
ಪ್ರತಿ ದಿನ ಕೆಲಸ ಮುಗಿಸಿದ ಮೇಲೆ ಎಷ್ಟೊತ್ತಿಗೆ ದಿಂಬಿನ ಮೇಲೆ ತಲೆ ಇಡುತ್ತೇವಪ್ಪಾ ಎಂದಾಗಿರುತ್ತದೆ. ನಿದ್ರೆಯು ನಮ್ಮ ದೇಹಕ್ಕೆ ರಿಚಾರ್ಜ್ ಇದ್ದಂತೆ. ಮರು ದಿನ ಪೂರ್ತಿ ಎನರ್ಜಿಯಲ್ಲಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ನಿದ್ರೆ(Sleep)ಯೊಂದು ಸರಿಯಾಗುತ್ತಿದೆ ಎಂದರೆ ಬದುಕಿನಲ್ಲಿ ದೈಹಿಕ ಹಾಗೂ ಮಾನಸಿ ಆರೋಗ್ಯ ಸೇರಿದಂತೆ ಬಹಳಷ್ಟು ವಿಷಯಗಳು ಸರಾಗವಾಗುತ್ತವೆ. ನಿದ್ರೆಯ ಕೊರತೆಯಾದರೆ ಒತ್ತಡ, ಆಥಂಕ, ಗೊಂದಲ, ಸುಸ್ತು- ಒಟ್ಟಿನಲ್ಲಿ ಮರುದಿನ ಯಾವೊಂದು ಕೆಲಸಗಳೂ ಸುಸೂತ್ರವಾಗಿ ಆಗುವುದಿಲ್ಲ. ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಲು ಆಗುವುದಿಲ್ಲ, ಪರಿಚಿತರೊಂದಿಗೆ ಸಂತೋಷವಾಗಿ ಮಾತಾಡಲು ಸಾಧ್ಯವಾಗುವುದಿಲ್ಲ.. ಒಟ್ಟಿನಲ್ಲಿ ಆರೋಗ್ಯ, ಆಯಸ್ಸು, ಸಂಬಂಧ, ಹಣಕಾಸು ಎಲ್ಲಕ್ಕೂ ಎಡರುತೊಡರಾಗುತ್ತದೆ. ನಿದ್ದೆ ಚೆನ್ನಾಗಾಗಬೇಕು ಎಂಬುದು ಎಷ್ಟು ಮುಖ್ಯವೋ, ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬೇಕು ಎಂಬುದೂ ಅಷ್ಟೇ ಮುಖ್ಯ ಎನ್ನುತ್ತದೆ ವಾಸ್ತುಶಾಸ್ತ್ರ(vastu). ನಮ್ಮ ಎನರ್ಜಿ ಫೀಲ್ಡ್‌ಗೂ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್‌ಗೂ ಸಂಬಂಧ ಇರುವುದರಿಂದ ಮಲಗುವ ದಿಕ್ಕು ಮುಖ್ಯವಾಗುತ್ತದೆ ಎನ್ನುವುದು ವಾಸ್ತು ವ್ಯಾಖ್ಯಾನ. ಹಾಗಾದರೆ ಯಾವ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಏನಾಗತ್ತದೆ ನೋಡೋಣ.
