ಕೋಪ ನಿಯಂತ್ರಿಸಲು ಸಾಧ್ಯವಾಗ್ತಿಲ್ವೇ? ಈ Vastu Tips ಫಾಲೋ ಮಾಡಿ

By Suvarna News  |  First Published Feb 9, 2022, 5:11 PM IST

ಕೋಪ ಒಂದು ಮಟ್ಟದವರೆಗೆ ಆರೋಗ್ಯಕರವೇ. ಆದರೆ, ಕೈ ಮೀರಿದರೆ ಮಾತ್ರ ಬದುಕಿನ ಎಲ್ಲ ಸ್ತರಗಳ ಮೇಲೂ ಕೆಟ್ಟ ಪರಿಣಾಮಗಳನ್ನು ಬೀರಲು ಆರಂಭಿಸುತ್ತದೆ. ನಿಮಗೂ ಕೋಪ ನಿಯಂತ್ರಿಸಲು ಸಾಧ್ಯವಿಲ್ಲ ಎಂದಾದ್ರೆ ಈ ವಾಸ್ತು ಸಲಹೆಗಳನ್ನು ಪರಿಗಣಿಸಿ ನೋಡಿ.


ಕೋಪವನ್ನು ಆರೋಗ್ಯಕರ ಭಾವನೆ ಎಂದೇ ಪರಿಗಣಿಸಲಾಗುತ್ತದೆ. ಪುಟ್ಟ ಮಗುವಿಗೂ ಕೋಪ ಬರುವುದುಂಟು. ಕೋಪದಲ್ಲೊಂದು ಶಕ್ತಿ ಇರುತ್ತದೆ. ಅದನ್ನು ಪಾಸಿಟಿವ್ ಆಗಿ ಅಥವಾ ನೆಗೆಟಿವ್ ಆಗಿ ಬಳಸುವುದು ನಮ್ಮ ಕೈಲೇ ಇರುತ್ತದೆ. ಆದರೆ, ಯಾವಾಗ ಕೋಪ ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲವೋ, ಆಗ ಅದು ನಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಬದುಕ(professional life)ನ್ನು ಹಾಳು ಮಾಡಲು ಶುರು ಮಾಡುತ್ತದೆ. ಸಂಬಂಧಗಳನ್ನು ಕೆಡಿಸುತ್ತದೆ. ನಾಲಿಗೆ ಎಗ್ಗಿಲ್ಲದೆ ಮಾತಾಡತೊಡಗುತ್ತದೆ. 

ನಮಗೆ ಬಾಲ್ಯದಿಂದಲೂ ಕೋಪ ಮಾಡಿಕೊಳ್ಳಬಾರದೆಂದು ಹೇಳಲಾಗುತ್ತದೆ. ಆದರೆ, ಹೇಗೆ ಕೋಪ ಮಾಡಿಕೊಳ್ಳದೆ ಇರುವುದು ಎಂಬುದನ್ನು ಮಾತ್ರ ಯಾರೂ ಹೇಳುವುದಿಲ್ಲ. ಒಳಗಿನಿಂದಲೇ ಶಾಂತಿ ಸಾಧಿಸುವುದು ಕೋಪ ನಿಯಂತ್ರಿಸುವ ಅತಿ ದೊಡ್ಡ ದಾರಿ. ಏಕೆಂದರೆ, ನಮ್ಮ ಸುತ್ತಲಿನ ಎಲ್ಲ ವಿಷಯಗಳನ್ನು, ಬೇರೆ ಜನರನ್ನು ನಾವು ನಿಯಂತ್ರಿಸಲಾಗುವುದಿಲ್ಲ. ಆದರೆ, ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಬಹುದಲ್ಲವೇ? ಅದರೊಂದಿಗೆ ಸಾಧ್ಯವಾದಷ್ಟು ನಮ್ಮ ಸುತ್ತ ಧನಾತ್ಮಕ ವಾತಾವರಣ ಸೃಷ್ಟಿಸಿಕೊಳ್ಳುವುದರಿಂದ ಕೂಡಾ ಕೋಪವನ್ನು ಹತ್ತಿರ ಬಾರದಂತೆ ನೋಡಿಕೊಳ್ಳಬಹುದು. ಹೀಗೆ ಧನಾತ್ಮಕ ವಾತಾವರಣ ಸೃಷ್ಟಿಸಿಕೊಳ್ಳಲು ವಾಸ್ತುವಿನ ಸಲಹೆಗಳನ್ನು ಪಾಲಿಸಬೇಕು. 

