Warding off Evil eye: ದೃಷ್ಟಿ ನಿವಾಳಿಸುವುದು ಹೇಗೆ?

By Suvarna NewsFirst Published Dec 4, 2021, 3:59 PM IST
Highlights

ಮಗು ಜೋರಾಗಿ ಅಳುತ್ತಿದ್ದರೆ, ವ್ಯಾಪಾರದಲ್ಲಿ ಇದ್ದಕ್ಕಿದ್ದಂತೆ ನಷ್ಟ ಹೆಚ್ಚಾಗಿದ್ದರೆ, ಮನೆಯಲ್ಲಿ ಇದ್ದಕ್ಕಿದ್ದಂತೆ ಒಂದಾದ ಮೇಲೊಂದು ಅವಘಡಗಳು ನಡೆಯುತ್ತಿದ್ದರೆ ದೃಷ್ಟಿ ಆಗಿದೆ ಎನ್ನುತ್ತೇವೆ. ಈ ದೃಷ್ಟಿ ನಿವಾಳಿಸುವುದು ಹೇಗೆ?

ಇದ್ದಕ್ಕಿದ್ದಂತೆ ಮಗು ರಚ್ಚೆ ಹಿಡಿದು ಅಳಲಾರಂಭಿಸಿದರೆ, ಮನೆಯ ವಾಹನ ಸೇರಿದಂತೆ ಇತರೆ ವಸ್ತುಗಳಿಗೆ ಹಾನಿಯಾದರೆ, ಮನೆಯ ಸಾಕು ಪ್ರಾಣಿಗಳು ಸತ್ತರೆ, ಸಡನ್ನಾಗಿ ವಾಂತಿಯಾದರೆ, ಸುಮ್ಮಸುಮ್ಮನೆ ಸುಸ್ತಾಗುತ್ತಿದ್ದರೆ ದೃಷ್ಟಿಯಾಗಿದೆ ಎನ್ನುತ್ತಾರೆ ಹಿರಿಯರು. ಹೀಗೆ ದೃಷ್ಟಿ(Evil Eye) ಆಗಿದೆ ಎನ್ನುವ ಲಕ್ಷಣಗಳು ಹಾಗೂ ಅದನ್ನು ನಿವಾಳಿಸಲು ಹಿರಿಯರು ಅನುಸರಿಸುವ ಕ್ರಮಗಳನ್ನಿಲ್ಲಿ ಕೊಡಲಾಗಿದೆ. 

ಲಕ್ಷಣ 1: ಮಗು ಬಹಳಷ್ಟು ಹೊತ್ತು ಎಡೆಬಿಡದೆ ಅಳುತ್ತಿರುವುದು. ವೈದ್ಯರ ಬಳಿ ಕರೆದುಕೊಂಡು ಹೋಗಿ ಬಂದು ಔಷಧಗಳನ್ನು ಹಾಕಿದ ಮೇಲೂ ರಚ್ಚೆ ಹಿಡಿಯುವುದು.
ನಿವಾಳಿಸುವ ಕ್ರಮ: ಎರಡು ಕೆಂಪು ಒಣಮೆಣಸಿನಕಾಯಿ, ಸ್ವಲ್ಪ ಕಲ್ಲುಪ್ಪು, ಸಾಸಿವೆ ಹಾಗೂ ತಾಯಿಯ ತಲೆಕೂದಲನ್ನು ಕೈಲಿ ಹಿಡಿದು ಮಗುವಿನ ಎದುರು ಕೈಯ್ಯನ್ನು ಮೂರು ಬಾರಿ ಎಡದಿಂದ ಬಲಕ್ಕೆ ಹಾಗೂ ಮೂರು ಬಾರಿ ಬಲದಿಂದ ಎಡಕ್ಕೆ ತಿರುಗಿಸಿ. ಇವೆಲ್ಲವನ್ನು ಬಿಸಿ ಬಾಣಲೆಯ ಮೇಲೆ ಹಾಕಿ. ಕೂಡಲೇ ಮೆಣಸಿನ ಘಾಟಿಗೆ ಸೀನು ಬಂದರೆ ಕೆಟ್ಟ ದೃಷ್ಟಿ ಹೋಗಿದೆ ಎಂದರ್ಥ. ಮೆಣಸು ಕಪ್ಪಾದರೂ ಏನೂ ಕಿರಿಕಿರಿ(irritation) ಇಲ್ಲವೆಂದರೆ ಬಹಳ ಬಲವಾದ ದೃಷ್ಟಿಯೇ ಆಗಿದೆ ಎಂದರ್ಥ. ಹೀಗೆ ದೃಷ್ಟಿ ನಿವಾಳಿಸಿದ ಮೇಲೆ ಮಗು(baby) ಅಳುವುದನ್ನು ನಿಲ್ಲಿಸುತ್ತದೆ. 

