Vastu Tips for Business Growth: ನಷ್ಟದಲ್ಲಿರೋ ವ್ಯಾಪಾರಕ್ಕೆ ಲಾಭ ತರೋ 'ಯಂತ್ರ'ಗಳು

By Suvarna NewsFirst Published Dec 4, 2021, 11:22 AM IST
Highlights

ಬಹಳಷ್ಟು ಅಂಗಡಿಮುಂಗಟ್ಟುಗಳಲ್ಲಿ ಕೆಲ ಯಂತ್ರವನ್ನು ನೇತು ಹಾಕಿರುವುದನ್ನು ನೀವೂ ನೋಡಿರಬಹುದು. ಏನಿದು ಯಂತ್ರ? ಹೇಗೆ ಕೆಲಸ ಮಾಡುತ್ತದೆ?

ಹೊಸ ಬಿಸ್ನೆಸ್ ಶುರು ಮಾಡುತ್ತಿದ್ದೀರಾ? ಅಥವಾ ವ್ಯಾಪಾರ, ವ್ಯವಹಾರಗಳಲ್ಲಿ ಬಹಳ ನಷ್ಟ ಅನುಭವಿಸುತ್ತಿದ್ದೀರಾ? ಅಂಗಡಿ, ಕಚೇರಿಯ ಎದುರಿಗೆ ಬರುವ ಜನ ಅದೇಕೋ ಕೂಡಲೇ ಮನಸ್ಸು ಬದಲಿಸಿ ಬೇರೆಡೆ ಹೋಗುತ್ತಿದ್ದಾರೆ ಎನಿಸುತ್ತಿದೆಯಾ? ಇವೆಲ್ಲಕ್ಕೂ ನಿಮ್ಮ ಉತ್ತರ ಹೌದು ಎಂದಾಗಿದ್ದಲ್ಲಿ ವಾಸ್ತುಶಾಸ್ತ್ರಜ್ಞರು ನಿಮಗೆ ಈ ಕೆಳಕಂಡ ಯಾವುದಾದರೂ ಯಂತ್ರಗಳನ್ನು ಸಲಹೆ ಮಾಡಬಹುದು. 
ಯಂತ್ರ ಎಂದರೆ ಅದು ವೇದಗಳು ಕಂಡುಕೊಂಡ ಗಣಿತದ ಪವಿತ್ರ ವಿನ್ಯಾಸಗಳು. ಒಂದೊಂದು ಜಿಯೋಮೆಟ್ರಿಕ್ ವಿನ್ಯಾಸವೂ ಒಂದೊಂದು ರೀತಿಯ ಕಾಸ್ಮಿಕ್ ಎನರ್ಜಿಯನ್ನು ಹೊರಡಿಸುತ್ತದೆ. ಆ ಮೂಲಕ ಯಾವ ಉದ್ದೇಶಕ್ಕೆ ಬಳಸಬೇಕೆಂಬುದನ್ನು ವಾಸ್ತುಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. ಈ ಕೆಳಗಿನ ಯಂತ್ರಗಳು ಧನಾಕರ್ಷಿಸುವಲ್ಲಿ ಪಾತ್ರ ವಹಿಸುತ್ತವೆ. 