Latest Videos

undefined

ವಸ್ತುಗಳನ್ನು ಕಡಿಮೆ ಮಾಡಿ(De-Cluttering)
ಮನೆಯನ್ನು ಸಂತೆ ಮಾರ್ಕೆಟ್ಟಿನ ಹಾಗೆ ಮಾಡಿಕೊಂಡಿದ್ದರೆ ಕೋಪ ಹೆಚ್ಚುತ್ತದೆ. ಎಲ್ಲಿ ನೋಡಿದರೂ ಸಾಮಾನು ಸರಂಜಾಮು ತುಂಬಿದ್ದರೆ ಅದು ಮನೆ ಎನಿಸುವುದಕ್ಕಿಂತಲೂ ಗೋಡೌನ್ ಹಾಗೆ ಕಾಣಿಸುತ್ತದೆ. ಆಗ ನೆಗೆಟಿವ್ ಎನರ್ಜಿ ಹೆಚ್ಚುತ್ತದೆ. ಸಣ್ಣಸಣ್ಣ ವಿಷಯಕ್ಕೂ ತುಂಬಾ ಕೋಪ ಬರಲಾರಂಭಿಸುತ್ತದೆ. ಇಂದೇ ಮನೆಯಲ್ಲಿರುವ ಎಲ್ಲ ಬೇಡದ ವಸ್ತುಗಳನ್ನು ಒಗ್ಗೂಡಿಸಿ ಹೊರ ಹಾಕಿ. ಮನೆ ಸಾಕಷ್ಟು ಖಾಲಿಯಾಗಿ ಸ್ವಚ್ಛವಾಗಿದ್ದರೆ ಧನಾತ್ಮಕ ಎನರ್ಜಿ ಹರಿದಾಡಲು ಸಾಕಷ್ಟು ಸ್ಥಳವಿರುತ್ತದೆ. ಆಗ ಮೂಡ್(mood) ಕೂಡಾ ಚೆನ್ನಾಗಿರುತ್ತದೆ. 

ಕಲ್ಲುಪ್ಪು(Rock Salt)
ಮನೆಯ ಎಲ್ಲ ಮೂಲೆ ಮೂಲೆಗಳಲ್ಲಿ ಕಲ್ಲುಪ್ಪನ್ನು ತುಂಬಿದ ಬಟ್ಟಲುಗಳನ್ನಿಡಿ. ಅದರಲ್ಲೂ ಮಳೆಗಾಲದಲ್ಲಿ ಇದು ಬಹಳ ಸಹಾಯಕಾರಿ. ಉಪ್ಪು ಮನೆಯ ಅತಿಯಾದ ತೇವಾಂಶವನ್ನು ಎಳೆದುಕೊಂಡು ಗಾಳಿಯನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ಸುತ್ತಲ ವಾತಾವರಣ ಪಾಸಿಟಿವ್ ಆಗಿರುತ್ತದೆ. 

ಮೊಬೈಲ್ ಟವರ್(Mobile Tower)
ಮನೆ ಬದಲಿಸಲು ಅವಕಾಶವಿದ್ದರೆ ಅಥವಾ ಹೊಸ ಮನೆ ಕೊಂಡುಕೊಳ್ಳುತ್ತಿದ್ದರೆ ಮೊಬೈಲ್ ಟವರ್‌ಗಳಿಲ್ಲದಿರುವ ಜಾಗಕ್ಕೆ ಸ್ಥಳಾಂತರವಾಗಿ. ಮೊಬೈಲ್‌ ಟವರ್‌ಗಳು ಹಾಗೂ ಎಲೆಕ್ಟ್ರಿಕ್ ಟ್ರಾನ್ಸ್‌ಫಾರ್ಮರ್‌ಗಳು ಹೆಚ್ಚಿದ್ದರೆ ಅದರಿಂದ ಮಾನಸಿಕ ಕಿರಿಕಿರಿ ಹೆಚ್ಚುತ್ತದೆ. ಈಗಾಗಲೇ ನೀವು ಅಂಥ ಪ್ರದೇಶದಲ್ಲೇ ಮನೆ ಮಾಡಿದ್ದರೆ ವಾಸ್ತು ತಜ್ಞರನ್ನು ಭೇಟಿಯಾಗಿ ಬೇರೇನು ಮಾಡಬಹುದೋ ವಿಚಾರಿಸಿ. 