Vastu Tips for Business Growth: ನಷ್ಟದಲ್ಲಿರೋ ವ್ಯಾಪಾರಕ್ಕೆ ಲಾಭ ತರೋ 'ಯಂತ್ರ'ಗಳು 

ಲಕ್ಷಣ 2: ಕಾರಣವೇ ಇಲ್ಲದೆ ದೊಡ್ಡವರಲ್ಲಿ ಹಸಿವಿಲ್ಲದಿರುವುದು(loss of appetite), ವಾಂತಿಯಾಗುವುದು, ಸಂಕಟ, ಕಿರಿಕಿರಿ ಆಗುತ್ತಿದ್ದರೆ ದೃಷ್ಟಿ ಆಗಿದೆ ಎಂದರ್ಥ. 
ನಿವಾಳಿಸುವ ಕ್ರಮ: ಇಡಿ ಉಪ್ಪನ್ನು(salt) ಮುಷ್ಠಿಯೊಳಗೆ ಹಿಡಿದು ವ್ಯಕ್ತಿಯ ಎದುರು ಮೂರು ಬಾರಿ ಬಲದಿಂದ ಎಡಕ್ಕೆ, ಮೂರು ಬಾರಿ ಎಡದಿಂದ ಬಲಕ್ಕೆ ಕೈ ತಿರುಗಿಸಿ. ನಂತರ ಉಪ್ಪನ್ನು ನೀರಿನ ಲೋಟಕ್ಕೆ ಹಾಕಿ. ಉಪ್ಪು ನೀರಿನಲ್ಲಿ ಕರಗುವ ವೇಳೆಗೆ ದೃಷ್ಟಿ ಹೋಗಿರುತ್ತದೆ. 

ಲಕ್ಷಣ 3: ಕುಟುಂಬದಲ್ಲಿ ಯಾರಾದರೂ ಸದಸ್ಯರು ದೊಡ್ಡ ಕಾಯಿಲೆಯಿಂದ ನರಳುತ್ತಿದ್ದರೆ, ಇಲ್ಲವೇ ಪದೇ ಪದೇ ಕೈ ನೋವು, ಕಾಲು ನೋವು, ಬೆನ್ನು ನೋವು ಎಂದು ಒಂದಿಲ್ಲೊಂದು ಸಂಗತಿಯಿಂದ ಸುಸ್ತಾಗುತ್ತಿದ್ದರೆ ಅಕ್ಕಪಕ್ಕದವರದೋ, ನೆಂಟರಿಷ್ಟರಲ್ಲಿ ಯಾರದೋ ದೃಷ್ಟಿಯಾಗಿರಬಹುದು. ಚಿಕಿತ್ಸೆ ಕೊಡಿಸುವ ಜೊತೆಗೆ ದೃಷ್ಟಿ ನಿವಾಳಿಸುವುದು ಕೂಡಾ ಒಳ್ಳೆಯದು.  
ನಿವಾಳಿಸುವ ಕ್ರಮ: ಸಮುದ್ರದ ನೀರನ್ನು ಬಾಟಲಿಯಲ್ಲಿ ತೆಗೆದುಕೊಳ್ಳಿ. ಬಿಳಿ ಬಟ್ಟೆಯ ಮೇಲೆ ಸುರಿದು ಸೋಸಿ. ಸೋಸಿ. ಸೋಸಿದ ನೀರಿಗೆ ಸ್ವಲ್ಪ ಗೋ ಮೂತ್ರ(cow’s urine) ಸೇರಿಸಿ. ಈ ನೀರನ್ನು ಮನೆಯ ಎಲ್ಲ ಕೋಣೆಗಳಿಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ, ಹುಣ್ಣಿಮೆ, ಅಮವಾಸ್ಯೆಯಂದು ಪ್ರೋಕ್ಷಣೆ ಮಾಡಿ.

GOOD LUCK superstitions: ಹಿಂಗೆಲ್ಲ ಆದ್ರೆ ಅದೃಷ್ಟ ಅಂತಾರಲ್ಲಾ.. ನೀವೇನಂತೀರಿ? 