ವ್ಯಾಪಾರ ವೃದ್ಧಿ ಯಂತ್ರ(vyapar vridhi yantra)
ಹೆಸರೇ ಹೇಳುವಂತೆ ಈ ಯಂತ್ರವು ಮಾಲೀಕನಿಗೆ ಯಶಸ್ಸು, ಸಂಪತ್ತು ತಂದುಕೊಡುತ್ತದೆ. ಅಂಗಡಿ ಸೇರಿದಂತೆ ಯಾವುದೇ ರೀತಿಯ ವ್ಯಾಪಾರ ಮಾಡುವವರಿಗೆ, ಹೊಸ ಉದ್ಯೋಗದಲ್ಲಿರುವವರಿಗೆ, ನಿರುದ್ಯೋಗಿಗಳಿಗೆ ಕೂಡಾ ತಮ್ಮ ಗುರಿಸಾಧನೆಗೆ ಸಹಕರಿಸುತ್ತದೆ. ಇದಕ್ಕಾಗಿ ನೀವು ಮಾಡಬೇಕಾಗಿದ್ದಿಷ್ಟೇ, ವ್ಯಾಪಾರ ವೃದ್ಧಿ ಯಂತ್ರವನ್ನು ನಿಮ್ಮ ಕಚೇರಿ, ಶೋರೂಂ ಅಥವಾ ಅಂಗಡಿಯಲ್ಲಿ ನೇತು ಹಾಕಬೇಕು. ನಿಧಾನವಾಗಿ ಸಂಪತ್ತಿನ ಸಂಗ್ರಹ ಹೆಚ್ಚುವುದನ್ನು ನೀವೇ ನೋಡಿ. ನಿರುದ್ಯೋಗಿಗಳಿಗೆ ಕೆಲಸದ ಅವಕಾಶವನ್ನೂ ಹೆಚ್ಚಿಸುತ್ತದೆ. ಈ ಯಂತ್ರವನ್ನು ಹಾಕಿದ ಮೇಲೆ ಪ್ರತಿ ದಿನ ಕಾರ್ಯಾರಂಭಕ್ಕೂ ಮುನ್ನ 'ಓಂ ಆಕರ್ಷಯೇ ಸ್ವಾಹಾ' ಎಂಬ ಮಂತ್ರವನ್ನು ಹೇಳಿಕೊಳ್ಳಿ. 

Panchanga: ಇಂದು ಅಮಾವಾಸ್ಯೆ, ಕುಜನ ಸ್ಥಾನ ಬದಲಾವಣೆ, ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ

ಶ್ರೀ ಯಂತ್ರ (Shree Yantra)
ವಾಸ್ತುಶಾಸ್ತ್ರದಲ್ಲಿ ಶ್ರೀ ಯಂತ್ರವನ್ನು ಬಹಳ ಶಕ್ತಿಶಾಲಿ ಹಾಗೂ ಪವಿತ್ರವೆಂದು ಭಾವಿಸಲಾಗುತ್ತದೆ. ಶ್ರೀ ಎಂದರೆ 'ಸಂಪತ್ತು' ಎಂದರ್ಥ. ಹಾಗಾಗಿ, ಶ್ರೀ ಯಂತ್ರವು ನಿಮಗೆ ಬದುಕಿನಲ್ಲಿ ಬೇಕಾದ ಎಲ್ಲ ರೀತಿಯ ಸಂಪತ್ತನ್ನು ಆಕರ್ಷಿಸಿಕೊಡುತ್ತದೆ. ಶಾಂತಿ, ಯಶಸ್ಸು, ಆರೋಗ್ಯ ಹಾಗೂ ಬದುಕಿನ ನೆಮ್ಮದಿಯನ್ನು ನೋಡುವವರಿಗೆ ಶ್ರೀ ಯಂತ್ರ ಸಹಕರಿಸುತ್ತದೆ. ನಿಮ್ಮ ಹಾಗೂ ಸಂಪತ್ತಿನ ನಡುವೆ ಇರಬಹುದಾದ ಅಡೆತಡೆಗಳನ್ನಿದು ತೆಗೆಯುತ್ತದೆ. 

zodiac signs and personality: ಈ ಅಪಾಯಕಾರಿ ರಾಶಿಗಳೊಂದಿಗೆ ಎಚ್ಚರ, ಕಟ್ಟೆಚ್ಚರ!