ದಕ್ಷಿಣ(South) ದಿಕ್ಕಿಗೆ ತಲೆ ಹಾಕಿ ಮಲಗಿದರೆ
ವಾಸ್ತು ಪ್ರಕಾರ ಭಾರತೀಯರಿಗೆ ಇದು ಮಲಗಲು ಸರಿಯಾದ ದಿಕ್ಕು. ಅದರಲ್ಲೂ ನೀವು ಉತ್ತರ ಗೋಳಾರ್ಧದಲ್ಲಿದ್ದರೆ ಈ ದಿಕ್ಕಿನಲ್ಲಿ ತಲೆ ಹಾಕಿ ನಿದ್ರಿಸಿದರೆ ಸಂತೋಷ, ಐಶ್ವರ್ಯ ನಿಮ್ಮದಾಗುತ್ತದೆ. ಜೊತೆಗೆ, ನಿದ್ರೆಯ ಗುಣಮಟ್ಟವು ಚೆನ್ನಾಗಿರುತ್ತದೆ. ದಕ್ಷಿಣ ದಿಕ್ಕು ಪಾಸಿಟಿವ್ ಎನರ್ಜಿಯೊಂದಿಗೆ ಬೆಸೆದುಕೊಂಡಿದ್ದು, ಈ ಕಡೆ ತಲೆ ಇಟ್ಟು ನಿದ್ರಿಸಿದರೆ, ಜೀವನದ ಬಗ್ಗೆ ನಂಬಿಕೆ ಹುಟ್ಟಿ ನೆಮ್ಮದಿ ಹೆಚ್ಚುತ್ತದೆ. ನೀವು ದಕ್ಷಿಣಾರ್ಧದಲ್ಲಿದ್ದರೆ ಆಗ ಈ ದಿಕ್ಕಿಗೆ ತಲೆ ಹಾಕಲೇಬಾರದು. ವಾಸ್ತುವಿನ ಈ ಮಾತಿಗೆ ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳೂ ದನಿಗೂಡಿಸಿವೆ. ನಾವು ದಕ್ಷಿಣಕ್ಕೆ ತಲೆ ಹಾಕಿದಾಗ ಕಾಲು ಉತ್ತರಕ್ಕಿರುತ್ತದೆ. ಹಸು, ಜಿಂಕೆ ಮುಂತಾದ ಪ್ರಾಣಿಗಳು ಮಲಗುವಾಗ ಪ್ರಾಕೃತಿಕವಾಗಿಯೇ ತಮ್ಮ ದೇಹವನ್ನು ಇದೇ ರೀತಿಯಾಗಿ ಇಟ್ಟುಕೊಳ್ಳುತ್ತವಂತೆ. ದಕ್ಷಿಣಕ್ಕೆ ತಲೆ ಹಾಕಿ ಮಲಗಿದಾಗ, ರಕ್ತದೊತ್ತಡ ಕಡಿಮೆಯಾಗುತ್ತದೆ ಹಾಗೂ ನಿದ್ರೆಯ ಗುಣಮಟ್ಟ(sleep quality) ಹೆಚ್ಚುತ್ತದೆ ಎನ್ನುತ್ತದೆ ಅಧ್ಯಯನ. ನಮ್ಮ ದೇಹಕ್ಕೂ ಭೂಮಿಗಿರುವಂತೆ ದಕ್ಷಿಣ ಹಾಗೂ ಉತ್ತರ ಧ್ರುವ(north pole)ಗಳಿರುತ್ತವೆ. ದಕ್ಷಿಣಕ್ಕೆ ತಲೆ ಹಾಕಿದಾಗ ಅದು ಭೂಮಿಯ ದಕ್ಷಿಣ ದಿಕ್ಕಿನ ಮ್ಯಾಗ್ನೆಟಿಕ್ ಎನರ್ಜಿಯೊಂದಿಗೆ ಸಮಾನ ರೇಖೆ ಕಾಯ್ದುಕೊಳ್ಳುತ್ತದೆ.
ಉತ್ತರ(North)ಕ್ಕೆ ತಲೆ ಹಾಕಿ ಮಲಗಿದರೆ
ಮೇಲೆ ಹೇಳಿದಂತೆ ಅದೇ ಉತ್ತರಕ್ಕೆ ತಲೆ ಹಾಕಿದರೆ, ಆಗ ಭೂಮಿಯ ಮ್ಯಾಗ್ನೆಟಿಕ್ ಪೋಲ್ ಎನರ್ಜಿ ಹಾಗೂ ನಮ್ಮ ದೇಹದ ಎನರ್ಜಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹರಿಯಲಾರಂಭಿಸುತ್ತದೆ. ಇದರಿಂದ ತಲೆನೋವು, ರಕ್ತದೊತ್ತಡ(blood pressure) ಉಂಟಾಗುತ್ತದೆ. ಹೃದಯದಿಂದ ಮೆದುಳಿಗೆ ಹೋಗುವ ನರಗಳು