ವೈವಾಹಿಕ ಸಂಬಂಧ (Relationship) ದೃಢವಾಗಿರುವುದು ಎಲ್ಲರ ಬಯಕೆ. ಆದರೆ, ಪದೇ ಪದೆ ಏನಾದರೊಂದು ಸಮಸ್ಯೆಯಾಗುತ್ತಿದ್ದರೆ, ಸಂಬಂಧ ಬಿಗಡಾಯಿಸುತ್ತಿದ್ದರೆ ಅದನ್ನು ಸುಧಾರಿಸಿಕೊಳ್ಳಲು ಏನೆಲ್ಲ ಸಾಧ್ಯವೋ ಅಷ್ಟೂ ಪ್ರಯತ್ನಗಳನ್ನು ಮಾಡುವುದರಲ್ಲಿ ತಪ್ಪಿಲ್ಲ. ನಮ್ಮ ಪುರಾತನ ವೇದವಿಜ್ಞಾನಗಳಲ್ಲಿ ಸ್ಥಾನ ಪಡೆದಿರುವ ವಾಸ್ತು (Vastu)ಶಾಸ್ತ್ರವನ್ನೂ ಇದಕ್ಕಾಗಿ ಪರಿಗಣಿಸಬಹುದು.
ನೆಮ್ಮದಿಯ ಬುನಾದಿಯೆಂದರೆ ದೃಢವಾದ ಬಂಧ (Relation). ಬದುಕಿನ ಯಾವ ಸನ್ನಿವೇಶಗಳಿಗೂ, ಯಾವ ವಿಚಾರಗಳಿಗೂ ಮುಕ್ಕಾಗದ ಸಂಬಂಧ ನಿಮ್ಮದಾಗಿದ್ದರೆ ನೆಮ್ಮದಿ ಸಿಗುತ್ತದೆ. ಆದರೆ, ಕೆಲವೊಮ್ಮೆ ಸಂಬಂಧದಲ್ಲಿ ಬಿರುಕುಗಳು (Break) ಕಂಡುಬರುತ್ತವೆ. ಮನೆಯಲ್ಲಿ ಒತ್ತಡರಹಿತ (Stressfree) ಹಾಗೂ ಸಾಮರಸ್ಯದ (Harmony) ವಾತಾವರಣ ನಿರ್ಮಾಣಕ್ಕಾಗಿ ವಾಸ್ತುಶಾಸ್ತ್ರದ (Vastushastra) ಮೊರೆ ಹೋಗುವುದು ಸಾಮಾನ್ಯ. ಇದು ಸಂಬಂಧವನ್ನು ಸದೃಢಗೊಳಿಸಲೂ ನೆರವಾಗಬಲ್ಲದು. ವಾಸ್ತುಶಾಸ್ತ್ರದ ಪ್ರಕಾರ ಕೆಲವು ಟಿಪ್ಸ್ ನಿಮಗಾಗಿ.
• ಖುಷಿಯಾದ (Happy) ಜೀವನಕ್ಕಾಗಿ ದಂಪತಿಗಳಲ್ಲಿ (Couple) ಸ್ಪಷ್ಟವಾದ ವಿಚಾರಧಾರೆ ಇರುವುದು ಮುಖ್ಯ. ಈಶಾನ್ಯ (North-East) ದಿಕ್ಕಿನಲ್ಲಿ ನೀಲಿ (Blue) ಅಥವಾ ನೇರಳೆ ಬಣ್ಣ ಬಳಕೆ ಮಾಡುವ ಮೂಲಕ ಇದನ್ನು ಸಾಧಿಸಬಹುದು.
• ಅಡುಗೆ ಮನೆಯಲ್ಲಿ ಆಗ್ನೇಯ (South-East) ದಿಕ್ಕಿಗೆ ಗ್ಯಾಸ್ ಸ್ಟೋವ್ ಇರಲಿ. ಇದರಿಂದ ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಸ್ಥಿರವಾಗಿರುತ್ತಾರೆ. ಅಲ್ಲದೇ ಈ ದಿಕ್ಕಿನಲ್ಲಿ ಕೇಸರಿ (Orange) ಬಣ್ಣವಿರಲಿ. ಆಗ್ನೇಯ ದಿಕ್ಕನ್ನು ಮಹಿಳೆಯರ ವಾಸ್ತು ಶಕ್ತಿ ಕೇಂದ್ರ ಎಂದೇ ಪರಿಗಣಿಸಲಾಗುತ್ತದೆ. ಇದರಿಂದ ಅವರ ರೋಮ್ಯಾಂಟಿಕ್ ಜೀವನವೂ ಚೆನ್ನಾಗಿರುತ್ತದೆ.
Vastu tips: ನಿಮ್ಮ ಬೆಡ್‌ರೂಮನ್ನು ಯಾರಿಗೂ ಬಿಟ್ಕೊಡ್ಬೇಡಿ!
