ್ತಿರುವ ಕುದುರೆಗಳು ಪ್ರಗತಿಯ ಪ್ರತೀಕವಾಗಿದೆ. ಈ ರೀತಿಯ ಭಾವಚಿತ್ರವನ್ನು ತೂಗು ಹಾಕುವುದರಿಂದ ಮನೆಯಲ್ಲಿ ಏಳಿಗೆ ಆಗುತ್ತದೆ. ಕೆಲಸದಲ್ಲಿ ಪ್ರಗತಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ವ್ಯಾಪಾರದಲ್ಲಿ ಲಾಭ ಸಿಗುತ್ತದೆ.
- ಪ್ರತಿ ದಿನ ಓಡುವ ಕುದುರೆಗಳ ಭಾವಚಿತ್ರವನ್ನು ನೋಡುವುದರಿಂದ ಕಾರ್ಯಕ್ಷಮತೆಯ ಮೇಲೆ ಉತ್ತಮ ಪರಿಣಾಮವಾಗುತ್ತದೆ. ಅಷ್ಟೇ ಅಲ್ಲದೆ ಕೆಲಸ ಬೇಗ ಸಾಗುತ್ತದೆ. ಕುದುರೆಗಳು ಸಮೃದ್ಧಿ ಮತ್ತು ಶಕ್ತಿಯ ಪ್ರತೀಕವಾಗಿವೆ.
- ಕಚೇರಿಯಲ್ಲಿ ಕುದುರೆಗಳ ಭಾವಚಿತ್ರವನ್ನು ಹಾಕುವಾಗ ಗಮನವಿರಬೇಕು. ಈ ಸ್ಥಳದಲ್ಲಿ ಕುದುರೆಗಳ ಮುಖ ಕಚೇರಿ (Office) ಒಳಗೆ ಪ್ರವೇಶ ಮಾಡಿದಂತೆ ಇರಬೇಕು. ಇಲ್ಲದಿದ್ದರೆ ಕೆಡಕು ಎಂದೇ ಹೇಳಲಾಗುತ್ತದೆ. ದಕ್ಷಿಣ ದಿಕ್ಕಿನಲ್ಲಿ ಹಾಕಬೇಕಾಗುತ್ತದೆ. ಇಲ್ಲವಾದರೆ, ವಾಸ್ತು ತಜ್ಞರನ್ನು ಕರೆಸಿ ಹಾಕಿಸಿಕೊಳ್ಳಬಹುದು.
- ಭಾವಚಿತ್ರದಲ್ಲಿ ಕುದುರೆಗಳು ಬೇರೆ ಬೇರೆ ದಿಕ್ಕಿನ ಕಡೆ ಓಡುತ್ತಿದ್ದರೆ ಅಂತಹ ಚಿತ್ರವನ್ನು ಹಾಕದಿರುವುದು ಒಳಿತು. ಹೀಗೆ ಹಾಕುವುದರಿಂದ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ.
- ಕುದುರೆಗಳ ಫೋಟೋ ಮೇಲೆ ಧೂಳು ಇರುವಂತಿಲ್ಲ, ಅಲ್ಲದೆ, ಫೋಟೋ ಒಡೆದಿರಲೂಬಾರದು.
- ಕುದುರೆಗಳ ಭಾವಚಿತ್ರವನ್ನು ಮನೆಯಲ್ಲಿ ಹಾಕುವಾಗ ಪೂರ್ವ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬೇಕು. ಇದರಿಂದ ಮನೆಯಲ್ಲಿ ಧನ-ಧಾನ್ಯ ವೃದ್ಧಿಸುತ್ತದೆ. ಲಕ್ಷ್ಮೀ ದೇವಿ ಪ್ರಸನ್ನಳಾಗಿ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ.
- ಕುದುರೆಗಳು ಪ್ರಸನ್ನವಾಗಿ, ತೇಜಸ್ಸು ಹೊಂದಿದಂತೆ ಇರುವ ಫೋಟೋಗಳನ್ನೇ ಆಯ್ಕೆ ಮಾಡಿ ಮನೆ ಅಥವಾ ಕಚೇರಿಯಲ್ಲಿ ಹಾಕಿ. ಆಕ್ರೋಶದ ಮುಖವುಳ್ಳ ಫೋಟೋವನ್ನು ಹಾಕಿದರೆ ನಕಾರಾತ್ಮಕ ಶಕ್ತಿಯು ಪ್ರವಹಿಸುವಂತಾಗುತ್ತದೆ.
ಇದನ್ನು ಓದಿ: ಜಾತಕದ ಈ ಸ್ಥಾನದಲ್ಲಿ ಶನಿ ಇದ್ದರೆ ಆಗುವ ಕೆಲಸವೂ ಆಗುವುದಿಲ್ಲ..!
- ಇನ್ನು ಬಹುಮುಖ್ಯವಾಗಿ ಯಾವುದಾದರೂ ರಥಗಳನ್ನು ಎಳೆಯುವಂತಹ ಫೋಟೋಗಳನ್ನು ಖಂಡಿತವಾಗಿಯೂ ಹಾಕಬಾರದು.
- ಶ್ವೇತ (White) ವರ್ಣದ ಕುದುರೆಗಳು ಶಕ್ತಿ (Horse Power) ಮತ್ತು ಸಮೃದ್ಧಿಯ (Prosperity) ಪ್ರತೀಕವಾಗಿದೆ. ಯಾವ ಮನೆಯಲ್ಲಿ ಏಳು ಕುದುರೆಗಳ ಫೋಟೋವನ್ನು ಹಾಕಿರಲಾಗುತ್ತದೋ, ಅವರಿಗೆ ಧನ ಸಂಬಂಧೀ ಸಮಸ್ಯೆಗಳು (problems) ಉಂಟಾಗುವುದು ಕಡಿಮೆ.