ಶ್ರೀ ಯಂತ್ರವನ್ನು ಎಂಟು ರೀತಿಯ ಧಾತು (metals)ಗಳಿಂದ ತಯಾರಿಸಲಾಗುತ್ತದೆ. ತಾಮ್ರ(Copper), ಝಿಂಕ್(Zinc), ಅಲ್ಯೂಮಿನಿಯಂ(Almunium), ಸೀಸ(Lead), ಕಬ್ಬಿಣ(Iron), ಮ್ಯಾಗ್ನೀಸ್(Magnese) ಹಾಗೂ ಮೆಗ್ನೀಶಿಯಂ(Magnesium)ಗಳನ್ನು ಬಳಸಿ ಶ್ರೀ ಯಂತ್ರ ತಯಾರು ಮಾಡಲಾಗಿರುತ್ತದೆ. 
ಪ್ರತಿ ಶುಕ್ರವಾರ ಬೆಳಿಗ್ಗೆ ನಿಮ್ಮ ಪೂಜಾ ಕೋಣೆಯಲ್ಲಿ  ಈ ಯಂತ್ರಕ್ಕೆ ಪಂಚಾಮೃತ ಅಥವಾ ಕಾಯಿಸದ ಹಾಲಿನಿಂದ ಅಭಿಷೇಕ ಮಾಡಿ, ಕೆಂಪು ಬಟ್ಟೆಯ ಮೇಲಿರಿಸಿ. ನಂತರ 108 ಬಾರಿ 'ಓಂ ಶ್ರೀಂ ಹ್ರೀಂ ಶ್ರೀಂ ಮಹಾಲಕ್ಷ್ಮಯೇ ನಮಃ' ಎಂದು ಜಪ ಮಾಡಿ. 

ಕುಬೇರ ಯಂತ್ರ(Kubera Yantra)
ಗೃಹಪ್ರವೇಶದ ದಿನ ಕೊಡಲು ಅತ್ಯುತ್ತಮ ಉಡುಗೊರೆ ಇದು. ಏಕೆಂದರೆ ಕುಬೇರ ಎಂದರೆ ಸಂಪತ್ತಿನ ಒಡೆಯ. ಆತನ ಅನುಗ್ರಹ ಇದ್ದವರಿಗೆ ಹಣಕಾಸಿನ ವ್ಯತ್ಯಯವಾಗದು. ಹಾಗಾಗಿ, ಕುಬೇರನನ್ನು ಪೂಜಿಸಿ ಅವನ ಅನುಗ್ರಹಕ್ಕೆ ಪಾತ್ರವಾಗುವುದಕ್ಕೆ ಈ ಯಂತ್ರ ಸಹಾಯ ಮಾಡುತ್ತದೆ. ಕುಬೇರ ಯಂತ್ರವನ್ನು ತಾಮ್ರದಿಂದ ತಯಾರಿಸಲಾಗುತ್ತದೆ. ಇದರ ಸರಳ ಜಿಯೋಮೆಟ್ರಿಕ್ ವಿನ್ಯಾಸವು ಧನ ಆಕರ್ಷಿಸುವ ಕಾಸ್ಮಿಕ್ ಎನರ್ಜಿ (cosmic energy)ಯನ್ನು ಹರಡುತ್ತದೆ. ಕುಬೇರ ಯಂತ್ರವನ್ನು ಮನೆ, ಕಚೇರಿ, ದೇವಾಲಯ ಅಥವಾ ಹಣದ ಪೆಟ್ಟಿಗೆಯಲ್ಲಿಡಬಹುದು. ಪೂರ್ವ ದಿಕ್ಕಿನಲ್ಲಿ ಪಶ್ಚಿಮಕ್ಕೆ ಅಭಿಮುಖವಾಗಿ ಇಡಬೇಕು. ಈ ಯಂತ್ರವನ್ನು ಪ್ರತಿದಿನ ಪೂಜಿಸಿ ಪ್ರಾರ್ಥಿಸುವುದರಿಂದ ಅದೃಷ್ಟ ನಿಮಗೆ ಒಲಿಯುತ್ತದೆ. ಇದನ್ನು ಪೂಜಿಸುವಾಗ 'ಓಂ ಹ್ರೀಂ ಶ್ರೀಂ ಹ್ರೀಂ ಕುಬೇರಾಯ ನಮಃ' ಮಂತ್ರವನ್ನು ಜಪಿಸಬೇಕು. ಪ್ರತಿದಿನ ಪೂಜೆಗೆ ಮೊದಲು ಇದನ್ನು ಸ್ವಚ್ಛ ಮಾಡಬೇಕು. 

click me!