ಸೂಕ್ಷ್ಮವಾಗಿದ್ದು ರಕ್ತದೊತ್ತಡವನ್ನು ಸರಿಯಾಗಿ ನಿಯಂತ್ರಿಸುವ ಶಕ್ತಿ ಕಡಿಮೆ ಇರುತ್ತದೆ. ಈ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದಾಗ ರಕ್ತವು ಹೆಚ್ಚಾಗಿ ನಿಮ್ಮ ತಲೆಯತ್ತ ಹರಿಯಲಾರಂಭಿಸುತ್ತದೆ. ಏಕೆಂದರೆ ರಕ್ತದಲ್ಲಿ ಐರನ್ ಇರುವುದರಿಂದ ನಾರ್ಥ್ ಪೋಲ್‌ನಲ್ಲಿ ಹೆಚ್ಚು ಸ್ಟ್ರಾಂಗ್ ಆಗಿರುವ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ಬ್ಲಡ್ಡನ್ನು ಮೇಲಿನ ದಿಕ್ಕಿಗೆ ಎಳೆಯಲಾರಂಭಿಸುತ್ತದೆ. ರಕ್ತದ ಹರಿವು ಅಚಾನಕ್ ಹೆಚ್ಚಾದಲ್ಲಿ ಹ್ಯಾಮೋರೇಜ್ ಇಲ್ಲವೇ ಸ್ಟ್ರೋಕ್(Stroke) ಆಗುವ ಸಾಧ್ಯತೆಗಳಿರುತ್ತದೆ. ಅಲ್ಲದೆ, ಸರಿಯಾಗಿ ನಿದ್ದೆ ಬಾರದಿರುವುದು, ಕೆಟ್ಟ ಕನಸುಗಳು ಬೀಳುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ಈ ದಿಕ್ಕಲ್ಲಿ ಮಲಗುವ ಅಭ್ಯಾಸವನ್ನು ಸಂಪೂರ್ಣವಾಗಿ ಬಿಡಬೇಕು.
Astrology And Traits: ಪ್ರೀತಿ ಓಕೆ, ಕಮಿಟ್ ಆಗೋದ್ಯಾಕೆ ಎನ್ನೋ ರಾಶಿಯವರಿವರು!
ಪೂರ್ವ(East)ಕ್ಕೆ ತಲೆ ಹಾಕಿದರೆ
ವಾಸ್ತು ಪ್ರಕಾರ ಪೂರ್ವವು ಶಕ್ತಿಯ ಮೂಲವಾಗಿದ್ದು, ಮಲಗಲು ಉತ್ತಮ ದಿಕ್ಕಾಗಿದೆ. ಈ ದಿಕ್ಕಿನಲ್ಲಿ ಮಲಗಿದರೆ ಏಕಾಗ್ರತೆ(Concentration) ಹಾಗೂ ನೆನಪಿನ ಶಕ್ತಿ(Memory Power) ಹೆಚ್ಚುವುದರಿಂದ ವಿದ್ಯಾರ್ಥಿಗಳು ಪೂರ್ವ ದಿಕ್ಕಿಗೆ ತಲೆ ಇಟ್ಟು ಮಲಗುವ ಅಭ್ಯಾಸ ಮಾಡುವುದು ಒಳಿತು. ಪೂರ್ವ ದಿಕ್ಕಿಗೆ ತಲೆ ಇಟ್ಟು ನಿದ್ರಿಸಿದರೆ ಆರೋಗ್ಯ ಸಂಬಂಧಿ ಸಮಸ್ಯೆಗಳು ಸಹಾ ನೀಗುತ್ತವೆ.
Vaastu Shastra : ಸರ್ವನಾಶಕ್ಕೆ ಕಾರಣವಾಗ್ಬಹುದು ಮನೆ ಕಿಟಕಿಯ ವಾಸ್ತು ದೋಷ!
ಪಶ್ಚಿಮ(West)ಕ್ಕೆ ತಲೆ ಹಾಕಿದರೆ
ಇದರಿಂದ ಆರೋಗ್ಯಕ್ಕೆ ಪೂರ್ವ ಹಾಗೂ ದಕ್ಷಿಣ ದಿಕ್ಕಿನಷ್ಚು ಲಾಭಗಳಿಲ್ಲವಾದರೂ ಯಶಸ್ಸು ತಂದುಕೊಡುವ ಶಕ್ತಿ ಈ ದಿಕ್ಕಿಗಿದೆ. ನಿಮ್ಮ ಜೀವನದ ನೆಗೆಟಿವ್ ಎನರ್ಜಿಗಳಿಂದ ದೂರವಿಡುತ್ತದೆ.