ವಾಸ್ತುಶಾಸ್ತ್ರ (Vaastu Shastra) ದಲ್ಲಿ ಮನೆ (Home) ಯ ಮೂಲೆ ಮೂಲೆಯ ಬಗ್ಗೆಯೂ ಹೇಳಲಾಗಿದೆ. ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಮನೆಯ ನಿರ್ಮಾಣ ಮಾಡಿದ್ದರೆ ಶುಭ ಮತ್ತು ಪ್ರಗತಿ ಹೆಚ್ಚಾಗುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ನಿರ್ಮಾಣವಾಗಿರುವ ಮನೆಯಲ್ಲಿ ಸದಾ ಸಂತೋಷ (Happiness), ಆರೋಗ್ಯ (Health) ಮತ್ತು ಪ್ರಗತಿಯಿರುತ್ತದೆ.ವಾಸ್ತು ದೋಷ ಅನಾರೋಗ್ಯ, ಉದ್ಯೋಗ ಸಮಸ್ಯೆ, ವ್ಯಾಪಾರಕ್ಕೆ ಸಂಬಂಧಿಸಿದ ಸಮಸ್ಯೆ ಬಾಧಿಸುತ್ತವೆ. ಯಶಸ್ಸು ಪಡೆಯಲು ಕಷ್ಟಪಡಬೇಕಾಗುತ್ತದೆ. ಮನೆಯಲ್ಲಿರುವ ಮುಖ್ಯ ಬಾಗಿಲು, ಕಿಟಕಿಗಳು, ಅಡುಗೆ ಕೋಣೆ, ಸ್ನಾನಗೃಹ, ಮಲಗುವ ಕೋಣೆ, ಬಾಲ್ಕನಿ ಇತ್ಯಾದಿಗಳಿಗೆ ಸರಿಯಾದ ಸ್ಥಳ ಮತ್ತು ದಿಕ್ಕನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇಂದು ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕಿಟಕಿ ಹೇಗಿರಬೇಕೆನ್ನುವ ಬಗ್ಗೆ ಹೇಳ್ತೀವಿ.
ವಾಸ್ತು ಪ್ರಕಾರ ಹೀಗಿರಲಿ ಮನೆಯ ಕಿಟಕಿ
ಪ್ರತಿಯೊಬ್ಬರ ಮನೆಯಲ್ಲೂ ಕಿಟಕಿ ಇರಲೇಬೇಕು. ಕಿಟಕಿಯನ್ನು ಸಕಾರಾತ್ಮಕತೆಯ ಮೂಲವೆಂದು ಪರಿಗಣಿಸಲಾಗುತ್ತದೆ. ಇದು ಮನೆಯ ಪ್ರಗತಿಗೆ ಕಾರಣವಾಗುತ್ತದೆ. ಮನೆಯನ್ನು ನಿರ್ಮಿಸಿದಾಗ ನಾವು ಕೋಣೆ, ಅಡುಗೆ ಮನೆ, ದೇವರ ಮನೆಗೆ ಹೆಚ್ಚಿನ ಮಹತ್ವ ನೀಡ್ತೀವಿ. ಆದ್ರೆ ಕಿಟಕಿಯ ಸಂಖ್ಯೆಗೆ ಗಮನ ನೀಡುವುದಿಲ್ಲ. ಸುಂದರವಾಗಿ ಕಾಣಲಿ ಎಂಬ ಕಾರಣಕ್ಕೆ ಕಿಟಕಿಯ ಅಲಂಕಾರಕ್ಕೆ ಮಹತ್ವ ನೀಡುತ್ತೇವೆಯೇ ಹೊರತು, ಕಿಟಕಿ ಸಂಖ್ಯೆ ಗಮನಿಸುವುದಿಲ್ಲ. ವಾಸ್ತುಶಾಸ್ತ್ರದ ಪ್ರಕಾರ ಕಿಟಕಿ ಸಂಖ್ಯೆಯೂ ಮುಖ್ಯ. ಸಮ ಸಂಖ್ಯೆಯ ಕಿಟಕಿಗಳನ್ನು ಸ್ಥಾಪಿಸಬೇಕು. ಮನೆಯಲ್ಲಿರುವ ಕಿಟಕಿಗಳ ಸಂಖ್ಯೆಯು 4, 6, 8, 10 ರಂತೆ ಸಮ ಸಂಖ್ಯೆಯಾಗಿರಬೇಕು.
undefined
ಕೋಪ ನಿಯಂತ್ರಿಸಲು ಸಾಧ್ಯವಾಗ್ತಿಲ್ವೇ? ಈ Vastu Tips ಫಾಲೋ ಮಾಡಿ
- ಇನ್ನು ವಾಸ್ತು ಶಾಸ್ತ್ರದ ಪ್ರಕಾರ, ಕಿಟಕಿಗಳ ಬಾಗಿಲುಗಳು ಒಳಮುಖವಾಗಿ ತೆರೆದುಕೊಳ್ಳುತ್ತಿರಬೇಕು. ಇದನ್ನು ಅದೃಷ್ಟವೆಂದು ಪರಿಗಣಿಸಲಾಗಿದೆ. ಇದರರ್ಥ ನಿಮ್ಮ ಮನೆಯೊಳಗಿನ ಶಕ್ತಿಯ ಹರಿವು ಹೊರಗಿನಿಂದ ಒಳಕ್ಕೆ ಹೋಗುತ್ತದೆ. ಕಿಟಕಿಗಳು ದ್ವಿಮುಖವಾಗಿರಬೇಕು.