• ನೈರುತ್ಯ (South-West) ದಿಕ್ಕಿನಲ್ಲಿ ಮಲಗುವ ಕೋಣೆ ಇರಬೇಕು. ಇದು ಪುರುಷ ಶಕ್ತಿಯನ್ನು ಸಮತೋಲನ ಮಾಡುತ್ತದೆ. ಹಾಗೂ ಇಬ್ಬರ ನಡುವೆ ಉತ್ತಮ ಕೆಮೆಸ್ಟ್ರಿಯನ್ನು ಸ್ಥಾಪಿಸುತ್ತದೆ.
• ಮಕ್ಕಳ ಹಾಗೂ ಅತಿಥಿಗಳ ಕೋಣೆ ಸಾಕಷ್ಟು ಗಾಳಿ, ಬೆಳಕು ಬರುವಂತಿರಲಿ. ಈ ಕೋಣೆಗಳಲ್ಲಿ ಸ್ವಲ್ಪ ಗಾಢ ನೀಲಿ ಅಥವಾ ಬೂದು ಬಣ್ಣಗಳು ಹೆಚ್ಚಿನ ಧನಾತ್ಮಕ ಪರಿಣಾಮ ಬೀರುತ್ತವೆ.
• ಲ್ಯಾಂಪ್ ಶೇಡ್ ಗಳನ್ನು ಇರಿಸುವ ಸ್ಥಳಗಳು ತಿಳಿಬಣ್ಣದಲ್ಲಿರಲಿ. ಗುಲಾಬಿ ಅಥವಾ ತಿಳಿ ಬಣ್ಣಗಳನ್ನು ಸೂಸುವ, ಹೂವಿನ ವಿನ್ಯಾಸದ ಲ್ಯಾಂಪ್ ವೈವಾಹಿಕ ಜೀವನಕ್ಕೆ ಉತ್ತಮ.
• ರೂಮಿನಲ್ಲಿ ಮಲಗುವ ಮಂಚ ಅಥವಾ ಹಾಸಿಗೆ ಸರಿಯಾಗಿ ದಕ್ಷಿಣ ದಿಕ್ಕು ಅಥವಾ ನೈರುತ್ಯ ದಿಕ್ಕಿನಲ್ಲಿ ಇರಬೇಕು. ಆದರೆ, ಇವೆರಡರ ನಡುವಿನ ದಿಕ್ಕಿಗೆ ಹಾಸಿಗೆ ಹಾಕಬೇಡಿ. ಇದರಿಂದ ಇಬ್ಬರ ನಡುವೆ ಪದೇ ಪದೆ ಜುಗುಪ್ಸೆಯ ಸನ್ನಿವೇಶಗಳು ನಿರ್ಮಾಣವಾಗುತ್ತವೆ.
ಈ ವಸ್ತುಗಳು ಮನೆಯಲ್ಲಿದ್ದರೆ ವಿನಾಶ ಖಂಡಿತಾ! ಕೂಡಲೇ ಹೊರ ಹಾಕಿ..
• ಬೆಡ್ ರೂಮ್ (Bedroom) ಸಾಮಾನ್ಯ ಆಕಾರದಲ್ಲಿರಲಿ, ಭಿನ್ನ ವಿನ್ಯಾಸ ಹಾಗೂ ಮೊನಚಾದ ಕಾರ್ನರ್ (Sharp Corner) ಇಲ್ಲದಿರಲಿ.
• ಲೋಹದ (Metal) ಮಂಚವನ್ನು ಬಳಕೆ ಮಾಡಬೇಡಿ. ಇದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಹಾಗೂ ಇದು ಸಂಗಾತಿಗಳ ನಡುವೆ ಒತ್ತಡ ನಿರ್ಮಿಸುತ್ತದೆ. ಕೋಣೆಯಲ್ಲಿ ಒಂದೇ ಒಂದು ಕ್ವೀನ್ ಸೈಜ್ ಹಾಸಿಗೆಯಿರಲಿ. ಎರಡು ಹಾಸಿಗೆಗಳನ್ನು ಜೋಡಿಸುವ ಪರಿಪಾಠ ಬೇಡ.
• ಗೋಡೆಯ ಬಣ್ಣ ತಿಳಿ(Light)ಯಾಗಿರಲಿ. ಹಿತವಾದ ವಾತಾವರಣ ನಿರ್ಮಿಸಲು ಇದು ಸಹಕಾರಿ. ನೈರುತ್ಯ ದಿಕ್ಕಿಗೆ ಇರುವ ಬೆಡ್ ರೂಮಿನಲ್ಲಿ ಗುಲಾಬಿ (Pink) ಹಾಗೂ ಪೀಚ್ ಬಣ್ಣದ ಪೇಂಟ್ ಇರಲಿ.
• ಪತಿಯ ಎಡಭಾಗಕ್ಕೆ ಪತ್ನಿ ಮಲಗಬೇಕು, ಇದರಿಂದ ಸಾಮರಸ್ಯ ಸಾಧ್ಯವಾಗುತ್ತದೆ.