Astrology Tips: ಆಂಜನೇಯನನ್ನು ನೀವೇಕೆ ಪೂಜಿಸಲೇಬೇಕು ಅಂದರೆ..

ಸುಗಂಧ(Aroma)
ಮನೆಯಲ್ಲಿ ಪ್ರತಿದಿನ ಹೂಕುಂಡದಲ್ಲಿ ತಾಜಾ ಹೂವುಗಳನ್ನಿರಿಸಿ. ಅಗರ್‌ಬತ್ತಿ(incense sticks) ಹಚ್ಚಿ. ಆದರೆ, ಅಗರ್‌ಬತ್ತಿ ಹೊಗೆ ಕೋಣೆ ತುಂಬಾ ತುಂಬದಂತೆ ಎಚ್ಚರ ವಹಿಸಿ. ಒಳ್ಳೆಯ ಪರಿಮಳವು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. 

ಚಕ್ರಗಳ ಸಮತೋಲನ(Balancing Chakras)
ಯಾವಾಗಲೂ ಪೂರ್ವಕ್ಕೆ ತಲೆ ಹಾಕಿ ಮಲಗುವ ಅಭ್ಯಾಸ ಮಾಡಿ. ಇದರಿಂದ ಚಕ್ರಗಳ ಬ್ಯಾಲೆನ್ಸ್ ಸಾಧ್ಯವಾಗುತ್ತದೆ. 

Gift Ideas: ಈ ಉಡುಗೊರೆ ಕೊಟ್ರೆ ನಿಮ್ಮ ಲವ್ ಪಕ್ಕಾ ಸಕ್ಸಸ್ ಆಗುತ್ತೆ!

ನಿಧಾನವಾಗಿ ಉಸಿರಾಡಿ(Breathing Slowly)
ಎಷ್ಟುದ್ದ ಉಸಿರು ಎಳೆಯುತ್ತೀರೋ ಅದಕ್ಕಿಂತ ಹೆಚ್ಚು ಧೀರ್ಘವಾಗಿ ಉಸಿರನ್ನು ಹೊರ ಬಿಡಿ. ಉಸಿರಿನ ಮೇಲೆ ನಿಗಾ ಇರಿಸಿ. ಇದರಿಂದ ಉಸಿರಾಟ ಚಕ್ರ ಆ್ಯಕ್ಟಿವೇಟ್ ಆಗುವುದು. ಒಳಗಿನಿಂದ ಉಸಿರಾಟದ ಬಗ್ಗೆ ಜಾಗೃತಿ ಮೂಡಿದರೆ ಅದು ಮನಸ್ಸಿಗೆ ಸಾಂತಿ ನೀಡುತ್ತದೆ. 

ರಚನಾತ್ಮಕವಾಗಿರಿ(Be Creative)
ಬರೆಯುವುದು, ಡ್ಯಾನ್ಸ್ ಮಾಡುವುದು, ಚಿತ್ರಕಲೆ- ಹೀಗೆ ಏನಾದರೊಂದು ಹವ್ಯಾಸದಲ್ಲಿ ಆಗಾಗ ತೊಡಗಿಸಿಕೊಳ್ಳುವುದರಿಂದ ನಿಮ್ಮೊಳಗಿನ ಟೆನ್ಶನ್ ಬಿಡುಗಡೆಯಾಗಿ, ಕೋಪ ಹತೋಟಿಗೆ ಬರುತ್ತದೆ. 

click me!