ಲಕ್ಷಣ 4: ಮನೆಯ ಸಾಕುಪ್ರಾಣಿಗಳು ಪದೇ ಪದೆ ಕಾಯಿಲೆ ಬೀಳತೊಡಗಿದರೆ ಅಥವಾ ಮುಂಚಿನಂತಿಲ್ಲದೆ ಏನೋ ವಿಚಿತ್ರ ವರ್ತನೆ ತೋರತೊಡಗಿದರೆ, ಹಸು(cow) ಅವಧಿಗೆ ಮುನ್ನ ಹಾಲು ಕೊಡುವುದು ನಿಲ್ಲಿಸಿದರೆ ಅವಕ್ಕೆ ದೃಷ್ಟಿಯಾಗಿದೆ ಎಂದರ್ಥ. 
ನಿವಾಳಿಸುವ ಕ್ರಮ:  ಮನೆಯ ಸಾಕುಪ್ರಾಣಿಗಳಿಗೆ ಅರಿಶಿನ(turmeric)ದ ನೀರಿನಿಂದ ಸ್ನಾನ ಮಾಡಿಸಿ. ಮತ್ತೊಂದು ವಿಧಾನವೆಂದರೆ ಸುಡುತ್ತಿರುವ ತೆಂಗಿನಕಾಯಿಯನ್ನು ಪ್ರಾಣಿಯ ದೇಹದ ಸುತ್ತ ತಿರುಗಿಸಿ. 

ಲಕ್ಷಣ 5: ಚೆನ್ನಾಗಿ ಓಡುತ್ತಿದ್ದ ವ್ಯಾಪಾರ ಇದ್ದಕ್ಕಿದ್ದಂತೆ ನಷ್ಟದತ್ತ ಮುಖ ಮಾಡಿದ್ದರೆ, ಪ್ರಯತ್ನವಿದ್ದೂ ಫಲವಿಲ್ಲದಿದ್ದರೆ ಅದಕ್ಕೆ ಸ್ಪರ್ಧಿಗಳ ದೃಷ್ಟಿಯಾಗಿರಬಹುದು. 
ನಿವಾಳಿಸುವ ಕ್ರಮ: ಗಾಜಿನ ಲೋಟದಲ್ಲಿ ನೀರು ತುಂಬಿ ಅದಕ್ಕೆ ನಿಂಬೆಹಣ್ಣ(lemon)ನ್ನು ಹಾಕಿ. ನಿಮ್ಮ ವ್ಯಾಪಾರದ ಸ್ಥಳಕ್ಕೆ ಬರುವವರಿಗೆ ಕಾಣುವಂತೆ ಈ ಗ್ಲಾಸ್ ಇಡಿ. ಪ್ರತಿ ದಿನ ನೀರನ್ನು ಬದಲಾಯಿಸಿ. ಪ್ರತಿ ಶನಿವಾರ ನಿಂಬೆಹಣ್ಣನ್ನು ಬದಲಾಯಿಸಿ. 

ಲಕ್ಷಣ 6: ಮನೆಯಲ್ಲಿ ನಿರುದ್ಯೋಗ, ಧನನಷ್ಟ, ಬೇಡದ ವಿಷಯಗಳೇ ಘಟಿಸುತ್ತಿದ್ದರೆ ಅದಕ್ಕೂ ದೃಷ್ಟಿ ಕಾರಣವಿರಬಹುದು.
ನಿವಾಳಿಸುವ ಕ್ರಮ: ಮನೆಯ ಹಾಲ್‌ನಲ್ಲಿ ದಕ್ಷಿಣ ದಿಕ್ಕಿಗೆ ಅಕ್ವೇರಿಯಂ (aquarium) ಇಡಿ. ಇದಲ್ಲದೆ, ದುರ್ಗಾ ಕವಚ ಯಂತ್ರವನ್ನು ಅಳವಡಿಸುವುದರಿಂದಲೂ ಕೆಟ್ಟ ದೃಷ್ಟಿ ತೊಲಗುತ್ತದೆ. 

ಇದಿಷ್ಟೇ ಅಲ್ಲದೆ, ಪಂಚಮುಖಿ ಆಂಜನೇಯನ ಫೋಟೋವನ್ನು ಇರಿಸಿಕೊಳ್ಳುವುದರಿಂದ ಎಂಥ ದೃಷ್ಟಿಯಿದ್ದರೂ ಹೋಗುತ್ತದೆ. 

click me!