• ಬೆಡ್ ಎದುರು ನೇರವಾಗಿ ಕನ್ನಡಿ (Mirror) ಇರಬಾರದು. ದೊಡ್ಡ ಕನ್ನಡಿಯಿದ್ದರೆ ವೈವಾಹಿಕ ಜೀವನ ಕಷ್ಟವಾಗುತ್ತದೆ. ಅಲ್ಲದೆ, ಆರೋಗ್ಯದ ಸಮಸ್ಯೆಯಾಗಬಹುದು. ಚೈತನ್ಯವಿಲ್ಲದಂತಾಗಿ ತಲೆಸುತ್ತು ಕಾಣಿಸಬಹುದು. ಹೀಗಾಗಿ, ಬೆಡ್ ರೂಮಿನಲ್ಲಿ ಕನ್ನಡಿಯನ್ನು ದೂರವಿಡುವುದು ಉತ್ತಮ ಅಥವಾ ಕನ್ನಡಿಗೆ ಪರದೆ ಹಾಕಬೇಕು.
• ಕೋಣೆಯ ಈಶಾನ್ಯ ಭಾಗ ಯಾವುದೇ ಕಾರಣಕ್ಕೂ ಚೆಲ್ಲಾಪಿಲ್ಲಿಯಾಗಿರಬಾರದು. ಉತ್ತರ ಮೂಲೆಯಲ್ಲಿ ಒಳಾಂಗಣ ಸಸ್ಯ, ಬಿಳಿ ಹೂವುಗಳನ್ನು ಇಡುವುದು ಉತ್ತಮ. ನೈರುತ್ಯ ಮೂಲೆಯಲ್ಲಿ ನೇರಳೆ ಹಾಗೂ ಕೆಂಪು ಗುಲಾಬಿ ಹೂವುಗಳನ್ನು ಇಡುವುದು ಸೂಕ್ತ.
• ಕೆಲವೊಮ್ಮೆ ಗುಲಾಬಿ, ಕೆಂಪು ಬಣ್ಣದ ಬೆಳಕನ್ನು (Light) ರೂಮಿನಲ್ಲಿ ಬಳಸಬಹುದು.
• ಬಹುಮುಖ್ಯವಾಗಿ ಯಾವುದೇ ರೀತಿಯ ಇಲೆಕ್ಟ್ರಾನಿಕ್ಸ್ ವಸ್ತುಗಳ ಬಳಕೆಯನ್ನು ಬೆಡ್ ರೂಮಿನಲ್ಲಿ ಮಾಡಬಾರದು. ಇತ್ತೀಚಿನ ದಿನಗಳಲ್ಲಿ ಸಂಬಂಧಗಳ ನಡುವೆ ವೈಮನಸ್ಯ ತರುತ್ತಿರುವುದು ಇದೇ ವ್ಯವಸ್ಥೆ. ಜತೆಗೆ, ಮಲಗುವ ಕೋಣೆ ಯಾವತ್ತೂ ಚೆಲ್ಲಾಪಿಲ್ಲಿಯಾಗಿರಬಾರದು.
• ನೇರವಾಗಿ ಬಾಗಿಲ ಎದುರು ಹಾಸಿಗೆ ಇರಬಾರದು. ರೂಮಿನಲ್ಲಿ ಯಾವುದಾದರೂ ಅಲಂಕಾರಿಕ ವಸ್ತುಗಳಿದ್ದರೆ ಅವು ಸಿಂಗಲ್ ಆಗಿರಬಾರದು. ಉದಾಹರಣೆಗೆ, ಸಿಂಗಲ್ ಹಂಸ, ಸಿಂಗಲ್ ಹೂವು ಇತ್ಯಾದಿ. ಜೋಡಿ ವಸ್ತುಗಳನ್ನು ಬಳಕೆ ಮಾಡಬೇಕು. ಲಕ್ಷ್ಮೀ-ನಾರಾಯಣ, ಕೃಷ್ಣ-ರಾಧೆಯರ ವಿಗ್ರಹ ಉತ್ತಮ.
• ಮೃತರ ಫೋಟೊಗಳನ್ನು ರೂಮಿನಲ್ಲಿ ಇರಿಸಿಕೊಳ್ಳಲೇಬಾರದು. ಅಲ್ಲದೆ, ನೀವು ಆರಾಧಿಸುವ ಮೂರ್ತಿಯನ್ನು ಸಹ ರೂಮಿನಲ್ಲಿ ಇಟ್ಟುಕೊಳ್ಳಬಾರದು.
• ದಂಪತಿಯ ಫೋಟೋವನ್ನು ಪಶ್ಚಿಮಕ್ಕೆ ಮುಖ ಮಾಡಿ ಇಡಬೇಕು.
• ಬೆಡ್ ರೂಮನ್ನು ಈಶಾನ್ಯ, ಆಗ್ನೇಯ, ವಾಯುವ್ಯ ದಿಕ್ಕಿಗೆ ಮಾಡಿಕೊಳ್ಳಬಾರದು.