- ಕಿಟಕಿ ಸಂಖ್ಯೆ ಹಾಗೂ ಕಿಟಕಿ ಬಾಗಿಲಿನ ಜೊತೆ ಮನೆಯ ಕಿಟಕಿ ದಿಕ್ಕು ಕೂಡ ಮಹತ್ವ ಪಡೆಯುತ್ತದೆ. ಕಿಟಕಿಗೆ ಪೂರ್ವ ಮತ್ತು ಈಶಾನ್ಯ ದಿಕ್ಕನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಸೂರ್ಯೋದಯದ ಸಮಯದಲ್ಲಿ ಮನೆಯೊಳಗೆ ಸೂರ್ಯನ ಮೊದಲ ಕಿರಣಗಳ ಆಗಮನವು ಧನಾತ್ಮಕ ಶಕ್ತಿಯ ಸಂಕೇತವಾಗಿದೆ.
- ಮನೆಯ ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನಲ್ಲಿ ಚಿಕ್ಕ ಕಿಟಕಿಗಳನ್ನು ಇಡಬಹುದು. ಆದರೆ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಸಾಕಷ್ಟು ತೆರೆದ ಸ್ಥಳವಿದ್ದರೆ, ಅಲ್ಲಿ ಕಿಟಕಿ ಹಾಕದಿರುವುದು ಉತ್ತಮ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.
- ಮನೆಯ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಕಿಟಕಿಯನ್ನು ನಿರ್ಮಿಸುವುದು ಒಳ್ಳೆಯದು. ಈ ಭಾಗದಲ್ಲಿ ಹಾಕಿದ ಕಿಟಕಿಗಳು ದೊಡ್ಡದಾಗಿದ್ದರೆ ಅದು ತುಂಬಾ ಒಳ್ಳೆಯದು. ಅಲ್ಲಿಂದ ತಾಜಾ ಗಾಳಿ ಮತ್ತು ಸೂರ್ಯನ ಕಿರಣಗಳು ಮನೆಯ ಪ್ರವೇಶ ಮಾಡುವುದ್ರಿಂದ ಒಳ್ಳೆಯ ಫಲಿತಾಂಶ ಕಾಣಬಹುದು.
- ಮನೆಯ ನೈಋತ್ಯ ದಿಕ್ಕಿನಲ್ಲಿ ಕಿಟಕಿ ಇದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣಕ್ಕಾಗಿ ಈ ದಿಕ್ಕಿನಲ್ಲಿ ಕಿಟಕಿಯನ್ನು ನಿರ್ಮಿಸಬೇಡಿ. ಇದು ನಿಮ್ಮ ಕುಟುಂಬಸ್ಥರ ಆರೋಗ್ಯ,ಆರ್ಥಿಕ ವೃದ್ಧಿ ಮೇಲೆ ಪರಿಣಾಮ ಬೀರುತ್ತದೆ.
- ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿಗೆ ದೊಡ್ಡ ಕಿಟಕಿಗಳನ್ನು ನಿರ್ಮಿಸಿ. ಮಧ್ಯಮ ಗಾತ್ರದ ಕಿಟಕಿಗಳನ್ನು ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಹಾಕುವುದು ಒಳ್ಳೆಯದು.
Gift Ideas: ಈ ಉಡುಗೊರೆ ಕೊಟ್ರೆ ನಿಮ್ಮ ಲವ್ ಪಕ್ಕಾ ಸಕ್ಸಸ್ ಆಗುತ್ತೆ!
- ಕಿಟಕಿಯನ್ನು ತೆರೆಯುವಾಗ ಹಾಗೂ ಮುಚ್ಚುವಾಗ ಶಬ್ಧ ಬರದಂತೆ ನೋಡಿಕೊಳ್ಳಿ. ಒಂದು ವೇಳೆ ಬಾಗಿಲಿನಿಂದ ಶಬ್ಧ ಬರ್ತಿದ್ದರೆ ಅದನ್ನು ಸರಿಪಡಿಸಿ. ಹಾಗೆಯೇ ಮುರಿದ ಕಿಟಕಿ ಬಾಗಿಲುಗಳನ್ನು ಸರಿಪಡಿಸಿ. ಜೊತೆಗೆ ಕಿಟಕಿ ಬಿರುಕು ಬಿಟ್ಟಿದ್ದರೆ ಅದನ್ನು ಅಗತ್ಯವಾಗಿ ಸರಿಪಡಿಸಿ.
- ಕಿಟಕಿ ಮುಂದೆ ಮರ, ಕಂಬ ಸೇರಿದಂತೆ ಯಾವುದೇ ಅಡೆತಡೆ ಇರದಂತೆ ನೋಡಿಕೊಳ್ಳಿ.
- ಬಾಗಿಲುಗಳು ಮತ್ತು ಕಿಟಕಿಗಳನ್ನು ಒಂದೇ ವಸ್ತುವಿನಿಂದ ನಿರ್ಮಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ತೇಗದ ಮರವು ಅದೃಷ್ಟವನ್ನು ತರುತ್ತದೆ ಎನ್ನಲಾಗಿದೆ. ಮುಖ್ಯ ಬಾಗಿಲಿಗೆ ಬೇವಿನ ಮರ ಮತ್ತು ಲೋಹದ ಚೌಕಟ್ಟುಗಳನ್ನು ಹಾಕಬೇಡಿ.